Tragic Life Of Rekha: ಸುರ ಸುಂದರಿ ನಟಿ ರೇಖಾ ಮೇಲೆ ಹರೆಯದಲ್ಲೇ ಕಾಮುಕರ ಕಣ್ಣು ಬಿದ್ದಿತ್ತು!

By Suvarna News  |  First Published Aug 1, 2023, 4:59 PM IST

ಬಾಲಿವುಡ್‌ನ ಎವರ್‌ಗ್ರೀನ್‌ ನಟಿ ರೇಖಾ ಚಲನಚಿತ್ರಗಳಿಂದ ದೂರವಿದ್ದರೂ ತಮ್ಮ ವೈಯುಕ್ತಿಕ ಜೀವನದಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. 68ರ ಹರೆಯದಲ್ಲೂ 20ರ ತರುಣಿಯಂತೆ ಸುಂದರವಾಗಿದ್ದಾರೆ. ಯಾವಾಗ್ಲೂ ಯಂಗ್ ಆಂಡ್ ಎನರ್ಜಿಟಿಕ್ ಆಗಿರುವ ರೇಖಾ ಜೀವನ ಅವರಂತೆ ಸುಂದರವಾಗಿಲ್ಲ. ಹಲವು ದುರಂತಗಳಿಂದ ಕೂಡಿದೆ.
 


ಬಾಲಿವುಡ್‌ನ ಎವರ್‌ಗ್ರೀನ್‌ ನಟಿ  ರೇಖಾ ಅವರ ಬದುಕು ತೆರೆದ ಪುಟಗಳ ಪುಸ್ತಕವಿದ್ದಂತೆ. ಇದರಲ್ಲಿ ಲಕ್ಷಾಂತರ ಕಥೆಗಳು ದಾಖಲಾಗಿವೆ. ಬೋಲ್ಡ್ ಮತ್ತು ಬಹಿರಂಗವಾಗಿ ಮಾತನಾಡುವ ನಟಿ ತಮ್ಮ ಆಫೇರ್‌  ಬಗ್ಗೆ  ಎಂದಿಗೂ ಮರೆಮಾಚಲಿಲ್ಲ. ರೇಖಾ ಅವರ ಹೆಸರು ಅನೇಕ ನಟರೊಂದಿಗೆ ಕೇಳಿಬಂದಿವೆ. ಅವರ ಹಲವು ಸಂಬಂಧಗಳು ಜೊತೆಗೆ ಬ್ರೇಕಪ್‌ ಸಹ ಸಾಕಷ್ಟು ಸುದ್ದಿ ಮಾಡಿವೆ. ಕೆಲವು ದಶಕಗಳ ನಂತರವೂ ಅವರ ದುರಂತ ಜೀವನ, ಲವ್‌ ಲೈಫ್‌ ಆಗಾಗ ಮತ್ತೆ ಚರ್ಚೆಗೆ ಬರುತ್ತಲೇ ಇರುತ್ತದೆ. 

ಜೆಮಿನಿ ಗಣೇಶನ್-ಪುಷ್ವವಲ್ಲಿ ಮಗಳು ರೇಖಾ
1954ರ ಅಕ್ಟೋಬರ್ 10ರಂದು ಚೆನ್ನೈನಲ್ಲಿ ಜನಿಸಿದ ರೇಖಾ ಅವರ ಜೀವನವು ಏರಿಳಿತಗಳಿಂದ ತುಂಬಿದೆ. ಅವರು ಬಾಲ್ಯದಿಂದಲೂ ಹೋರಾಟವನ್ನು ನೋಡಿದ್ದರು. ಜೀವನವನ್ನೇ ಕೊನೆಗಾಣಿಸುವ ನಿರ್ಧಾರ ಮಾಡಿದ್ದರು. ಆಗ ರೇಖಾಳ ವಯಸ್ಸು ಕೇವಲ 14 ವರ್ಷವಾಗಿತ್ತು. ರೇಖಾ ಹುಟ್ಟಿನ ಬಗ್ಗೆಯೇ ಸಾಕಷ್ಟು ಪ್ರಶ್ನೆಗಳಿವೆ. ರೇಖಾ ದಕ್ಷಿಣದ ಸೂಪರ್‌ಸ್ಟಾರ್‌ಗಳಾದ ಜೆಮಿನಿ ಗಣೇಶನ್ ಮತ್ತು ಪುಷ್ವವಲ್ಲಿ ಅವರ ಮಗಳು (Daughter). ಆದರೆ ಅವರ ತಂದೆ  ಗಣೇಶನ್ ಅವರ ತಾಯಿಯನ್ನು ಮದುವೆ (Marriage)ಯಾಗಿಲ್ಲ, ಈ ಕಾರಣದಿಂದಾಗಿ ರೇಖಾ ಅವಿವಾಹಿತ ತಾಯಿಯ ಮಗು ಎಂದು ಹೇಳಲಾಗುತ್ತದೆ.

Tap to resize

Latest Videos

68 ವಯಸ್ಸಾದ್ರೂ ಬತ್ತದ ರೇಖಾ ಬ್ಯೂಟಿ: ಗಂಡ- ಅತ್ತೆ ಕಾಟ ಇಲ್ದಿದ್ರೆ ಹೀಗೆ ಕಾಣೋದು ಅಂದ್ರು ಫ್ಯಾನ್ಸ್​!

ಆತ್ಮಹತ್ಯೆಯ ನಿರ್ಧಾರ ಮಾಡಿದ್ದ ರೇಖಾ
ಯಾಸರ್ ಉಸ್ಮಾನ್ ಅವರ 'ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ' ಪುಸ್ತಕದಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ. ರೇಖಾ ಬದುಕುಳಿದ ಸಂದರ್ಭದಲ್ಲಿ ಆಕೆಯ ತಾಯಿ (Mother) ಬದುಕಲು ಮೂರು ಆಯ್ಕೆಗಳನ್ನು ಆಕೆಯ ಮುಂದೆ ಇಟ್ಟಿದ್ದರು. ಅಧ್ಯಯನ, ಸಿನಿಮಾ ಅಥವಾ ಮದುವೆ. ಇದರಲ್ಲಿ ಯಾವುದನ್ನಾದರೂ ಅವರು ಆಯ್ಕೆ ಮಾಡಬೇಕಿತ್ತು. ರೇಖಾ ಅಧ್ಯಯನವನ್ನು (Studies) ಆಯ್ದುಕೊಂಡರೂ ತಾಯಿಯ ಆರ್ಥಿಕ ಸಂಕಷ್ಟದಿಂದಾಗಿ ಸಿನಿಮಾ ಲೋಕಕ್ಕೆ ಬರಬೇಕಾಯಿತು.

15ನೇ ವಯಸ್ಸಿನಲ್ಲಿ ಸಿನಿಮಾ ಸೆಟ್‌ಗಳಲ್ಲಿ ಕಿರುಕುಳ
ಸುರ ಸುಂದರಿಯಾಗಿದ್ದ ರೇಖಾ ಮೇಲೆ ಹರೆಯದಲ್ಲೇ ಕಾಮುಕರ ಕಣ್ಣು ಬಿದ್ದಿತ್ತು. 15ನೇ ವಯಸ್ಸಿನಲ್ಲಿ ಸಿನಿಮಾ ಸೆಟ್‌ಗಳಲ್ಲಿ ಕಿರುಕುಳ ಅನುಭವಿಸಿದರು.ಮೆಹಬೂಬ್ ಸ್ಟುಡಿಯೋದಲ್ಲಿ ಅಂಜನಾ ಸಫರ್ ಸೆಟ್‌ನಲ್ಲಿ ಈ ಘಟನೆ ಸಂಭವಿಸಿತು. 'ರೇಖಾ, ದಿ ಅನ್‌ಟೋಲ್ಡ್ ಸ್ಟೋರಿ' ಪುಸ್ತಕದಲ್ಲಿ ಉಲ್ಲೇಖಿಸಿದಂತೆ, ರೇಖಾ, ಚಲನಚಿತ್ರಕ್ಕಾಗಿ ರೊಮ್ಯಾಂಟಿಕ್ ದೃಶ್ಯವನ್ನು ಶೂಟ್ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಆಕೆಯ ಸಹನಟ ಬಿಸ್ವಜೀತ್ ಚಟರ್ಜಿ, ರೇಖಾಗೆ ಪ್ರತಿಕ್ರಿಯಿಸಲು ಸಮಯವಿಲ್ಲದೆ ಅವಳ ಬೆನ್ನಿನಿಂದ ಹಿಡಿದು ಅವಳ ತುಟಿಗಳ ಮೇಲೆ ತನ್ನ ತುಟಿಗಳನ್ನು ಒತ್ತಿದರು. ನಿರ್ದೇಶಕರು ಸುಮಾರು ಐದು ನಿಮಿಷಗಳ ಕಾಲ ಕಟ್ ಎಂದು ಕೂಗಲಿಲ್ಲ ಮತ್ತು ಸಿಬ್ಬಂದಿಗಳು ದೃಶ್ಯವನ್ನು ನೋಡಿ ಶಿಳ್ಳೆ ಮತ್ತು ಅಪಹಾಸ್ಯ ಮಾಡುತ್ತಲೇ ಇದ್ದರು, ಅವಮಾನಕ್ಕೊಳಗಾದ ರೇಖಾ ಕಣ್ಣೀರು ಹಾಕುತ್ತಿದ್ದರು ಎಂದು ಹೇಳಲಾಗಿದೆ.

ರೇಖಾಗೆ ಗಂಡಸರ ಮೋಸ, ವಂಚನೆಯೇ ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳಲು ಕಾರಣವೇ?

ಅಮಿತಾಬ್ ಬಚ್ಚನ್ ಜೊತೆಗಿನ ಸಂಬಂಧ
ರೇಖಾ ಜೀವನ ಯಾವ ಸಿನಿಮಾ ಕಥೆಗೂ ಕಮ್ಮಿಯಿಲ್ಲ. ಅಮಿತಾಬ್ ಬಚ್ಚನ್ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ರೇಖಾ ಅವರ ಹೆಸರು ಒಂದು ಕಾಲದಲ್ಲಿ ಪ್ರಚಾರದಲ್ಲಿತ್ತು. ಆದರೆ ನಂತರ ಅಮಿತಾಬ್‌ ಬಚ್ಚನ್‌, ಜಯಾ ಅವರನ್ನು ಮದುವೆಯಾದರು. 

ವಿನೋದ್ ಮೆಹ್ರಾ ಜೊತೆಗೆ ಮದುವೆ
ಆ ನಂತರ ರೇಖಾ, ನಟ ವಿನೋದ್ ಮೆಹ್ರಾ ಅವರನ್ನು ವಿವಾಹ (Marriage)ವಾಗಿದ್ದರು. ವಿನೋದ್ ಮೆಹ್ರಾ ಈಗಾಗಲೇ ಎರಡು ಮದುವೆ ಆಗಿದ್ದರು. ಆದರೆ ಎರಡೂ ವಿವಾಹಗಳಲ್ಲೂ ಪತ್ನಿ ಅವರನ್ನು ಬಿಟ್ಟು ಹೋಗಿದ್ದರು. ರೇಖಾ ಅವರ ಮೂರನೇ ಹೆಂಡತಿಯಾದರು. ಆದರೆ, ಅಲ್ಲಿಯೂ ರೇಖಾ ಜೀವನ ಖುಷಿಯಿಂದ ಕೂಡಿರಲ್ಲಿಲ್ಲ.. ಮದುವೆಯ ನಂತರ ಮೊದಲ ಬಾರಿಗೆ ರೇಖಾ ತನ್ನ ಅತ್ತೆಯ ಮನೆಗೆ ಬಂದಾಗ, ಆಕೆಯ ಅತ್ತೆ ಅವಳನ್ನು ಹೊಡೆಯಲು ಚಪ್ಪಲಿ ಎತ್ತಿದರು ಎಂದು ಹೇಳಲಾಗುತ್ತದೆ. ಈ ಘಟನೆಯಿಂದ ನಂತರದ ದಿನಗಳಲ್ಲಿ ರೇಖಾ ಮತ್ತು ವಿನೋದ್ ಮೆಹ್ರಾ ಬೇರ್ಪಟ್ಟರು ಎಂದು ಹೇಳಲಾಗುತ್ತದೆ.

ಗಂಡ ಮುಖೇಶ್ ಅಗರ್ವಾಲ್ ಆತ್ಮಹತ್ಯೆ
ರೇಖಾ 1990ರಲ್ಲಿ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು, ಆದರೆ ಮದುವೆಯಾದ 7 ತಿಂಗಳ ನಂತರ ಮುಕೇಶ್ ಆತ್ಮಹತ್ಯೆ ಮಾಡಿಕೊಂಡರು. ಸುದ್ದಿ ಪ್ರಕಾರ, ಮುಖೇಶ್ ಖಿನ್ನತೆಗೆ ಒಳಗಾಗಿದ್ದರು, ಇದರಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆ. ಆದರೆ, ಮುಖೇಶ್ ಹೋದ ನಂತರ ರೇಖಾ ಮರು ಮದುವೆಯಾಗಲ್ಲಿಲ್ಲ.

click me!