ಕೇರಳದಲ್ಲಿ ಅಪಘಾತದಿಂದ ಸಾವನ್ನಪ್ಪಿದ ಪುತ್ರನ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಪಡೆಯಲು ಕುಟುಂಬ ನಿರಾಕರಿಸಿದ ಬಳಿಕ, ಆತನ ಸಲಿಂಗಿ ಲಿವ್ ಇನ್ ಪಾರ್ಟ್ನರ್, ಆತದ ದೇಹವನ್ನು ತನಗೆ ಒಪ್ಪಿಸಲು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾನೆ.
ಸಲಿಂಗಿ ಸ್ನೇಹಿತನೊಬ್ಬ ತನ್ನ ಸಂಗಾತಿಯ ಪಾರ್ಥಿವ ಶರೀರವನ್ನು ಸ್ವೀಕರಿಸಲು ಅನುಮತಿ ಕೋರಿ ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದಾನೆ. ಅವನ ಮೃತ ಸಂಗಾತಿಯ ಕುಟುಂಬವು ವೈದ್ಯಕೀಯ ವೆಚ್ಚವನ್ನು ಭರಿಸಲು ಮತ್ತು ಕೊಚ್ಚಿಯ ಖಾಸಗಿ ಆಸ್ಪತ್ರೆಯಿಂದ ದೇಹವನ್ನು ಪಡೆಯಲು ನಿರಾಕರಿಸಿದ ನಂತರ ಈತ, ತಾನು ಅವನ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡುವಂತೆ ಕೋರಿದ್ದಾನೆ.
ಕೇರಳ ಹೈಕೋರ್ಟ್ ಗುರುವಾರ ಮಧ್ಯಾಹ್ನ ಈ ಪ್ರಕರಣದ ವಿಚಾರಣೆಗೆ ಸಿದ್ಧವಾಗಿದೆ ಮತ್ತು ಆ ದಿನ ಕುಟುಂಬದ ಸದಸ್ಯರ ಮುಂದೆ ಹಾಜರಾಗುವಂತೆ ವ್ಯಕ್ತಿಗೆ ಸೂಚಿಸಿದೆ.
ಅರ್ಜಿದಾರ ಜೆಬಿನ್ ತನ್ನ ಸಂಗಾತಿ ಮನು ಜೊತೆ ಕೊಚ್ಚಿಯಲ್ಲಿ ವಾಸಿಸುತ್ತಿದ್ದ. ಫೆಬ್ರವರಿ 2ರಂದು, ಮನು ಅವರ ನಿವಾಸದ ಟೆರೇಸ್‌ನಿಂದ ಬಿದ್ದ ನಂತರ ಗಂಭೀರ ಸ್ಥಿತಿಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಎರಡು ದಿನಗಳ ಕಾಲ ವೆಂಟಿಲೇಟರ್ ಬೆಂಬಲದಲ್ಲಿದ್ದ ನಂತರ, ಮನು ಫೆಬ್ರವರಿ 4ರ ರಾತ್ರಿ ನಿಧನನಾದ. ಮನು ದೇಹವು ಎರಡು ದಿನಗಳವರೆಗೆ ಹಕ್ಕು ಪಡೆಯದೆ ಆಸ್ಪತ್ರೆಯಲ್ಲಿಯೇ ಉಳಿಯಿತು. ಏಕೆಂದರೆ ಅವನ ಕುಟುಂಬವು ಅದನ್ನು ಸ್ವೀಕರಿಸಲು ನಿರಾಕರಿಸಿತು. ಮತ್ತು ಕಾನೂನು ಅವನ ಪಾಲುದಾರ ಜೆಬಿನ್ ಶವಕ್ಕೆ ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಲಿಲ್ಲ.
ಜೆಬಿನ್ ನಂತರ ತನ್ನ ದಿವಂಗತ ಸಂಗಾತಿಯ ದೇಹವನ್ನು ಪಡೆಯಲು ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ. ಹೈಕೋರ್ಟ್ ಕೂಡಲೇ ಅರ್ಜಿಯನ್ನು ಪರಿಶೀಲಿಸಿ ಖಾಸಗಿ ಆಸ್ಪತ್ರೆಗೆ ಇಮೇಲ್ ಮೂಲಕ ನೋಟಿಸ್ ಕಳುಹಿಸಿದೆ.
ಪ್ರೋಟೋಕಾಲ್ ಏನು?
ಫೆಬ್ರವರಿ 6ರಂದು ವಿಚಾರಣೆಯ ಸಂದರ್ಭದಲ್ಲಿ, ಹಕ್ಕು ಪಡೆಯದ ದೇಹಗಳಿಗೆ ಸರ್ಕಾರಿ ಪ್ರೋಟೋಕಾಲ್ ಬಗ್ಗೆ ವಿವರಣೆಯನ್ನು ಹೈಕೋರ್ಟ್ ಕೋರಿದೆ. ಪ್ರೋಟೋಕಾಲ್ ಪ್ರಕಾರ, ಜೈವಿಕ ಕುಟುಂಬದ ಸದಸ್ಯರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳು ದೇಹವನ್ನು ಪಡೆಯಲು ವಿಫಲವಾದಾಗ, ಅದನ್ನು ಸಾಮಾನ್ಯವಾಗಿ ವೈದ್ಯಕೀಯ ಸಂಶೋಧನೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಗುತ್ತದೆ.
ನನ್ನ ತಂಗಿಗೆ ಬ್ರೇಕಪ್ ಆಗಿದೆ, ಆಕೆಯೊಂದಿಗೆ ಮಲಗುವಂತೆ ಗೆಳೆಯನನ್ನು ಕೇಳಿದ ಗರ್ಲ್‌ಫ್ರೆಂಡ್!
ಜೆಬಿನ್ ಅವರನ್ನು ಪ್ರತಿನಿಧಿಸಿದ ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ವಕೀಲರಾದ ವಕೀಲೆ ಪದ್ಮಾ ಲಕ್ಷ್ಮಿ, 'ಇದು ವ್ಯಕ್ತಿಯ ಹಕ್ಕುಗಳಿಗೆ ಸಂಬಂಧಿಸಿದೆ ಮತ್ತು ಮನು ದೇಹವು ಸಾವಿನ ಬಳಿಕದ ಪ್ರತಿ ಧಾರ್ಮಿಕ ವಿಧಿಗಳನ್ನು ಸ್ವೀಕರಿಸುವ ಹಕ್ಕನ್ನು ಹೊಂದಿದೆ' ಎಂದು ವಾದಿಸಿದ್ದಾರೆ.