#Feelfree: ನಾನು ಒಂಟಿ, ಸೆಕ್ಸ್ ಟಾಯ್ಸ್ ಬಳಸಬಹುದೇ?

By Suvarna NewsFirst Published Oct 20, 2020, 4:32 PM IST
Highlights

ನೀವು ಒಂಟಿಯಾಗಿದ್ದರೆ, ಸೆಕ್ಸ್ ಸುಖ ಬೇಕು ಅನಿಸಿದರೆ ಸೆಕ್ಸ್ ಟಾಯ್ಸ್ ಬಳಸಬಹುದು. ಆದರೆ ಅವು ನಿಜ ಲೈಫಿನ ಸಂಗಾತಿಯ ಪರ್ಯಾಯ ಆಗಲಾರವು.

ಪ್ರಶ್ನೆ: ನಾನು ನಲುವತ್ತು ಪ್ರಾಯದ ಉದ್ಯೋಗಿ. ಮದುವೆ ಮಾಡಿಕೊಂಡಿಲ್ಲ. ಹತ್ತು ವರ್ಷಗಳ ಹಿಂದೆ ಒಬ್ಬ ಗೆಳೆಯನ ಜತೆಗೆ ಲಿವಿನ್‌ ನಡೆಸುತ್ತಿದ್ದೆ. ಸಾಕಷ್ಟು ಸುಖ ಸಿಗುತ್ತಿತ್ತು. ನಂತರ ಆತ ವಿದೇಶಕ್ಕೆ ಹೊರಟುಹೋದ. ಈಗ ಒಂಟಿಯಾಗಿ ವಾಸಿಸುತ್ತೇನೆ. ಸ್ವಂತ ಮನೆ ಹೊಂದಿದ್ದೇನೆ. ಕಚೇರಿಯ ಕೆಲವು ಪುರುಷರು ನನ್ನೊಡನೆ ದೈಹಿಕ ಸಂಪರ್ಕ ಬೆಳೆಸಲು ಹಾತೊರೆಯುತ್ತಿದ್ದಾರೆ. ಆದರೆ ಅವರು ದಾಂಪತ್ಯದ ಕಾರಣದಿಂದಾಗಿ ನನ್ನ ಜೊತೆಗೇ ಇರಲು ಅವರಿಗೆ ಸಾಧ್ಯವಾಗದು. ಹಾಗೇ ಅವರ ದಾಂಪತ್ಯದಲ್ಲಿ ಕಹಿ ಸೃಷ್ಟಿಸಲು ನಾನೊಂದು ಕಾರಣವಾಗಲು ನನಗೆ ಇಷ್ಟವಿಲ್ಲ. ಎಮೋಷನಲ್ ಆಗಿ ಅವರೊಂದಿಗೆ ನಿಕಟವಾಗಿ ಇರಲು ಸಾಧ್ಯವಾಗುತ್ತಿಲ್ಲ. ಆದರೆ ನನಗೆ ನನ್ನದೇ ಆದ ಸೆಕ್ಸ್ ಅವಶ್ಯಕತೆ ಇದೆ. ಅದನ್ನು ಹಸ್ತಮೈಥುನದ ಮೂಲಕ ಪೂರೈಸಿಕೊಳ್ಳುತ್ತಿದ್ದೇನೆ. ಆದರೆ ಇನ್ನೂ ಹೆಚ್ಚಿನ ತೃಪ್ತಿ ಬೇಕು ಅನಿಸುತ್ತದೆ. ನಾನು ಸೆಕ್ಸ್ ಟಾಯ್ಸ್ ಬಳಸಬಹುದೇ? 

ಉತ್ತರ: ನಿಮ್ಮ ಸಮಸ್ಯೆ ಅರ್ಥವಾಗುತ್ತದೆ. ನಿಮ್ಮ ಪ್ರಾಯದ ಸ್ತ್ರೀಗೆ ಸೆಕ್ಸ್ ಬೇಕು ಅನಿಸುವುದು ಸಹಜ. ಆದರೆ ಒಂಟಿಯಾಗಿ ಇರುವುದರಿಂದ ಹಾಗೂ ಗಂಡ ಜೊತೆಯಲ್ಲಿ ಇಲ್ಲದೆ ಇರುವುದರಿಂದ ಸ್ವತಃ ರತಿ ಮಾಡಿಕೊಳ್ಳುವುದು ತಪ್ಪೇನಲ್ಲ. ಅದರಿಂದ ಯಾರಿಗೂ, ನಿಮ್ಮನ್ನೂ ಸೇರಿಸಿದಂತೆ, ಹಾನಿಯಾಗಲಿ ಅನಾರೋಗ್ಯವಾಗಲಿ ಇಲ್ಲ. ಮಹಿಳೆಯರಲ್ಲಿ ಹಸ್ತಮೈಥುನ ಪರ್‌ಫೆಕ್ಟ್‌ಲೀ ಆಲ್‌ರೈಟ್‌. ಗಂಡಸರು ಮಾಡಿಕೊಳ್ಳುವಷ್ಟೇ ಪ್ರಮಾಣದಲ್ಲಿ ಹೆಂಗಸರು ಕೂಡ ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂಬುದನ್ನು ಕೆಲವು ಅಧ್ಯಯನಗಳು ಖಚಿತಪಡಿಸಿವೆ. ಸಹೋದ್ಯೋಗಿಗಳ ಜೊತೆಗಿನ ಸಂಬಂಧದಿಂದಲೂ,ಬ್ರೇಕಪ್‌ ಆಗದಿದ್ದರೆ ತೊಂದರೆಯೇನೂ ಇಲ್ಲ.  ಆದರೆ ನೀವು ಒಂಟಿತನವನ್ನೇ ಹೆಚ್ಚು ಇಷ್ಟಪಡುವವರು ಹಾಗೂ ಸೆಕ್ಸ್ ಟಾಯ್ಸ್ ಮೂಲಕ ತೃಪ್ತಿ ಹೊಂದಲು ಬಯಸುತ್ತಿರುವುದು ನಿಮ್ಮದೇ ಆಯ್ಕೆ. ಇರಲಿ.

ಸೆಕ್ಸ್‌ ಬಗ್ಗೆ ನೀವು ಹೀಗೆಲ್ಲ ಅಂದ್ಕೊಂಡಿದ್ದೀರಾ? ಅಷ್ಟಕ್ಕೂ ವಾಸ್ತವ ಏನು?

ಸೆಕ್ಸ್ ಟಾಯ್‌ಗಳ ಬಳಕೆಯ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ. ಆದರೆ ಅದು ಅನಾರೋಗ್ಯಕರ ಎಂಬುದಕ್ಕೂ ಆಧಾರವೇನೂ ಇಲ್ಲ. ವಿದೇಶಗಳಲ್ಲಿ ಹಾಗೂ ನಮ್ಮ ದೇಶದಲ್ಲೂ ಸಹ ಸಾಕಷ್ಟು ಮಹಿಳೆಯರು ಇವುಗಳಿಂದ ಮೈಥುನದ ಸುಖವನ್ನು ಪಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಗಂಡ ಅಥವಾ ಬಾಯ್‌ಫ್ರೆಂಡ್‌ ಇರುವವರೂ ಸಹ ಇವುಗಳನ್ನು ಬಳಸುವುದನ್ನು ಕಂಡಿದ್ದೇನೆ. ಅದಕ್ಕೆ ಕಾರಣವೇನು? ಕಾರಣವೇನೆಂದರೆ ಇವರ ಗಂಡು ಸಂಗಾತಿಗೆ ಸೆಕ್ಸ್‌ನ ಸಂದರ್ಭದಲ್ಲಿ ಬಹುಬೇಗನೆ ಸ್ಖಲನವಾಗಿಬಿಡುತ್ತದೆ. ಇದರಿಂದಾಗಿ ಸ್ತ್ರೀಗೆ ತುರೀಯ ಸುಖ ಸಿಗುವುದೇ ಇಲ್ಲ. ಆಕೆ ಹಸ್ತಮೈಥುನದ ಮೂಲಕ ತನ್ನನ್ನು ತಾನು ತಣಿಸಿಕೊಳ್ಳಬೇಕಾಗಿ ಬರುತ್ತದೆ. ಹೀಗಾಗಿ ಕೆಲವರು ವೈಬ್ರೇಟರ್ ಕೂಡ ಇಟ್ಟುಕೊಂಡಿರುತ್ತಾರೆ. ಕಾಮಾಕಾಂಕ್ಷೆ ಪ್ರಬಲವಾದಾಗ, ಸಂಗಾತಿ ಜೊತೆಗಿಲ್ಲದ ಸಮಯದಲ್ಲೂ ಕೂಡ ಅವರು ಇದನ್ನು ಬಳಸಿಕೊಂಡು ಆನಂದ ಪಡೆಯುತ್ತಾರೆ.

#Feelfree: ಪೀರಿಯೆಡ್ಸ್ ಟೈಮ್‌ನಲ್ಲಿ ಸೆಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ 

ಭಾರತದಲ್ಲಿ ಸೆಕ್ಸ್ ಟಾಯ್ಸ್ ಅಥವಾ ವೈಬ್ರೇಟರ್‌ ಬಳಸುವುದಕ್ಕೆ ನಿರ್ಬಂಧವೇನೂ ಇಲ್ಲ. ವಾಸ್ತವವಾಗಿ ಇದಕ್ಕೆ ಸಂಬಂಧಿಸಿದ ಯಾವ ಕಾಯಿದೆಯೂ ಇಲ್ಲ. ಹೀಗಾಗಿ ಇದನ್ನು ಹೊಂದುವುದು ಅಪರಾಧವೂ ಅಲ್ಲ. ಮಾರುಕಟ್ಟೆಯಲ್ಲಿ ಇಂಡಿಯನ್‌ ಮೇಕ್‌ನ ಹಲವು ವೈಬ್ರೇಟರ್‌ಗಳು ಸಿಗುತ್ತವೆ. ಆದರೆ ಮೇಕಿಂಗ್‌, ಗುಣಮಟ್ಟ, ವೆರೈಟಿಯ ದೃಷ್ಟಿಯಿಂದ ಕೆಲವು ವಿದೇಶಿ ಕಂಪನಿಗಳ ವೈಬ್ರೇಟರ್‌ಗಳು ಚೆನ್ನಾಗಿವೆ ಎಂದು ಹಲವರು ಹೇಳುತ್ತಾರೆ. ಇವು ಆನ್‌ಲೈನ್‌ನಲ್ಲಿ ಸಿಗಬಹುದು. ಆದರೆ ಬೆಲೆ ಕೊಂಚ ದುಬಾರಿ. 
ವೈಬ್ರೇಟರ್‌ಗಳ ಬಳಕೆಯ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳಬೇಕಾದ್ದು ಎಂದರೆ, ಇವುಗಳಿಗೆ ಅಡಿಕ್ಟ್ ಆಗದಂತೆ ಎಚ್ಚರಾಗಿರುವುದು. ಮನುಷ್ಯ ಸಂಗಾತಿಯಲ್ಲಿ ಹಲವೊಮ್ಮೆ ಹಲವು ರೀತಿಯಲ್ಲಿ ಸುಖಪಡಬಹುದಾದ ಭಾವವೈವಿಧ್ಯ ಸಿಗುತ್ತದೆ. ಆದರೆ ಇದರಲ್ಲಿ ಹಾಗಲ್ಲ. ಒಂದೇ ರೀತಿಯ ಕಾರ್ಯವೈಖರಿ. ಆದರೆ ನೀವು ಮನಸೋ ತೃಪ್ತಿ ಆಗುವವರೆಗೂ ಇದನ್ನು ಬಳಸುತ್ತಿರುಬಹುದು ಎಂಬುದಿಲ್ಲಿ ಮುಖ್ಯ. ಹಾಗೇ ಯೋನಿಯೊಳಗಿನ ಸೂಕ್ಷ್ಮ ಭಾಗಗಳಿಗೆ, ಮುಖ್ಯವಾಗಿ ಕ್ಲಿಟೋರಿಸ್‌ಗೆ ಈ ವೈಬ್ರೇಟರ್ ಬಳಕೆಯಿಂದ ಹಾನಿಯೂ ಆಗಬಹುದು. ಆದರೆ ಅದನ್ನು ಸೂಕ್ಷ್ಮ ರೀತಿಯಲ್ಲಿ ಬಳಸಬೇಕು ಅಷ್ಟ. ಹೇಗೆ ಹಸ್ತಮೈಥುನ ಒಂದು ಚಟ ಆಗಬಾರದೋ, ಹಾಗೆಯೇ ವೈಬ್ರೇಟರ್‌ ಬಳಕೆಯೂ ಚಟ ಆಗಬಾರದು. ಅದೊಂದು ಮಿತಿಯಲ್ಲಿರಲಿ.

#Feelfree: ನನ್ನ ಗಂಡನಿಗೆ ಯೋನಿ ಕಂಡರೆ ಭಯ, ಇದ್ಯಾಕೆ? 

click me!