ಇವಳೆಂಥಾ ತಾಯಿ..ಸುಡುವ ಬಿಸಿಲಿಗೆ ಮಕ್ಕಳನ್ನು ಕಾರಲ್ಲಿ ಕೂಡಿ ಹಾಕಿ ಸಾಯ್ಸೇ ಬಿಟ್ಲು!

Published : Mar 22, 2023, 05:11 PM IST
ಇವಳೆಂಥಾ ತಾಯಿ..ಸುಡುವ ಬಿಸಿಲಿಗೆ ಮಕ್ಕಳನ್ನು ಕಾರಲ್ಲಿ ಕೂಡಿ ಹಾಕಿ ಸಾಯ್ಸೇ ಬಿಟ್ಲು!

ಸಾರಾಂಶ

ತಾಯಿಯ ಪಾಲಿಗೆ ಮಕ್ಕಳೇ ಪ್ರಪಂಚ. ಮಕ್ಕಳಿಗಾಗಿ ಆಕೆ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧಳಾಗುತ್ತಾಳೆ. ಆದ್ರೆ ಇಲ್ಲೊಬ್ಬ ತಾಯಿ ಮಾತ್ರ ಸುಡುವ ಬಿಸಿಲಿನಲ್ಲಿ ಮಕ್ಕಳನ್ನು ಕಾರಿನೊಳಗೇ ಬಿಟ್ಟು ಸಾಯಿಸಿದ್ದಾಳೆ. ಅರೆ ಇವಳೆಂಥಾ ತಾಯಿ ಅಂತೀರಾ? ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ.

ಪ್ರಪಂಚದಲ್ಲಿ ತಾಯಿ-ಮಗುವಿನ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು. ಮಕ್ಕಳಲ್ಲಿ ತಾಯಿ ತನ್ನ ಪ್ರಪಂಚವನ್ನೇ ಕಾಣುತ್ತಾಳೆ. ಹಾಗೆಯೇ ಮಗುವೂ ತನ್ನ ತಾಯಿಯನ್ನು ಸರ್ವಸ್ವ ಎಂದುಕೊಳ್ಳುತ್ತದೆ. ಅಮ್ಮ-ಮಗುವಿನ ಬಾಂಧವ್ಯವೆಂದರೆ ಅದು ಪದಗಳಿಗೆ ನಿಲುಕದ್ದು. ಇಬ್ಬರ ನಡುವಿನ ಪ್ರೀತಿ, ಆಪ್ತತೆ, ಮಮಕಾರ ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಅದರಲ್ಲೂ ತಾಯಿಯಾದವಳು ತನ್ನ ಮಗುವಿನಲ್ಲಿ ಪ್ರಪಂಚವನ್ನೇ ಕಾಣುತ್ತಾಳೆ. ಮಗುವಿನ ಲಾಲನೆ-ಪಾಲನೆ, ಕಾಳಜಿ ವಹಿಸುವುದರಲ್ಲೇ ಸಮಯ ಕಳೆದುಬಿಡುತ್ತಾಳೆ. ಮಗುವಿಗೆ ಸ್ಪಲ್ಪ ಹುಷಾರು ತಪ್ಪಿದರಂತೂ ಆಕೆಯ ಪಾಲಿಗೆ ಪ್ರಪಂಚವೇ ಮುಳುಗಿ ಹೋದಂತೆ ಆಗಿಬಿಡುತ್ತದೆ. ಮಗುವಿಗೆ ಆರೋಗ್ಯಯುತ ಆಹಾರ ಕೊಡುವುದು, ಸರಿಯಾದ ಸಮಯಕ್ಕೆ ಔಷಧಿ ಕೊಡುವುದು ಹೀಗೆ ದಿನಪೂರ್ತಿ ಆರೈಕೆಯಲ್ಲೇ ಕಳೆದುಬಿಡುತ್ತಾಳೆ. ಮಗು ಹುಷಾರಾಗಿ ಓಡಾಡುವಂತಾದಾಗಲೇ ಆಕೆಗೆ ನೆಮ್ಮದಿ. ಮಗು ಸಹ ಆರೋಗ್ಯ ಸರಿಯಿಲ್ಲದಿದ್ದಾಗ ತಾಯಿಯನ್ನು ಬಿಟ್ಟು ಇನ್ಯಾರನ್ನೂ ತನ್ನ ಸನಿಹ ಬಯಸುವುದಿಲ್ಲ.

ಹೀಗಾಗಿಯೇ ತಾಯಿಯನ್ನು ಮಮತಾಮಯಿ, ತ್ಯಾಗಮಯಿ ಎಂದೆಲ್ಲಾ ಹೇಳುತ್ತಾರೆ. ಆದರೆ ಇಲ್ಲೊಬ್ಬ ತಾಯಿ (Mother) ಮಗುವಿಗಾಗಿ ಏನನ್ನಾದರೂ ತ್ಯಾಗ ಮಾಡುವುದಿರಲಿ ಬದಲಿಗೆ ಸುಡುವ ಬಿಸಿಲಿನಲ್ಲಿ (Heat wave) ಬಿಟ್ಟು ತನ್ನ ಮಕ್ಕಳನ್ನೇ ಸಾಯಿಸಿದ್ದಾಳೆ. ಮಾತ್ರವಲ್ಲ ಇನ್ನೂ ಹುಟ್ಟದ ತನ್ನ ಮಗುವನ್ನು (Kid) ಐಫೋನ್‌ಗಾಗಿ ಮತ್ತೊಬ್ಬರಿಗೆ ಕೊಡೋಕೆ ಸಿದ್ಧವಾಗಿದ್ಲು. ನಂಬೋಕೆ ಕಷ್ಟವೆನಿಸಿದರೂ ಇದು ನಿಜ.

ಮಗ ತೀರಿ ಹೋದ ಸುದ್ದಿ ತಿಳಿದು ಅಮ್ಮನಿಗೂ ಹೃದಯಾಘಾತ, ಸಾವಿನಲ್ಲೂ ಒಂದಾದ ತಾಯಿ-ಮಗ

ಮಕ್ಕಳನ್ನು ಕಾರಿನಲ್ಲಿ ಕೂಡಿ ಹಾಕಿದ ರಾಕ್ಷಸೀ ತಾಯಿ
ತಾಯಿ ತನ್ನ ಮಗುವನ್ನು ಸುರಕ್ಷಿತವಾಗಿಡಲು ಏನನ್ನೂ ಮಾಡಬಲ್ಲಳು ಎಂಬುದು ನಾವು ಸಾಮಾನ್ಯವಾಗಿ ತಿಳಿದಿರೋ ವಿಚಾರ.. ಆದರೆ ಇಲ್ಲೊಬ್ಬ ತಾಯಿ ತನ್ನ ಮಕ್ಕಳೆಡೆಗೆ ಹೃದಯ ಕಂಪಿಸುವಷ್ಟು ನಿರ್ದಾಕ್ಷಿಣ್ಯತೆಯನ್ನು ತೋರಿದ್ದಾಳೆ. ಆಸ್ಟ್ರೇಲಿಯಾದ ತಾಯಿಯೊಬ್ಬಳು ತನ್ನ ಒಂದು ಮತ್ತು ಎರಡು ವರ್ಷದ ಮಕ್ಕಳನ್ನು 60 ಡಿಗ್ರಿ ತಾಪಮಾನದಲ್ಲಿ ITemparature) ಕಾರಿನೊಳಗೆ ಬಿಟ್ಟಿದ್ದಳು. ಇದರಿಂದಾಗಿ ಅವರು ಶಾಖದಿಂದ ಸತ್ತರು. ಈ ಪ್ರಕರಣದಲ್ಲಿ ಮಹಿಳೆಗೆ 9 ವರ್ಷ ಶಿಕ್ಷೆ (Punishment) ವಿಧಿಸಲಾಗಿದೆ.

ಮಹಿಳೆಯ ಹೆಸರು ಕೆರ್ರಿ-ಆನ್ ಕಾನ್ಲಿ. 18 ತಿಂಗಳ ಕ್ಲೋಯ್-ಆನ್ ಮತ್ತು 2 ವರ್ಷದ ಡಾರ್ಸಿ ಹೆಲೆನ್ ಹೆಸರಿನ ಮಕ್ಕಳನನ್ನು ಈ ಮಹಿಳೆ ಕಾರ್‌ನೊಳಗೆ ಲಾಕ್ ಮಾಡಿದ್ದಾಳೆ. ಮಕ್ಕಳು ವಿಪರೀತ ಶಾಖದಿಂದಲೇ ಮೃತಪಟ್ಟಿದ್ದಾರೆ. ಕ್ಯಾರಿ ತನ್ನ ಇಬ್ಬರು ಮಕ್ಕಳನ್ನು ಸುಮಾರು 4 ಗಂಟೆಗೆ ಕಾರಿನಲ್ಲಿ ಬಿಟ್ಟಿದ್ದಳು. ಮಕ್ಕಳು ತಡೆಯಲಾಗದ ಉರಿ ಬಿಸಿಲಿಗೆ ಕಾರಿನಲ್ಲೇ ಇದ್ದರು. ಕಾರಿನೊಳಗಿನ ತಾಪಮಾನವು 60 ಸಿ ತಲುಪಿದೆ. ಇದರಿಂದ ಇಬ್ಬರು ಅಮಾಯಕ ಬಾಲಕಿಯರ ಚರ್ಮ ಸುಟ್ಟು ಕರಕಲಾಗಿದೆ. ಕೆಲ್ಲಿ-ಆನ್ ತನ್ನ ಹುಡುಗಿಯರನ್ನು ಬಿಸಿಲಲ್ಲೇ ಕಾರಿನಲ್ಲಿ ಬಿಟ್ಟಿದ್ದಕ್ಕಾಗಿ ಎರಡು ಕೊಲೆ ಪ್ರಕರಣಗಳಿಗೆ ತಪ್ಪೊಪ್ಪಿಕೊಂಡಿದ್ದಾಳೆ. 

Viral Video : 33 ವರ್ಷದ ಮಗಳನ್ನು ರೈಲು ಹತ್ತಿಸಿದ ತಂದೆ ವಿಡಿಯೋ ವೈರಲ್

ಐಫೋನ್‌ಗಾಗಿ ಮಗುವನ್ನೇ ವಿನಿಮಯ ಮಾಡಿಕೊಳ್ಳಲು ಮುಂದಾಗಿದ್ದ ಮಹಿಳೆ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪೀಟರ್ ಆಪಲ್‌ಗಾರ್ತ್, 'ಈ ಘಟನೆ ನಿಜವಾಗಿಯೂ ಆತಂಕಕಾರಿಯಾಗಿದೆ. ಈ ಪುಟಾಣಿ ಮಕ್ಕಳು ಕ್ರಮೇಣ ನಿದ್ರೆಗೆ ಜಾರಿದರು ಮತ್ತು ಹೆಚ್ಚುತ್ತಿರುವ ಶಾಖದಿಂದಾಗಿ ಎಚ್ಚರಗೊಳ್ಳದೆ ಗಾಢವಾದ ನಿದ್ರೆಗೆ ಹೋದರು. ಎಚ್ಚರಗೊಂಡಾಗ ಬಿಸಿಲಿನಿಂದ ಸಂಕಟಕ್ಕೊಳಗಾಗಿ ಮೃತಪಟ್ಟರು' ಎಂದು ತಿಳಿಸಿದ್ದಾರೆ.

ಕೆರ್ರಿ ತನ್ನ ಮಕ್ಕಳ ಕುರಿತು ವಿಪರೀತ ನಿರ್ಲಕ್ಷ್ಯದ ಸ್ವಭಾವವನ್ನು ಹೊಂದಿದ್ದಳು. ಅವಳು ಡ್ರಗ್ಸ್ ಮಾಡುತ್ತಿದ್ದಳು. ಅಷ್ಟೇ ಅಲ್ಲ, ತನ್ನ ಮಕ್ಕಳ ಪೈಕಿ ಒಬ್ಬನನ್ನು ಐಫೋನ್‌ಗಾಗಿ ವಿನಿಮಯ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು ಎಂದು ತಿಳಿದುಬಂದಿದೆ. ಕೆರ್ರಿ ಕ್ವೀನ್ಸ್‌ಲ್ಯಾಂಡ್‌ನ ಮಕ್ಕಳ ಸುರಕ್ಷತಾ ಇಲಾಖೆಗೆ (DoCS) ತನ್ನ ಹುಟ್ಟಲಿರುವ ಮಗುವನ್ನು ಐಫೋನ್‌ಗಾಗಿ ವಿನಿಮಯ ಮಾಡಿಕೊಳ್ಳಲು ಮುಂದಾಗಿದ್ದಳು ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?