ಜೋಡಿಯು ಒಟ್ಟಿಗೇ ಬೆಳೆಯಬೇಕು, ಬದುಕಬೇಕು. ಒಬ್ಬರೊಂದಿಗೆ ಸಂಪೂರ್ಣ ಕನೆಕ್ಟ್ ಆಗಬೇಕೆಂದರೆ ಐದು ರೀತಿಯ ಇಂಟಿಮಸಿ ಇರಲೇಬೇಕು. ಅವು ಯಾವುವು ನೋಡೋಣ.
ಸಂಬಂಧವೊಂದು ಸ್ಟ್ರಾಂಗ್ ಆಗಿ ಹ್ಯಾಪಿಯಾಗಿರಲು ದೈಹಿಕ ಅನ್ಯೋನ್ಯತೆಯೇ ಬೇಕು ಎಂದು ಬಹಳಷ್ಟು ಜನ ನಂಬುತ್ತಾರೆ. ಆದರೆ ಕೇವಲ ದೈಹಿಕ ಅನ್ಯೋನ್ಯತೆಯೊಂದಿದ್ದರೆ ಸಂಬಂಧ ವ್ಯವಹಾರದಂತೆನಿಸುತ್ತದೆ, ಕೇವಲ ಸ್ವಾರ್ಥ ಹಾಗೂ ಲಾಭದ ಲೆಕ್ಕಾಚಾರಗಳನ್ನೊಳಗೊಳ್ಳುತ್ತದೆ. ಸಂಬಂಧವೊಂದು ಪರಿಪೂರ್ಣವಾಗಲು, ಧೀರ್ಘಕಾಲ ಆರೋಗ್ಯಕರವಾಗಿ ಮುಂದುವರಿಯಲು ದೈಹಿಕವಲ್ಲದೆ, ಇನ್ನೂ ನಾಲ್ಕು ರೀತಿಯ ಅನ್ಯೋನ್ಯತೆ ಹೆಚ್ಚು ಅಗತ್ಯ.
ಅನ್ಯೋನ್ಯತೆ ಎಂಬುದು ಎಲ್ಲ ರೀತಿಯಲ್ಲೂ ಬೆಳೆದು ಬರಲು ಸಮಯ ಬೇಕು. ಜೋಡಿಯು ಒಟ್ಟಿಗೇ ಬೆಳೆಯಬೇಕು, ಬದುಕಬೇಕು. ಒಬ್ಬರೊಂದಿಗೆ ಸಂಪೂರ್ಣ ಕನೆಕ್ಟ್ ಆಗಬೇಕೆಂದರೆ ಐದು ರೀತಿಯ ಇಂಟಿಮಸಿ ಇರಲೇಬೇಕು. ಅವು ಯಾವುವು ನೋಡೋಣ.
ಎಮೋಶನಲ್ ಇಂಟಿಮಸಿ
ಎಲ್ಲ ರೀತಿಯ ಇಂಟಿಮಸಿಗಳಲ್ಲಿ ಎಮೋಶನಲ್ ಇಂಟಿಮಸಿ ಬೆಳೆಯಲು ಹೆಚ್ಚು ಸಮಯ ಬೇಡುತ್ತದೆ. ಅಷ್ಟೇ ಅಲ್ಲ, ಸರಿಯಾದ ಸಂವಹನ ಹಾಗೂ ತಾಳ್ಮೆಯೂ ಅಗತ್ಯ. ಇದಿದ್ದಾಗ ಮಾತ್ರ ನೀವು ಯಾರೊಂದಿಗೂ ಶೇರ್ ಮಾಡದ ಸೀಕ್ರೆಟ್‌ಗಳನ್ನು ನಿಮ್ಮ ಸಂಗಾತಿಯೊಂದಿಗೆ ಶೇರ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಂಥ ನಂಬಿಕೆ ಇರುತ್ತದೆ. ಎಮೋಶನಲ್ ಇಂಟಿಮಸಿ ಇದ್ದರೆ ಮನಸ್ಸಿಗೆ ನೆಮ್ಮದಿ ಇರುತ್ತದೆ. ಏನು ಬೇಕಾದರೂ ಅರ್ಥವಿಲ್ಲದ್ದು, ಇರುವುದು ಎಲ್ಲವನ್ನೂ ಹಂಚಿಕೊಳ್ಳಬಹುದಾದ ಅವಕಾಶ ಇರುತ್ತದೆ. ತಮ್ಮನ್ನು ಜಜ್ ಮಾಡುವ ಭಯವಿಲ್ಲದೆ ಮುಕ್ತವಾಗಿ ಭಾವನೆಗಳನ್ನು ಹಂಚಿಕೊಳ್ಳಬಹುದು.
ಬುದ್ಧಿಮತ್ತೆ ಅನ್ಯೋನ್ಯತೆ
ಪತಿಯ ಮಾತು ಪತ್ನಿಗೆ ಅರ್ಥವೇ ಆಗದೆ ಹೋದರೆ ಅದರಿಂದ ಅವರಿಬ್ಬರ ನಡುವೆ ಕಂದಕವೇ ಏರ್ಪಡಬಹುದು. ಬುದ್ಧಿಮತ್ತೆ ಅನ್ಯೋನ್ಯತೆ ಎಂಬುದು ನಿಮ್ಮ ಸಂಗಾತಿಯ ಯೋಚನೆಗಳ ಬಗ್ಗೆ ನೀವು ಕಂಡುಕೊಳ್ಳುವ ರೋಡ್ ಮ್ಯಾಪ್. ಇಬ್ಬರಿಗೂ ಪರಸ್ಪರ ಯೋಚನೆಗಳು, ಚಿಂತನೆಗಳು ಅರ್ಥವಾಗುವುದು, ಆತ ಮಲಗಿದಾಗ ಇಂಥ ವಿಷಯವನ್ನೇ ಯೋಚಿಸುತ್ತಿದ್ದಾನೆ ಎಂದು ನೀವು ಕಂಡುಹಿಡಿಯುವಷ್ಟು ಸಮರ್ಥತೆ ಹೊಂದಿದ್ದರೆ ಹಾಗೂ ಆತ ಕೂಡಾ ನಿಮ್ಮ ವಿಷಯದಲ್ಲಿ ಅಷ್ಟೇ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರೆ ನಿಮ್ಮಿಬ್ಬರ ನಡುವೆ ಇಂಟೆಲೆಕ್ಚುಯಲ್ ಅನ್ಯೋನ್ಯತೆ ಚೆನ್ನಾಗಿದೆ ಎಂದರ್ಥ.
ಪ್ರಾಯೋಗಿಕ ಅನ್ಯೋನ್ಯತೆ
ಇಬ್ಬರಲ್ಲೂ ಸಮಾನ ಆಸಕ್ತಿಗಳು, ಗುರಿ, ಭರವಸೆ ಇಲ್ಲದೆ ಹೋದಲ್ಲಿ ಜೀವನ ಬಲು ಬೇಗ ಬೇಸರ ಬಂದು ಬಿಡುತ್ತದೆ. ಹೊಸ ಹೊಸ ಅನುಭವಗಳಿಗೆ ತೆರೆದುಕೊಳ್ಳುವ, ಒಟ್ಟಿಗೇ ಕ್ವಾಲಿಟಿ ಟೈಂ ಕಳೆಯುವ ಅಭ್ಯಾಸ ಹೊಂದಿದವರು ಹೆಚ್ಚು ಚೆನ್ನಾಗಿ ಕನೆಕ್ಟ್ ಆಗಬಲ್ಲರು. ಇಬ್ಬರಿಗೂ ಇಷ್ಟವಿರುವ ಕ್ರೀಡೆ ವೀಕ್ಷಿಸಲು, ಚಿತ್ರ ನೋಡಲು, ಆಟವಾಡಲು ಹೋಗುವುದರಿಂದ ಇಬ್ಬರ ಮನಸ್ಸೂ ಆಗಾಗ ಫ್ರೆಶ್ ಆಗುತ್ತಿರುತ್ತಿದೆ.
ಆಧ್ಯಾತ್ಮಿಕ ಅನ್ಯೋನ್ಯತೆ
ಆಧ್ಯಾತ್ಮ ಎಂಬುದು ಪ್ರಕೃತಿಯಲ್ಲಿ ದೈವವಿದೆ, ಮನುಷ್ಯನ ಬುದ್ಧಿಮತ್ತೆಗಿಂತಲೂ ಹೆಚ್ಚಿನ ಜ್ಞಾನವಿದೆ ಎಂದು ನಂಬುವುದು. ಸ್ಪಿರಿಚುಯಲ್ ಇಂಟಿಮಸಿ ಎಂದರೆ ಇಬ್ಬರೂ ಒಂದೇ ರೀತಿಯ ನಂಬಿಕೆ, ಆದರ್ಶಗಳನ್ನು ಹೊಂದಿರುವುದು. ಅಥವಾ ತಾವಿಬ್ಬರು ತಮ್ಮಿಬ್ಬರಿಗಾಗಿಯೇ ಜನಿಸಿದವರು ಎಂದು ನಂಬುವುದು.
ಡಿಜಿಟಲ್ ಇಂಟಿಮಸಿ
ಇದೇನು ಉಳಿದವಷ್ಟು ಪ್ರಮುಖವಾದುದಲ್ಲವಾದರೂ, ಇಂದಿನ ಕಾಲಕ್ಕೆ ಡಿಜಿಟಲ್ ಇಂಟಿಮಸಿಯೂ ಪ್ರಸ್ತುತವೆನಿಸುತ್ತದೆ. ಸಂಬಂಧ ವೃದ್ಧಿಸಿಕೊಳ್ಳಲು, ಜಗಳದ ಬಳಿಕ ಶಾಂತಿ ಸ್ಥಾಪನೆ ಮಾಡಿಕೊಳ್ಳಲು ಸೇರಿದಂತೆ ಸಂಬಂಧದ ಬಹುತೇಕ ವಿಷಯಗಳಿಗೆ ಇಂದು ಡಿಜಿಟಲ್ ಜಗತ್ತು ಥಳುಕು ಹಾಕಿಕೊಂಡಿದೆ. ಹಾಗಾಗಿ, ಆನ್‌ಲೈನಲ್ಲಿ ಕೂಡಾ ಸಂಪರ್ಕವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಡಿಜಿಟಲ್ ಇಂಟಿಮಸಿ ಗಟ್ಟಿಯಾಗಿಸಿಕೊಳ್ಳಬಹುದು.
ಗಂಡ ಹೆಂಡಿರಲ್ಲಿ ಎಲ್ಲ ವಿಷಯದಲ್ಲಿಯೂ ಸಮಾನತೆ ಇರುತ್ತೆ, ಇದೆ ಎನ್ನುವುದು ಕಷ್ಟ. ಆದರೆ, ಇಬ್ಬರೂ ಒಬ್ಬರಿಗೊಬ್ಬರು ಗೌರವಿಸಿಕೊಂಡು, ಪ್ರೀತಿಯಿಂದ ಸಾಗಿದರೆ ಮಾತ್ರ ಜೀವದಲ್ಲಿ ಸುಖ, ನೆಮ್ಮದಿ ಸಿಗುವುದು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬದುಕಲು ಯತ್ನಿಸಿದರೆ ಆದರ್ಶ ದಾಂಪತ್ಯ ನಿಮ್ಮದಾಗುವುದರಲ್ಲಿ ಅನುಮಾನವೇ ಇಲ್ಲ.