ಮದುವೆಯಾದರೂ ಫಸ್ಟ್ ಲವ್ ಮರೆಯೋಕಾಗ್ತಿಲ್ಲ ಅನ್ನೋರಿಗೆ 5 ಸಲಹೆ!

ಹಳೆಯ ಪ್ರೀತಿಯ ನೆನಪುಗಳು ಮದುವೆಯ ನಂತರವೂ ಕಾಡುತ್ತಿದ್ದರೆ, ಅದರಿಂದ ಹೊರಬರಲು ಕೆಲವು ಸಲಹೆಗಳಿವೆ. ಸತ್ಯವನ್ನು ಒಪ್ಪಿಕೊಳ್ಳುವುದು, ವರ್ತಮಾನದಲ್ಲಿ ಬದುಕುವುದು ಮತ್ತು ನಂಬಿಕೆಯನ್ನು ಬೆಳೆಸಿಕೊಳ್ಳುವುದು ಮುಖ್ಯ.

First Love Memory forgotten 5 best Tips after Marriage sat

ಸಾಮಾನ್ಯವಾಗಿ ಮದುವೆಗೂ ಮುನ್ನ ಹದಿಹರೆಯದ ವಯಸ್ಸಿನಲ್ಲಿ ಅಥವಾ ಕಾಲೇಜು ದಿನಗಳಲ್ಲಿ ಪ್ರೀತಿ, ಪ್ರೇಮ ಮತ್ತು ಪ್ರಣಯದ ಸಂಬಂಧಗಳು ಎಂದಿಗೂ ಮಾಸುವುದಿಲ್ಲ. ಕಾರಣ ಮೊದಲ ಪ್ರೀತಿಗೆ ಇರುವ ಶಕ್ತಿಯೇ ಅಂಥದ್ದು ಎಂದು ಕೆಲವರು ಹೇಳುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಮೊದಲ ಪ್ರೀತಿ ಅಥವಾ ಸಂಬಂಧಗಳು ಮದುವೆಯ ನಂತರವೂ ಸುಖ ದಾಂಪತ್ಯವನ್ನು ಹಾಳು ಮಾಡುವುದಕ್ಕೆ ತುಂಬಾ ಕಾರಣವಾಗುತ್ತಿವೆ. ಆದ್ದರಿಂದ ಹಳೆಯ ಸಂಬಂಧದಿಂದ ಹೊರಬರಲು ಇಂದಷ್ಟು ಸಲಹೆಗಳು ಇಲ್ಲಿವೆ ನೋಡಿ..

ಮೊದಲ ಪ್ರೀತಿಯ ಸಂಬಂಧ ತುಂಬಾನೇ ಸ್ಪೆಷಲ್ ಆಗಿರುತ್ತದೆ. ಆದರೆ, ಅದು ಏನೋ ಕಾರಣಕ್ಕೆ ಮುರಿದು ಹೋದರೆ, ಜೀವನದಲ್ಲಿ ನಿರಾಶೆ ಬರುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ಮುಂದೆ ಹೋಗೋಕೆ ಆಗಲ್ಲ. ನಾವು ಯಾವಾಗಲೂ ಆ ಮುರಿದ ಸಂಬಂಧದ ಬಗ್ಗೆನೇ ಯೋಚನೆ ಮಾಡುತ್ತಲೇ ಇರುತ್ತೇವೆ. ಈಗಿನ ಹಾಲಿ ಜೀವನ ಹಾಗೂ ಸಂಬಂಧದಲ್ಲಿ ಇದ್ದವರೊಂದಿಗಿನ ಜೀವನಕ್ಕೂ ಹೋಲಿಕೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ಇದರಿಂದ ನಮ್ಮ ಈಗಿನ ಜೀವನ ಹಾಳಾಗುತ್ತೆ, ಫ್ರೀ ಆಗಿ ಬದುಕೋಕೆ ಆಗಲ್ಲ. ಆದರೆ, ಹಾಗೆ ಮಾಡೋದು ತಪ್ಪು. ಹಳೆ ಮುರಿದ ಸಂಬಂಧದಿಂದ ನಾವು ನಮ್ಮ ಜೀವನವನ್ನು ಕಳೆದು ಹೋಗಿರುವ ಕ್ಷಣಗಳ ಜೊತೆಗೆ ಕಟ್ಟಿ ಹಾಕಿ, ನಾವೇ ತೊಂದರೆ ತಂದುಕೊಳ್ಳುತ್ತೇವೆ. ನಿಮ್ಮ ಹಳೆ ಸಂಬಂಧಗಳನ್ನ ಮರೆತು, ಜೀವನದಲ್ಲಿ ಹೇಗೆ ಮುಂದೆ ಹೋಗೋದು, ಖುಷಿಯಾಗಿರೋದು ಅಂತ ತಜ್ಞರು ಹೇಳಿದ್ದಾರೆ.

Latest Videos

ಇದನ್ನೂ ಓದಿ: ಮೆಟ್ರೋದಲ್ಲಿ ನಿದ್ದೆ ಮಾಡುವ ಯುವಕನಿಗೆ ಸೊಂಟದ ಆಸರೆ ಕೊಟ್ಟ ಯುವತಿ!

ಸತ್ಯವನ್ನು ಒಪ್ಪಿಕೊಳ್ಳಿ (Accept the truth):
ನೀವು ಯಾವ ಸಂಬಂಧದ ಬಗ್ಗೆ ಯೋಚನೆ ಮಾಡ್ತಿದ್ದೀರೋ ಅದು ನಿಮ್ಮ ಕಳೆದು ಹೋದ ದಿನವಾಗಿತ್ತು. ಅದನ್ನ ಸರಿ ಮಾಡೋಕೆ ಆಗಲ್ಲ ಅನ್ನೋ ಸತ್ಯನ ಬೇಗ ಒಪ್ಪಿಕೊಳ್ಳಿ. ಇವತ್ತು ನೀವು ನಿಮ್ಮ ಈಗಿನ ಸಂಬಂಧದ ಬಗ್ಗೆ ಗಮನ ಕೊಡೋದು ಮುಖ್ಯ. ನಿಮ್ಮ ತಪ್ಪುಗಳಿಂದ ನಿಮ್ಮ ಈಗಿನ ಸಂಬಂಧ ಮುರಿದು ಹೋಗಬಹುದು, ಆಮೇಲೆ ಪಶ್ಚಾತ್ತಾಪ ಪಡಬೇಕಾಗಬಹುದು.

ಈಗಿನ ಜೀವನ ಮಾಡೋಕೆ ಟ್ರೈ ಮಾಡಿ (Try to live in the present):  ನೀವು ನಿಮ್ಮ ಈಗಿನ ಸಂಬಂಧನ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರೆ, ಪಾಸ್ಟ್ ಅಲ್ಲಿ ಬದುಕೋ ಬದಲು ಈಗಿನ ಜೀವನ ಮಾಡೋಕೆ ಕಲಿಯಿರಿ. ಪಾಸ್ಟ್ ಬಗ್ಗೆ ಯೋಚನೆ ಮಾಡಿ ಬೇಜಾರು ಮಾಡ್ಕೊಳ್ಳೋ ಬದಲು, ನಿಮ್ಮ ಸಂಗಾತಿಗೆ ಏನು ಇಷ್ಟವೋ ಅದನ್ನ ಮಾಡಿ.

ನಂಬೋಕೆ ಕಲಿಯಿರಿ (Learn to trust): ಒಂದು ಸಲ ಸಂಬಂಧ ಮುರಿದು ಹೋದರೆ, ಜೀವನದಲ್ಲಿ ನಂಬಿಕೆ ಅನ್ನೋದು ಇರಲ್ಲ. ನಾವು ಯಾರನ್ನೂ ನಂಬೋಕೆ ಆಗಲ್ಲ. ಎಲ್ಲರನ್ನೂ ಡೌಟ್ ಇಂದಾನೇ ನೋಡ್ತೀವಿ. ಆದ್ರೆ ಹಾಗೆ ಮಾಡೋ ಬದಲು, ಸಂಬಂಧನ ನಂಬೋಕೆ ಕಲಿಯಿರಿ.

ಇದನ್ನೂ ಓದಿ: ನಟ ಗೋವಿಂದ ಬಗ್ಗೆ ಕೇಳಿದ್ದಕ್ಕೆ ಹಲವು ಅನುಮಾನ ಹುಟ್ಟುಹಾಕಿದ ಸುನೀತಾ!

ನಿಮ್ಮನ್ನ ಬದಲಾಯಿಸಿಕೊಳ್ಳಿ (Change yourself):  ನಿಮ್ಮ ಸಂಬಂಧ ಖುಷಿಯಾಗಿರಬೇಕು ಅಂದ್ರೆ, ನಿಮ್ಮಲ್ಲಿ ಸ್ವಲ್ಪ ಬದಲಾವಣೆ ತನ್ನಿ, ಯಾವ ತಪ್ಪುಗಳಿಂದ ನಿಮ್ಮ ಹಳೆ ಸಂಬಂಧ ಮುರಿದೋಯ್ತೋ, ಆ ತಪ್ಪುಗಳನ್ನ ಮಾಡೋಕೆ ಹೋಗ್ಬೇಡಿ. ಹೀಗೆ ಮಾಡೋದ್ರಿಂದ ನಿಮ್ಮ ಹೊಸ ಸಂಬಂಧಕ್ಕೆ ಚಾನ್ಸ್ ಕೊಟ್ಟಂಗೆ ಆಗುತ್ತೆ, ನೀವು ಚೆನ್ನಾಗಿ ಇರುತ್ತೀರಿ. ಅದು ನಿಮ್ಮ ಸಂಬಂಧಕ್ಕೆ ಒಳ್ಳೇದು.

ಕ್ಷಮಿಸೋಕೆ ಕಲಿಯಿರಿ (Learn to forgive): ನೀವು ನಿಮ್ಮ ಈಗಿನ ಸಂಬಂಧದಲ್ಲೂ ಹಳೆ ಸಂಬಂಧ ಹುಡುಕ್ತಾ ಇದ್ರೆ, ಅದು ನಿಮ್ಮ ದೊಡ್ಡ ತಪ್ಪು. ನಿಮ್ಮ ಹಳೆ ಸಂಬಂಧದಿಂದ ನಿಮ್ಮ ಈಗಿನ ಸಂಬಂಧನ ಹಾಳು ಮಾಡ್ಕೊಳ್ತಿದ್ದೀರ. ನಿಮ್ಮ ಹಳೆ ಸಂಬಂಧನ ಕ್ಷಮಿಸಿ, ಮುಂದೆ ಹೋಗಿ. ನಿಮ್ಮ ಗಮನ ಎಲ್ಲ ನಿಮ್ಮ ಈಗಿನ ಸಂಬಂಧನ ಖುಷಿಯಾಗಿ ಇಡೋದ್ರಲ್ಲಿ ಇರಲಿ, ನಿಮ್ಮ ಹಳೆ ಸಂಬಂಧ ಯಾಕೆ ಮುರಿದೋಯ್ತು ಅಂತ ಯೋಚನೆ  ನಿಮ್ಮ ಸುಖಕರವಾದ ಜೀವನದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ.

vuukle one pixel image
click me!