ಜೋಡಿಯೊಂದು ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಈ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಸರ್‌ಫ್ರೈಸ್ ನೀಡುವುದಕ್ಕಾಗಿ ಪತಿಯೋರ್ವ ಬರೋಬ್ಬರಿ 80 ಎಕರೆಯಲ್ಲಿ ಸೂರ್ಯಕಾಂತಿ ಹೂಗಳನ್ನು ಬೆಳೆದಿದ್ದು, ವಯೋವೃದ್ಧ ಪತಿಯ ಈ ವಿಶಿಷ್ಟವಾದ ಸರ್‌ಫ್ರೈಸ್‌ಗೆ ಪತ್ನಿ ಮಾತ್ರವಲ್ಲ, ಇಡೀ ಸಾಮಾಜಿಕ ಜಾಲತಾಣವೇ ಅಚ್ಚರಿಯ ಜೊತೆ ಸಂತೋಷ ವ್ಯಕ್ತಪಡಿಸಿದೆ.
ಕನ್ಸಾಸ್: 50ನೇ ವಿವಾಹ ವಾರ್ಷಿಕೋತ್ಸವ ಅಂದರೆ ಸುಮ್ನೆನಾ ಖಂಡಿತಾ ಅಲ್ಲಪ್ಪ, ದಾಂಪತ್ಯದಲ್ಲಿ ಪತಿ ಪತ್ನಿಯ ಮಧ್ಯೆ ಸಾಮರಸ್ಯ ಇಲ್ಲದಿದ್ದರೆ ಒಂದು ವರ್ಷ, ಆರು ತಿಂಗಳು ಬಿಡಿ ಒಂದು ಕ್ಷಣವೂ ಇರಲು ಸಾಧ್ಯವಾಗಲ್ಲ. ಹೀಗಿರುವಾದ ಜೋಡಿಯೊಂದು ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಈ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಸರ್‌ಫ್ರೈಸ್ ನೀಡುವುದಕ್ಕಾಗಿ ಪತಿಯೋರ್ವ ಬರೋಬ್ಬರಿ 80 ಎಕರೆಯಲ್ಲಿ ಸೂರ್ಯಕಾಂತಿ ಹೂಗಳನ್ನು ಬೆಳೆದಿದ್ದು, ವಯೋವೃದ್ಧ ಪತಿಯ ಈ ವಿಶಿಷ್ಟವಾದ ಸರ್‌ಫ್ರೈಸ್‌ಗೆ ಪತ್ನಿ ಮಾತ್ರವಲ್ಲ, ಇಡೀ ಸಾಮಾಜಿಕ ಜಾಲತಾಣವೇ ಅಚ್ಚರಿಯ ಜೊತೆ ಸಂತೋಷ ವ್ಯಕ್ತಪಡಿಸಿದೆ.
ಹೀಗೆ ಪತ್ನಿಗೆ ವಿಭಿನ್ನವಾಗಿ, ವಿಶೇಷವಾಗಿ ಹೂಗಳಿಂದ ಸರ್‌ಫ್ರೈಸ್ ನೀಡಿದ ಈ ಬಹಾದೂರ್ ಗಂಡನ ಹೆಸರು ಲೀ ವಿಲ್ಸನ್, ಅಮೆರಿಕಾದ ಕಾನ್ಸಸ್‌ನಲ್ಲಿ ರೈತರಾಗಿರುವ ಇವರು ತಮ್ಮ ಪತ್ನಿಗೆ ಸೂರ್ಯಕಾಂತಿ ಹೂಗಳ ಮೇಲಿದ್ದ ಪ್ರೀತಿಯ ಕಾರಣಕ್ಕೆ ಆಕೆಗೆ ತಮ್ಮ 50ನೇ ವಿವಾಹ ವಾರ್ಷಿಕೋತ್ಸವದಂದು ಹೂಗಳಿಂದಲೇ ವಿಶೇಷ ಸರ್‌ಫ್ರೈಸ್ ನೀಡಿದ್ದಾರೆ. ಈ ಅಪೂರ್ವ ಕ್ಷಣಕ್ಕಾಗಿ ಅವರು ಸುಮಾರು 80 ಎಕರೆಯಲ್ಲಿ 1.2 ಮಿಲಿಯನ್ ಸೂರ್ಯಕಾಂತಿ ಹೂಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
5 ವರ್ಷದ ಪ್ರೀತಿ, ಸರ್ಪ್ರೈಸ್ ಮದುವೆ ಆಯೋಜಿಸಿದ ಬಾಯ್‌ಫ್ರೆಂಡ್‌ಗೆ ಕೈಕೊಟ್ಟ ಗೆಳತಿ!
ಪತ್ನಿ ರೀನೆಗೆ 50ನೇ ವಿವಾಹ ವಾರ್ಷಿಕೋತ್ಸವದ ಕೊಡುಗೆಯಾಗಿ ಪತಿ ಲೀ ವಿಲ್ಸನ್ ಈ ಸರ್‌ಫ್ರೈಸ್ ನೀಡಿದ್ದಾರೆ. ಪತ್ನಿಗೆ ಸರ್‌ಫ್ರೈಸ್ ನೀಡುವ ಅಪ್ಪನ ಈ ವಿಶೇಷವಾದ ಆಸೆಯ ಈಡೇರಿಸಲು ಲೀ ವಿಲ್ಸನ್ ಅವರಿಗೆ ನೆರವಾಗಿದ್ದು, ಅವರ ಪ್ರೀತಿಯ ಪುತ್ರ. ಅಪ್ಪ ಹಾಗೂ ಮಗ ಇಬ್ಬರೂ ಸೇರಿ ಈ ಸೂರ್ಯಕಾಂತಿ ಹೂ ಗಿಡಗಳ ನಾಟಿಯ ವಿಚಾರವನ್ನು ಹೂಗಳು ಅರಳುವವರೆಗೂ ಹೇಳದೇ ರಹಸ್ಯ ಕಾಯ್ದಿದ್ದಾರೆ. ವಿವಾಹ ವಾರ್ಷಿಕೋತ್ಸವದ ದಿನ ಹತ್ತಿರ ಬರುತ್ತಿದ್ದಂತೆ ಹೂಗಳು ಅರಳಿದ್ದು, ಲೀ ವಿಲ್ಸನ್ ಅವರು ತಮ್ಮ ಪತ್ನಿ ರೀನೆಯನ್ನು ಅವರ ಅಚ್ಚುಮೆಚ್ಚಿನ ಹೂ ಸೂರ್ಯಕಾಂತಿ ಬೆಳೆದು ನಿಂತಿರುವ ಹೊಲಕ್ಕೆ ಕರೆದುಕೊಂಡು ಹೋಗಿದ್ದು, ಪತಿಯ ಈ ವಿಶೇಷ ಸರ್‌ಫ್ರೈಸನ್ನು ಪತ್ನಿ ಮೆಚ್ಚದೇ ಇರಲು ಸಾಧ್ಯವೇ ಇಲ್ಲ ಬಿಡಿ.
80 ಎಕರೆ ಅಂದರೆ ಕಡಿಮೆನಾ? ಹೀಗಾಗಿ ವೀಡಿಯೋದಲ್ಲಿ ಕಾಣುವಂತೆ ಕಣ್ಣು ಹಾಯಿಸಿದಲ್ಲೆಲ್ಲಾ ಸೂರ್ಯಕಾಂತಿ ಹೂಗಳು ಕಾಣಿಸುತ್ತಿದ್ದು, ಈ ದಂಪತಿ ಹೂಗಳು ಬೆಳೆದು ನಿಂತ ಹೊಲದ ಮಧ್ಯೆ ಕೈ ಕೈ ಹಿಡಿದು ಸಾಗುತ್ತಿದ್ದಾರೆ. ಪತಿಯ ಸರ್‌ಫ್ರೈಸ್‌ಗೆ ಪತ್ನಿ ಫುಲ್ ಖುಷ್ ಆಗಿದ್ದಾರೆ. ಇನ್ನು ಪತ್ನಿಗೆ ಈ ರೀತಿ ಸರ್‌ಫ್ರೈಸ್ ನೀಡಿದ ರೈತ ಲೀ ವಿಲ್ಸನ್ ಅವರ ಬಗ್ಗೆ ಹೇಳುವುದಾದರೆ ಅವರು ಕನ್ಸಾಸ್‌ನಲ್ಲಿ ಸೂರ್ಯಕಾಂತಿ ಹೂಗಳ ಕಾರಣದಿಂದಲೇ ಖ್ಯಾತಿ ಗಳಿಸಿದ್ದು, ಸೂರ್ಯಕಾಂತಿ ಹೂಗಳು ಬೆಳೆದು ನಿಂತ ಇವರ ಹೊಲವನ್ನು ನೋಡಲು ದೂರ ದೂರದಿಂದ ಪ್ರವಾಸಿಗರು ಆಗಮಿಸುತ್ತಾರೆ.
ಈ ವೀಡಿಯೋ ನೋಡಿದ ಜನರು ಕೂಡ ರೈತ ಲೀ ವಿಲ್ಸನ್ ಅವರ ಸೂರ್ಯಕಾಂತಿ ತೋಟಕ್ಕೆ ಮನಸೋತಿದ್ದು, ಸಂಪೂರ್ಣ ಹೂಗಳಿಂದ ಕೂಡಿದ ಎಂಥಾ ಸುಂದರ ಹೊಲವಿದು, ಪ್ರಕೃತಿ ನಿಜವಾಗಿಯೂ ಅದ್ಭುತ, ಈ ಜೋಡಿಯೂ ಬಹು ಸುಂದರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಈ ಜೋಡಿ ಆಗಸ್ಟ್ 10 ರಂದು ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದೆ. ತಮ್ಮ ಈ ವಿಶೇಷ ಕಾರ್ಯಕ್ಕೆ ಸ್ಪೂರ್ತಿ ಏನು ಎಂದು ಕೇಳಿದಾಗ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು 50ನೇ ವರ್ಷದಲ್ಲಿ ತನ್ನ ಹುಡುಗಿಗೆ ಏನು ಕೊಡಲು ಸಾಧ್ಯ ಹೇಳಿ, ಆಕೆ ಸೂರ್ಯಕಾಂತಿ ಹೂಗಳನ್ನು ಬಹಳ ಇಷ್ಟಪಡುತ್ತಿದ್ದಾಳೆ ಎಂಬುದು ಗೊತ್ತಿತ್ತು ಇದೇ ಕಾರಣಕ್ಕೆ 80 ಎಕರೆಯಲ್ಲಿ ಸೂರ್ಯಕಾಂತಿ ಬೆಳೆದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಪತಿ ನೀಡಿದ ಸರ್‌ಫ್ರೈಸ್ ಬಗ್ಗೆ ಪತ್ನಿ ರಿನೇ ಅವರನ್ನು ಕೇಳಿದಾಗ ಪತಿಯ ಸರ್‌ಫ್ರೈಸ್‌ನಿಂದ ತಾನು ತುಂಬಾ ಖುಷಿಯಾಗಿದ್ದೇನೆ. ಇದು ನನಗೆ ತುಂಬಾ ವಿಶೇಷ ಅನಿಸಿತು. ಇದಕ್ಕಿಂತ ಸುಂದರವಾಸ ಸರಿಯಾದ ವಿವಾಹ ವಾರ್ಷಿಕೋತ್ಸವದ ಉಡುಗೊರೆ ನನ್ನ ಪಾಲಿಗೆ ಬೇರೆ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಂದಹಾಗೆ ಈ ರೀನೆ ಹಾಗೂ ಲೀ ವಿಲ್ಸನ್ ಅವರು ಹೈಸ್ಕೂಲ್ ದಿನಗಳಿಂದಲೇ ತಮ್ಮ 16ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದು ಜೊತೆಯಾಗಿ ಬದುಕಲು ಆರಂಭಿಸಿದ್ದರು.