Relationship Tips: ಮ್ಯಾಟ್ರಿಮೋನಿ ಸೈಟ್ ಬಳಸೋ ಮುನ್ನ ಇದು ನೆನಪಿರಲಿ

By Suvarna News  |  First Published Jun 17, 2023, 1:29 PM IST

ಸಂಗಾತಿ ಹುಡುಕೋದು ಈಗ ಸುಲಭ. ಸಾಕಷ್ಟು ಮ್ಯಾಟ್ರಿಮೋನಿಯಲ್ ಸೈಟ್ ಗಳು ಈಗ ಲಭ್ಯವಿದೆ. ಆದ್ರೆ ಈ ಸೈಟ್ ಗಳಲ್ಲಿ ಹಾಕುವ ಎಲ್ಲ ಪ್ರೊಫೈಲ್ ನಲ್ಲಿ ಸತ್ಯವಿರೋದಿಲ್ಲ. ಕಣ್ಮುಚ್ಚಿ ನಂಬುವು ಮೊದಲು ಕೆಲ ಸಂಗತಿ ತಿಳಿದ್ಕೊಳ್ಳಿ.
 


ಈಗ ಮದುವೆ ವಿಧಾನದಲ್ಲಿ ಹಲವಾರು ಬದಲಾವಣೆಯಾಗಿದೆ. ಜಾತಕ ಹಿಡಿದು ಮನೆ ಮನೆಗೆ ಹೋಗ್ತಿದ್ದ ಕಾಲ ಈಗಿಲ್ಲ. ಆನ್ಲೈನ್ ನಲ್ಲಿಯೇ ಸಂಗಾತಿಯನ್ನು ಹುಡುಕಲಾಗುತ್ತದೆ. ಜನರ ಅನುಕೂಲಕ್ಕಾಗಿ ಅನೇಕ ಮ್ಯಾಟ್ರಿಮೋನಿಯಲ್ ಸೈಟ್ ಗಳು ತಲೆ ಎತ್ತಿವೆ. ಈ ಮ್ಯಾಟ್ರಿಮೋನಿಯಲ್ಲಿ ಜನರು ತಮ್ಮೆಲ್ಲ ಮಾಹಿತಿಯನ್ನು ಅಪ್ಲೋಡ್ ಮಾಡ್ತಾರೆ. ನಂತ್ರ ತಮಗೆ ಮ್ಯಾಚ್ ಆಗುವ ಸಂಗಾತಿಯನ್ನು ಹುಡುಕಿಕೊಳ್ತಾರೆ. ಪರಿಪೂರ್ಣ ಜೀವನ ಸಂಗಾತಿಯನ್ನು ಹುಡುಕಲು ಮ್ಯಾಟ್ರಿಮೋನಿಯಲ್ ಸೈಟ್ ಸಹಾಯ ಮಾಡುತ್ತದೆ. ಆದರೆ ಈ ಸೈಟ್‌ಗಳಲ್ಲಿ ಹಲವು ವಂಚನೆ ನಡೆಯುತ್ತದೆ. ಯಾವುದೇ ಜ್ಞಾನವಿಲ್ಲದೆ ನೀವು ಮ್ಯಾಟ್ರಿಮೋನಿಯದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯನ್ನು ನಂಬಿದ್ರೆ ಮೋಸವಾಗುವ ಸಾಧ್ಯತೆಯಿರುತ್ತದೆ. ಮ್ಯಾಟ್ರಿಮೋನಿಯಲ್ (Matrimonial) ನಲ್ಲಿ ನೀವೂ ಪ್ರೊಫೈಲ್ ಹೊಂದಿದ್ದು, ಅಲ್ಲೇ ಸಂಗಾತಿ ಹುಡುಕುತ್ತಿದ್ದರೆ ಅಲ್ಲಿ ಯಾವೆಲ್ಲ ವಿಷ್ಯಕ್ಕೆ ಮೋಸ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಬಣ್ಣ (Color) ನೋಡಿ ಮರುಳಾಗಬೇಡಿ : ಸಂಗಾತಿ ಹುಡುಕಾಟದಲ್ಲಿ ಬಣ್ಣಕ್ಕೆ ಜನರು ಹೆಚ್ಚು ಆದ್ಯತೆ ನೀಡ್ತಾರೆ. ತೆಳ್ಳಗೆ, ಬೆಳ್ಳಗೆ ಇರುವ ಸಂಗಾತಿ (Spouse)ಯನ್ನು ಜನರು ಹೆಚ್ಚಾಗಿ ಹುಡುಕ್ತಾರೆ. ಸಾಮಾನ್ಯವಾಗಿ ಮ್ಯಾಟ್ರಿಮೋನಿಯಲ್ಲಿ (Matrimonial) ಫೋಟೋವನ್ನು ಎಡಿಟ್ ಮಾಡಿ ಹಾಕುತ್ತಾರೆ. ಬಣ್ಣ ಏನು ಮಾಡದೆ ಇರಬಹುದು. ಆದ್ರೆ ಬಣ್ಣದಲ್ಲಿ ಹೇಳಿದ ಸುಳ್ಳು, ಜೀವನದ ಇತರ ವಿಷ್ಯದ ಮೇಲೂ ಪ್ರಭಾವ ಬೀರುತ್ತದೆ. ಸಂಗಾತಿ ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.

Latest Videos

undefined

PENILE FRACTURE: ಶಿಶ್ನ ಮುರಿತಕ್ಕೆ ಕಾರಣವೇನು? ಚಿಕಿತ್ಸೆ ಹೇಗೆ?

ವಯಸ್ಸಿನ ಬಗ್ಗೆ ಸುಳ್ಳು : ಯಾರ ಬಾಯಿಂದ್ಲೂ ಸರಿಯಾದ ವಯಸ್ಸು ಬರೋದೇ ಅಪರೂಪ. ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎನ್ನುವ ಗಾಧೆಯಿದೆ. ಅದರಂತೆ ಅನೇಕರು ವಯಸ್ಸನ್ನು ಮುಚ್ಚಿಟ್ಟು ಮದುವೆಯಾಗಲು ಮುಂದಾಗ್ತಾರೆ. ಇದೇ ವಯಸ್ಸು ಮುಂದೆ ಮದುವೆ ಮುರಿದು ಬೀಳಲು ಕಾರಣವಾಗಿದ್ದಿದೆ. ಮ್ಯಾಟ್ರಿಮೋನಿಯಲ್ಲೂ ಜನರು ವಯಸ್ಸನ್ನು ಮುಚ್ಚಿಡುತ್ತಾರೆ. ವಯಸ್ಸು ಹೆಚ್ಚಾಗ್ತಿದ್ದಂತೆ ಜನರು ಅದನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಮದುವೆಗೂ ಮುನ್ನ ಅವರ ವಯಸ್ಸನ್ನು ನೀವು ಪತ್ತೆ ಮಾಡೋದು ಒಳ್ಳೆಯದು.

ವೃತ್ತಿ ಬಗ್ಗೆ ಮುಚ್ಚಿಡುತ್ತಾರೆ ಜನರು : ಹುಡುಗರು ತಮ್ಮ ವೃತ್ತಿಯ ಬಗ್ಗೆ ಉತ್ಪ್ರೇಕ್ಷಿತವಾಗಿ ಬರೆಯುವುದನ್ನು ನಾವು ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ನೋಡಬಹುದು. ವೃತ್ತಿ ಚೆನ್ನಾಗಿದ್ರೆ, ಸಂಬಳ ಹೆಚ್ಚಿದ್ರೆ ವೇಗವಾಗಿ ಸಂಬಂಧ ಬೆಳೆಯುತ್ತದೆ ಎಂದು ಜನರು ನಂಬುತ್ತಾರೆ.  ಅನೇಕ ಬಾರಿ ಈ ಸುಳ್ಳಿನ ಸಹಾಯದಿಂದ ಹುಡುಗಿಯ ಮನೆಯವರಿಂದ ಹೆಚ್ಚಿನ ವರದಕ್ಷಿಣೆ ಪಡೆಯಲು ಪ್ರಯತ್ನಿಸುತ್ತಾನೆ. ಪ್ರೊಫೈಲ್ ನೋಡಿ ನೀವು ಸಂಗಾತಿ ಮೆಚ್ಚಿದ್ರೆ ಮದುವೆ ಮುಂದುವರೆಸುವ ಮುನ್ನ ವೃತ್ತಿಯ ಬಗ್ಗೆ ಸರಿಯಾದ ಮಾಹಿತಿ ಪಡೆಯಿರಿ.

ಕುಟುಂಬದ ಹಿನ್ನಲೆ : ವ್ಯಕ್ತಿಯು ಗೌರವಾನ್ವಿತ ಮತ್ತು ಸಮೃದ್ಧ ಕುಟುಂಬದೊಂದಿಗೆ ಸಂಬಂಧ ಬೆಳೆಸಲು ಬಯಸುತ್ತಾರೆ.  ಸಮಾಜದಲ್ಲಿ ಗೌರವದಿಂದ ಬದುಕಲು ಬಯಸ್ತಾರೆ. ಕೆಲವರ ಕೌಟುಂಬಿಕ ಹಿನ್ನಲೆ ಚೆನ್ನಾಗಿಲ್ಲವೆಂದ್ರೂ ಅದನ್ನು ಮುಚ್ಚಿಟ್ಟು ಮೆಟ್ರಿಮೋನಿಯಲ್ ಪ್ರೊಫೈಲ್‌ನಲ್ಲಿ ತಮ್ಮ ಕುಟುಂಬದ ಹಿನ್ನೆಲೆಯನ್ನು ಹೈ-ಫೈ ಎಂದು ಬರೆದುಕೊಳ್ತಾರೆ. ವಿದೇಶದಲ್ಲಿ ನೆಲೆಸಿರುವ ಬಗ್ಗೆಯೂ ಮಾಹಿತಿ ಇರೋದು ಸರ್ವೇಸಾಮಾನ್ಯ. ಆದ್ರೆ ಇದ್ರಲ್ಲಿ ಎಲ್ಲವೂ ಸತ್ಯವಿರೋದಿಲ್ಲ. ಮದುವೆ ಮಾತುಕತೆ ಮುಂದುವರೆಸುವ ಮುನ್ನ ನೀವು ಕುಟುಂಬದ ಹಿನ್ನಲೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಮದುವೆ ನಂತ್ರ ಕಷ್ಟಗಳನ್ನು ಎದುರಿಸೋದು ತಪ್ಪುತ್ತದೆ.

Relationship Tips: ಭಾವನೆಗಳ ಸಮತೋಲನಕ್ಕೆ ಸರಳ ಸೂತ್ರ

ಹಿಂದಿನ ಸಂಬಂಧದ ಬಗ್ಗೆ ಸುಳ್ಳಾಡಬಹುದು: ಈಗಿನ ದಿನಗಳಲ್ಲಿ ಮದುವೆಗಿಂತ ಮೊದಲು ಸಂಬಂಧ ಬೆಳೆಸೋದು ಮಾಮೂಲಿಯಾಗಿದೆ. ಆದ್ರೆ ಮದುವೆಗಿಂತ ಮೊದಲು ಸಂಬಂಧ ಬೆಳೆಸಿದ್ದನ್ನು ಅನೇಕರು ಮುಚ್ಚಿಡುತ್ತಾರೆ. ಕೆಲವರು ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರೆ ಅದನ್ನು ಕೂಡ ಹೇಳೋದಿಲ್ಲ. ಮದುವೆಯಾಗಿ, ವಿಚ್ಛೇದನ ಪಡೆಯದೆ ಮ್ಯಾಟ್ರಿಮೋನಿಯಲ್ಲಿ ಪ್ರೊಫೈಲ್ ಹಾಕೋರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಇದೆಲ್ಲವನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. 

click me!