ನರಸಿಂಗಪುರದಲ್ಲಿ ಮುಸ್ಲಿಂ ಯುವಕನೊಬ್ಬ, ಹಿಂದು ಹುಡುಗಿಯ ಮದುವೆಯಾಗುವ ಸಲುವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ತನ್ನ ತಾಯಿ ಮುಸ್ಲಿಂ ಆಗಿದ್ದು, ಆಕೆಯನ್ನು ಮದುವೆಯಾಗುವ ಸಲುವಾಗಿ ತಂದೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದ ಎಂದು ಯುವಕ ಈ ವೇಳೆ ಹೇಳಿದ್ದಾನೆ.
ನವದೆಹಲಿ (ಜೂ.17): ಮಧ್ಯಪ್ರದೇಶದ ನರಸಿಂಗಪುರದಲ್ಲಿ ಪ್ರೀತಿಗಾಗಿ ಹುಡುಗನೊಬ್ಬ ಮುಸ್ಲಿಂ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದ ಘಟನೆ ನಡೆದಿದೆ. ಫಾಜಿಲ್ ಎನ್ನುವ ಹೆಸರಿನ ಯುವಕ ಹಿಂದು ಹುಡುಗಿಯನ್ನು ಪ್ರೀತಿಸಿದ್ದ ಆಕೆಯನ್ನು ಮದುವೆಯಾಗುವ ಸಲುವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದು ಮಾತ್ರವಲ್ಲದೆ, ತನ್ನ ಹೆಸರನ್ನು ಅಮಾನ್ ರೈ ಎಂದು ಬದಲಾಯಿಸಿಕೊಂಡಿದ್ದಾನೆ. ಅದಾದ ಬಳಿಕ ದೇವಸ್ಥಾನಕ್ಕೆ ಪ್ರವೇಶಿಸಿದ ಅಮಾನ್ ರೈ ಅಲ್ಲಿ ಮದುವೆಯ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದಾರೆ. ಫಾಜಿಲ್ ಹಲವು ವರ್ಷಗಳಿಂದ ಸೋನಾಲಿ ಎನ್ನುವ ಹಿಂದೂ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ, ಮದುವೆಗೆ ಮನೆಯವರ ವಿರೋಧವಿದ್ದ ಕಾರಣ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಈ ವೇಳೆ ತನ್ನ ಹೆಸರನ್ನು ಫಾಜಿಲ್ ಎಂದು ಹುಡುಗಿಯ ಹೆಸರನ್ನು ಸೋನಾಲಿ ಎಂದೇ ನಮೂದು ಮಾಡಿದ್ದ. ಇದು ಪ್ರದೇಶದಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಸೋನಾಲಿಯ ಆಸೆಯಂತೆ ಗುರುವಾರ ಹಿಂದೂ ಧರ್ಮಕ್ಕೆ ಮತಾಂತರವಾದ ಫಾಜಿಲ್ ತನ್ನ ಹೆಸರನ್ನು ಅಮಾನ್ ರೈ ಎಂದು ಬದಲಾಯಿಸಿಕೊಂಡಿದ್ದಾರೆ. ಕರೇಲಿಯ ಶ್ರೀರಾಮ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಕೂಡ ನೆರವೇರಿದೆ. ನನಗೆ ಎಂದಿಗೂ ಸನಾತನ ಧರ್ಮದ ಬಗ್ಗೆಯೇ ಆಸಕ್ತಿ ಇತ್ತು. ಹಾಗಾಗಿಯೇ ನಾನು ಇಸ್ಲಾಂ ಅನ್ನು ತೊರೆದು ಸೋನಾಲಿಯನ್ನು ಹಿಂದೂ ಧರ್ಮದಂತೆ ವಿವಾಹವಾಗಿದ್ದೇನೆ ಎಂದಿದ್ದಾನೆ.
ಈ ವೇಳೆ ಫಾಜಿಲ್‌ನ ಸಾಕಷ್ಟು ಸ್ನೇಹಿತರು ಕೂಡ ದೇವಸ್ಥಾನಕ್ಕೆ ಆಗಮಿಸಿದ್ದರು. ಅಮಾನ್ ಹಾಗೂ ಸೋನಾಲಿ ಕಳೆದ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಮೊದಲಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಪ್ರೀತಿ ಮಾಡಿದ್ದ ಇವರು, ಬಳಿಕ ಮದುವೆಯಾಗುವ ಬಗ್ಗೆ ನಿರ್ಧಾರ ಮಾಡಿದ್ದರು. ಗದರ್‌ವಾರಾದ ದಾಮ್ರು ಘತಿ ಶಿವ ದೇವಸ್ಥಾನದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಅಂದಿನಿಂದ ತಮ್ಮ ಸಂಬಂಧ ಮತ್ತಷ್ಟು ವೃದ್ಧಿಯಾಯಿತು ಎಂದು ಹೇಳಿದ್ದಾರೆ.
ಇನ್ನು ತಮ್ಮ ಕುಟುಂಬದ ಬಗ್ಗೆ ವಿವರ ನೀಡಿರುವ ಅಮಾನ್ ರೈ, ತನ್ನ ತಂದೆ ಕೂಡ ಮೂಲ ಹಿಂದುವೇ ಆಗಿದ್ದರು ಎಂದಿದ್ದಾನೆ. ಬಳಿಕ ಆತ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ. ಆದರೆ, ನನ್ನ ಹೆಚ್ಚಿನ ಸ್ನೇಹಿತರು ಹಿಂದುಗಳು, ನನಗೆ ಇಸ್ಲಾಂ ಅಷ್ಟಾಗಿ ಇಷ್ಟವಿರಲಿಲ್ಲ ಎಂದಿದ್ದಾನೆ. ಅದರೊಂದಿಗೆ ಬರಮ್ ಬಾಬಾ ದೇವಸ್ಥಾನಕ್ಕೂ ಪ್ರತಿನಿತ್ಯ ತಾನು ಹೋಗುತ್ತಿದ್ದೆ ಎಂದಿದ್ದಾರೆ. ನನಗೆ ಸನಾತನ ಧರ್ಮದ ಪದ್ದತಿಗಳು ಇಷ್ಟು. ಈಗ ಸೋನಾಲಿಯ ಕಾರಣದಿಂದಾಗಿ ನಾನು ಹಿಂದು ಧರ್ಮವನ್ನು ಸ್ವೀಕಾರ ಮಾಡಿದ್ದೇನೆ ಎಂದಿದ್ದಾರೆ.
Dumka Murder: ಬಿಜೆಪಿ ಆಕ್ಷೇಪ, ಪ್ರಕರಣದ ತನಿಖೆಯಿಂದ ಡಿಎಸ್‌ಪಿ ನೂರ್ ಮುಸ್ತಫಾ ವಜಾ!
ಪ್ರೀತಿಗಾಗಿಯೇ ಧರ್ಮ ಬದಲಿಸಿದ್ದ ತಂದೆ: ಅಮಾನ್ ರೈನ ತಂದೆ ಕೂಡ ಮೊದಲು ಹಿಂದು ಆಗಿದ್ದರು. ಆದರೆ, ಮುಸ್ಲಿಂ ಹುಡುಗಿಯನ್ನು ಪ್ರೀತಿ ಮಾಡಿದ್ದ ಕಾರಣಕ್ಕೆ ಮುಸ್ಲಿಂ ಆಗಿ ಬದಲಾಗಿದ್ದರು. ಪೂರನ್ ಮೆಹ್ರಾ ಎನ್ನುವ ತಮ್ಮ ಹೆಸರನ್ನು ಶೇಖ್ ಅಬ್ದುಲ್ಲಾ ಆಗಿ ಬದಲಾವಣೆ ಮಾಡಿಕೊಂಡಿದ್ದರು. ಆದರೆ, ಪುತ್ರ ಫಾಜಿಲ್ ಹಿಂದು ಧರ್ಮದ ಬಗ್ಗೆ ಅತಿಯಾಗಿ ವ್ಯಾಮೋಹ ಬೆಳೆಸಿಕೊಂಡಿದ್ದ ಎಂದು ವರದಿಯಾಗಿದೆ.
2 ವರ್ಷಗಳಿಂದ ಶಾರುಖ್‌ನ ಭಯದಲ್ಲೇ ಬದುಕಿದ್ದಳು ಅಂಕಿತಾ, ಶಿಕ್ಷೆಯ ಭಯವಿಲ್ಲದೆ ನಗುತ್ತಲೇ ಬಂದ ಆರೋಪಿ!