ಕಾರಲ್ಲ..ಬಸ್ಸಲ್ಲ..ಸಿಂಗರಿಸಿದ ಜೆಸಿಬಿಯಲ್ಲಿ ಮದುಮಗಳ ಮೆರವಣಿಗೆ ಕರೆತಂದ ವರ!

Published : Jun 15, 2023, 05:47 PM ISTUpdated : Jun 15, 2023, 06:22 PM IST
ಕಾರಲ್ಲ..ಬಸ್ಸಲ್ಲ..ಸಿಂಗರಿಸಿದ ಜೆಸಿಬಿಯಲ್ಲಿ ಮದುಮಗಳ ಮೆರವಣಿಗೆ ಕರೆತಂದ ವರ!

ಸಾರಾಂಶ

ಮದ್ವೆಯಲ್ಲಿ ಸಾಮಾನ್ಯವಾಗಿ ಮದುವೆ ದಿಬ್ಬಣದ ಮೆರವಣಿಗೆಗಾಗಿ ಕಾರು ಅಥವಾ ಕುದುರೆಯನ್ನು ಆರಿಸಿಕೊಳ್ಳುತ್ತಾರೆ. ಆದರೆ ಈ ಮದುವೆಯಲ್ಲಿ ವರನು ತನ್ನ ವಧುವಿನ ಜೊತೆ ದಿಬ್ಬಣದಲ್ಲಿ ಬಂದಾಗ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯ್ತು.ಯಾಕೆ?

ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಮದುವೆಯ ಮೆರವಣಿಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಜನರು ಸಾಮಾನ್ಯವಾಗಿ ಮದುವೆ ದಿಬ್ಬಣದ ಮೆರವಣಿಗೆಗಾಗಿ ಕಾರು, ಬಸ್ಸು ಅಥವಾ ಕುದುರೆಯನ್ನು ಆರಿಸಿಕೊಳ್ಳುತ್ತಾರೆ. ಆದರೆ ಈ ಮದುವೆಯಲ್ಲಿ ವರನು ತನ್ನ ವಧುವಿನ ಜೊತೆ ದಿಬ್ಬಣದಲ್ಲಿ ಬಂದಾಗ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯ್ತು. ಯಾಕೆಂದರೆ ವರ ಮದುವೆಯಾಗಲು ಜೆಸಿಬಿಯಲ್ಲಿ ಮದುವೆಯ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾನೆ. ವರ ರಾಜಾ ಕೃಷ್ಣ ಮಹತೋ ತನ್ನ ವಧುವನ್ನು ಮನೆಗೆ ಕರೆದುಕೊಂಡು ಹೋಗಲು ಜೆಸಿಬಿ ಸವಾರಿ ಮಾಡುವ ಮೂಲಕ ಮದುವೆಯ ಸ್ಥಳದಲ್ಲಿ ಭವ್ಯ ಪ್ರವೇಶ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ಜೆಸಿಬಿಯನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿದ್ದು, ಹಾಯಾಗಿ ಕುಳಿತುಕೊಳ್ಳಲು ಹಾಸಿಗೆ, ಕುಶನ್‌ಗಳನ್ನು ಹಾಕಲಾಗಿತ್ತು. ಅದ್ಧೂರಿಯಾಗಿ ಮೆರವಣಿಗೆ ಹೊರಟಾಗ ನೋಡುಗರೆಲ್ಲ ಬೆರಗಾಗುವಂತೆ ಮಾಡಿತು. ಈ ವಿಶಿಷ್ಟ ಮದುವೆಯ (Marriage) ಮೆರವಣಿಗೆಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ವರನು (Groom) ತನ್ನ ವಧುವಿನ (Bride) ಜೊತೆ ಜೆಸಿಬಿ ಮೇಲೆ ಕುಳಿತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿವೆ.

ಮದುವೆಯಾದ 10 ದಿನಕ್ಕೇ ಮಗುವಿಗೆ ಜನ್ಮ ನೀಡಿದ ವಧು, ಮನೆಯಿಂದ ಹೊರ ಹಾಕಿದ ಅತ್ತೆ!

ವೃತ್ತಿಯಲ್ಲಿ ಹೂವಿನ ವ್ಯಾಪಾರಿಯಾಗಿರುವ ಕೃಷ್ಣ ಮಹತೋಗೆ ತಮ್ಮ ಮದುವೆಗೆ ವಿಶೇಷವಾಗಿ ಏನಾದರೂ ಮಾಡಬೇಕೆಂಬ ಆಸೆಯಿತ್ತು. ಅವರು ಅದೆಷ್ಟೋ ಮದುವೆಗೆ ನೂರಾರು ಮದುವೆಯ ಕಾರುಗಳನ್ನು ಅಲಂಕರಿಸಿದ್ದರು, ಆದರೆ ತಮ್ಮ ಮದುವೆಯನ್ನು ಇದೆಲ್ಲಕ್ಕಿಂತ ವಿಭಿನ್ನವಾಗಿ ಮಾಡಲು ಬಯಸಿದ್ದರು. ಹೀಗಾಗಿ ಮದುವೆಯ ಮೆರವಣಿಗೆಗೆ ಜೆಸಿಬಿಯನ್ನು ಆಯ್ಕೆ ಮಾಡಿದ್ದಾಗಿ ಹೇಳಿದ್ದಾರೆ. ವೈವಾಹಿಕ ಜೀವನದಲ್ಲಿ ಸ್ವಚ್ಛತೆ (Clean) ಮತ್ತು ಅಚ್ಚುಕಟ್ಟುತನದ ಮಹತ್ವವನ್ನು (Importance) ಸಾರುವ ಸಂದೇಶ ಈ ವಿಶಿಷ್ಟ ವಿವಾಹ ಮೆರವಣಿಗೆಯ ಹಿಂದಿದೆ. ಬುಲ್ಡೋಜರ್ ಅಥವಾ ಜೆಸಿಬಿಯನ್ನು ನೋಡಿದಾಗ ಒಬ್ಬರಿಗೆ ಸ್ವಚ್ಛತೆಯ ನೆನಪಾಗುವಂತೆ, ಕೃಷ್ಣ ಮಹತೋ ತನ್ನ ಮದುವೆಯಲ್ಲಿ ಆ ಸಾರವನ್ನು ಅಳವಡಿಸುವ ಗುರಿಯನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ.

ಮಟನ್ ಬೇಕೇ ಬೇಕು, ಇಲ್ಲಾಂದ್ರೆ ತಾಳಿ ಕಟ್ಟಲ್ಲ; ಮದ್ವೆ ಮನೆಯಲ್ಲಿ ವರನ ಕುಟುಂಬದಿಂದ ಗಲಾಟೆ!

ಮಟನ್ ಬೇಕೇ ಬೇಕು, ಇಲ್ಲಾಂದ್ರೆ ತಾಳಿ ಕಟ್ಟಲ್ಲ, ಮದ್ವೆ ಮನೆಯಲ್ಲಿ ವರನ ಕುಟುಂಬದಿಂದ ಗಲಾಟೆ!
ಮದುವೆಯಾಗಲು ತೆರಳಿದ್ದ ವರ, ಹಾಗೂ ಆತನ ಸಂಬಂಧಿಕರು ಊಟದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಮಟನ್‌ ಊಟ ಬಡ್ಸಿಲ್ಲ ಅಂತಾ ವರನ ಕಡೆಯವರು ಜಗಳವಾಡಿದದ್ದು, ಪರಿಣಾಮವಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಸಂಬಲ್ಪುರ ಜಿಲ್ಲೆಯ ಧಾಮಾ ಪ್ರದೇಶದಲ್ಲಿ ವಧುವಿನ ಮನೆಯಲ್ಲಿ ಈ ವಿಲಕ್ಷಣ ಘಟನೆ ವರದಿಯಾಗಿದೆ.

ಸಂಬಲ್‌ಪುರದ ಹುಡುಗಿಗೆ, ಬ್ಯಾಂಕ್‌ನಲ್ಲಿ ಕೆಲಸ ಮಾಡುವ  ಸುಂದರ್‌ಗಢದ ಯುವಕನೊಂದಿಗೆ ಮದುವೆ ನಿಶ್ವಯವಾಗಿತ್ತು. ನಿಗದಿತ ದಿನದಂದು ಮದುವೆ ನಡೆಯುತ್ತಿತ್ತು. ವರ, ತನ್ನ ಮನೆಯವರೊಂದಿಗೆ ಮೆರವಣಿಗೆಯಲ್ಲಿ ಸಂಬಲ್‌ಪುರದ ಐಂತಪಾಲಿಯಲ್ಲಿರುವ ವಧುವಿನ ಮನೆಗೆ ತಲುಪಿದ್ದಾನೆ. ಎಲ್ಲಾ ಶಾಸ್ತ್ರಗಳು ಮುಗಿದು ಊಟದ ಹೊತ್ತಿಗೆ ವರನ ಕಡೆಯವರು ಮಟನ್ ಕರಿ ಸಿಕ್ಕಿಲ್ಲ ಅಂತ ಗಲಾಟೆ (Quarrel) ಮಾಡಿದ್ದಾರೆ. ವರ ಸಹ ಮಟನ್ ಊಟ ಸಿಕ್ಕದ ಕಾರಣ ಹುಡುಗಿಯನ್ನು ಮದ್ವೆಯಾಗಲ್ಲ ಎಂದು ಹಠ ಹಿಡಿದಿದ್ದಾನೆ. 

ಆಗಲೇ ತಡರಾತ್ರಿ ಆಗಿದ್ದರಿಂದ ವಧುವಿನ ಮನೆಯವರು ಮಟನ್​ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಹುಡುಗನ ಕಡೆಯವರಿಗೆ ಮಟನ್​ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತು. ಕೂಡಲೇ ಮಟನ್‌ ಊಟ ತರಿಸುವಂತೆ ಒತ್ತಾಯಿಸಿದರು. 'ನನ್ನ ತಂದೆ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿ ವಿಚಾರವನ್ನು ಬಗೆಹರಿಸುವಂತೆ ಮನವಿ (Request) ಮಾಡಿದರು. ಆದರೆ ಅವರು ಮಾತ್ರ ಒಪ್ಪಲೇ ಇಲ್ಲ. ಇದರಿಂದ ನನಗೆ ಬೇಜಾರಾಗಿದ್ದು ನಾನು ಮದುವೆಯಾಗುವುದಿಲ್ಲ, ಎಂದು ಹೇಳಿದೆ' ಎಂದು ವಧು ವಿವರಿಸಿದರು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!