Real Story: ಬೆಡ್ ರೂಮಲ್ಲಿ ಪರಪುರುಷನ ಜೊತೆ ಪತ್ನಿ! ಇದಕ್ಕೆ ಕಾರಣ ನಾನೇ ಎಂದ ಪತಿ

By Suvarna News  |  First Published Jun 20, 2022, 12:46 PM IST

ಅನೇಕ ಬಾರಿ ಶುದ್ಧ ಪ್ರೀತಿಗೆ ಮೋಸವಾಗಿರುತ್ತದೆ. ದೈಹಿಕ ಬಯಕೆ ತೀರಿಸಿಕೊಳ್ಳಲು ಸಂಗಾತಿಗೆ ದ್ರೋಹ ಬಗೆಯುವ ಜನರು ಸಾಕಷ್ಟು ಮಂದಿ. ಪ್ರೀತಿಸಿದ ವ್ಯಕ್ತಿ ಮೋಸ ಮಾಡಿದ್ದಾರೆ ಎಂಬುದು ಗೊತ್ತಾದಾಗ ಆಗುವ ಆಘಾತ, ಗೊಂದಲ ಅಷ್ಟಿಷ್ಟಲ್ಲ. 
 


ದಾಂಪತ್ಯ ಜೀವನದಲ್ಲಿ ಒಂದಿಷ್ಟು ಸರಸ (Romance) ವಿರಲೇಬೇಕು. ಮದುವೆ (Marriage) ಯಾದ ಮರುದಿನವೇ ಸಂಗಾತಿ ದೂರವಾದ್ರೆ ಅದನ್ನು ಸಹಿಸೋದು ಕಷ್ಟ. ಇಬ್ಬರು ಒಂದೊಂದು ಊರಿನಲ್ಲಿ ಜೀವನ ನಡೆಸ್ತಿದ್ದರೆ ಮನಸ್ಸು ಚಂಚಲವಾಗುತ್ತದೆ. ಅದನ್ನು ನಿಯಂತ್ರಣದಲ್ಲಿ ಇಡದೆ ಹೋದ್ರೆ ಸಂಸಾರ ಹಾಳಾಗುತ್ತದೆ. ಇದಕ್ಕೆ ಈ ಸೇನಾಧಿಕಾರಿ ಜೀವನ ಉತ್ತಮ ನಿದರ್ಶನ. ದೇಶ ಕಾಯಲು ಗಡಿಯಲಿ ಪ್ರಾಣ ಪಣಕ್ಕಿಟ್ಟು ಹೋರಾಡುವ ಸೇನಾಧಿಕಾರಿಯ ಪತ್ನಿ ಬೇರೊಬ್ಬರ ಪಾಲಾಗಿದ್ದಾಳೆ. ಕರ್ತವ್ಯ ಬಿಡಲೂ ಆಗದೆ, ಪತ್ನಿ ಜೊತೆ ಜೀವನ ನಡೆಸಲೂ ಆಗದೆ ಈ ಅಧಿಕಾರಿ ಈಗ ಅತಂತ್ರರಾಗಿದ್ದಾರೆ. ಪತ್ನಿ ಮೋಸದಲ್ಲಿ ತನ್ನದೂ ಪಾಲಿದೆ ಎನ್ನುವ ಅಧಿಕಾರಿ ತನ್ನ ಬಾಳಿನ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಾಲ್ಯದ ಗೆಳತಿ ಕೈ ಹಿಡಿದ ಅಧಿಕಾರಿ : ವಿವಾಹಿತ ಸೇನಾಧಿಕಾರಿ. ಬಾಲ್ಯದಲ್ಲಿಯೇ ತಂದೆ ದೇಶ ಪ್ರೇಮವನ್ನು ಕಲಿಸಿದ್ದರಂತೆ. ಶಿಸ್ತು (Desciplene), ಶಕ್ತಿಯನ್ನು ತುಂಬಿದ್ದರಂತೆ. ತಂದೆ ಭಾರತೀಯ ಸೇನೆಯಲ್ಲಿ (Indian Army) ಅಧಿಕಾರಿಯಾಗಿ ಕೆಲಸ ಮಾಡಿದ್ದರಂತೆ. ಮಗನನ್ನೂ ಅದೇ ಜಾಗದಲ್ಲಿ ನೋಡಬೇಕೆಂಬ ಹಂಬಲ. ಮಗ ಕೂಡ ತಂದೆ ನಂಬಿಕೆ ಸುಳ್ಳು ಮಾಡಲಿಲ್ಲ. ಸೇನೆಗೆ ಸೇರಿ ದೇಶ ಸೇವೆ ಮಾಡ್ತಿದ್ದಾರೆ. ಬಾಲ್ಯದಿಂದಲೂ ಮೌನ ಸ್ವಭಾವದ ಇವರು ಯಾರ ಜೊತೆಯೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಆದ್ರೆ ಇವರು ಜೀವನ ಬದಲಾಗಿದ್ದು ನೈನಾಳಿಂದ. ಹೈಸ್ಕೂಲಿನಲ್ಲಿ ಮೊದಲು ಭೇಟಿಯಾದ ನೈನಾ ಈಗ ಬಾಳ ಸಂಗಾತಿಯಾಗಿದ್ದರು. ನೈನಾ ಸ್ವಭಾವ ಇವರಿಗೆ ತದ್ವಿರುದ್ದವಾಗಿದೆ. ಎಲ್ಲರ ಜೊತೆ ಬೆರೆತು ಮಾತನಾಡುವ ಸ್ವಭಾವ ನೈನಾಳದ್ದು. ಅನೇಕ ಬಾರಿ ಎಡವಿದಾಗ ಎದ್ದು ನಿಲ್ಲಲು ಸಹಾಯ ಮಾಡಿದ ನೈನಾಳನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರಂತೆ ಅಧಿಕಾರಿ. ಕಾಲೇಜು ಮುಗಿಸಿ, ಸೈನ್ಯಕ್ಕೆ ಸೇರಿದ ಮೇಲೆ ನಿರ್ಧಾರವನ್ನು ಪಾಲಕರ ಮುಂದಿಟ್ಟಿದ್ದರಂತೆ. ಬಾಲ್ಯದಿಂದಲೂ ನೈನಾಳನ್ನು ಅರಿತಿರುವ ಪಾಲಕರು ಮದುವೆಗೆ ಒಪ್ಪಿದ್ದರಂತೆ. 

Tap to resize

Latest Videos

ಲಿಪ್‌ಸ್ಟಿಕ್‌ ಹಚ್ಚಿ ಹೆಣ್ಣಿನಂತೆ ಸಿಂಗರಿಸಿಕೊಳ್ಳುವ ಗಂಡ : ಠಾಣೆ ಮೆಟ್ಟಿಲೇರಿದ ಪತ್ನಿ

ಮದುವೆಯಾಗಿ 8 ತಿಂಗಳ ನಂತ್ರ ಭೇಟಿ : ಅಂದುಕೊಂಡಂತೆ ಎಲ್ಲವೂ ನಡೆದಿತ್ತು ಎನ್ನುತ್ತಾರೆ ಅಧಿಕಾರಿ. ನೈನಾ ಕೈಹಿಡಿದ ಒಂದು ವಾರದಲ್ಲಿಯೇ ಕರ್ತವ್ಯದ ಕರೆ ಬಂದಿತ್ತು. ಅಸ್ಸಾಂಗೆ (Assam) ಪೋಸ್ಟಿಂಗ್ ಆಗಿದ್ದ ಕಾರಣ, ಬ್ಯಾಗ್ ಹಿಡಿದು ನಿಂತಿದ್ದರು. ಅಸ್ಸಾಂ ತಲುಪಿದ ಮೇಲೆ ಎಷ್ಟು ಪ್ರಯತ್ನಪಟ್ಟರೂ ಮನೆಗೆ ಬರಲು ಆಗ್ತಿರಲಿಲ್ಲ. ನೈನಾ ಆಗಾಗ ಫೋನ್ ಕರೆ ಮಾಡ್ತಿದ್ದರು. ವಿಡಿಯೋ ಕಾಲ್ ಮಾಡ್ತಿದ್ದರು. ಆದ್ರೆ ಅಧಿಕಾರಿ ಮಾತ್ರ ಹಿಂದಿನ ಕಾಲದಂತೆ ಪತ್ರ ಬರೆಯುತ್ತಿದ್ದರು. ಆ ಒಂದು ಪತ್ರಕ್ಕೂ ಪತ್ನಿಯಿಂದ ಉತ್ತರ ಬರ್ತಿರಲಿಲ್ಲ. ಆದ್ರೆ ಅಧಿಕಾರಿ ಪತ್ರ ಬರೆಯೋದನ್ನು ಬಿಟ್ಟಿರಲಿಲ್ಲ. ನೈನಾರನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅಧಿಕಾರಿಗೆ 8 ತಿಂಗಳ ನಂತ್ರ ಪತ್ನಿ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಮನೆಗೆ ಬಂದ ಪತಿಯನ್ನು ಪ್ರೀತಿಯಿಂದ ಸ್ವಾಗತಿಸಿದ್ದ ನೈನಾ, ಎರಡು ಮೂರು ದಿನಗಳ ನಂತ್ರ ಬದಲಾಗಿದ್ದರು. ಅವರ ಮುಖದಲ್ಲಿ ನೋವಿತ್ತು. ಆದ್ರೆ ಇರುವಷ್ಟು ದಿನ ಸಂತೋಷವಾಗಿರಬೇಕೆಂಬ ಕಾರಣಕ್ಕೆ ಅಧಿಕಾರಿ ನೈನಾ ಮುಖದಲ್ಲಿ ನಗು ತರಿಸಲು ಒಂದಿಷ್ಟು ಪ್ರಯತ್ನ ನಡೆಸಿದ್ದರು.

ಅನುಕೂಲಕ್ಕಾಗಿ ಮಾತ್ರ ಹುಡುಗಿ ನಿಮ್ಮೊಂದಿಗೆ ಸ್ನೇಹ ಬೆಳ್ಸಿದ್ದಾಳಾ?

ಮತ್ತೆ ಬಂದಾಗ ಕಾದಿತ್ತು ಶಾಕ್ : ಮತ್ತೆ ಕೆಲಸಕ್ಕೆ ಮರಳಿದ್ದ ಅಧಿಕಾರಿಗೆ ಸಮಯ ಸಿಗ್ತಿರಲಿಲ್ಲ. ನೈನಾಗೆ ವಿಡಿಯೋ ಕರೆ ಮಾಡುವುದು ಕೂಡ ಕಡಿಮೆಯಾಗಿತ್ತು. ಕೆಲಸದ ಕಾರಣ ಸದಾ ಬ್ಯುಸಿಯಿರುತ್ತಿದ್ದ ಅಧಿಕಾರಿಗೆ ವರ್ಷದ ನಂತ್ರ ರಜೆ ಸಿಕ್ಕಿದೆ. ಪತ್ನಿಗೆ ಸರ್ಪ್ರೈಸ್ ನೀಡ್ಬೇಕು ಎಂಬ ಕಾರಣಕ್ಕೆ ಹೇಳದೆ ಮನೆಗೆ ಬಂದಿದ್ದಾರೆ. ಮನೆಯೊಳಗೆ ಬರ್ತಿದ್ದಂತೆ ಆಘಾತವಾಗಿದೆ. ಮನೆಯೆಲ್ಲ ಚೆಲ್ಲಾಪಿಲ್ಲಿಯಾಗಿದೆ. ಬಟ್ಟೆ ಅಲ್ಲಲ್ಲೆ ಬಿದ್ದಿದೆ. ಬ್ಯಾಗ್ ಇಟ್ಟು, ಕೈನಲ್ಲಿ ಹೂ ಹಿಡಿದು ಬೆಡ್ ರೂಮಿಗೆ ಹೋದ ಅಧಿಕಾರಿ ಕುಸಿದಿದ್ದಾರೆ. ಪತ್ನಿ ನೈನಾ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಮಲಗಿದ್ದಾನೆ.

ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗದ ಅಧಿಕಾರಿ ಕಿರುಚಾಡಿದ್ದಾರೆ. ನೈನಾ ಶಾಂತವಾಗಿ ಸಾರಿ ಹೇಳಿದ್ದಾರೆ. ಕೋಪಗೊಂಡು ಹೊಟೇಲ್ ನಲ್ಲಿ ರೂಮ್ ಮಾಡಿದ ಅಧಿಕಾರಿಗೆ ಪದೇ ಪದೇ ಪತ್ನಿಯ ಕರೆ ಬಂದಿದೆ. ನಾಲ್ಕೈದು ಬಾರಿ ಕರೆ ಸ್ವೀಕರಿಸಿದ ಅಧಿಕಾರಿ ನಂತ್ರ ಮಾತನಾಡಿದ್ದಾರೆ. ಅಲ್ಲಿಂದ ಕ್ಷಮಿಸಿ ಎಂದ ಪತ್ನಿ, ಒಂಟಿತನ ಸಹಿಸಲು ಸಾಧ್ಯವಾಗ್ಲಿಲ್ಲ. ಹಾಗಾಗಿ ಮೋಸ ಮಾಡ್ದೆ ಎಂದಿದ್ದಾಳೆ. ಪತ್ನಿಯ ಈ ಮೋಸಕ್ಕೆ ನಾನು ಕಾರಣ. ಕೆಲಸ ಬಿಟ್ಟರೆ ತಂದೆಗೆ ನೋವಾಗುತ್ತದೆ. ಕೆಲಸ ಮುಂದುವರೆಸಿದ್ರೆ ಪತ್ನಿ ಒಂಟಿಯಾಗ್ತಾಳೆ. ನಮ್ಮಿಬ್ಬರ ಬಾಳಲ್ಲಿ ನಡೆಯುತ್ತಿರುವ ಘಟನೆಗೆ ನಾನು, ನನ್ನನ್ನು ಮತ್ತು ಪತ್ನಿಯನ್ನು ಎಂದಿಗೂ ಕ್ಷಮಿಸಲಾರೆ ಎಂದಿದ್ದಾರೆ ಅಧಿಕಾರಿ. 
 

click me!