Love Break Up ಆಯಿತಾ? ಏನೂ ಆಗದಂತೆ ಇರಲು ಇಲ್ಲಿವೆ ಟಿಪ್ಸ್

By Suvarna NewsFirst Published Jun 20, 2022, 4:12 PM IST
Highlights

ಬ್ರೇಕ್ ಅಪ್ ಅನ್ನೋದು ಸಾವಿದ್ದಂತೆ. ಅಲ್ಲಿ ಸಂಬಂಧ ಸತ್ತಿರುತ್ತೆ. ಈ ನೋವಿನಿಂದ ಹೊರ ಬರಲು ಕೆಲವೊಂದು ಮಾರ್ಗವನ್ನು ಅನುಸರಿಸ್ಬೇಕಾಗುತ್ತದೆ. ಇಲ್ಲವಾದ್ರೆ ಮಾನಸಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂದು ನಾವು ಬ್ರೇಕ್ ಅಪ್ ದುಃಖ ಕಡಿಮೆ ಮಾಡೋದು ಹೇಗೆ ಅಂತಾ ಹೇಳ್ತೇವೆ. 

ಪ್ರೀತಿ (Love) ನಮಗೆ ಗೊತ್ತಿಲ್ಲದೆ ಚಿಗುರೊಡೆದಿರುತ್ತದೆ. ಆರಂಭದ ಪರಿಚಯ ಕೊನೆಗೆ ಪ್ರೀತಿಯಾಗಿ ಬದಲಾಗಿರುತ್ತದೆ. ಒಬ್ಬರನ್ನೊಬ್ಬರು ಆಳವಾಗಿ ಪ್ರೀತಿಸಲು ಶುರು ಮಾಡಿರ್ತಾರೆ. ಸಂಗಾತಿ ಇಲ್ಲದೆ ಒಂದು ಕ್ಷಣ ಕೂಡ ಇರಲು ಸಾಧ್ಯವಿಲ್ಲ ಎಂಬ ಭಾವನೆ ಮೂಡಿರುತ್ತದೆ. ಅವರಿಲ್ಲದ ಬದುಕು ಕಲ್ಪಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಉಸಿರಲ್ಲಿನಲ್ಲಿ ಬೆರತು ಹೋಗಿರುವ ಪ್ರೀತಿ ಮುಂದೆ ಒಂದು ದಿನ ಉಸಿರು ನಿಲ್ಲಿಸಬಹುದು ಎಂಬುದು ಯಾರಿಗೂ ತಿಳಿದಿರೋದಿಲ್ಲ. ನಾವಂದುಕೊಂಡಂತೆ ನಮ್ಮ ಜೀವನದಲ್ಲಿ ಎಲ್ಲವೂ ನಡೆಯುವುದಿಲ್ಲ. ಪ್ರೀತಿ ಕೂಡ ಹಾಗೆ. ಹೇಳಿ ಕೇಳಿ ಬರದ ಪ್ರೀತಿ, ರಾದ್ಧಾಂತ ಮಾಡಿ ಹೋಗಿರುತ್ತದೆ. ಯಾವುದೋ ಸಣ್ಣ ವಿಚಾರಕ್ಕೆ ಇಬ್ಬರ ಮಧ್ಯೆ ಬ್ರೇಕ್ ಅಪ್ (Break Up) ಆಗ್ಬಹುದು. ಪ್ರೀತಿ ಎಷ್ಟು ಸುಖ, ಸಂತೋಷ ನೀಡಿತ್ತೋ ಅದ್ರ ದುಪ್ಪಟ್ಟು ನೋವನ್ನು ಬ್ರೇಕ್ ಅಪ್ ನೀಡಿರುತ್ತದೆ. ಬ್ರೇಕ್ ಅಪ್ ನೋವು ಸಾವಿನ ನೋವಿಗಿಂತ ಕಡಿಮೆಯೇನಿಲ್ಲ. ಚಡಪಡಿಕೆ, ಹತಾಶೆ ಇದ್ರಿಂದ ಉಂಟಾಗುತ್ತದೆ. ಮಾನಸಿಕ ಅಸ್ವಸ್ಥತೆ ಕೂಡ ಕಾಡುತ್ತದೆ. ಈ ಬ್ರೇಕ್ ಅಪ್ ನೋವನ್ನು ಮರೆತು ಮುಂದೆ ಹೆಜ್ಜೆ ಇಡಬೇಕೆಂದ್ರೆ ಫ್ಯೂನರಲ್ ರಿಚುಯಲ್ (funeral rituals )ಅಂದ್ರೆ ಅಂತ್ಯಕ್ರಿಯೆಯ ಆಚರಣೆ ಮುಖ್ಯವಾಗುತ್ತದೆ. ಇಂದು ನಾವು ಈ ಬ್ರೇಕ್ ಅಪ್ ನಂತ್ರದ ಅಂತ್ಯಕ್ರಿಯೆ ಆಚರಣೆ ಬಗ್ಗೆ ಹೇಳ್ತೇವೆ.

ಬ್ರೇಕ್ ಅಪ್ ನಂತ್ರ ಅಂತ್ಯಕ್ರಿಯೆ ಆಚರಣೆ ಅಂದ್ರೇನು? : ಯಾರಾದ್ರೂ ಸತ್ತರೆ ಮನೆಯಲ್ಲಿ ಶವಸಂಸ್ಕಾರದ ಹೆಸರಿನಲ್ಲಿ ಹಲವು ಕೆಲಸಗಳನ್ನು ಮಾಡಲಾಗುತ್ತದೆ. ಆಪ್ತರನ್ನು ಕಳೆದುಕೊಂಡ ನಿಮ್ಮ ದುಃಖದಲ್ಲಿ ಮನೆಯವರು, ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗಿಯಾಗ್ತಾರೆ. ನಿಮ್ಮ ಜೊತೆ ಕುಟುಂಬಸ್ಥರು ಶವ ಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಳ್ತಾರೆ. ಹತ್ತು ದಿನಗಳ ಕಾಲ ಸೂತಕ ಆಚರಣೆ ಮಾಡಿ, ನಿಧಾನವಾಗಿ ಕಳೆದುಕೊಂಡವರನ್ನು ಮರೆಯಲು ನಿಮ್ಮನ್ನು ಪ್ರೇರೇಪಿಸುತ್ತಾರೆ. ಕಳೆದುಹೋದ ವ್ಯಕ್ತಿ ಇಲ್ಲದೆ ಬದುಕುವ ಧೈರ್ಯವನ್ನು ನಿಮಗೆ ತುಂಬುತ್ತಾರೆ. ಆಪ್ತರಿಲ್ಲದೆ ಬದುಕುವ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನ ಸಾಗುತ್ತದೆ. ಅದೇ ರೀತಿ  ಬ್ರೇಕ್ ಅಪ್ ನಂತ್ರ ಸಂಗಾತಿಯಿಲ್ಲದೆ ಬದುಕಲು ಮತ್ತು ಈ ನೋವನ್ನು ಹಂಚಿಕೊಳ್ಳಲು ಒಂದು ಸಂಸ್ಕಾರವನ್ನು ಮಾಡುವ ಅಗತ್ಯವಿದೆ. ಇದನ್ನು ಬ್ರೇಕ್ ಅಪ್ ಅಂತ್ಯಕ್ರಿಯೆಯ ಆಚರಣೆ ಎಂದು ಕರೆಯಲಾಗುತ್ತದೆ. ಇದನ್ನು ಮಾಡುವುದರಿಂದ ಆತಂಕ, ಒತ್ತಡ ಮತ್ತು ಬ್ರೇಕ್ ಅಪ್ ನೋವಿನ ಪರಿಣಾಮಗಳನ್ನು ತೆಗೆದುಹಾಕಲು ಸಹಾಯವಾಗುತ್ತದೆ. ವ್ಯಕ್ತಿ ಬೇಗ ಸಾಮಾನ್ಯ ಜೀವನಕ್ಕೆ ಮರಳುತ್ತಾನೆ. 

REAL STORY: ಬೆಡ್ ರೂಮಲ್ಲಿ ಪರಪುರುಷನ ಜೊತೆ ಪತ್ನಿ! ಇದಕ್ಕೆ ಕಾರಣ ನಾನೇ ಎಂದ ಪತಿ

ಬ್ರೇಕ್ ಅಪ್ ನಂತ್ರ ಅಂತ್ಯ ಸಂಸ್ಕಾರ ಹೇಗೆ? : 
ಶೋಕದ ಸಮಯ :
ಪ್ರೀತಿ ಆಳವಾಗಿದ್ದರೆ ಅದರಿಂದ ಹೊರಗೆ ಬರುವುದು ಸುಲಭವಲ್ಲ. ಹಾಗಾಗಿ ನೀವು ಸಮಯ ನೀಡಬೇಕಾಗುತ್ತದೆ. ಜೊತೆಗೆ ಅಳುವನ್ನು ಮುಚ್ಚಿಡಬಾರದು. ನಿಮ್ಮ ಆಪ್ತರ ಹತ್ತಿರ ನೋವನ್ನು ಹೇಳಿಕೊಂಡು, ದುಃಖವನ್ನು ಹೊರಗೆ ಹಾಕಬೇಕು. ಒಂಟಿಯಾಗಿ ನೋವು ತಿನ್ನುವ ಬದಲು ನಿಮ್ಮ ಭಾವೆಯನ್ನು ಆಪ್ತರ ಬಳಿ ಹೇಳಿಕೊಳ್ಳಬೇಕು. ಮಾನಸಿಕ ನೆಮ್ಮದಿ ಸಿಗಲು ನಿಮಗೆ ಏನು ಅಗತ್ಯವಿದೆ ಅದನ್ನು ಮಾಡ್ಬೇಕು.  

Relation Tips: ಸಂಬಂಧದಲ್ಲಿ ಯಾವುದೆಲ್ಲ ಇರ್ಲೇಬಾರ್ದು?

ಸಮಯವನ್ನು ನಿರ್ಧರಿಸಿ : ಬ್ರೇಕ್ ಅಪ್ ನಂತ್ರ ಅಳು,ನೋವು, ನಿರಾಶೆ ಸಹಜ. ಆದ್ರೆ ಅದೇ ಗುಂಗಿನಲ್ಲಿ ಇಡೀ ಜೀವನ ಕಳೆಯಲು ಸಾಧ್ಯವಿಲ್ಲ. ಹಾಗಾಗಿ ದುಃಖಕ್ಕೆ ಒಂದಿಷ್ಟು ಸಮಯ ಮೀಸಲಿಡಿ. ಇಷ್ಟು ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುವ ಪಣತೊಡಿ. ನಿಮಗೆ ನೀವು ನೀಡಿದ ಸಮಯದೊಳಗೆ ನಿಮ್ಮ ಮನಸ್ಥಿತಿಯನ್ನು ಸುಧಾರಿಸಿಕೊಳ್ಳಿ.  

ಲುಕ್ ಬದಲಿಸಿ : ಅನೇಕ ಬಾರಿ ನಮ್ಮ ಹಳೆ ಸ್ಟೈಲ್ ನಮಗೆ ಬೇಸರವೆನಿಸಬಹುದು. ಹಾಗಾಗಿ ಬ್ರೇಕ್ ಅಪ್ ನಂತ್ರ ನಿಮ್ಮ ಲುಕ್ ಬದಲಿಸಿ. ಇಷ್ಟಪಟ್ಟರೆ ಕೂದಲು ಕತ್ತರಿಸಬಹುದು. ನಿಮ್ಮ ಡ್ರೆಸ್ ಸ್ಟೈಲ್ ಬದಲಿಸಬಹುದು. ಈ ಬದಲಾವಣೆ ನಿಮಗೆ ಸ್ವಲ್ಪ ನೆಮ್ಮದಿ ನೀಡುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತದೆ.

ಪಾರ್ಟಿ ಏರ್ಪಡಿಸಿ : ಬ್ರೇಕ್ ಅಪ್ (Break UP) ನಂತ್ರ ನೀವು ಮನೆಯ ಮೂಲೆಯಲ್ಲಿ ಕುಳಿತುಕೊಳ್ಳಬೇಕಾಗಿಲ್ಲ. ಸ್ನೇಹಿತರ ಜೊತೆ ಪಾರ್ಟಿ ಮಾಡ್ಬಹುದು. ನಿಮಗೆ ಧೈರ್ಯ ನೀಡುವ, ಸದಾ ನಿಮ್ಮ ಜೊತೆಗಿರುವ ಸ್ನೇಹಿತರ ಜೊತೆ ನೀವು ಪ್ರವಾಸಕ್ಕೆ ಹೋಗ್ಬಹುದು. ಇದು ನಿಮ್ಮನ್ನು ಮಾನಸಿಕವಾಗಿ ಬಲಗೊಳಿಸುತ್ತದೆ. 

ಮನೆಗೊಂದು ಹೊಸ ರೂಪ : ಅನೇಕರು ಮನೆಯಲ್ಲಿ ಸಾವಾದ್ರೆ ಒಂದು ವರ್ಷದೊಳಗೆ ಅದಕ್ಕೆ ಬಣ್ಣ ಬಳಿಯುತ್ತಾರೆ. ಮನೆಯ ರೂಪವನ್ನು ಬದಲಾಯಿಸ್ತಾರೆ. ನೀವು ಕೂಡ ಹೀಗೆ ಮಾಡ್ಬಹುದು. ಬ್ರೇಕ್ ಅಪ್ ನಂತ್ರ ನಿಮ್ಮ ಮನೆಗೆ ಬಣ್ಣ ಬಳಿಯಬಹುದು. ಇಲ್ಲವೆ ಮನೆ ಒಳಾಂಗಣವನ್ನು ಬದಲಿಸಬಹುದು. ಬಾಡಿಗೆ ಮನೆಯಲ್ಲಿದ್ದರೆ ಆ ಪರಿಸರ ಬಿಟ್ಟು ನೀವು ಬೇರೆ ಮನೆಗೆ ಶಿಫ್ಟ್ ಕೂಡ ಆಗ್ಬಹುದು. ಇದು ಕೂಡ ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಈ ಕೆಲಸಗಳು ನಿಮ್ಮ ನೋವನ್ನು ಮರೆಸುತ್ತವೆ. 
 

click me!