ಜರ್ಮನ್ ಶೆಫರ್ಡ್ ಶ್ವಾನ ಎಲ್ಲರಿಗೂ ತಿಳಿದಂತೆ ಬುದ್ಧಿವಂತಿಕೆ ಹಾಗೂ ಕಾಳಜಿಗೆ ಹೆಸರಾದ ಶ್ವಾನ. ಈ ಕಾರಣಕ್ಕೆ ಪೊಲೀಸ್ ಇಲಾಖೆಯಲ್ಲಿ ಜರ್ಮನ್ ಶೆಫರ್ಡ್ ತಳಿಯ ಸಾಕಷ್ಟು ಶ್ವಾನಗಳಿವೆ. ಕಾಳಜಿ, ಸ್ವಾಮಿನಿಷ್ಠೆ, ಕರ್ತವ್ಯ, ಪ್ರೀತಿಗೆ ಹೆಸರಾಗಿರುವ ಶ್ವಾನಗಳು ಮನುಷ್ಯನ ಅತ್ಯಂತ ಉತ್ತಮ ಗೆಳೆಯ ಎಂದರೆ ತಪ್ಪಾಗಲಾರದು. ಶ್ವಾನಗಳ ಸಾಕಷ್ಟು ಮುದ್ದಾದ ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವುವಿರಿ. ಅದೇ ರೀತಿ ಇಲ್ಲೊಂದು ಶ್ವಾನ ಬಾತುಕೊಳಿ ಮರಿಗಳನ್ನು ನೋಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಬಾತುಕೋಳಿ ಮರಿಗಳು ನೀರಿನ ಸಮೀಪ ನೀರಲ್ಲಿ ಆಟವಾಡುತ್ತಿವೆ. ಇವುಗಳ ಸಮೀಪವೇ ಬಂದು ಕುಳಿತುಕೊಳ್ಳುವ ಶ್ವಾನ ಅವುಗಳ ಆಟ ನೋಡುತ್ತಾ ಅವುಗಳಿಗೆ ಬೇರೆ ಯಾರು ತೊಂದರೆ ನೀಡದಂತೆ ಕಾವಲು ಕಾಯುತ್ತಿದೆ.
ಇನ್ನು ಬಾತುಕೊಳೀ ಮರಿಗಳು ನೀರಿನಲ್ಲಿ ಆಟವಾಡುತ್ತ ಸ್ವಚ್ಛಂದವಾಗಿ ವಿಹರಿಸುತ್ತಿದ್ದು, ಜರ್ಮನ್ ಶೆಫರ್ಡ್ ಶ್ವಾನ ಅವುಗಳ ಆಟ ನೋಡುತ್ತಾ ಕುಳಿತಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ r/aww ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ರಸ್ತೆ ಬದಿ ಹೊಂಡದಲ್ಲಿ ನಿಂತ ನೀರಿನಲ್ಲಿ ಬಾತುಕೋಳಿಗಳು ವಿಹರಿಸುತ್ತಿದ್ದರೆ ಶ್ವಾನ ಅವುಗಳನ್ನೇ ನೋಡುತ್ತಾ ಅಲ್ಲೇ ಮಲಗಿ ಬಿಡುತ್ತದೆ. ಈ ವಿಡಿಯೋವನ್ನು ಐದು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಇವುಗಳ ಅನುಬಂಧವನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.
ಅಬ್ಬಾ ತಡೆಯಲಾರೆ ಈ ಸೆಖೆ : ತುಂಬಿಟ್ಟ ನೀರಲ್ಲಿ ಮುಳುಗೇಳುತ್ತಿರುವ ಶ್ವಾನ
ಮತ್ತೊಂದೆಡೆ ಜರ್ಮನ್ ಶೆಫರ್ಡ್ ಶ್ವಾನವೊಂದು ತನ್ನ ಮಾಲೀಕನಿರುವ ಕಚೇರಿಗೆ 2 ಕಿಮೀ ನಡೆದುಕೊಂಡು ಹೋಗಿ ಮಧ್ಯಾಹ್ನದ ಊಟವನ್ನು ನೀಡುವ ವಿಡಿಯೋವೊಂದು ಹೀಗೆಯೇ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಜರ್ಮನ್ ಶೆಫರ್ಡ್ ಶ್ವಾನ ತನ್ನ ಮಾಲೀಕನಿಗೆ ಊಟವನ್ನು ತೆಗೆದುಕೊಂಡು ಹೋಗುತ್ತಿದೆ. ಬಾಯಿಯಲ್ಲಿ ಬುತ್ತಿಯನ್ನು ಗಟ್ಟಿಯಾಗಿ ಕಚ್ಚಿ ಹಿಡಿದಿರುವ ಶ್ವಾನ ರಸ್ತೆಬದಿಯಲ್ಲಿ ನಿಧಾನವಾಗಿ ಸಾಗುತ್ತಿದೆ. ದೊಡ್ಡ ದೊಡ್ಡ ವಾಹನಗಳು ಬರುತ್ತಿದ್ದಂತೆ ರಸ್ತೆ ಪಕ್ಕದಿಂದ ಬದಿಗೆ ಸರಿಯುವ ಶ್ವಾನ ವಾಹನ ಮುಂದೆ ಸಾಗಿದ ನಂತರ ಮತ್ತೆ ರಸ್ತೆ ಪಕ್ಕಕ್ಕೆ ಬಂದು ಬುತ್ತಿ ಹಿಡಿದು ಸಾಗುತ್ತದೆ.
ಈ ಶ್ವಾನದ ಹೆಸರು ಶೇರು ತನ್ನ ಮಾಲೀಕನಿಗೆ ಮಧ್ಯಾಹ್ನದ ಊಟವನ್ನು ತಲುಪಿಸಲು ಶೇರು ಪ್ರತಿದಿನ ಬೆಳಗ್ಗೆ ಎರಡು ಕಿಲೋಮೀಟರ್ ದೂರ ಪ್ರಯಾಣಿಸುತ್ತಾನೆ ಎಂದು ಈ ವಿಡಿಯೋಗೆ ನೀಡಿದ ಶೀರ್ಷಿಕೆಯಿಂದ ತಿಳಿದು ಬಂದಿದೆ. @timssyvats ಎಂಬ ಹೆಸರಿನ Instagram ಬ್ಲಾಗರ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಕೆಲಸಕ್ಕೆ ಜರ್ಮನ್ ಶೆಫರ್ಡ್ ಶ್ವಾನ ಚೆನ್ನಾಗಿ ತರಬೇತಿ ಪಡೆದಿದೆ.
ನದಿಯಲ್ಲಿ ಮುಳುಗುತ್ತಿದ್ದ ಶ್ವಾನವನ್ನು ರಕ್ಷಿಸಿದ ಯುವಕ: ವಿಡಿಯೋ ವೈರಲ್
ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಬ್ಲಾಗರ್, ಇಲ್ಲಿ ಹಿಮಾಚಲ ಪ್ರದೇಶದಲ್ಲಿ, ನಾಯಿಗಳನ್ನು ಮನೆಯೊಳಗೆ ಅಥವಾ ಗೂಡಿನೊಳಗೆ ಇರಿಸುವುದಿಲ್ಲ. ಸಾಧ್ಯವಾದಷ್ಟು ಹೊರಗೆ ಇರುವಂತೆ ಪ್ರೋತ್ಸಾಹಿಸಲಾಗುತ್ತದೆ. ಈ ಶ್ವಾನ ಶೇರು (Sheru) ಬಾಲ್ಯದಿಂದಲೂ ತರಬೇತಿ ಪಡೆದಿದ್ದು, ಪ್ರತಿದಿನ ಅದರ ಮಾಲೀಕನಿಗೆ ಮಧ್ಯಾಹ್ನದ ಊಟವನ್ನು ಒಯ್ಯುತ್ತದೆ ಆದರೆ ಈ ಶ್ವಾನದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶೇರು ಜೊತೆ ಯಾರಾದರೊಬ್ಬರು ಕುಟುಂಬದ ಸದಸ್ಯರಿರುತ್ತಾರೆ ಎಂದು ಹೇಳಿದರು.
ಶ್ವಾನದ ಈ ವೀಡಿಯೊವನ್ನು ಏಳು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದುವರೆಗೆ ಎಂಟು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ಇನ್ಸ್ಟಾಗ್ರಾಮ್ ಬಳಕೆದಾರರು ಈ ಶ್ವಾನ ತುಂಬಾ ಮುದ್ದಾಗಿದೆ ಅದಕ್ಕೆ ರಸ್ತೆ ಸುರಕ್ಷತೆಯ ಬಗ್ಗೆಯೂ ತಿಳಿದಿದೆ. ದೇವರು ಯಾವಾಗಲೂ ಶೇರುವನ್ನು ಆಶೀರ್ವದಿಸುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.