ಮತ್ತೊಬ್ಬಳ ಜೊತೆ ಡೇಟ್ ಮಾಡ್ತಿದ್ದಾಗ್ಲೇ ಸಿಕ್ಕಿಬಿದ್ದ ಬಾಯ್‌ಫ್ರೆಂಡ್, ರಸ್ತೆಯಲ್ಲೇ ಗ್ರಹಚಾರ ಬಿಡಿಸಿದ್ಲು ಹುಡುಗಿ!

By Vinutha Perla  |  First Published Mar 23, 2023, 11:36 AM IST

ಪ್ರೀತಿ ಅಂದ್ಮೇಲೆ ಅಲ್ಲಿ ಮೋಸ ಇದ್ದೇ ಇರುತ್ತೆ. ಈ ಹುಡುಗನೂ ಹಾಗೆಯೇ ಮಾಡಿದ್ದ ಲವರ್ ಇದ್ರೂ ಇನ್ನೊಬ್ಬಳ ಜೊತೆ ಎಂಜಾಯ್ ಮಾಡ್ತಿದ್ದ. ವಿಷ್ಯ ಗೊತ್ತಾದ ಯುವತಿ ರಸ್ತೆಯಲ್ಲೇ ಚೆನ್ನಾಗಿ ಗ್ರಹಚಾರ ಬಿಡಿಸಿದ್ಲು ನೋಡಿ.


ಕಾಲ ಬದಲಾಗಿದೆ. ಸಂಬಂಧಗಳಿಗೆ ನೀಡ್ತಿರೋ ಮಹತ್ವದಲ್ಲೂ ಬದಲಾವಣೆಯಾಗಿದೆ. ಮೊದಲ್ಲೆಲ್ಲಾ ಪ್ರೀತಿ ಅನ್ನೋದು ಅಷ್ಟು ಪವಿತ್ರವಾಗಿತ್ತು. ಪ್ರೀತಿಗಾಗಿ ಎಂಥಾ ತ್ಯಾಗವನ್ನ ಮಾಡೋಕು ಪ್ರೇಮಿಗಳು ಸಿದ್ಧವಾಗ್ತಿದ್ರು. ಯಾವುದೇ ಇತರ ಆಮಿಷಗಳಿಗೆ ಒಳಗಾಗುತ್ತಿರಲ್ಲಿಲ್ಲ. ಅಥವಾ ಒಬ್ಬಳನ್ನು ಅಥವಾ ಒಬ್ಬನನ್ನು ಬಿಟ್ಟು ಮತ್ತೊಬ್ಬರ ಹಿಂದೆ ಹೋಗುವ ಕೆಲಸ ಮಾಡುತ್ತಿರಲ್ಲಿಲ್ಲ. ಆದರೆ ಈಗಿನ ಪ್ರೀತಿ ಹಾಗಲ್ಲ. ದಿನಕ್ಕೊಬ್ಬ ಬಾಯ್‌ಫ್ರೆಂಡ್‌. ಒಬ್ಬನ ಜೊತೆ ಚಾಟಿಂಗ್ ಇನ್ನೊಬ್ಬನ ಜೊತೆ ಸುತ್ತಾಟ. ಒಬ್ಬಳ ಜೊತೆ ಬ್ರೇಕ್‌ಅಪ್‌ ಆದರೆ ಮತ್ತೊಬ್ಬಳಿಗೆ ಪ್ರಪೋಸ್ ಮಾಡುವುದು ಇವೆಲ್ಲಾ ಸಾಮಾನ್ಯವಾಗಿದೆ.

ಚೀಟಿಂಗ್ ಅನ್ನೋದು ಲವ್‌ನಲ್ಲಿ ತುಂಬಾ ಸಾಮಾನ್ಯವಾಗಿ ಹೋಗುತ್ತಿದೆ. ಒಬ್ಬಳನ್ನು, ಒಬ್ಬನನ್ನು ಪ್ರೀತಿಸುತ್ತಿರುವಾಗಲೇ ಹುಡುಗರ ಮತ್ತೊಬ್ಬನ, ಮತ್ತೊಬ್ಬಳ ಹಿಂದೆ ಹೋಗುವುದನ್ನು ಮಾಡುತ್ತಾರೆ. ಲವರ್‌ ಇರುವಾಗಲೇ ಸೈಲೆಂಟಾಗಿ ಇನ್ನೊಬ್ಬಳನ್ನು ಮೀಟ್ ಮಾಡುತ್ತಾರೆ, ಚಾಟ್ ಮಾಡುತ್ತಾರೆ ಜೊತೆಗೆ ಡೇಟಿಂಗ್ ಕೂಡಾ ಹೋಗುತ್ತಾರೆ. ಎಷ್ಟೋ ಪ್ರೇಮಿಗಳಿಗೆ (Lovers) ಇಂಥಾ ವಿಚಾರ ಪರಸ್ಪರ ಗೊತ್ತಾಗುವುದಿಲ್ಲ. ಮತ್ತೆ ಕೆಲವರಿಗೆ ಗೊತ್ತಾದರೂ ಏನೂ ಮಾಡಲಾಗದೆ ಸುಮ್ಮನಾಗುತ್ತಾರೆ. ಆದರೆ ಇಲ್ಲೊಬ್ಬ ಯುವತಿ (Girl) ತನ್ನನ್ನು ಪ್ರೀತಿಸ್ತಾ ಇರುವಾಗ್ಲೇ ಇನ್ನೊಬ್ಬಳ ಜೊತೆ ಡೇಟಿಂಗ್‌ಗೆ ಹೋಗಿದ್ದ ಹುಡುಗನ ಗ್ರಹಚಾರ ಬಿಡಿಸಿದ್ದಾಳೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Tap to resize

Latest Videos

'ಹಾರ್ಟ್‌ಬ್ರೇಕ್‌ ಇನ್ಶುರೆನ್ಸ್‌ ಫಂಡ್‌' ಮಾಡಿಸಿದ್ದ ಲವರ್ಸ್‌, ಬ್ರೇಕ್‌ಅಪ್‌ ಆದಾಗ ಹುಡುಗನಿಗೆ ಸಿಕ್ತು 25 ಸಾವಿರ!

ಮೋಸ ಮಾಡ್ತಿದ್ದ ಬಾಯ್‌ಫ್ರೆಂಡ್‌ನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಯುವತಿ
ಹುಡುಗಿ ತನ್ನ ಬಾಯ್ ಫ್ರೆಂಡ್‌ನ ವಂಚನೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ.. ವೈರಲ್ ಕ್ಲಿಪ್‌ನಲ್ಲಿ, ಹುಡುಗ ಇನ್ನೊಬ್ಬ ಹುಡುಗಿಯೊಂದಿಗೆ ಡಿನ್ನರ್ ಮಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಗರ್ಲ್‌ಫ್ರೆಂಡ್ ಸಿಟ್ಟಿನಿಂದ ಕಿರುಚಾಡುವುದನ್ನು ನೋಡಬಹುದು. ಮಾತ್ರವಲ್ಲ ರಸ್ತೆಯಲ್ಲಿಯೇ ಆಕೆ ಸಿಟ್ಟಿನಿಂದ ಆತನಿಗೆ ಥಳಿಸುತ್ತಾಳೆ. ಆಹಾರವನ್ನು ಆತನ ಮೈ ಮೇಲೆ ಎಸೆಯುತ್ತಾಳೆ. ಈ ಕ್ಲಿಪ್ ಈಗ ಸಾಮಾಜಿಕ ಜಾಲತಾಣದಲ್ಲಿ (social media) ಟ್ರೆಂಡ್ ಆಗಿದೆ. 

ವೀಡಿಯೋದಲ್ಲಿ, ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ವ್ಯಕ್ತಿಯೊಬ್ಬ ಹುಡುಗಿಯೊಂದಿಗೆ ಕುಳಿತು ಜ್ಯೂಸ್, ಸ್ನ್ಯಾಕ್ಸ್ ತಿನ್ನುತ್ತಿರುತ್ತಾನೆ. ಅಷ್ಟರಲ್ಲಿ ಕಾರೊಂದು ಅಲ್ಲಿ ಬಂದು ನಿಲ್ಲುತ್ತದೆ. ಒಬ್ಬ ಹುಡುಗಿ ಕಾರಿನಿಂದ ಇಳಿದು ಬಂದು ಹುಡುಗನಿಗೆ ಚೇರ್‌ನಿಂದ ಹೊಡೆಯುತ್ತಾಳೆ. ನಂತರ ಆಹಾರವನ್ನು ಆಕೆಯ ಮೈ ಮೇಲೆ ಎಸೆಯುತ್ತಾಳೆ. ಈ ಸಂದರ್ಭದಲ್ಲಿ ಆಕೆಯ ಜೊತೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ಅವಳನ್ನು ತಡೆಯಲು ಯತ್ನಿಸುತ್ತಾನೆ. ಹಿಂದಿನಿಂದ ಬಂದು ಆಕೆಯನ್ನು ಹಿಡಿದುಕೊಳ್ಳುತ್ತಾನೆ. ಇಷ್ಟೆಲ್ಲಾ ಘಟನೆಗಳು ನಡೆಯುವಾಗ ಬಾಯ್‌ಫ್ರೆಂಡ್ ತಬ್ಬಿಬ್ಬಾಗಿ ಕುಳಿತಿರುತ್ತಾನೆ. ಆತನ ಜೊತೆ ಬಂದ ತುಂಡುಡುಗೆಯ ಹುಡುಗಿ ಸ್ವಲ್ಪ ದೂರ ಹೋಗಿ ನಿಲ್ಲುತ್ತಾಳೆ.

ಒಂದೇ ಟೈಮಲ್ಲಿ 12 ಯುವತಿಯರೊಂದಿಗೆ ಚಾಟಿಂಗ್: ಕೆಲಸ ಕೊಡಿಸೋ ನೆಪದಲ್ಲಿ ಕಾಮಕ್ರೀಡೆಗೆ ಬಳಕೆ

ಹುಡುಗಿಯ ರೌದ್ರಾವತಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯ ರೌದ್ರಾವತಾರ ಭಾರೀ ಸದ್ದು ಮಾಡುತ್ತಿದೆ. ವೀಡಿಯೊ ಹುಡುಗಿಯರಿಗೆ ಮೋಸ ಮಾಡುವ ಹುಡುಗರಿಗೆ ಹೇಗೆ ಪಾಠ ಕಲಿಸಬೇಕು ಎಂಬುದನ್ನು ವೀಡಿಯೋ ಸೂಚಿಸುತ್ತದೆ. ವೈರಲ್ ಆದ ವೀಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು 'ಹುಡುಗರಿಗೆ ಬುದ್ಧಿ ಬರಬೇಕಾದರೆ ಹೀಗೆ ವರ್ತಿಸಬೇಕಾದುದು ಅನಿವಾರ್ಯ' ಎಂದು ಕಮೆಂಟಿಸಿದ್ದಾರೆ. ಇನ್ನು ಕೆಲವರು 'ಪ್ರೀತಿ ಮಾಡಿ, ಮೋಸ (Cheating)nಮಾಡುವವರ ಸಂಖ್ಯೆ ಇತ್ತಿಚಿಗೆ ಹೆಚ್ಚುತ್ತಿದೆ. ಚೀಟಿಂಗ್ ಅನ್ನೋದು ಕಡಿಮೆಯಾಗಬೇಕಾದರೆ ಹೀಗೆಲ್ಲಾ ಮಾಡಲೇಬೇಕು' ಎಂದು ಹೇಳಿದ್ದಾರೆ.

ಘಟನೆ ಎಲ್ಲಿ ನಡೆಯುತು ಎಂಬ ಬಗ್ಗೆ ಮಾಹಿತಿ ದೊರಕಿಲ್ಲ. ಅಥವಾ ಇವರಿಬ್ಬರು ಪ್ರೇಮಿಗಳಾ ಅಥವಾ ದಂಪತಿಯಾ ಎಂಬ ಕುರಿತು ಯಾವುದೇ ಮಾಹಿತಿ ದೊರಕಿಲ್ಲ.

click me!