#Feelfree: ಸೆಕ್ಸ್‌ಗೆ ಮೊದಲು ಅಲ್ಲಿಗೆ ಸ್ಯಾನಿಟೈಸರ್ ಹಚ್ಕೋ ಅಂತಾಳೆ.!

By Suvarna NewsFirst Published Oct 18, 2020, 3:53 PM IST
Highlights

ಸಂಭೋಗ ಮಾಡುವ ಮುನ್ನ ಶಿಶ್ನಕ್ಕೆ ಸ್ಯಾನಿಟೈಸರ್ ಹಚ್ಕೋ ಅಂತಾಳೆ ಗರ್ಲ್‌ಫ್ರೆಂಡ್. ಇದು ಒಳ್ಳೇ ಅಬ್ಯಾಸವಾ ದುರಭ್ಯಾಸವಾ?

ಪ್ರಶ್ನೆ: ನನ್ನ ಗರ್ಲ್‌ಫ್ರೆಂಡ್ ಹಾಗೂ ನಾನು ಕೊರೊನಾ ಲಾಕ್‌ಡೌನ್‌ ಟೈಮಲ್ಲಿ ದೂರ ದೂರ ಇದ್ದೆವು. ಈಗ ಆಗಾಗ ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸಂಧಿಸುತ್ತೇವೆ. ನಾನೂ ಕಚೇರಿಗೆ ಹೋಗುತ್ತೇನೆ, ಅವಳೂ ಕಚೇರಿಗೆ ಹೋಗುತ್ತಾಳೆ. ಕಚೇರಿಯಿಂದ ಬಂದ ಬಳಿಕ, ಸ್ನಾನ ಮಾಡಿ ಶುಚಿಯಾಗದೇ ನಾವು ಸೆಕ್ಸ್ ಮಾಡದಿರುವ ರೂಢಿ ಮಾಡಿಕೊಂಡಿದ್ದೇವೆ. ಆದರೆ ನನ್ನ ಗೆಳತಿಗೆ ಇತ್ತೀಚೆಗೆ ಸ್ಯಾನಿಟೈಸರ್‌ ಗೀಳು ಹಿಡಿದಿದೆ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ವಸ್ತುವನ್ನು ಮುಟ್ಟಿದರೂ ಸ್ಯಾನಿಟೈಸರ್‌ ಹಚ್ಚಿಕೊಳ್ಳುತ್ತಾಳೆ. ಇತ್ತೀಚೆಗೆ, ಸೆಕ್ಸ್‌ಗೆ ಮೊದಲು, ನನ್ನ ಗುಪ್ತಾಂಗಕ್ಕೆ ಸ್ಯಾನಿಟೈಸರ್‌ ಹಚ್ಚಿಕೋ ಎಂದು ಬಲವಂತ ಮಾಡಿದಳು. ಆ ದಿನ ನಮ್ಮಿಬ್ಬರಿಗೂ ಜಗಳವಾಯಿತು. ಇದು ಮುಂದೆ ದೊಡ್ಡ ಮಾನಸಿಕ ಸಮಸ್ಯೆಯಾಗಬಹುದಾ? ಇದನ್ನು ಬಿಡಿಸುವುದು ಹೇಗೆ?

ಉತ್ತರ: ಗುಪ್ತಾಂಗಗಳಿಗೆ ಸ್ಯಾನಿಟೈಸರ್ ಹಚ್ಚುವುದರಿಂದ ದೊಡ್ಡ ಆರೋಗ್ಯ ಸಮಸ್ಯೆ ಏನೂ ಇಲ್ಲ. ವೈರಸ್‌ಗಳಿದ್ದರೆ ನಿರ್ಮೂಲ ಆಗಲೂಬಹುದು. ಆದರೆ ಅದು ಗುಪ್ತಾಂಗದ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳುವುದು ಮುಖ್ಯ. ಅದರ ಬದಲು, ಪುರುಷರ ಹಾಗೂ ಸ್ತ್ರೀಯರ ಗುಪ್ತಾಂಗದ ವಾಷ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದನ್ನು ಬಳಸಿ, ಬಳಸಲು ನಿಮ್ಮ ಗೆಳತಿಗೂ ಹೇಳಿ. ಇನ್ನು, ಸೆಕ್ಸ್‌ಗೆ ಮೊದಲು ವೈರಸ್‌ ನಾಶ ಮಾಡುವ ಹೆಸರಿನಲ್ಲಿ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಹಚ್ಚಿಕೊಳ್ಳುವುದು ಒಳ್ಳೆಯದಲ್ಲ. ಅದರಿಂದ ನಿಮ್ಮ ಸಹಜವಾದ ದೇಹಗಂಧಕ್ಕೆ ಹಾನಿಯಾಗಬಹುದು. ಸೆಕ್ಸ್‌ ಕ್ರಿಯೆಯಲ್ಲಿ ಆಸಕ್ತಿ ಇಳಿಯಬಹುದು. ಹಾಗೇ ಅತಿಯಾದ ಸ್ಯಾನಿಟೈಸರ್ ಬಳಕೆಯೂ ಒಳ್ಳೆಯದಲ್ಲ. ದಿನಕ್ಕೆ ಹತ್ತು ಬಾರಿಗಿಂತ ಅಧಿಕ ಸಲ ಸ್ಯಾನಿಟೈಸರ್ ಹಚ್ಚಬೇಡಿ. ಕೈ ತೋಳುಗಳಿಗೆ ಓಕೆ. ಇತರ ಕಡೆಗಳಿಗೆ ಬೇಡ. ಕಚೇರಿಯ ಬಳಿಕ ಸೋಪು ಹಚ್ಚಿ ಸರಿಯಾಗ ಸ್ನಾನ ಮಾಡಿದರೆ ಅದೇ ಸಾಕು. 

Latest Videos

ಸಡಿಲಗೊಂಡ ಯೋನಿ, ಸೆಕ್ಸ್‌ನಲ್ಲಿ ಖುಷಿಯಿಲ್ಲ ಅಂತಾನೆ ಗಂಡು! 

ಪ್ರಶ್ನೆ: ನನ್ನ ಗಂಡನಿಗೆ ಮೂವತ್ತು ವರ್ಷ. ನನಗೆ ಇಪ್ಪತ್ತೈದು. ಮದುವೆಯಾಗಿ ಆರು ತಿಂಗಳಾಗಿದೆ. ಹದಿನೈದು ದಿನಗಳ ಕೆಳಗೆ ನನ್ನ ಗಂಡನಿಗೆ ತುಂಬಾ ಶೀತವಾಯಿತು, ಟೆಸ್ಟ್‌ ಮಾಡಿಸಿದಾಗ ಕೋವಿಡ್ ಎಂದು ತಿಳಿಯಿತು. ಅಂದಿನಿಂದ ನನ್ನ ಪತಿ ಪ್ರತ್ಯೇಕ ಕೋಣೆಯಲ್ಲಿ ಇದ್ದರು. ಹದಿನೈದು ದಿನಗ ನಂತರ ಟೆಸ್ಟ್ ಮಾಡಿಸಿದಾಗ ನೆಗೆಟಿವ್‌ ಬಂದಿದೆ. ನನಗೆ ಟೆಸ್ಟ್ ಮಾಡಿಸಿದಾಗ ನೆಗೆಟಿವ್‌ ಬಂದಿದೆ. ಶೀತ ಬಿಟ್ಟರೆ ಬೇರೆ ಯಾವ ಲಕ್ಷಣಗಳೂ ಅವರನ್ನು ಬಾಧಿಸಿಲ್ಲ. ಅವರಿಗೆ ನೆಗೆಟಿವ್ ಬಂಧ ಬಳಿಕ, ಜೊತೆಯಾಗಿಯೇ ಮಲಗುತ್ತಿದ್ದೇವಾದರೂ, ಸೆಕ್ಸ್ ಮಾಡಿಲ್ಲ. ಅವರಿಗೆ ಸಂಭೋಗದ ಆಸೆಯಿದೆ, ಒತ್ತಾಯಿಸುತ್ತಾರೆ. ಆದರೆ ನನಗೆ ಕೋವಿಡ್‌ನ ಭಯ ಇನ್ನೂ ಇದೆ. ಕೋವಿಡ್ ಪೀಡತರು ಎಷ್ಟು ದಿನಗಳ ನಂತರ ಸೆಕ್ಸ್‌ನಲ್ಲಿ ಭಾಗವಹಿಸುವುದು ಸೂಕ್ತ?

#Feelfree: ಸ್ತನಗಳ ಶೇಪ್ ಕಾಪಾಡಿಕೊಳ್ಳುವುದು ಹೇಗೆ? 

ಉತ್ತರ: ನಿಮ್ಮ ಪ್ರಶ್ನೆಗೆ ಉತ್ತರ ನೀಡುವುದು ಸುಲಭ. ನಿಮ್ಮ ಪತಿಯಲ್ಲಿ ಕೋವಿಡ್ ಲಕ್ಷಣಗಳಿಲ್ಲದಿದ್ದರೆ, ಕೋವಿಡ್ ಟೆಸ್ಟ್ ನೆಗೆಟಿವ್‌ ಬಂದಿದ್ದರೆ ನೀವು ಅವರೊಂದಿಗೆ ಆರಾಮಾಗಿ ಸಂಭೋಗದಲ್ಲಿ ತೊಡಗಿಕೊಳ್ಳಬಹುದ. ಆದರೆ, ಹಲವು ಬಾರಿ ಜ್ವರ ಇಳಿದ ನಂತರ ಸುಸ್ತು ಇರುತ್ತದೆ. ಅಂಥ ಸುಸ್ತು ನಿಮ್ಮ ಪತಿಯಲ್ಲಿದ್ದರೆ, ಸಂಭೋಗಕ್ಕೆ ಇಳಿಯಬೇಡಿ. ಹಾಗೇ ಶೀತ ಮುಂತಾದ ಲಕ್ಷಣಗಳಿದ್ದರೂ ಎಚ್ಚರವಾಗಿರಿ. ಸಾಮಾನ್ಯವಾಗಿ ಕೋವಿಡ್‌ನಿಂದ ಗುಣಮುಖರಾದ ಒಂದು ತಿಂಗಳ ನಂತರ ನೀವಿಬ್ಬರೂ ಸೇರಬಹುದು. ಕೋವಿಡ್‌ ನೆಗೆಟಿವ್‌ ಬಂದ ಬಳಿಕವೂ ವೈರಾಣುಗಳು ಅವರಲ್ಲಿರುತ್ತವೆ ಎಂದು ಕೆಲವರು ದಾರಿ ತಪ್ಪಿಸುತ್ತಾರೆ. ಹಾಗೇನೂ ಇಲ್ಲ. ಭಯ ಬೇಡ. ಆದರೆ ಎಚ್ಚರವಿರಲಿ.

#Feelfree: ಸಾರ್ವಜನಿಕ ಜಾಗದಲ್ಲಿ ಸೆಕ್ಸ್ ಮಾಡೋ ಚಟ! 

ಪ್ರಶ್ನೆ: ನನ್ನ ವಯಸ್ಸು ಮೂವತ್ತು. ಕೆಲವು ದಿನಗಳ ಹಿಂದೆ ಅಪರಿಚಿತಳೊಬ್ಬಳ ಜೊತೆ ಒಂದು ಪಾರ್ಟಿಯಲ್ಲಿ ಒನ್ ನೈಟ್ ಸ್ಟಾಂಡ್ ಆಗಿ ಸೆಕ್ಸ್ ಮಾಡಿದೆ. ನನಗೆ ಕೊರೊನಾ ಕಾಡಬಹುದೇ?

ಉತ್ತರ: ಕೊರೊನಾ ಭೀತಿ ಇದ್ದೇ ಇದೆ. ಅದರ ಜೊತೆಗೆ, ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿರದೇ ಇದ್ದರೆ, ಇತರ ಆರೋಗ್ಯ ಸಮಸ್ಯೆಗಳ ಸಾಧ್ಯತೆಯೂ ಇದೆ. ಯಾವುದಕ್ಕೂ ಕೋವಿಡ್ ಪರೀಕ್ಷೆ ಮಾಡಿಸಿ.

click me!