ಸುಧಾಮೂರ್ತಿ ಸಲಹೆಗಳನ್ನು ಅಳವಡಿಸಿಕೊಂಡಲ್ಲಿ ದಾಂಪತ್ಯದಲ್ಲಿ ಸುಖ, ಸಂತೋಷ ಕಾರಣ ಸಾಧ್ಯ. ಈಗಿನ ಯುವಜನತೆಗೆ ಅನೇಕ ಸೂಕ್ತ ಸಲಹೆಗಳನ್ನು ಸುಧಾಮೂರ್ತಿ ನೀಡ್ತಾರೆ. ಅಮ್ಮ ಮಾಡಿದೆ ಅಡುಗೆ ಚೆನ್ನಾಗಿದೆ ಅಂತಾ ಪತ್ನಿ ಮುಂದೆ ಹೇಳೋರು ನೀವಾಗಿದ್ರೆ ಈ ಸುದ್ದಿ ಓದಿ.
ಇನ್ಫೋಸಿಸ್ ಸಂಸ್ಥಾಪಕಿ, ಲೇಖಕಿ, ಸಮಾಜ ಸೇವಕಿ ಅಂತಾ ಸುಧಾ ಮೂರ್ತಿಯವರನ್ನು ಪರಿಚಯ ಮಾಡಿಸಿಕೊಡುವ ಅಗತ್ಯವಿಲ್ಲ. ಯಾಕೆಂದ್ರೆ ಸುಧಾ ಮೂರ್ತಿ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ತಮ್ಮ ಮಾತಿನ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸೆಳೆದಿರುವ ಸುಧಾಮೂರ್ತಿ ಜನರಿಗೆ ಅನುಕೂಲವಾಗುವ ಅನೇಕ ಸಲಹೆಗಳನ್ನು ನೀಡ್ತಿರುತ್ತಾರೆ. ಪ್ರೀತಿಯಿಂದ ಹಿಡಿದು ಜನಸೇವೆಯವರೆಗೆ, ಆರ್ಥಿಕ ಸ್ಥಿತಿಯಿಂದ ಹಿಡಿದು ಕುಟುಂಬ ನಿರ್ವಹಣೆಯವರೆಗೆ ಎಲ್ಲವನ್ನೂ ಬಲ್ಲ ಸುಧಾಮೂರ್ತಿ ಸರಳತೆಯ ಸಾಕಾರ ಮೂರ್ತಿ.
ಸುಧಾಮೂರ್ತಿ (Sudhamurthy) ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ವಿಷ್ಯ ಈಗ ಮತ್ತೆ ವೈರಲ್ ಆಗಿದೆ. ಸಂದರ್ಶನವೊಂದರಲ್ಲಿ ಸುಧಾಮೂರ್ತಿ ಹುಡುಗರು ಮನೆ ಕೆಲಸ (house work) , ಅಡುಗೆಯನ್ನು ತಿಳಿದಿರಬೇಕು ಎಂದಿದ್ದರು. ಅದಕ್ಕೆ ಸುಧಾ ಮೂರ್ತಿ ಕಾರಣವನ್ನೂ ಹೇಳಿದ್ದರು. ಈಗಿನ ಮಹಿಳೆಯರು ಮನೆ ಹಾಗೂ ವೃತ್ತಿ (Career) ಎರಡನ್ನೂ ಸಂಭಾಳಿಸ್ತಾರೆ. ಕೆಲಸ ಮುಗಿಸಿ ಮನೆಗೆ ಬರ್ತಿದ್ದಂತೆ ಒಂದಿಷ್ಟು ಕೆಲಸದ ಪಟ್ಟಿ ಅವರ ಮುಂದಿರುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಸಂಭಾಳಿಸಲು ಸಾಧ್ಯವಾಗೋದಿಲ್ಲ. ಇದ್ರ ಜೊತೆ ಗಂಡನ ಮಾತುಗಳು ಅವರನ್ನು ಮತ್ತಷ್ಟು ಒತ್ತಡಕ್ಕೆ ತಳ್ಳುತ್ತವೆ. ಕುಳಿತಲ್ಲಿಂದ ಅಲುಗಾಡದ ಮನೆ ಗಂಡಸರು, ಪತ್ನಿ ಮಾಡಿದ ಕೆಲಸಕ್ಕೆ ಕಮೆಂಟ್ ಮಾಡ್ತಾರೆ. ಜೊತೆಗೆ ಅಮ್ಮ ಮಾಡಿದಂತೆ ಅಡುಗೆ ರುಚಿಯಾಗಿಲ್ಲ ಎನ್ನುತ್ತಾರೆ. ಇದು ಮಹಿಳೆ ವೃತ್ತಿಯಲ್ಲಿ ಮುಂದಕ್ಕೆ ಹೋಗೋದನ್ನು ತಡೆಯುವ ಜೊತೆಗೆ ಸಂಸಾರದಲ್ಲಿ ಸಮಸ್ಯೆ ತರುತ್ತದೆ. ಸುಧಾಮೂರ್ತಿ ಇದೇ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಪತಿಯಾದವನ ಜವಾಬ್ದಾರಿ ಏನು, ಆತ ಯಾವೆಲ್ಲ ವಿಷ್ಯ ತಿಳಿದಿರಬೇಕು ಎಂಬುದನ್ನು ಸಂದರ್ಶನದಲ್ಲಿ ಸುಧಾಮೂರ್ತಿ ಹೇಳಿದ್ದಾರೆ.
ಆಹಾರ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದ ಸುಧಾಮೂರ್ತಿಗೆ ಅಡುಗೆ ಮಾಡೋಕೆ ಬರಲ್ವಂತೆ!
ಪುರುಷನಾದವನು ಅಮ್ಮನ ಅಡುಗೆ ಹಾಗೂ ಪತ್ನಿ ಅಡುಗೆಗೆ ಹೋಲಿಕೆ ಮಾಡೋದು ತಪ್ಪು. ಅವರಿಬ್ಬರ ಮಧ್ಯೆ ಸಾಕಷ್ಟು ವ್ಯತ್ಯಾಸವಿರುತ್ತದೆ ಎಂಬುದು ಸುಧಾಮೂರ್ತಿ ವಾದ. ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಸುಧಾಮೂರ್ತಿ, ನನ್ನ ಪ್ರಕಾರ, ಹುಡುಗರು ಉತ್ತಮ ಮನೆ ಕೆಲಸವನ್ನು ತಿಳಿದಿರಬೇಕು. ವಾಸ್ತವವಾಗಿ ಹುಡುಗಿಯರಿಗಿಂತ ಹೆಚ್ಚು ಅಡುಗೆ ತಿಳಿದಿರಬೇಕು. ನಿಮ್ಮ ಜೊತೆ ಕೆಲಸ ಮಾಡುವ, ನಿಮ್ಮಷ್ಟೆ ಸಂಬಳ ತರುವ ಪತ್ನಿಗೆ, ನನ್ನ ತಾಯಿ ಅದ್ಭುತವಾದ ಅಡುಗೆ ಮಾಡುತ್ತಿದ್ದರು ಎಂದು ಹೇಳಬೇಡಿ. ನಿಮ್ಮ ತಾಯಿ ಗೃಹಿಣಿಯಾಗಿದ್ದರು, ಅವರು ಎಲ್ಲವನ್ನೂ ಮಾಡಬಲ್ಲರು. ಕಷ್ಟಪಟ್ಟು ದುಡಿಯುವ ನಿಮ್ಮ ಹೆಂಡತಿ ನಿಮ್ಮ ತಾಯಿಯಂತೆ ಇರಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಅವಳು ರಾತ್ರಿ 8 ಗಂಟೆಗೆ ಮನೆಗೆ ಬರುತ್ತಾಳೆ. ಆ ತಕ್ಷಣ ಅಡುಗೆ ಮನೆಗೆ ಹೋಗಿ ನಿಮ್ಮ ಅಮ್ಮನಂತೆ ಅವಳು ಅಡುಗೆ ಮಾಡಬೇಕೆಂದು ನಿರೀಕ್ಷೆ ಮಾಡೋದು ಯಾಕೆ. ನಿಮ್ಮಂತೆ ದುಡಿಯುವ ಆಕೆ ಬಿಸಿ ಬಿಸಿ ರೊಟ್ಟಿ ನೀಡ್ಬೇಕು ಎಂದುಕೊಳ್ಳುವುದು ತಪ್ಪು. ನೀವು ಸಹಾಯ ಮಾಡದೆ ಅವಳಿಂದ ಮಾತ್ರ ಎಲ್ಲವನ್ನೂ ನಿರೀಕ್ಷಿಸಬಾರದು. ನೀವು ಶೇಕಡಾ 50ರಷ್ಟು ಜವಾಬ್ದಾರಿ ತೆಗೆದುಕೊಳ್ಳಬೇಕು. ಇಲ್ಲವೆಂದ್ರೆ ಮಹಿಳೆ ತನ್ನ ವೃತ್ತಿಯಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ. ನಾನು ಯಾವಾಗ್ಲೂ ಹೇಳ್ತೇನೆ ಸಕ್ಸಸ್ ಫುಲ್ ಮಹಿಳೆ ಹಿಂದೆ ಯಾವಾಗ್ಲೂ ಅರ್ಥಮಾಡಿಕೊಳ್ಳುವ ಪತಿ ಇರ್ತಾನೆಂದು ಎನ್ನುತ್ತಾರೆ ಸುಧಾಮೂರ್ತಿ.
ನಾಳೆ ನನ್ನ ನಿಶ್ಚಿತಾರ್ತವೆಂದು ಹೋದ ಹುಡುಗಿ ಅರಸಿ ಅದೇ ಜಾಗಕ್ಕೆ ವರ್ಷದ ನಂತರ ಹೋದಾಗ?
ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ಯುವ ದಂಪತಿಗೆ ಮಾದರಿ. ಶ್ರೀಮಂತಿಕೆಯಿದ್ರೂ ಸರಳ ಜೀವನ ನಡೆಸುವ ಅವರ ಮಧ್ಯೆ ಸಾಕಷ್ಟು ಹೊಂದಾಣಿಕೆಯಿದೆ. ಪರಸ್ಪರ ಜಾಗವನ್ನು ಗೌರವಿಸುವುದು, ಒಬ್ಬರನ್ನೊಬ್ಬರು ನಿಯಂತ್ರಿಸದೇ ಇರುವುದು, ಕೃತಜ್ಞತೆಯನ್ನು ವ್ಯಕ್ತಪಡಿಸೋದು ಇವರಿಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಗಲು ಕಾರಣವಾಗಿದೆ. ಸಂಬಂಧದಲ್ಲಿ ಬಿರುಕು ಬರಬಾರದು ಅಂದ್ರೆ ಇವೆಲ್ಲವನ್ನು ಗಮನಿಸಬೇಕು ಎನ್ನುವ ಸುಧಾಮೂರ್ತಿ, ಸದಾ ಇಬ್ಬರೂ ಬ್ಯೂಸಿಯಾಗಿರಬೇಕು. ಇದು ಕೂಡ ದಾಂಪತ್ಯದ ಗುಟ್ಟು ಎನ್ನುತ್ತಾರೆ.