ಲೆಸ್ಬಿಯನ್ ಪೆಂಗ್ವಿನ್‌ನಿಂದ ಮೊಟ್ಟೆಯ ಗೂಡನ್ನೇ ಕದ್ದೊಯ್ದ ಗೇ ಪೆಂಗ್ವಿನ್ | ಆಫ್ರಿಕನ್ ಪೆಂಗ್ವಿನ್ ಬೇರೊಂದು ಜೋಡಿಯ ಮೊಟ್ಟೆಗಳಿದ್ದ ಗೂಡನ್ನೇ ಕದ್ದುಬಿಟ್ಟಿದೆ
ಗೇ ಪೆಂಗ್ವಿನ್ ಜೋಡಿಯೊಂದು ಪಕ್ಕದ ಲೆಸ್ಬಿಯನ್ ಪೆಂಗ್ವಿನ್ ಜೋಡಿಯ ಮೊಟ್ಟೆಯ ಗೂಡನ್ನೇ ಕದ್ದಿರುವಂತಹ ಘಟನೆ ಡಚ್ ಮೃಗಾಲಯದ ಕ್ವೀರ್ ಪೆಂಗ್ವಿನ್ ಗುಂಪಿನಲ್ಲಿ ನಡೆದಿದೆ.
ಪೆಂಗ್ವಿನ್ ಗುಂಪುಗಳಲ್ಲಿ ಇನ್ನೊಂದು ಕಡೆಯಿಂದ ಮೊಟ್ಟೆಗಳನ್ನು ತಂದು ಮರಿ ಬೆಳೆಸುವುದು ವಿಶೇಷವೇನಲ್ಲ. . ಮೃಗಾಲಯ ಮತ್ತು ಅಕ್ವೇರಿಯಂಗಳಲ್ಲಿ ಮೊಟ್ಟೆಗಳನ್ನು ಗಿಫ್ಟ್ ಮಾಡಲಾಗುತ್ತದೆ.
ವೈರಲ್ ಆಗ್ತಿದೆ ಕಪಲ್ ಹಾಟ್ ಫೊಟೋಶೂಟ್..! ಇಲ್ನೋಡಿ ಫೋಟೋಸ್
ಆದರೆ ಡಯೆರನ್ ಪಾರ್ಕ್ ಝೂನಲ್ಲಿ ಆಫ್ರಿಕನ್ ಪೆಂಗ್ವಿನ್ ಬೇರೊಂದು ಜೋಡಿಯ ಮೊಟ್ಟೆಗಳಿದ್ದ ಗೂಡನ್ನೇ ಕದ್ದುಬಿಟ್ಟಿದೆ. ಕಳೆದ ವರ್ಷ ಇದೇ ಪೆಂಗ್ವಿನ್ ಜೋಡಿ ಬೇರೆ ಪೆಂಗ್ವಿನ್ ಕುಟುಂಬದಿಂದ ಮೊಟ್ಟೆ ಕದ್ದಿತ್ತು. ಆ ಮೊಟ್ಟೆ ಒಡೆದ ನಂತರ ಮತ್ತೊಮ್ಮೆ ಮೊಟ್ಟೆ ಕದಿಯೋ ಕೆಲಸ ಮಾಡಿದೆ ಗೇ ಪೆಂಗ್ವಿನ್. ಆದರೆ ಲೆಸ್ಬಿಯನ್ ಪೆಂಗ್ವಿನ್‌ಗಳಿಗೆ ಮಾತ್ರ ಮರಿ ಹೊಂದಲು ದಾರಿ ಇಲ್ಲದಂತಾಗಿದೆ.
Bijzonder nieuws! 🐧🐧 Het pinguïn-homokoppel van ons park heeft dit jaar een heel nest ingenomen van een lesbisch pinguïnstel. Homoseksualiteit komt vaker voor bij deze vogelsoort. Beide vogels broeden op de eieren, om en om bewaken zij het nest! pic.twitter.com/2oOVolLt05
— DierenParkAmersfoort (@dpamersfoort)ಇಲ್ಲಿ ಹೆಣ್ಣು ಪೆಂಗ್ವಿನ್‌ಗಳಿಗೆ ಸಮಸ್ಯೆಯಾದ್ರೆ ಗಂಡು ಪೆಂಗ್ವಿನ್‌ಗಳು ಮರಿ ಮಾಡಿಕೊಂಡು ಹ್ಯಾಪಿ ಆಗಿವೆ. ಝೂ ಕೀಪರ್ ಪ್ರಕಾರ, ಕದ್ದ ಮೊಟ್ಟೆಗಳನ್ನು ಫಲವತ್ತಾಗಿಸಲು ಅವಕಾಶವಿದೆ. ಆದರೆ ಮರಿಗಳು ಎಂದಿಗೂ ಅವುಗಳಿಂದ ಹೊರಬರುವುದಿಲ್ಲ ಎಂದಿದ್ದಾರೆ.