ಸದ್ಗುರು ಜಗ್ಗಿ ವಾಸುದೇವ್ ಅವರು ಸಮಾಜದ ಎಲ್ಲ ವಿಷಯಗಳ ಬಗೆಗೂ ವಿಶಿಷ್ಟ ಅನ್ನಿಸುವ ಅಭಿಪ್ರಾಯ ಹೊಂದಿರ್ತಾರೆ. ರೇಪ್‌ಗಳು ಯಾಕೆ ಸಂಭವಿಸ್ತಾವೆ ಅನ್ನೋದರ ಬಗ್ಗೆ ಅವರು ಏನ್ ಹೇಳ್ತಾರೆ ಇಲ್ಲಿ ಕೇಳಿ
ಸದ್ಗುರು ಹೇಳ್ತಾರೆ: ಅತ್ಯಾಚಾರಕ್ಕೆ ಲೈಂಗಿಕ ಪ್ರಚೋದನೆ ಇದ್ದರೂ ಅದು ಕೇವಲ ಸೆಕ್ಸ್ ಬಗ್ಗೆ ಮಾತ್ರ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿ ಪವರ್ ಬಗ್ಗೆ ಹಸಿವು ಕೂಡ ಇದೆ. ಈ ಪವರ್ ಅಥವಾ ಅಧಿಕಾರದ ದಾಹ ಹಲವು ವಿಷಯಗಳಿಂದ ಬರುತ್ತದೆ. ಸಮಾಜ ಮಾಡಿದ ಮೂಲಭೂತ ತಪ್ಪೆಂದರೆ, ಪುರುಷರ ಮನಸ್ಸಿನಲ್ಲಿ, ಹೆಣ್ಣು ಒಂದು ವಸ್ತು, ನೀವು ಹೊಂದಬಹುದಾದ ವಸ್ತು ಎಂಬ ಕಲ್ಪನೆಯನ್ನು ಬಿತ್ತಿರುವುದು. ಮದುವೆ ಮಾಡುವಾಗ ತಂದೆ ಅವಳನ್ನು 'ಕನ್ಯಾದಾನ ಮಾಡುತ್ತಾನೆ' ಮತ್ತು ಗಂಡ ಆಕೆಯನ್ನು ಕರೆದುಕೊಂಡು ಹೋಗುತ್ತಾನೆ. ಹೀಗೆ, ಎಲ್ಲೋ ನಮ್ಮ ಆಳವಾದ ಮಾನಸಿಕ ರಚನೆಯಲ್ಲಿ ಮಹಿಳೆ ಒಂದು ಸರಕು ಎಂಬ ಕಲ್ಪನೆ ಇದೆ. ಸರಕನ್ನು ನಾವು ಹೇಗೆ ಬೇಕಾದರೂ ಅನುಭವಿಸಬಹುದು ಎಂಬ ಭಾವನೆ ಸಣ್ಣಂದಿನಿಂದಲೇ ಹುಡುಗರ ಮನಸ್ಸಿನಲ್ಲಿ ಬಿತ್ತಲಾಗುತ್ತದೆ.
ಇನ್ನೂ ಒಂದು ಕಾರಣವಿದೆ. ಇದು ಏಕೆ ನಡೆಯುತ್ತಿದೆ ಎಂಬುದನ್ನು ನಾವು ನೋಡಬೇಕು. ಭಾರತದಲ್ಲಿ ಮಹಿಳೆಯರು ನಿಜವಾಗಿ ಬೀದಿಗೆ ಬರುತ್ತಿರುವುದು ಮತ್ತು ಪುರುಷರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದೇ ಇತ್ತೀಚೆಗೆ. ಪುರುಷರಿಗೆ ಇದು ಅಭ್ಯಾಸವಾಗಿಲ್ಲ. ಅಲ್ಲದೆ, ಲಕ್ಷಾಂತರ ಯುವಕರು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಅವರ ಹಳ್ಳಿಯಲ್ಲಿ, ಅವರ ಮಹಿಳೆಯ ಕಲ್ಪನೆ ಎಂದರೆ ಅವರ ತಾಯಿ, ಅಥವಾ ಅಜ್ಜಿ. ಈಗ ಅವರು ನಗರದಲ್ಲಿ ಬೀದಿಯಲ್ಲಿ ನಡೆಯುವ ಯುವತಿಯರನ್ನು ನೋಡುತ್ತಾರೆ. ಅವರಿಗೆ ಇದು ತುಂಬಾ ಹೊಸದು.
ಮನುಷ್ಯರಲ್ಲಿ ಲೈಂಗಿಕತೆ ಇರುತ್ತದೆ. ಹದಿನೈದು ಮತ್ತು ಇಪ್ಪತ್ತೈದು ವಯಸ್ಸಿನ ನಡುವೆ ಹಾರ್ಮೋನುಗಳ ಪ್ರಭಾವವು ಗರಿಷ್ಠವಾಗಿರುತ್ತದೆ. ಕೆಲವರು ತಮ್ಮ ಜೀವನದಲ್ಲಿ ಕ್ರೀಡೆ, ಕಲೆ, ಸಂಗೀತ, ಶಿಕ್ಷಣದಂತಹ ಕೆಲವು ಬುದ್ಧಿಶಕ್ತಿ ಮತ್ತು ಇತರ ಅಭಿವ್ಯಕ್ತಿಗಳ ಮಾರ್ಗಗಳೊಂದಿಗೆ ಶಿಸ್ತುಬದ್ಧರಾಗಿರುತ್ತಾರೆ. ನಮ್ಮನ್ನು ತೊಡಗಿಸಿಕೊಳ್ಳಲು ಹಲವು ವಿಷಯಗಳಿವೆ. ನಿಮ್ಮನ್ನು ತೊಡಗಿಸಿಕೊಳ್ಳಲು ಏನೂ ಇಲ್ಲದಿದ್ದರೆ, ನಿಮ್ಮ ಹಾರ್ಮೋನುಗಳು ನಿಮ್ಮೊಳಗೆ ಸಿಡಿಯುತ್ತಿದ್ದರೆ, ನಿಮ್ಮ ಹಳ್ಳಿಯಿಂದ ನೀವು ನಗರಕ್ಕೆ ಬಂದಿದ್ದರೆ ಮತ್ತು ಇದ್ದಕ್ಕಿದ್ದಂತೆ ನೀವು ಚಿಕ್ಕ ಹುಡುಗಿಯರನ್ನು ನೋಡುತ್ತಿದ್ದರೆ... ನೀವು ಚಲನಚಿತ್ರಗಳಲ್ಲಿ ನೋಡಿದ ರೀತಿಯ ಜನರು ಬೀದಿಯಲ್ಲಿ ನಡೆಯುತ್ತಿದ್ದಾರೆ! ಆಗ ವ್ಯಕ್ತಿ ಹುಚ್ಚನಾಗುತ್ತಾನೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನೀವು ಎಲ್ಲೆಡೆ ಮದ್ಯಪಾನವನ್ನು ಪ್ರೋತ್ಸಾಹಿಸುತ್ತಿದ್ದೀರಿ. ಎರಡು ಹನಿ ಆಲ್ಕೋಹಾಲ್ ಅವನೊಳಗೆ ಬಿದ್ದ ಕ್ಷಣ, ಅವನು ಸಂಪೂರ್ಣವಾಗಿ ಮೃಗವಾಗುತ್ತಾನೆ. ಯಾರೂ ನೋಡುತ್ತಿಲ್ಲ ಎಂದು ಖಚಿತವಾದರೆ ಅವನು ಏನೂ ಮಾಡಬಹುದು.
ಟೊಪ್ಪಿಗೆ, ಪೇಟವಿಲ್ಲದ ಸದ್ಗುರು ವಾಸುದೇವ್ ನೋಡಿದ್ದೀರಾ? ಇಲ್ಲಿವೆ ನೋಡಿ ಸರಳತೆಯ ಫೊಟೋಗಳು
ಕೆಲಸಕ್ಕಾಗಿ ನಗರಕ್ಕೆ ಬರುವ ಯುವಕರು ಹತ್ತು ಹುಡುಗರೊಂದಿಗೆ ಒಂದೇ ಕೋಣೆಯಲ್ಲಿ ಮಲಗುತ್ತಾನೆ. ಕಸ ಮತ್ತು ಅಮಾನವೀಯ ವಾತಾವರಣದ ನಡುವೆ ಹಗಲು ರಾತ್ರಿ ಕೆಲಸ ಮಾಡುತ್ತಾನೆ. ಅದೊಂದು ಕಾನ್ಸಂಟ್ರೇಶನ್ ಕ್ಯಾಂಪ್ ಇದ್ದಂತೆ. ಅವರಲ್ಲಿ ಹೆಚ್ಚಿನವರು ಒತ್ತಡದಲ್ಲಿರುತ್ತಾರೆ. ಅವನ ಹಾರ್ಮೋನುಗಳಿಗೆ, ಅವನ ದೇಹಕ್ಕೆ, ಅವನ ಭಾವನೆಗಳಿಗೆ, ಅವನ ಜೀವನಕ್ಕೆ ಯಾವುದೇ ರಿಲೀಫ್ ಇಲ್ಲ. “ನೀನು ಏನು ಮಾಡುತ್ತೀಯ? ನಿನ್ನ ಜೀವನ ಹೇಗೆ?” ಎಂದು ಕೇಳುವವವರು ಯಾರೂ ಇಲ್ಲ. ಸಂಜೆ ಸ್ನೇಹಿತರೊಂದಿಗೆ ಸೇರಿ ಕುಡಿದಾಗ ಆತ ವೈಲ್ಡ್ ಆಗುತ್ತಾನೆ. ಜನ ಇತ್ತೀಚೆಗೆ ಅಶ್ಲೀಲ ವೀಡಿಯೊಗಳನ್ನು, ಪೋರ್ನೋಗ್ರಫಿಯನ್ನು ನೋಡುವುದು ಸಹ ಹೆಚ್ಚಾಗಿದೆ. ಇದು ತಾನೂ ಮಾಡಬೇಕಾದ ಸಾಹಸದ ಕೆಲಸ ಎಂದು ಅವನು ಭಾವಿಸುತ್ತಾನೆ.
ನಾವು ಧರಿಸುವ ಬಟ್ಟೆಯಲ್ಲಿದೆ ನಮ್ಮ ಆರೋಗ್ಯ, ಸದ್ಗುರು ಹೇಳುವುದ ಕೇಳಿ
ಹಾಗಾದರೆ ಪರಿಹಾರವೇನು? ನೀವು ಅವರಿಗೆ ಆಧ್ಯಾತ್ಮ ಕಲಿಸುತ್ತಿದ್ದೀರಾ? ಯೋಗ ಅಥವಾ ಸಾಧನೆಯನ್ನು ಕಲಿಸುತ್ತಿದ್ದೀರಾ? ಇಲ್ಲ, ನೀವು ಅವರಿಗೆ ಹಾಗೆ ಏನನ್ನೂ ಕಲಿಸಿಲ್ಲ. ಅವನು ಹಳ್ಳಿಯಲ್ಲಿದ್ದರೆ, ಹದಿನೆಂಟು, ಹತ್ತೊಂಬತ್ತರ ಹೊತ್ತಿಗೆ ಅವನು ಯಾರನ್ನಾದರೂ ಮದುವೆಯಾಗುತ್ತಾನೆ. ಅವನ ಲೈಂಗಿಕತೆಗೆ ಹೊರದಾರಿ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ. ಇದು ಮನುಷ್ಯನ ಸ್ವಭಾವ, ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದೆಲ್ಲ ಚರ್ಚೆಯಾಗಬೇಕಾದ ವಿಷಯ. ಶಿಕ್ಷಣ ಸಿಗಬೇಕು, ಶಿಕ್ಷೆಯಿಂದ ಪ್ರಯೋಜನವಿಲ್ಲ.