ಮದ್ವೆ ಮಂಟಪದಲ್ಲಿ ರಸಗುಲ್ಲಾ ತಿನ್ನದ ವರನ ಕಪಾಳಕ್ಕೆ ಬಾರಿಸಿದ ವಧು, ವೀಡಿಯೋ ವೈರಲ್

By Vinutha Perla  |  First Published Jun 2, 2024, 4:00 PM IST

ಮದುವೆ ಮನೆ ಅಂದರೆ ಖುಷಿಯ ಸಮಾರಂಭ. ಅದರೆ ಇಲ್ಲಿ ಸಣ್ಣಪುಟ್ಟ ವಿಷಯಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಜಗಳವಾಗುವುದು ಸಾಮಾನ್ಯ. ಹಾಗೆಯೇ ಇಲ್ಲೊಂದೆಡೆ ವಧು ಎಲ್ಲಾ ಅತಿಥಿಗಳ ಮುಂದೆ ವರನಿಗೆ ಕಪಾಳಮೋಕ್ಷ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಮದುವೆ ಮನೆ ಅಂದರೆ ಖುಷಿಯ ಸಮಾರಂಭ. ಅದರೆ ಇಲ್ಲಿ ಸಣ್ಣಪುಟ್ಟ ವಿಷಯಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಜಗಳವಾಗುವುದು ಸಾಮಾನ್ಯ. ಕೆಲವೊಮ್ಮೆ ಇದು ಸಂಪೂರ್ಣ ಕಾರ್ಯಕ್ರಮವನ್ನೇ ಹಾಳು ಮಾಡಿಬಿಡುತ್ತದೆ. ಮದುವೆ ಸೀರೆ, ಹುಡುಗನ ವರ್ತನೆ, ಮದುವೆಯ ಊಟದ ಬಗ್ಗೆ ವಧು-ವರನ ಕಡೆಯವರು ಜಗಳವಾಡಿರುವ ಘಟನೆಗಳು ಅದೆಷ್ಟೋ ಬಾರಿ ನಡೆದಿವೆ. ಇಂಥಾ ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೆ ಇರ್ತವೆ. ಸದ್ಯ ವಧು ಎಲ್ಲಾ ಅತಿಥಿಗಳ ಮುಂದೆ ವರನಿಗೆ ಕಪಾಳಮೋಕ್ಷ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರಮಾಲಾ ಸಮಾರಂಭದ ನಂತರ ವಧು-ವರರು ವೇದಿಕೆಯಲ್ಲಿ ನಿಂತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ನಂತರ ವಧು ರಸಗುಲ್ಲಾವನ್ನು ತೆಗೆದುಕೊಂಡು ವರನಿಗೆ ತಿನ್ನಿಸಲು ಪ್ರಯತ್ನಿಸುತ್ತಾಳೆ. ಆದರೆ ವರನು ವಧುವನ್ನು ಕೀಟಲೆ ಮಾಡುತ್ತಾನೆ. ಮತ್ತು ವಧು ರಸಗುಲ್ಲಾವನ್ನು ಬಾಯಿಗಿಡಲು ಬಿಡದೆ ಆಚೀಚೆ ಚಲಿಸುತ್ತಾನೆ. ಇದರಿಂದ ವಧು ಕೋಪಗೊಳ್ಳುತ್ತಾಳೆ ಮತ್ತು ಬಲವಂತವಾಗಿ ರಸಗುಲ್ಲಾವನ್ನು ವರನ ಬಾಯಿಗೆ ಹಾಕುತ್ತಾಳೆ.

Tap to resize

Latest Videos

ಅನ್ನ ತಿಂದು ಮುಗಿಸುವ ಮುನ್ನ ಪಾಯಸ ಬಡಿಸಿದ್ದಕ್ಕೆ ಸಿಟ್ಟು, ರಣಾಂಗಣವಾಯ್ತು ಮದ್ವೆ ಮನೆ!

ಇದಾದ ನಂತರವೂ ವಧುವಿನ ಕೋಪ ತಣ್ಣಗಾಗದೆ ವರನ ಮುಖಕ್ಕೆ ಕಪಾಳಮೋಕ್ಷ ಮಾಡಿದ್ದಾಳೆ. ಇದು ವರ ಮತ್ತು ಇತರರನ್ನು ಬೆಚ್ಚಿ ಬೀಳಿಸಿದೆ. ಇಂಟರ್‌ನೆಟ್‌ನಲ್ಲಿ ವೀಡಿಯೋ ವೈರಲ್ ಆಗಿದ್ದು, 56 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಜೊತೆಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು, 'ವಧು ಶಿಕ್ಷಕಿ ಎಂದು ನಾನು ಭಾವಿಸುತ್ತೇನೆ' ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, 'ಏನಾದರೂ ತಿನ್ನಿರಿ. ರಸಗುಲ್ಲಾ ತಿನ್ನಲು ಆಗದಿದ್ದರೆ ಚಪ್ಪಲಿ ಏಟು ತಿನ್ನಿ' ಎಂದು ತಮಾಷೆ ಮಾಡಿದ್ದಾರೆ. 'ಪುರುಷ ಿದೇ ರೀತಿ ಮಾಡಿದ್ದರೆ, ಸ್ತ್ರೀವಾದಿಗಳು ಕಿರುಚಿ ರಂಪಾಟ ಮಾಡುತ್ತಿದ್ದರು' ಎಂದು ಮೂರನೇ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಓ ದೇವರೇ, ದಯವಿಟ್ಟು ಅಂತಹ ಹೆಂಡತಿಯನ್ನು ನನ್ನ ಸ್ನೇಹಿತರಿಗೆ ಕೊಡು' ಎಂದು ಕಾಮೆಂಟ್ ಮಾಡಿದ್ದಾರೆ.

ಬಿಸಿ ಪೂರಿ ಕೊಡದ್ದಕ್ಕೆ ಸಿಟ್ಟು, ಮದುವೆ ಮನೆಯಲ್ಲಿ ಅತಿಥಿಗಳ ರಂಪಾಟ!

click me!