Asianet Suvarna News Asianet Suvarna News

ಇನ್ನೂ ಎಷ್ಟು ಅಲೀಬೇಕು ಸ್ವಾಮಿ?; ಸರ್ಕಾರದ ಸೌಲಭ್ಯ ಪಡೆಯಲು ದಿವ್ಯಾಂಗರಿಗೆ ಅಧಿಕಾರಿಗಳೇ ಬೇಲಿ

ದಿವ್ಯಾಂಗರು ತಮ್ಮ ದೈಹಿಕ ಸಮಸ್ಯೆಯ ಹೊರತಾಗಿಯೂ ಎಲ್ಲರಂತೆ ಬಾಳಲು ಅವಕಾಶ ಕಲ್ಪಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳು ತಂದಿವೆ. ಆದರೆ ಇವುಗಳು ಅವರನ್ನು ತಲುಪುವ ಹೊತ್ತಿಗೆ- ಇದು ಸಹಾಯವಾಗಲೆಂದು ಮಾಡಿರುವ ಯೋಜನೆಯೋ ಅಥವಾ ತಮ್ಮನ್ನು ಅಣಕಿಸಲು ಮಾಡಿರುವುದೋ ಎಂಬ ಅನುಮಾನ ಹುಟ್ಟಿಸುವಷ್ಟು ರೇಜಿಗೆ ತರುತ್ತದೆ ಅಧಿಕಾರಿಗಳ ವರ್ತನೆ.
ಸರ್ಕಾರದಿಂದ ಸಿಗುವ ವಿಶಿಷ್ಠ ಅಂಗವೈಕಲ್ಯ ಗುರುತಿನ ಚೀಟಿ ಪಡೆಯಲು ತಮಗಾಗುತ್ತಿರುವ ಪಡಿಪಾಟಲ ಬಗ್ಗೆ ತೇಜಸ್ವಿನಿ ಹೆಗ್ಡೆ ಎಂಬುವವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ ಅವರೊಬ್ಬರದಲ್ಲ, ಎಲ್ಲ ದಿವ್ಯಾಂಗರ ಸೌಲಭ್ಯಗಳು ಅವರನ್ನು ಸುಲಭವಾಗಿ ತಲುಪುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಮುತುವರ್ಜಿ ವಹಿಸಬೇಕಿದೆ ಎಂಬುದೇ ಅವರ ಅಹವಾಲು.
 

physically challenged persons fight to get government facilities skr
Author
First Published Feb 8, 2024, 10:50 AM IST

ತೇಜಸ್ವಿನಿ ಹೆಗ್ಡೆ

ದಯವಿಟ್ಟು ಗಮನಿಸಿ ಮತ್ತು ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಯುಳ್ಳವರು ಹಂಚಿಕೊಳ್ಳಬೇಕಾಗಿ ವಿನಂತಿ:
Physically handicapped ಆದವವರಿಗೆ ಸಾಮಾನ್ಯವಾಗಿ  Insurance company ಪಾಲಿಸಿ ಕೊಡಲು ಹಿಂದೇಟು ಹಾಕುತ್ತದೆ. ನನಗಂತೂ ಈ ಅನುಭವವಾಗಿದೆ. ನನ್ನ ದೈಹಿಕ ನೂನ್ಯತೆಯ ಪ್ರಮಾಣದ ಮೇರೆಗೆ ಇನ್ಶ್ಯುರೆನ್ಸ್ ಮಾಡಿಸಲು ಎರಡು ಕಡೆ ಈಗಾಗಲೇ ಹಿಂದೇಟು ಹಾಕಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ UDID (Unique disability ID) card ಮಾಡಿಸಲು ಹೊರೆಟೆವು. ಆನ್ಲೈನ್ ಅಪ್ಲಿಕೇಶನ್ ಹಾಕಿ ವರುಷವಾಗುತ್ತ ಬಂದರೂ ಅಸೆಸ್ಮೆಂಟಿಗೆ ಡೇಟ್ ಫಿಕ್ಸ್ ಮಾಡಲಿಲ್ಲ. ನಾವೇ NIMHANS ಆಸ್ಪತ್ರೆಗೆ ಕಾಲ್ ಮಾಡಿದೆವು (ಜಯನಗರದಲ್ಲಿ ಕಾರಿನಿಂದ ಇಳಿದು ವ್ಹೀಲ್‌ಚೇರಿನಲ್ಲಿ ಹೋಗಲೂ ಅಸಾಧ್ಯ, ಆನೇಕಲ್ ಬಹಳ ದೂರ, ಇದ್ದುದರಲ್ಲಿ ನಮಗೆ ನಿಮ್ಹಾನ್ಸ್ ಸ್ವಲ್ಪ ಹತ್ತಿರವಿದೆ ಎಂದು). ಅಲ್ಲಿ ಅವರು ನಾನೇ ಖುದ್ದು ಬಂದು ಮೊದಲು ಮತ್ತೊಮ್ಮೆ ರೆಜಿಸ್ಟರ್ ಆಗಬೇಕು. ಖುದ್ದು ನಾನೇ ಬರಬೇಕು, ಅದೇ ದಿವಸ ಅಸೆಸ್ಮೆಂಟ್ ಆಗುತ್ತೋ ಬಿಡುತ್ತೋ ಹೇಳಲಾಗದು, ಅದು ವೈದ್ಯರ ಮೇಲೆ ಅವಲಂಬಿತ. ಹೀಗಾಗಿ ಕಾದು ಕೂತು ಅವರು ಕೊಟ್ಟ ಹೊಸ ಡೇಟಿಗೆ ಮತ್ತೊಮ್ಮೆ ಬರಬೇಕು, ಅದೂ ಎಂದು ಸಿಗುವುದೋ ಗೊತ್ತಿಲ್ಲ ಅದಕ್ಕಾಗಿ ಕಾಯಬೇಕು ಎಂದೆಲ್ಲ ಹೇಳಿದರು. 

ಲೋಕಸಭೆ ಚುನಾವಣೆ: ಸಂಸದ ಡಿ.ಕೆ.ಸುರೇಶ್ ಮಣಿಸಲು ಹೃದ್ರೋಗ ತಜ್ಞ ಡಾ.ಸಿ ...

ಈಗಾಗಲೇ ಅಪ್ಲಿಕೇಶನ್ ಹಾಕಿ ಆಗಿದೆ ಎಂದರೂ ಇದು ಪ್ರೊಸಿಜರ್, ಹೀಗೇ ಆಗಬೇಕು ಅನ್ನುತ್ತಿದ್ದಾರೆ. ಹೀಗಾಗಿ ನಾನು ಮತ್ತು ನನ್ನಂಥವರು ಈಗ ಆನ್ಲೈನ್ ಅಪ್ಲೈ ಮಾಡಿದ ಮೇಲೂ ಸರ್ಕಾರಿ ಆಸ್ಪತ್ರೆಗೆ ಅದೂ ಇಂಥ ಅಸೆಸ್ಮೆಂಟ್ ಮಾಡುವಂಥಲ್ಲಿಗೇ ಖುದ್ದು ಹೋಗಿ ರೆಜಿಸ್ಟರ್ ಒಮ್ಮೆ ಮಾಡ್ಕೊಳ್ಬೇಕು. ಅದೇ ದಿವಸ ಅಸೆಸ್ಮೆಂಟಿಗೆ ಡಾಕ್ಟರ್ ಸಿಗುವುದು ಸಾಧ್ಯವಿಲ್ಲದಿರುವುದರಿಂದ, ಅವರು ಕೊಟ್ಟ ತಾರೀಕಿಗೆ ಹೋಗಬೇಕು ಅದಕ್ಕೂ ಕಾಯಬೇಕು. ಅಲ್ಲಿಗೆ ಹೋದ ಮೇಲೆ ಕೆಲಸ ಅದೇ ದಿವಸ ಆಗುವ ಭರವಸೆಯಿಲ್ಲ. ಅವರು ಮತ್ತೊಮ್ಮೆ ಬರಲು ಹೇಳಬಹುದು. ಹಾಗಾಗಿ, ಮತ್ತೆ ಮತ್ತೆ ಖುದ್ದು ಹೋಗಿ ಗಂಟೆಗಟ್ಟಲೆ ನಾನು ಕಾಯಬೇಕು! 
ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಗಾಗಿ District disabled welfare office Bengaluru Urban - ಇಲ್ಲಿಗೆ ಸಂಪರ್ಕಿಸಿದಾಗ ಅಲ್ಲಿದ್ದ ಓರ್ವ ಮಹಾಶಯ ನನ್ನ ಪತಿಯ ಬಳಿ , ನನ್ನೊಂದಿಗೆ ಅಲ್ಲಿಯವರು ಅದೆಷ್ಟು ಒರಟಾಗಿ ಮಾತನಾಡಿದರೆಂದರೆ ಇವರ ಆಸ್ತಿಯಿಂದ ಪಾಲುಕೊಡುತ್ತಿರುವಂತಿತ್ತು ಅವರ ವರ್ತನೆ! 

ನಮಗೆ ಬಹಳ ಪರಿಚಯವಿರುವ ಹತ್ತಿರದ ಕ್ಲಿನಿಕ್ ಡಾಕ್ಟರ್ ಒಬ್ಬರನ್ನು ಸಂಪರ್ಕಿಸಿ ಇದೆಲ್ಲ ನಿಜವೇ, ಹೀಗೇ ಇದೆಯೇ ನಮ್ಮ ವ್ಯವಸ್ಥೆ ಎಂದು ವಿಚಾರಿಸಿದೆ. ಅವರು ದುರದೃಷ್ಟದಿಂದ ನಮ್ಮ ಸರ್ಕಾರಿ ಸಂಸ್ಥೆಗಳು ಅಂಗವಿಕಲರ ಸೌಲಭ್ಯಕ್ಕಿರುವ ವ್ಯವಸ್ಥೆಯನ್ನು ಬಹಳ ಒರಟಾಗಿಯೇ ನಡೆಸಿಕೊಳ್ಳುತ್ತಾರೆ, ಇದು ಹೀಗೇ ಬಹಳ ಓಡಾಟದ ಸಂಗತಿಯೇ ಎಂದು ವಿಷಾದ ವ್ಯಕ್ತಪಡಿಸದರು! 
ಅಂಗವಿಕಲರ ಸಂಕಷ್ಟಗಳಿಗಾಗಿ, ಸೌಲಭ್ಯಕ್ಕಾಗಿ ಅಷ್ಟು ಕೋಟಿ ಬಿಡುಗಡೆ ಮಾಡಿದ್ದೇವೆ, ಇಷ್ಟು ವ್ಯವಸ್ಥೆ ಕಲ್ಪಿಸಲಾಗಿದೆ ಎಂದೆಲ್ಲ  ಘೋಷಿಸುವ ಸರ್ಕಾರಗಳು, ವಾಸ್ತವದಲ್ಲಿ ನಿರ್ವಹಣೆಯನ್ನು ಇಷ್ಟು ನಿರ್ಲಕ್ಷ್ಯದಿಂದ insensitive ಆಗಿ ಯಾಕೆ ಕಾರ್ಯ ನಿರ್ವಹಿಸುತ್ತಿವೆ? 

ಕಾಂಗ್ರೆಸ್‌ ವೈಫಲ್ಯ ಮುಚ್ಚಿಡ್ಡಲು ದಿಲ್ಲಿಯಲ್ಲಿ ಪ್ರತಿಭಟನೆ: ಸಚಿವ ಪ್ ...
 

ಒಂದು ಸಲ ಹೊರಬೀಳಲೂ ಕಷ್ಟಪಡುವವರು, ಸರಿಯಾದ ವಾಹನ ಸೌಕರ್ಯವಿಲ್ಲದವರು, ಹಳ್ಳಿಯವರು ಏನು ಮಾಡಬೇಕು? ಅಷ್ಟು ದೂರ ಬಂದು ಬಹಳ ಹೊತ್ತು ಕಾಯಲು, ಮತ್ತೆ ಮತ್ತೆ ಅಲ್ಲಿಗೆ ಹೋಗಲು ಆಗದವರು, ಪಾಪದವರು ಏನು ಮಾಡಬೇಕು? ಇದಕ್ಕೆ ಬೇರೆ ವ್ಯವಸ್ಥೆ ಇದೆಯೇ? ಇನ್ಶುರೆನ್ಸ್ ಯಾಕೆ ದೈಹಿಕ ನೂನ್ಯತೆಯುಳ್ಳವರಿಗೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ? ಯಾವುದೂ ಅರ್ಥವಾಗುತ್ತಿಲ್ಲ. ಇದಕ್ಕೇನಾದರೂ ಬೇರೆ ವ್ಯವಸ್ಥೆಯಿದೆಯೇ ಎಂದು ತಿಳಿದವರು ಹೇಳಬೇಕಾಗಿ ವಿನಂತಿ. 

ನಿಜವಾಗಿಯೂ ದೈಹಿಕ ಸಮಸ್ಯೆಯಿರುವವರಿಗೆ ಸೌಲಭ್ಯ ನೀಡಲು ಇರುವ ವ್ಯವಸ್ಥೆಯೊಂದು, ಅಪ್ಪಿತಪ್ಪಿ ಸುಳ್ಳು ಕಾರ್ಡ್ ಮಾಡಿಸುವವರಿಗೆ ಹೋಗಬಾರದು ಎಂಬ ನಿಟ್ಟಿನಲ್ಲಿ ಮಾಡಿರುವ ಈ ರೂಲ್ಸುಗಳು ಇಷ್ಟು ರೂಕ್ಷವಾಗಿ ವರ್ತಿಸುವುದು, ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ಈ ಶತಮಾನದಲ್ಲೂ ವಿಫಲವಾಗುತ್ತಿರುವುದು ನಿಜಕ್ಕೂ ಖೇದನೀಯ. ಇನ್ನೂ ಅದೆಷ್ಟು ಶತಮಾನಗಳು ಬೇಕೋ ನಮ್ಮ ದೇಶದಲ್ಲಿ ಅಂಗನೂನ್ಯತೆಯುಳ್ಳವರು ತಮ್ಮ ಹಕ್ಕನ್ನು ಪಡೆಯಲು, ಇತರರಂತೇ ಎಲ್ಲ ರೀತಿಯಲ್ಲೂ ಬದುಕಲು, ವ್ಯವಹರಿಸಲು, handicapped friendly ಸಮಾಜವನ್ನು ಕಲ್ಪಿಸಲು!

Latest Videos
Follow Us:
Download App:
  • android
  • ios