ಪ್ರೇಮ ವೈಫಲ್ಯದಿಂದ ನೊಂದು ಕುಸಿದು ಕುಳಿತ ಮಗಳಿಗೆ ಅಪ್ಪನೊಬ್ಬ ನೀಡಿದ ಸಾಂತ್ವನದ ಸಂದೇಶವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಆಕೆಗೆ ಮಾತ್ರವಲ್ಲ, ಪ್ರೇಮ ವೈಫಲ್ಯದಿಂದ ಪ್ರಪಂಚವೇ ಮುಳುಗಿದಂತೆ ರೋಧಿಸುವ, ಅವಳು/ಅವನ್ನಿಲ್ಲದೇ ಬದುಕಿಲ್ಲ ಎಂದು ಕೊರಗುವ ಅನೇಕ ಯುವ ಪ್ರೇಮಿಗಳಿಗೆ ಸಾಂತ್ವನ ನೀಡುವ ಸಂದೇಶವಾಗಬಲ್ಲದು.
ಇವತ್ತಿನ ದಿನಗಳಲ್ಲಿ ನಿಜ ಪ್ರೀತಿ ಎಂಬುದನ್ನು ಹುಡುಕುವುದು ಬಹಳ ಕಷ್ಟದ ಕೆಲಸ, ಹರೆಯದಲ್ಲಿ ಹುಟ್ಟಿದ ಪ್ರೀತಿಯೊಂದು ಮದುವೆಯವರೆಗೂ ಹೋಗುವುದು ತುಂಬಾ ವಿರಳ. ಅಂತಹ ಯೋಗವಿರುವ ಅದೃಷ್ಟವಂತರು ಬಹಳ ವಿರಳ. ಈಗಿನ ತಲೆಮಾರಿನ ಮಕ್ಕಳನ್ನು ಕೇಳುವುದೇ ಬೇಡ, ಬ್ರೇಕಪ್ ಆಗದೇ ಇರೋ ಪ್ರೇಮಿಯೇ ಇಲ್ಲ.. ಮೊದಲ ಪ್ರೇಮ ಎಷ್ಟು ಸಂತಸ ಎಷ್ಟು ಖುಷಿ ನೀಡುವುದೋ ಮೊದಲ ಬ್ರೇಕಪ್ ಕೂಡ ಬಹುಶಃ ಅಷ್ಟೇ ಬಾಧೆ ನೀಡುವುದಂತೂ ನಿಜ, ಕೆಲವರು ಬ್ರೇಕಪ್ ನಂತರ ಅದರ ನೋವನ್ನು ತಡೆಯಲಾಗದೇ ಸಾವಿನ ಮನೆ ಅರಸಿ ತೆರಳುತ್ತಾರೆ. ಹರೆಯದ ಮಕ್ಕಳನ್ನು ಪ್ರೇಮಿಗಳನ್ನು, ಕಾಡುವ ಈ ಬ್ರೇಕಪ್ ಸಮಸ್ಯೆಯನ್ನು ನಿಭಾಯಿಸುವುದು ಹೇಗೆ ಎಂಬುದು ಪೋಷಕರಿಗೂ ಗೊಂದಲದ ವಿಚಾರ. ಅದರಲ್ಲೂ ಭಾರತದಂತಹ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಪ್ರೇಮಗಳಂತಹ ವಿಚಾರಗಳನ್ನು ಪೋಷಕರೊಂದಿಗೆ ಹೇಳಿಕೊಳ್ಳುವುದೇ ಅಸಾಧ್ಯ, ಅದು ದೊಡ್ಡ ಅಪರಾಧವೆಂಬಂತೆ ಪೋಷಕರು ಭಾವಿಸುವುದು ಕೂಡ ಅದಕ್ಕೆ ಕಾರಣ.
ಹೀಗಿರುವಾಗ ಪ್ರೇಮ ವೈಫಲ್ಯದಿಂದ ನೊಂದು ಕುಸಿದು ಕುಳಿತ ಮಗಳಿಗೆ ಅಪ್ಪನೊಬ್ಬ ನೀಡಿದ ಸಾಂತ್ವನದ ಸಂದೇಶವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಆಕೆಗೆ ಮಾತ್ರವಲ್ಲ, ಪ್ರೇಮ ವೈಫಲ್ಯದಿಂದ ಪ್ರಪಂಚವೇ ಮುಳುಗಿದಂತೆ ರೋಧಿಸುವ, ಅವಳು/ಅವನ್ನಿಲ್ಲದೇ ಬದುಕಿಲ್ಲ ಎಂದು ಕೊರಗುವ ಅನೇಕ ಯುವ ಪ್ರೇಮಿಗಳಿಗೆ ಸಾಂತ್ವನ ನೀಡುವ ಸಂದೇಶವಾಗಬಲ್ಲದು. ತನ್ನ ಅಪ್ಪ ಕಳುಹಿಸಿದ ಸಂದೇಶವನ್ನು ಮಗಳು ಫಾಲನ್ ಥಾಮ್ಸನ್ ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಆಕೆ 20ರ ಹರೆಯದ ಯುವ ಪ್ರೇಮಿ, ಅಮೆರಿಕಾದ ಟೆಕ್ಸಾಸ್‌ನ ನಿವಾಸಿ, ಆಕೆಯ ಅಪ್ಪ ಸ್ಕಾಟ್ ಥಾಮ್ಸನ್ ಬ್ರೇಕಪ್‌ನಿಂದ ನೊಂದ ಮಗಳಿಗೆ ನೀಡಿದ ಸಂದೇಶ ಇಲ್ಲಿದೆ. ನೀವು ಬ್ರೇಕಪ್ ತೊಳಲಾಟದಲ್ಲಿದ್ದರೆ ಒಮ್ಮೆ ಓದಿ ನೋಡಿ...
undefined
ಮದ್ವೆಯಾಗಲು ಭಾರತೀಯ ವರ ಬೇಕಾಗಿದ್ದಾನೆ, ಮಾಲ್‌ನಲ್ಲಿ ಪೋಸ್ಟರ್ ಹಿಡಿದು ಪೋಸ್ ನೀಡಿದ ರಷ್ಯನ್ ಬೆಡಗಿ!
ಹೇಯ್ ಬೇಬಿ ಗರ್ಲ್, ನಿನ್ನ ಹಿರಿಯನಿಂದ ನಿನಗೆ ಒಂದಿಷ್ಟು ಬದುಕಿನ ದೃಷ್ಟಿಕೋನವನ್ನು ನೀಡುತ್ತಿದ್ದೇನೆ, ನಾನು ಸಾಕಷ್ಟು ಸಂಬಂಧಗಳನ್ನು ಹೊಂದಿದ್ದೆ. ಒಂದು ರಾತ್ರಿಯ ಸ್ಟ್ಯಾಂಡ್(One Night stand)ನಿಂದ ಹಿಡಿದು ಫ್ಲಿಂಗ್ಸ್‌ನಿಂದ (Flings) ಫ್ರೆಂಡ್ಸ್, ಫ್ರೆಂಡ್ಸ್ ಆಫ್ ಬೆನಿಫಿಟ್ಸ್, ಗರ್ಲ್‌ಫ್ರೆಂಡ್ಸ್, ಲಿವ್ ಇನ್ ರಿಲೇಷನ್‌ಶಿಪ್, ಹೀಗೆ ಇವೆಲ್ಲದರ ಅನುಭವದ ನಂತರ ನನಗೆ ನಿಮ್ಮ ಅಮ್ಮ ಸಿಕ್ಕಳು. ಆಕೆ ಸಿಕ್ಕಾಗ ಅದೊಂದು ಬೇರೆಯದೇ ಅನುಭವವಾಗಿತ್ತು ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ. ಅದು ಏಕೆ ವಿಭಿನ್ನವಾಗಿತ್ತು ಎಂಬುದಕ್ಕೆ ನನ್ನ ಹಿಂದಿನ ಈ ಸಂಬಂಧಗಳು ಅವುಗಳ ಅನುಭವಗಳು ಕಾರಣ.
ಹೀಗಾಗಿ ಇವತ್ತು ನೀನು ಇರುವ ಸ್ಥಿತಿಯೂ ನಿನಗೆ ಮುಂದೆ ಸಿಗುವ ಒಳ್ಳೆಯ ವ್ಯಕ್ತಿಗಾಗಿ ಅಗತ್ಯವಾಗಿದೆ. ನಾನು ಒಂದೊಮ್ಮೆ ಪ್ರೇಮ ವೈಫಲ್ಯಕ್ಕೆ ಒಳಗಾಗಿದ್ದಾಗ ನಾನು ಮತ್ತೆ ಮೇಲೇಳಲಾರೆ ಎಂದೇ ನಾನು ಭಾವಿಸಿದ್ದೆ. ಹಾಗೂ ಒಂಟಿಯಾಗಿಯೇ ಬದುಕಬೇಕೆಂದು ಭಾವಿಸಿದ್ದೆ. ಆದರೆ ನಾನು ನಿನಗೆ ಪ್ರಮಾಣ ಮಾಡಿ ಹೇಳುತ್ತೇನೆ. ಇದೇ ನಿನ್ನ ಭವಿಷ್ಯ ಅಲ್ಲ,ನೀವು ಅವರು ಬಯಸಿದಂತೆ ಇಲ್ಲ ಎಂದು ಯಾರಾದರೂ ನಿಮಗೆ ತಿಳಿಸಿದಾಗ ಆ ನೋವನ್ನು ನಿಮ್ಮ ಬುದ್ಧಿವಂತಿಕೆಯಿಂದ ನಿಭಾಯಿಸಿ ಅಲ್ಲದೇ ಆತ ನಿಮ್ಮ ಅಮೂಲ್ಯವಾದ ಸಮಯವನ್ನು ನಿಮಗೆ ಮರಳಿ ನೀಡಿದ ಎಂಬುದನ್ನು ಮರೆಯಬೇಡಿ, ಸೋ ಯಾವಾಗಲೂ ಗೂಳಿಯಂತೆ ಮುನ್ನುಗುತ್ತಿರಿ, ಹಾಗೂ ನಿಮ್ಮ ಬಗ್ಗೆಯೇ ನೀವು ಒಲವು ತೋರಿ, ನೋವನ್ನು ಒಪ್ಪಿ ಅಪ್ಪಿಕೊಳ್ಳಿ ಅದರಿಂದಲೇ ನೀವು ಮತ್ತೆ ಬಲಶಾಲಿಯಾಗಿ ಪುಟಿದೇಳುವಂತಾಗಿ ಹೀಗಾದಲ್ಲಿ ನೀವು ಕೂಡಲೇ ಶಾಂತರಾಗುತ್ತಿರಿ.
Ratan Tata: ಬ್ರಹ್ಮಚಾರಿ ರತನ್ ಟಾಟಾ ಬದುಕಿನ ಲವ್ ಸ್ಟೋರಿ ಇದು!
ತಂದೆಯ ಈ ಸಂದೇಶ ಓದಿದ ನಂತರ ನನಗಿದು ಈ ಸಂದರ್ಭದಲ್ಲಿ ಬೇಕಿತ್ತು ಎಂಬುದು ಖಚಿತವಾಯ್ತು. ನನ್ನನ್ನು ಆಘಾತದಿಂದ ಮೇಲೇಳಿಸಲು ಕೆಲ ಮಾತುಗಳು ಬೇಕು ಎಂಬುದು ಆತನಿಗೆ ತಿಳಿದಿತ್ತು. ಆತನ ಸಂದೇಶದ ಬಳಿಕ ನನ್ನ ಸಂಬಂಧ ಹೇಗೆ ಬೇಕಾದರೂ ಇರಲಿ ಆದರೆ ನನ್ನ ತಂದೆ ಹಾಗೂ ನನ್ನ ಕುಟುಂಬ ಸದಾ ನನ್ನ ಜೊತೆ ಇರುತ್ತದೆ ಎಂಬುದು ನನಗೆ ತಿಳಿಯಿತು. ಜೊತೆಗೆ ಅದೇ ನನಗೆ ಬಹಳ ಅಗತ್ಯ ಎಂಬುದು ತಿಳಿಯಿತು ಎಂದು ಫಾಲನ್ ಬರೆದುಕೊಂಡಿದ್ದಾರೆ.