ಹಿಂದೆ ತಮ್ಮ ಪ್ರೇಮಿಗೆ ಒಂದೇ ಒಂದು ಸಂದೇಶ ಕಳುಹಿಸಲು ಲೆಟರ್, ಮರದ ಮೇಲೆ ಗೀಚುವುದು, ಇತ್ಯಾದಿ ಇತ್ಯಾದಿ ಎಷ್ಟು ತಲೆ ಖರ್ಚು ಮಾಡಿದರೂ ಸಾಕಾಗುತ್ತಿರಲಿಲ್ಲ. ಅದು ವಿಫಲ ಪ್ರಯತ್ನವಾಗುತ್ತಿದ್ದುದೇ ಹೆಚ್ಚು. ಇಂದು ಹಾಗಲ್ಲ. ಯಾರನ್ನಾದರೂ ಸೋಷ್ಯಲ್ ಮೀಡಿಯಾದಲ್ಲಿ ಹುಡುಕಬಹುದು, ಕೂಡಲೇ ಅವರಿಗೆ ಮೆಸೇಜ್ ಮಾಡಬಹುದು. ಒಂದೇ ದಿನದಲ್ಲಿ ಪ್ರೀತಿ ಮಾಡಿ, ಎರಡನೇ ದಿನಕ್ಕೆ ಬ್ರೇಕಪ್ ಆಗುವುದೂ ಅಚ್ಚರಿಯಾಗುಳಿದಿಲ್ಲ!
ಇಂದು Valentine's day. ಟೀನೇಜಿನ ಮಕ್ಕಳ ಪ್ರೇಮ ಪ್ರಕರಣಗಳನ್ನು ನಿತ್ಯವೂ ಬಗೆಹರಿಸುವ ಟೀಚರ್‌ಗಳಿಗೆ ದಿನವೂ ವಾಲೆಂಟನ್ಸ್ ಡೇನೇ.
ಒಂದಿಪ್ಪತ್ತು ವರ್ಷದ ಹಿಂದೆ ಕಾಲೇಜುಗಳಲ್ಲಿ ಇರ್ತಾ ಇದ್ದ ಪ್ರೀತಿ ಪ್ರೇಮಗಳು ಪೂರ್ತಿಯಾಗಿ ಬದಲಾಗಿವೆ. ಪ್ರೇಮ ಪತ್ರಗಳಿಂದ ಬ್ಯಾಗ್ ತುಂಬುತ್ತಿಲ್ಲ, ಮೆಸೇಜುಗಳಿಂದ ಫೋನ್ ಮೆಮೊರಿ ಭರ್ತಿ ಆಗುತ್ತಿದೆ. ಪರ ವಿರೋಧ ಏನೇ ಇದ್ರೂ, ಸಂಘಟನೆಗಳು ಎಷ್ಟಿದ್ರೂ ಒಂದಷ್ಟು ಪ್ರೀತಿಗಳು ಅರಳಿಯೇ ಅರಳುತ್ತವೆ. ಕಾಲದೊಂದಿಗೆ ಬದಲಾಗುವ ಸಾಮಾಜಿಕ ಪರಿಸ್ಥಿತಿಗಳಂತೆ ಪ್ರೀತಿ ಕೂಡ 'ಯುಗಧರ್ಮ'ವನ್ನು ಪಾಲಿಸಿದೆ.
ಯೂನಿವರ್ಸಿಟಿಯಲ್ಲಿ ಓದುವಾಗ ನಮ್ಮ ಜೊತೆ ಜೊತೆಗೆ ಇರ್ತಾ ಇದ್ದ ಹುಡುಗಿಯರು, ದೊಡ್ಡ ಆಲದ ಮರದ ಕೆಳಗೆ ಅಥವಾ ಕುವೆಂಪು statueಕೆಳಗೆ ಕೂರೋದು loveಸಿಂಡ್ರೋಮಿನ ಮೊದಲ ಹಾಗೂ ಕೊನೆಯ symptom ಆಗಿರ್ತಾ ಇತ್ತು. ಅಲ್ಲಿ ಕೂತ ಜೋಡಿಗಳು ಮತ್ತೆಲ್ಲೂ ಕಾಣಿಸ್ತಾ ಇರಲಿಲ್ಲ. ಅಲ್ಲೇ ಶುರುವಾಗಿ ಅಲ್ಲೇ ಮುಗಿಯುತ್ತಿತ್ತು. ಇನ್ನು ನಮ್ಮದೇ ಕ್ಲಾಸಿನವರು ಅಲ್ಲಿ ಕೂತಾಗ, ಮುಂದೆ ಇವ್ರು ಸಂಸಾರಿಗಳಾದ್ರೆ ನಮಗೆ ಹೋಗಿ ಬರೋದಕ್ಕೆ ಒಂದು ಮನೆ ಅಯ್ತು ಅಂತ ಅವ್ರ ಪ್ರೇಮದ ಉರಿಯಲ್ಲಿ ನಮ್ಮ ಬೇಳೆ ಬೇಯಿಸಿಕೊಳ್ತಾ ಇದ್ದೆವು.
ಸಿನಿಮಾಗಳಂತೆ ಡ್ಯಾನ್ಸ್, ಹಾಡು ಏನೂ ಇಲ್ಲದೆ ಮರದ ಕೆಳಗೆ ಕೂರುವ ಈ ಪ್ರೇಮಿಗಳು ಸಪ್ಪೆ ಅನ್ನಿಸ್ತಾ ಇದ್ರು. ಇನ್ನು, ಮರದ ಕೆಳಗೆ ಜಾನುವಾರುಗಳನ್ನಷ್ಟೇ ನೋಡಿದ ನಮ್ಮಂಥ ಮಲೆನಾಡಿನವರಿಗೆ, ಈ ಮರದ ಕೆಳಗೆ ಕೂರುವ ಪ್ರೇಮಿಗಳು ಮನುಷ್ಯರ ಇನ್ನ್ಯಾವುದೋ ಪ್ರಭೇದಗಳನ್ನು ನೋಡಿದ ಹಾಗೆ ಆಗುತಿತ್ತು. ಆಗ ಫಲಿಸದೇ ಹೋದ ಪ್ರೇಮಕತೆಗಳ ನಾಯಕಿಯರು ಪಾಸ್ ವರ್ಡ್ ಗಳಾಗಿ ಭದ್ರವಾಗಿರುತಿದ್ದರು. ಈಗ ಆಗಾಗ ಪಾಸ್ ವರ್ಡ್ ಕೇಳುವ ಅಪ್ಲಿಕೇಶನ್ ಗಳಿಗಾಗಿ exಗಳು excess ಆಗ್ತಾ ಇದ್ದಾರೆ.
ಇನ್ನು, ಈ ಪ್ರೀತಿ ಪ್ರೇಮಗಳು ಶಾಲಾ ಕಾಲೇಜುಗಳಿಗೆ ಮಾತ್ರ ಸೀಮಿತವೇನಲ್ಲ. Needs are different ಅಷ್ಟೇ. ಪ್ರಪಂಚವನ್ನೇ ಕನೆಕ್ಟ್ ಮಾಡಿರೋ ನೆಟ್ವರ್ಕ್ ಗಳು , ಚಾಟ್ ಗಳಿಗಾಗೆ ಇರುವ ನೂರೆಂಟು app ಗಳಿಂದ love at first sight ಹೋಗಿ love at first chat ಆಗಿಬಿಟ್ಟಿದೆ. ಈ ಸೋಶಿಯಲ್ ಮೀಡಿಯಾಗಳು fake, virtual ಪ್ರೊಫೈಲ್ ಹಾಕಿ ಎಂಜಾಯ್ ಮಾಡುವವರ ಸಂತೆ ಆಗ್ಬಿಟ್ಟಿದೆ.
Happy Valentines Day; ಸ್ಯಾಂಡಲ್‌ವುಡ್ ನಟಿಯರು ಆಚರಿಸುವುದು ಹೀಗೆ!
ಮನುಷ್ಯರ ಅಸಹಾಯಕತೆಯನ್ನು ಪ್ರೀತಿ ಪ್ರೇಮದ ಹೆಸರಲ್ಲಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಮಾಯವಾಗುವ ರಣಹೇಡಿಗಳು ಈ ಸ್ಮಾರ್ಟ್ ಯುಗದ ಸ್ಮಾರ್ಟ್ ಪ್ರೇಮಿಗಳು. ಒಂದಷ್ಟು ಟೈಮ್ ಪಾಸ್ ಮಾಡಿ, ನಾವಿನ್ನು brother sister ಅನ್ನುವ hypocritics. Like all natural process, love also irreversible process. ದುಷ್ಯಂತನಂತೆ ಮರೆತೇ ಹೋಗುವ ಜನರು ಈಗಲೂ ಇದ್ದಾರೆ. ಮತ್ತು ಅಂತವರನ್ನು ಹುಡುಕಲು ಈಗಿನ ಶಕುಂತಲೆಯರು ಅಭಿಜ್ಞಾನದ ಬದಲು GPS ಹಾಕಿ ಹೋಗಬೇಕಷ್ಟೆ.
Happy Valentines Day ಬ್ಲಾಕ್. ಅನ್‌ಬ್ಲಾಕ್. ರಿಪೀಟ್ ಕಥೆ ಇದು!
ಪ್ರಶ್ನೆ, ದೂಷಣೆ, ಯಾಚನೆ, ಯಾತನೆಗಳನ್ನು ಕೇಳಿಸಿಕೊಳ್ಳುವಷ್ಟು ಪುರ್ಸೊತ್ತು ಈಗಿನ ದುಷ್ಯಂತರಿಗೆ ಇಲ್ಲ. ಈಗೇನಿದ್ರೂ babe to block. ಪ್ರತಿಯೊಂದು ಅವಸ್ಥೆಗಳಲ್ಲೂ ದ್ವಂದ್ವಗಳಲ್ಲೇ ಬಳಲುವುದು ಮನುಷ್ಯನ ಸ್ವಭಾವ. ಪ್ರೀತಿಯಲ್ಲೂ ಕೂಡ. Like all others, there is no perfect time for love. So love should be true instead of perfect. ಹೆಚ್ಚು ಕಡಿಮೆ ಎಲ್ಲರ ಜೀವನದಲ್ಲೂ ಆಗುವ ಪ್ರೀತಿಗೆ dignity ಅಂತೂ ಇರ್ಲೇ ಬೇಕು. ಏಕೆಂದರೆ Prem ishwar hai, Ishwar prem hai.
- ಪ್ರಮೀಳಾ ಕೇಶವಾಪುರ