ಶೇ.99 ಲವ್ ಮ್ಯಾರೇಜ್‌ಗಳೇಕೆ ಹೆಚ್ಚು ಫೇಲ್ ಆಗುತ್ತವೆ?

By Suvarna News  |  First Published Jul 9, 2023, 5:38 PM IST

ಮದುವೆ ಎಂಬುವುದು ಒಂದು ಲಾಟರಿ ಇದ್ದ ಹಾಗೆ. ಹೊಡದೆರೆ ಹೊಡೀತು, ಇಲ್ಲವೆಂದರೆ ಇಲ್ಲ. ಆದರೂ ಲವ್ ಮ್ಯಾರೇಜ್ ಬಗ್ಗೆ ಚರ್ಚೆಯಾಗೋದು ಹೆಚ್ಚು.


ಯಶಸ್ವಿ ದಾಂಪತ್ಯಕ್ಕೆ ಗಂಡ-ಹೆಂಡತಿಯ ಪರಿಪಕ್ವ ಮನಸ್ಸು ಕಾರಣವಾದರೆ, ವಿಫಲ ದಾಂಪತ್ಯಕ್ಕೆ ನೂರಾರು ಕಾರಣಗಳಿವೆ. 'There is no such things in the world such as perfect spouse and perfect married life' ಅನ್ನೋ ಮಾತಿದ್ದರೂ, ದಾಂಪತ್ಯದಲ್ಲಿ ಬರೀ ಜಗಳಗಳೇ ಆಗುತ್ತಿದ್ದರೆ ಮುಂದುವರಿಸೋದು ಕಷ್ಟ ಬಿಡಿ. 

ಈಗೀಗಂತೂ ಲವ್ ಮ್ಯಾರೇಜ್‌ಗಳು ಹೆಚ್ಚುತ್ತಿವೆ. ಎಲ್ಲಿಯೋ ಹುಡುಗನಿಗೆ, ಇನ್ನೆಲ್ಲಿಯದ್ದೋ ಹುಡುಗಿ ಬೆಂಗಳೂರನಂಥ ಮಹಾನಗರಕ್ಕೆ ಬಂದು, ಕೆಲಸ ಶುರು ಮಾಡಿದಾಗ ಅಲ್ಲಿಯೇ ಪ್ರೇಮ ಆರಂಭವಾಗಿರುತ್ತೆ. ವಸುಧೈವ ಕುಟುಂಬಕಂ ಅನ್ನೋ ಹಾಗೆ ಮನೆಯವರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರೂ, ನಂತರ ತಣ್ಣಗಾಗಿ ಮದುವೆ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಮಲೆನಾಡಿನ ಕೊಂಪೆಯೊಂದರ ಹುಡುಗಿ, ಅಮೆರಿಕದ ವರನನ್ನೂ ವರಿಸೋ ಕಾಲ ಬಂದಿದೆ. 

Tap to resize

Latest Videos

ದಾಂಪತ್ಯದಲ್ಲಿ ಇದಮಿತ್ಥಂ ಅನ್ನೋದು ಇಲ್ಲ ಬಿಡಿ. ಕೆಲ ಜೋಡಿಗಳು ಯಾವುದೇ ರಗಳೆ ತಾಪತ್ರಯವಿಲ್ಲದೇ ಬದುಕು ಸವೆಸುತ್ತಾರೆ. ಮತ್ತೆ ಕೆಲವರ ಜಗಳ ಉಂಡು ಮಲಗಿ, ಎದ್ದರೂ ಮುಗಿಯುವುದಿಲ್ಲ. ಕೊನೆಯಾಗೋದು ಡಿವೋರ್ಸ್ ಆದಾಗಲೇ. ಏನಾದರೂ ಆಗಲಿ, ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ನಮ್ಮಲ್ಲಿ ಶೇ.99ರಷ್ಟು ಪ್ರೇಮ ವಿವಾಹಗಳು (Love Marriage) ಫೇಲ್ ಆಗೋದೇಕೆ ಎಂಬ ಪ್ರಶ್ನೆ ಕೇಳಿದ್ದು, ತರಹೇವಾರಿ ಉತ್ತರಗಳು ಕಮೆಂಟ್ ಬಾಕ್ಸಲ್ಲಿ ಬಂದು ಬೀಳುತ್ತಿವೆ. ಬಹುತೇಕರ ಶೇ.99 ಅನ್ನೋ ಸಮೀಕ್ಷೆಯೇ ತಪ್ಪು. ಹಾಗೆ ಕೇಳಬೇಡಿ ಅಂತಾನೂ ಹೇಳಿದ್ದಾರೆ ಬಿಡಿ.  

ಹೈಸ್ಕೂಲಲ್ಲಿ ಪ್ರೀತಿಸಿದ್ದ ಹುಡುಗಿಗೆ 63 ವರ್ಷದ ನಂತ್ರ ಪ್ರಪೋಸ್ ಮಾಡಿದ ಅಜ್ಜ!

ಇಗೋದಿಂದ ಇತಿಶ್ರೀ ಹಾಡುತ್ತೆ ದಾಂಪತ್ಯ:
ಯಾವುದೇ ಸಂಬಂಧವಾಗಲಿ ಮುರಿದು ಬೀಳುವುದು ಅಹಂಕಾರದಿಂದ. ಎಲ್ಲರೂ ಇದನ್ನು ಒಪ್ಪಬೇಕು. ಇದು ಲವ್ ಮ್ಯಾರೇಜ್ ಆಗಿರಲಿ, ಅರೇಂಜ್ಡ್ ಮ್ಯಾರೇಜ್‌ ಆಗಲಿ. ಇಗೋ ಯಾವಾಗ ನುಸುಳುತ್ತೋ ಸಂಬಂಧ ಖತಂ ಆಗೋದು ಗ್ಯಾರಂಟಿ. ಹಾಗಾಗಿ ಇಗೋ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಹಣಕಾಸಿನ ವಿಚಾರವೆಂಬ ಕಾರಣ ಕೊಟ್ಟಿದ್ದರೆ, ಮತ್ತೆ ಕೆಲವರು ಫೋನ್ ಹಾಗೂ ಲವರ್ ಹಳೆಯದು ಆಗುತ್ತಿದ್ದಂತೆ ಬೋರ್ ಬರೋದು ಕಾಮನ್ ಎಂಬ ಫನ್ನಿ ಉತ್ತರ ಕೊಟ್ಟಿದ್ದಾರೆ. ಫನ್ನಿ ಅನಿಸಿದರೂ, ಇತು ಸತ್ಯವೂ ಹೌದು ಎನ್ನುವಂತೆ ಹಲವರು ಈ ಉತ್ತರಕ್ಕೆ ಬಹುಪರಾಕ್ ಹೇಳಿದ್ದಾರೆ ಬಿಡಿ. ಅಷ್ಟೇ ಅಲ್ಲ ಅರೇಂಜ್ಡ್ ಮ್ಯಾರೇಜ್ ಅಂದ ಕೂಡಲೇ ಸಕ್ಸಸ್ ಎನ್ನಲು ಹೇಗೆ ಸಾಧ್ಯ ಎಂಬ ವಾದ-ವಿವಾದಗಳೂ ಆಗಿವೆ ಈ ಪೋಸ್ಟಿಗೆ. 

ಭವಿಷ್ಯದ ಅರಿವು  ಇಲ್ಲದೇ ಮದ್ವೆಯಾಗುತ್ತಾರೆ. ಆಮೇಲೆ ಎಲ್ಲವೂ ಅಂದುಕೊಂಡಂತೆ ನಡೆಯದೇ ಹೋದರೆ ಬದುಕು ಆಯೋಮಯವಾಗುತ್ತದೆ. ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್ ಮಾಡೋದು ಗೊತ್ತಿಲ್ಲದೇ ಬಹುತೇಕ ಮದುವೆಗಳು ವಿಫಲವಾಗುತ್ತವೆ. ಅಲ್ಲದೇ ಸೂಕ್ತ ದಾರಿಯಲ್ಲಿ ನಡೆಯುವಂತೆ ಗೈಡ್ ಮಾಡೋರು ಯಾರೂ ಇಲ್ಲದೆಯೂ ಜೀವನ ಬರ್ಬಾದ್ ಆಗುತ್ತೆ, ಅನ್ನೋದು ಇನ್ನು ಹಲವರ ಅಂಬೋಣ. 

ಒಟ್ಟಿನಲ್ಲಿ ಲವ್ ಮ್ಯಾರೇಜ್ ಶೇ.99ರಷ್ಟು ವಿಫಲವಾಗೋಲ್ಲ. ಮನೆಯವರ ಒಪ್ಪಿಗೆ ಪಡೆದು, ಅವರ ಮಾರ್ಗದರ್ಶನದಲ್ಲಿಯೇ ಜೀವನ ನಡೆಸುವ ದಂಪತಿಗಳಲ್ಲಿ ಸೃಷ್ಟಿಯಾಗೋ ಸಮಸ್ಯೆಗೆ ಪರಿಹಾರವನ್ನೂ ಕಂಡು ಕೊಳ್ಳುತ್ತಾರೆ. ಅಲ್ಲದೇ ತಾವೇ ಹೊಣೆ ಹೊತ್ತು ವರಿಸಿದ ಹುಡುಗ, ಹುಡುಗಿಯನ್ನು ಹೇಗೆ ಮ್ಯಾನೇಜ್ ಮಾಡಬಹುದು ಎಂಬ ಅರಿವೂ ವಯಸ್ಕರಲ್ಲಿ ಇರೋದ್ರಿಂದ ಲವ್ ಮ್ಯಾರೇಜ್ ಸಹ ಯಶಸ್ವಿಯಾಗುತ್ತೆ ಎನ್ನುವುದೂ ಅಷ್ಟೇ ಸತ್ಯ. 

ಪ್ರಬುದ್ಧತೆ, ಒಬ್ಬರಿಗೊಬ್ಬರು ಹೊಂದಿ ಕೊಂಡು ಹೋಗುವ ಸ್ವಭಾವ, ಅರಿಷಡ್ವರ್ಗಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಮನಸ್ಸು ಯಾರಿಗಿದ್ದರೂ ಜೀವನದಲ್ಲಿ ಯಶಸ್ಸು ತಾನಾಗೇ ಬೆನ್ನಟ್ಟಿ ಬರುತ್ತದೆ ಎನ್ನುವುದರಲ್ಲೂ ಅನುಮಾನವಿಲ್ಲ. ಅದು ಬಿಟ್ಟು ಪ್ರತಿ ತಪ್ಪಿಗೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದರೆ ಬದುಕು ವಿನಾಶವಾಗದೇ ಮತ್ತೇನು? 

ಎರಡು ಮಕ್ಕಳ ತಾಯಿಗೆ ಮೂರು ಮಕ್ಕಳ ತಂದೆ ಮೇಲೆ ಪ್ರೀತಿ! ಪತಿಗೆ ಗೊತ್ತಾದ್ಮೇಲೆ?

ಹೋಗಲಿ, ಲವ್ ಮ್ಯಾರೇಜ್ ಫೇಲ್ ಆಗೋದು ಹೌದಾ? ನಿಮ್ಮ ಅಭಿಪ್ರಾಯವೇನು?

click me!