ಕ್ಯಾನ್ಸರ್ ಪೀಡಿತ ಮಹಿಳೆ ಮತ್ತು ಆಕೆಯ ಮೊಮ್ಮಗನ ನಡುವಿನ ಭಾವನಾತ್ಮಕ ಪುನರ್ಮಿಲನದ ವೀಡಿಯೊ ನೆಟ್ಟಿಗರ ಕಣ್ಣಲ್ಲೂ ನೀರು ತರಿಸಿದೆ.
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಹಿಳೆ ಮತ್ತು ಅವಳ ಪ್ರೀತಿಯ ಮೊಮ್ಮಗನ ನಡುವಿನ ಹೃತ್ಪೂರ್ವಕ ಪುನರ್ಮಿಲನವು ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯವನ್ನು ವಶಪಡಿಸಿಕೊಂಡಿದೆ.
ಫೆಬ್ರವರಿ 16ರಂದು ಗುಡ್ ನ್ಯೂಸ್ ಮೂವ್‌ಮೆಂಟ್‌ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಮೊಮ್ಮಗನು ತನ್ನ ಅಜ್ಜಿಯ ಕಡೆಗೆ ಧಾವಿಸುತ್ತಿರುವಾಗ ಭಾವನಾತ್ಮಕ ದೃಶ್ಯವು ತೆರೆದುಕೊಳ್ಳುತ್ತದೆ. ಹತ್ತಿರ ಬಂದ ಮೊಮ್ಮಗ ಅಜ್ಜಿಯನ್ನು ಹಿಡಿದು ಅಳಲಾರಂಭಿಸುತ್ತಾನೆ. ಅಳುತ್ತಿರುವ ಮೊಮ್ಮಗನ ಮುಖವನ್ನು ಅಂಗೈಲಿ ಹಿಡಿದ ಅಜ್ಜಿಯೂ ಭಾವುಕಳಾಗುತ್ತಾಳೆ. ಆತನ ತಲೆ ಸವರುತ್ತಾಳೆ. ಅಜ್ಜಿಯ ಮೂಗಿಗೆ ಪೈಪ್ ಇರುವುದನ್ನು ಮೊಮ್ಮಗ ಗಮನಿಸುತ್ತಾನೆ.
undefined
ಈ ವಿಡಿಯೋ ಕಂಡು ನೆಟ್ಟಿಗರು ಭಾವುಕರಾಗುತ್ತಿದ್ದಾರೆ. 'ಐ ಮಿಸ್ ಯೂ' ಎಂಬ ಕ್ಯಾಪ್ಶನ್ ಹೊಂದಿರುವ ವಿಡಿಯೋ ಅಜ್ಜಿ ಮೊಮ್ಮಗನ ವಿಶೇಷ ಕ್ಷಣವಾಗಿದೆ. ವೈರಲ್ ಆದ ಈ ವಿಡಿಯೋ 1 ಲಕ್ಷ ಲೈಕ್ಸ್ ಪಡೆದಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಬಲವಾದ ಭಾವನೆಗಳನ್ನು ಹುಟ್ಟುಹಾಕಿತು. ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ ಬಳಕೆದಾರರು ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬರು ವಿಡಿಯೋ ಬಗ್ಗೆ ತಮ್ಮ ಮಾತು ಹಂಚಿಕೊಳ್ಳುತ್ತಾ, 'ಆಕೆ ಮೊಮ್ಮಗನನ್ನು ತಬ್ಬಿಕೊಳ್ಳಲಾಗದಿದ್ದರೂ ಬೊಗಸೆಯಲ್ಲಿ ಆತನ ಮುಖ ಹಿಡಿದು ಹೇಗೆ ಸಂಪರ್ಕ ಸಾಧಿಸಿದ್ದಾಳೆ! ಇದು ಪ್ರೀತಿಯ ತೀವ್ರ ರೂಪ. ದೇವರೇ, ಎಂತಹ ಕ್ಷಣ. ಅದನ್ನು ಹಂಚಿಕೊಂಡಿದ್ದಕ್ಕಾಗಿ ಕುಟುಂಬಕ್ಕೆ ಧನ್ಯವಾದಗಳು' ಎಂದಿದ್ದಾರೆ.
ಮತ್ತೊಬ್ಬ ವ್ಯಕ್ತಿ ತಮ್ಮ ಹೃತ್ಪೂರ್ವಕ ಹಾರೈಕೆಗಳನ್ನು ವ್ಯಕ್ತಪಡಿಸುತ್ತಾ, 'ಈ ಮಹಿಳೆಯು ಸಂಪೂರ್ಣ ಸ್ವಾಸ್ಥ್ಯವನ್ನು ಮರಳಿ ಪಡೆಯಬೇಕೆಂದು ನಾನು ಪ್ರಾರ್ಥಿಸುತ್ತೇನೆ, ಈ ಪ್ರೀತಿಯು ದಶಕಗಳವರೆಗೆ ಅರಳಲು ನಾನು ಪ್ರಾರ್ಥಿಸುತ್ತೇನೆ. ಈ ನಿಖರವಾದ ಪ್ರೀತಿ ನನಗೆ ತಿಳಿದಿದೆ' ಎಂದು ಬರೆದಿದ್ದಾರೆ.
ಮೂರನೇ ಬಳಕೆದಾರರು 'ಇದು ನನ್ನನ್ನು ಭಾವುಕವಾಗಿಸಿತು' ಎಂದಿದ್ದಾರೆ. ಮತ್ತೊಬ್ಬರು, 'ಅಜ್ಜಿಯ ಪ್ರೀತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಅದು ಅಮೂಲ್ಯ ಸಂಪತ್ತು' ಎಂದಿದ್ದಾರೆ.