ಸುಂದರಿಯ ಪ್ರೀತಿಯಲ್ಲಿ ಬಿದ್ದ ಕ್ರಿಕೆಟರ್, ಮುಂಬೈ ಹುಡುಗಿ ಜೊತೆ ‘ಸೀಕ್ರೆಟ್’ ಡೇಟಿಂಗ್ ಮಾಡ್ತಿದ್ದಾರಾ RCB ಸ್ಟಾರ್‌?

Published : Jun 22, 2026, 02:32 PM IST
ankita patel jacob bethell

ಸಾರಾಂಶ

ಇಂಗ್ಲೆಂಡ್ ಕ್ರಿಕೆಟಿಗ ಜೇಕಬ್ ಬೆಥೆಲ್ ಅವರ ವೈಯಕ್ತಿಕ ಜೀವನವು ವೈರಲ್ ಫೋಟೋವೊಂದರಿಂದ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಮೂಲದ ಯುವತಿಯೊಂದಿಗೆ ಅವರು ಪ್ರೀತಿಯಲ್ಲಿದ್ದಾರೆ ಎನ್ನಲಾಗಿದ್ದು, ಆ ಯುವತಿ ಮೇಕಪ್ ಆರ್ಟಿಸ್ಟ್ ಅಂಕಿತಾ ಪಟೇಲ್ ಅಥವಾ ನಟಿ ಆಧ್ಯಾ ಆನಂದ್ ಇರಬಹುದೆಂಬ ಊಹಾಪೋಹಗಳಿವೆ.

ಲಂಡನ್ (ಜೂ.22): ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಮತ್ತು ಭರವಸೆಯ ಆಟಗಾರ ಜೇಕಬ್ ಬೆಥೆಲ್ (Jacob Bethell) ಈಗ ತಮ್ಮ ಆಟಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಜೇಕಬ್ ಅವರು ಭಾರತೀಯ ಮೂಲದ ಯುವತಿಯೊಬ್ಬರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತಾದ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ಹುಡುಗಿಯೊಬ್ಬಳ ಜೊತೆಗಿರುವ ಅವರ ಆಪ್ತವಾದ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಯಾರ ಆ ಪ್ರೀತಿಯ ಸುಂದರಿ?

ವೈರಲ್ ಆಗಿರುವ ಫೋಟೋದಲ್ಲಿ ಕ್ರಿಕೆಟಿಗ ಜೇಕಬ್ ಬೆಥೆಲ್ ಅವರು ಯುವತಿಯೊಬ್ಬಳ ಹೆಗಲ ಮೇಲೆ ಕೈಹಾಕಿ, ಅತ್ಯಂತ ರೋಮ್ಯಾಂಟಿಕ್ ಶೈಲಿಯಲ್ಲಿ ಪೋಸ್ ನೀಡಿದ್ದಾರೆ. ಆದರೆ, ಆ ಫೋಟೋದಲ್ಲಿ ಹುಡುಗಿಯ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಹೀಗಾಗಿ ಜೇಕಬ್ ಅವರ ಕೈ ಹಿಡಿದಿರುವ ಆ ಮಿಸ್ಟರಿ ಗರ್ಲ್ ಯಾರು ಎಂದು ತಿಳಿಯಲು ಅಭಿಮಾನಿಗಳು ಹಾಗೂ ನೆಟ್ಟಿಗರು ಕಾತರರಾಗಿದ್ದಾರೆ.

ಇದೇ ವೇಳೆ, ಸೋಶಿಯಲ್ ಮೀಡಿಯಾ ಯೂಸರ್‌ಗಳು ಈಕೆ ಪಕ್ಕಾ ಭಾರತೀಯ ಹುಡುಗಿ ಎಂದು ಗಟ್ಟಿಯಾಗಿ ವಾದಿಸುತ್ತಿದ್ದಾರೆ. ನೆಟ್ಟಿಗರ ಸೀಕ್ರೆಟ್ ತನಿಖೆಯ ಪ್ರಕಾರ, ಆ ಫೋಟೋದಲ್ಲಿರುವ ಯುವತಿ ಮುಂಬೈ ಮೂಲದ ಖ್ಯಾತ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಅಂಕಿತಾ ಪಟೇಲ್ (Ankita Patel) ಎನ್ನಲಾಗುತ್ತಿದೆ. ಅಂಕಿತಾ ಅವರು ಬಾಲಿವುಡ್‌ನ ಪ್ರಸಿದ್ಧ ತಾರೆಯರಾದ ಶಿಲ್ಪಾ ಶೆಟ್ಟಿ, ಪಲಕ್ ತಿವಾರಿ, ಹಿನಾ ಖಾನ್ ಸೇರಿದಂತೆ ಹಲವರ ಜೊತೆ ಕೆಲಸ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಆದರೆ, ಈ ಡೇಟಿಂಗ್ ಸುದ್ದಿಗಳ ಬಗ್ಗೆ ಜೇಕಬ್ ಆಗಲಿ ಅಥವಾ ಅಂಕಿತಾ ಆಗಲಿ ಎಲ್ಲೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಹೀಗಾಗಿ ಈ ಪ್ರೇಮಕಥೆಯ ಸುತ್ತ ಸಸ್ಪೆನ್ಸ್ ಹಾಗೇ ಉಳಿದಿದೆ.

ಭಾರತೀಯ ನಟಿಯ ಜೊತೆಯೂ ಕೇಳಿಬಂತು ಹೆಸರು!

ಟ್ವಿಸ್ಟ್ ಏನೆಂದರೆ, ಮೇಕಪ್ ಆರ್ಟಿಸ್ಟ್ ಅಂಕಿತಾ ಮಾತ್ರವಲ್ಲದೆ ಭಾರತೀಯ ಯುವ ನಟಿ ಆಧ್ಯಾ ಆನಂದ್ (Aadhya Anand) ಜೊತೆಯೂ ಜೇಕಬ್ ಬೆಥೆಲ್ ಹೆಸರು ತಳುಕು ಹಾಕಿಕೊಂಡಿದೆ. ಐಪಿಎಲ್ (IPL) ಪಂದ್ಯಾವಳಿಗಳ ಸಮಯದಲ್ಲಿ ಇವರಿಬ್ಬರು ಒಬ್ಬರಿಗೊಬ್ಬರು ತೀರಾ ಹತ್ತಿರವಾಗಿದ್ದರು ಎಂದು ಕೆಲವು ನೆಟ್ಟಿಗರು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ನಟಿ ಆಧ್ಯಾ ಆನಂದ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಜೇಕಬ್ ನಿರಂತರವಾಗಿ ಲೈಕ್ ಒತ್ತುತ್ತಿರುವುದನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ.

ಒಟ್ಟಿನಲ್ಲಿ ಇಂಗ್ಲೆಂಡ್‌ನ ಈ ಆಲ್‌ರೌಂಡರ್ ಕ್ರಿಕೆಟರ್ ಭಾರತದ ಹುಡುಗಿಯ ಪ್ರೀತಿಯಲ್ಲಿ ಕ್ಲೀನ್ ಬೌಲ್ಡ್ ಆಗಿರುವುದಂತೂ ನಿಜ ಎನ್ನಲಾಗುತ್ತಿದೆ, ಆದರೆ ಆ ಲಕ್ಕಿ ಗರ್ಲ್ ಯಾರು ಎಂಬ ನಿಜವಾದ ಸತ್ಯ ಸ್ವತಃ ಜೇಕಬ್ ಬೆಥೆಲ್ ಬಾಯಿ ಬಿಟ್ಟರಷ್ಟೇ ಗೊತ್ತಾಗಬೇಕಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

19ರ ಯುವಕ 36ರ ಮಹಿಳೆ ಮದುವೆಯಲ್ಲಿ ಟ್ವಿಸ್ಟ್, ಐದು ಮಕ್ಕಳ ತಾಯಿಗೆ ಕೈಕೊಟ್ನ ಹುಡುಗ?
ದಕ್ಷಿಣ ಭಾರತದ ಈ ನಗರದಲ್ಲಿ ಜೋರಾಗಿದೆ 'ರಹಸ್ಯ ಡೇಟಿಂಗ್'; ಜಾಗತಿಕ ಮಟ್ಟದಲ್ಲೂ ದೇಶಕ್ಕೆ ಈಗ 3ನೇ ಸ್ಥಾನ!