ಕುಡ್ಲ ಬೀಚ್‌ನಲ್ಲಿ ಜೊತೆ ಜೊತೆಯಾಗಿ ಓಡಾಡಿದ 'ಸೀತಾರಾಮ' ಜೋಡಿ; ಏನ್ ಕಥೆ ಕೇಳ್ತಿದ್ದಾರೆ ಫ್ಯಾನ್ಸ್!

By Vinutha Perla  |  First Published Feb 18, 2024, 3:43 PM IST

ಸೀರಿಯಲ್‌ನಲ್ಲಿ ಕ್ಯೂಟ್ ಪೇರ್ ಆಗಿರುವ ಸೀತಾ-ರಾಮ ಜೋಡಿ ಗಗನ್ ಚಿನ್ನಪ್ಪ-ವೈಷ್ಣವಿ ಗೌಡ ರಿಯಲ್ ಲೈಫ್‌ನಲ್ಲಿಯೂ ಸಖತ್‌ ಕ್ಲೋಸ್. ಇತ್ತೀಚಿಗೆ ಇಬ್ಬರೂ ಮಂಗಳೂರು ಬೀಚ್‌ನಲ್ಲಿ ಜೊತೆಯಾಗಿ ಓಡಾಡಿದ್ದು, ಫ್ಯಾನ್ಸ್ ಕ್ಯೂಟ್ ಪೇರ್‌, ಬೇಗ ಮದ್ವೆಯಾಗಿ ಬಿಡಿ ಎಂದಿದ್ದಾರೆ.


ಸೀರಿಯಲ್ ಪ್ರಿಯರ ನೆಚ್ಚಿನ ಧಾರಾವಾಹಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಸೀರಿಯಲ್‌. ಧಾರಾವಾಹಿಯಲ್ಲಿ ರಾಮ್‌ ಪಾತ್ರದಲ್ಲಿ ಗಗನ್ ಚಿನ್ನಪ್ಪ ಹಾಗೂ ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ ಮನೋಜ್ಞವಾಗಿ ಅಭಿನಯಿಸುತ್ತಿದ್ದು ಪ್ರೇಕ್ಷಕರ ಮನಗೆದ್ದಿದ್ದಾರೆ. ಸೀರಿಯಲ್‌ನಲ್ಲಿ ರಾಮ್​ ದೊಡ್ಡ ಬಿಜಿನೆಸ್​ಮೆನ್​. ಆದರೆ ತನ್ನದೇ ಕಂಪೆನಿಯಲ್ಲಿ ಯಾರಿಗೂ ತಿಳಿಯದಂತೆ ಸಾಮಾನ್ಯ ನೌಕರನಂತೆ ಕೆಲಸ ಮಾಡುತ್ತಿದ್ದು ಇದೀಗ ಆತ ಬಾಸ್ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಭಗ್ನಪ್ರೇಮಿಯಾಗಿದ್ದ ಈತ ಸದ್ಯ ಮಗಳ ಜೊತೆ  ಒಂಟಿಯಾಗಿರುವ  ಸೀತಾಳ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ. ಇದೀಗ ಸೀತಾಳಿಗೂ ಒಳಗೊಳಗೇ ಪ್ರೀತಿ ಚಿಗುರಿದೆ. ಆದ್ರೆ ಇಬ್ಬರೂ ಪರಸ್ಪರ ಪ್ರೀತಿ ಹೇಳಿಕೊಂಡಿಲ್ಲ. ಆದ್ರೆ ಇಬ್ಬರ ಪ್ರೀತಿಗೆ ಸೀತಾ ಮಗಳು ಸಿಹಿ ಸೇತುವೆಯಾಗುವ ಸೂಚನೆ ಸಿಕ್ಕಿದೆ.

ಸೀರಿಯಲ್‌ನಲ್ಲಿ ಕ್ಯೂಟ್ ಪೇರ್ ಆಗಿರುವ ಸೀತಾ-ರಾಮ, ರಿಯಲ್ ಲೈಫ್‌ನಲ್ಲಿಯೂ ಸಖತ್‌ ಕ್ಲೋಸ್. ಸೀರಿಯಲ್ ಸೆಟ್‌ನಲ್ಲಿ ಯಾವಾಗಲೂ ಪರಸ್ಪರ ಕಾಲೆದುಕೊಳ್ಳುತ್ತಾ ತಮಾಷೆ ಮಾಡುತ್ತಾಇರುತ್ತಾರೆ. ಇಬ್ಬರೂ ತುಂಬಾ ಆಪ್ತರೂ ಹೌದು. ಎಷ್ಟೋ ಮಂದಿ ಈ ಸೀರಿಯಲ್ ಜೋಡಿ, ರಿಯಲ್‌ ಲೈಫ್‌ನಲ್ಲೂ ಪೇರ್ ಆದರೆ ಚೆನ್ನಾಗಿರುತ್ತೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಇನ್‌ಸ್ಟಾಗ್ರಾಂನಲ್ಲಿ ವೈಷ್ಣವಿ ಗೌಡ ಶೇರ್ ಮಾಡಿರೋ ಫೋಟೋವೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.

Tap to resize

Latest Videos

ಸೀತಾ ಮತ್ತು ರಾಮ್​ಗೆ ಎಂಗೇಜ್​ಮೆಂಟ್? ಸೀತಾರಾಮದಲ್ಲಿ ಬಿಗ್​ ಸರ್​ಪ್ರೈಸ್​- ಪ್ರೊಮೋ ರಿಲೀಸ್​

ನಟಿ ವೈಷ್ಣವಿ ಗೌಡ, ಮಂಗಳೂರು ಬೀಚ್‌ನಲ್ಲಿ ಗಗನ್ ಚಿನ್ನಪ್ಪ ಜೊತೆ ಓಡಾಡುತ್ತಿರುವ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕಡಲತೀರದಲ್ಲಿ ಇಬ್ಬರೂ ಜೊತೆಯಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ವೈಷ್ಣವಿ ಶೇರ್ ಮಾಡಿರೋ ಈ ಪೋಟೋಗೆ ನೆಟ್ಟಿಗರು ಸಾವಿರಾರು ಲೈಕ್ಸ್, ಹಾರ್ಟ್ ಎಮೋಜಿ ಹಾಗೂ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. 

ಅಭಿಮಾನಿಗಳು ನೈಸ್ ಪೇರ್‌, ಕ್ಯೂಟ್ ಜೋಡೀಸ್‌, ಮುದ್ದಾದ ಸುಂದರ ಜೋಡಿ, ಗೆಟ್ ಮ್ಯಾರೀಡ್ ಸೂನ್‌ ಎಂದೆಲ್ಲಾ ಹೇಳಿದ್ದಾರೆ. ಮತ್ತೆ ಕೆಲವರು ಸೀರಿಯಲ್‌ನಂತೆ ನೀವು ನಿಜ ಜೀವನದಲ್ಲೂ ಜೋಡಿಯಾದರೆ ಚೆಂದ ಎಂದು ಹೊಗಳಿದ್ದಾರೆ. ಇನ್ನು ಕೆಲವರು, 'ರಿಯಲ್‌ ಲೈಫ್‌ನಲ್ಲೂ ನೀವಿಬ್ಬರು ಮದುವೆಯಾಗಿ, ಸಿಹಿಯನ್ನು ಅಡಾಪ್ಟ್ ಮಾಡಿಕೊಳ್ಳಿ. ಇಲ್ಲದಿದ್ದರೆ ಅಟ್‌ಲೀಸ್ಟ್ ನಿಮ್ಮ ಮಗುವಿಗೆ ಸಿಹಿ ಎಂದು ಹೆಸರಿಡಿ' ಎಂದು ಕೇಳಿಕೊಂಡಿದ್ದಾರೆ.

ಬಾನದಾರಿಯಲ್ಲಿ ಸೂರ್ಯ... ಹಾಡು ಹೇಳಿ ಸೀತಮ್ಮನನ್ನು ಮಲಗಿಸಿದ ಸಿಹಿ: ಸೋ ಕ್ಯೂಟ್​ ಎಂದ ಫ್ಯಾನ್ಸ್​

ಆದ್ರೆ ಈ ಫೋಟೋಗಳು 'ಸೀತಾರಾಮ' ಸೀರಿಯಲ್‌ ಶೂಟಿಂಗ್ ಸಮಯದಲ್ಲಿ ಕ್ಲಿಕ್ಕಿಸಿದ್ದಾಗಿದೆ ಎಂದು ಹೇಳಲಾಗ್ತಿದೆ. ಆದರೂ ಫ್ಯಾನ್ಸ್ ಮಾತ್ರ ಈ ಜೋಡಿಯನ್ನು ಒಟ್ಟಿಗೇ ನೋಡಲು ಎಷ್ಟು ಖುಷಿಯಾಗುತ್ತಿದೆ. ಕೆಲವರು, ಈ ಜೋಡಿಗೆ ಯಾರ ದೃಷ್ಟಿಯೂ ಬೀಳದಿರಪ್ಪ ಎನ್ನುತ್ತಿದ್ದಾರೆ.

click me!