
ಮದುವೆ ಆದವರು, ಆಗದೇ ಇರುವವರು ಎಲ್ಲರಿಗೂ ಇದು ಗೊತ್ತಿರಲಿ!
ಮೊದಲೆಲ್ಲಾ, ಅಂದರೆ 40-50 ವರ್ಷಗಳ ಹಿಂದೆಲ್ಲಾ ವಯಸ್ಕರಾದ ಮೇಲೆ ಒಂದು ಹಂತದಲ್ಲಿ ಮದುವೆ (Marriage) ಆಗುವುದು ಸಮಾಜದಲ್ಲಿ ಒಂದು ಅಲಿಖಿತ ನಿಯಮ ಎಂಬಂತಿತ್ತು. ಹುಟ್ಟಿದ ಪ್ರತಿಯೊಂದು ಮನುಷ್ಯರೂ ಮದುವೆಯೆಂಬ ಬಂಧನಕ್ಕೆ ಒಳಗಾಗುತ್ತಿದ್ದರು. ಆದರೆ ಕಾಲ ಬದಲಾದಂತೆ ನಿಧಾನವಾಗಿ ಮದುವೆ ಎಂಬುದು ಕೆಲವರ ಪಾಲಿಗೆ ಇಲ್ಲವಾಗುತ್ತ ಬಂತು. ಆದರೆ, ಇಂದು ಮದುವೆ ಎಂಬುದು ಒಂದು ಪದ್ಧತಿಯಾಗಿ ಉಳಿದುಕೊಂಡಿದ್ದು ಅದೊಂದು ಆಯ್ಕೆಯಾಗಿ ಬದಲಾಗುತ್ತಿದೆ.
ಹೌದು, ಇಂದು ನಾಗರೀಕ ಸಮಾಜದಲ್ಲಿ ಮದುವೆ ಎಂಬುದು ಕಟ್ಟುಪಾಡು ಆಗಿ ಉಳಿದಿಲ್ಲ, ಬದಲಿಗೆ ವ್ಯಕ್ತಿಗತ ಆಯ್ಕೆಯಾಗಿ ಬದಲಾಗಿದೆ. ಹಲವು ದೇಶಗಳಲ್ಲಿ, ಸಮಾಜಗಳಲ್ಲಿ ಮದುವೆ ಎಂಬುದು ಕೇವಲ ಆಯ್ಕೆ ಎಂಬಂತಾಗಿ ಯಾವುದೋ ಕಾಲವಾಯ್ತು. ಆದರೆ ಭಾರತೀಯ ಸಮಾಜದಲ್ಲಿ ಹಾಗಿಲ್ಲ, ಇತ್ತೀಚೆಗೆ ಅದು ಅವರವರ ಇಷ್ಟಕ್ಕೆ ಬಿಟ್ಟಿದ್ದು ಎಂಬ ಮನೋಭಾವ ಬೆಳೆಯುತ್ತಿದೆ. ಆದರೆ, ಪೋಷಕರು ತಮ್ಮ ಮಕ್ಕಳ ಮದುವೆಗೆ ಒತ್ತಾಯಪಡಿಸುವ ಪರಿಪಾಠ ಭಾರತದಲ್ಲಿ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಪೋಷಕರ ನಿಲುವಿಗೆ ಮಕ್ಕಳು ಬದ್ಧರಾಗಿ ಒಪ್ಪಿಕೊಂಡು ಮದುವೆಗೆ ಕೊರಳೊಡ್ಡುವ ರೀತಿ ಕಡಿಮೆ ಆಗುತ್ತಿದೆ ಎನ್ನಬಹುದು.
ಇಲ್ಲಿ ಹೇಳಹೊರಟಿರುವುದು ಮದುವೆ ಆಗಬೇಕೋ ಬೇಡವೋ, ಪೋಷಕರು ಸರಿಯೋ ಅಥವಾ ಮಕ್ಕಳು ಸರಿಯೋ ಎಂಬ ಚರ್ಚೆಯಲ್ಲ. ಆದರೆ, ಮದುವೆ ಆದವರಿಗೂ ಆಗದಿರುವವರಿಗೂ ಇರುವ ವ್ಯತ್ಯಾಸ, ಮದುವೆ ಆಗುವುದು-ಆಗದಿರುವುದರ ಸಾಧಕ-ಬಾಧಕಗಳನ್ನಷ್ಟೇ ಹೇಳುತ್ತಿರುವುದು. ಅಂದರೆ, ಮದುವೆ ಆದವರು ಏನನ್ನು ಪಡೆದುಕೊಂಡು ಏನನ್ನು ಕಳೆದುಕೊಂಡಿರುತ್ತಾರೆ, ಅದೇರೀತಿ ಆಗದಿರುವವ ಜೀವನದಲ್ಲಿ ಗಳಿಸಿದ್ದು-ಕಳೆದುಕೊಂಡಿದ್ದು ಏನು ಎಂಬುದಷ್ಟೇ.
ಎದುರಾಗುವ ಸವಾಲುಗಳು:
ಮದುವೆಯಿಂದ ಇಂತಿಷ್ಟೇ ಅನುಕೂಲಗಳು ಅಥವಾ ಅನಾನುಕೂಲಗಳು ಆಗುತ್ತವೆ ಎನ್ನುವುದು ನಿರ್ಧಿಷ್ಟವಾದ ಅಂಕಿಅಂಶಗಳೇನೂ ಅಲ್ಲ. ಆದರೆ, ಇದು ಸೋಷಿಯಲ್ ಮೀಡಿಯಾದ ಒಂದು ರೀಲ್ಸ್‌ನಲ್ಲಿ ಹರಿದಾಡುತ್ತಿರುವ ಇಂದು ಕಾರ್ಡ್ನಲ್ಲಿರುವ ಬರಹ. ಸೋಷಿಯಲ್ ಮೀಡಿಯಾ ಇಂದಿನ ಕಾಲದಲ್ಲಿ ಜನರ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಕಾರಣಕ್ಕೆ, ಇದನ್ನು ಇಲ್ಲಿ ಈ ಮೂಲಕ ಶೇರ್ ಮಾಡಲಾಗಿದೆ.
ನಿಮಗೆ ಮದುವೆ ಆಗಿದ್ದರೂ, ಆಗದಿದ್ದರೂ ಅಥವಾ ಆಗುವ ಕನಸಿದ್ದರೂ ಮನಸಿದ್ದರೂ ಅದೇನೇ ಇದ್ದರೂ ಈ ಬರಹವನ್ನೊಮ್ಮೆ ನೋಡಿ.. ಇದು ಒಬ್ಬರ ಅಥವಾ ಹಲವರ ಅನಿಸಿಕೆ ಆಗಿರಬಹುದು. ನಿಮಗೆ ಈ ಅಭಿಪ್ರಾಯ ಒಪ್ಪಿಗೆ ಆಗಬಹುದು ಅಥವಾ ಆಗದಿರಬಹುದು. ಅದರಲ್ಲೇನು ಸಮಸ್ಯೆ? ಇರಲಿ, 'ಲೋಕೋ ಭಿನ್ನ ರುಚಿಃ' ಎಂದು ಲೈಫಲ್ಲಿ ಮುಂದೆ ಮುಂದೆ ನಡೆದರಾಯ್ತು.. ಏನಂತೀರಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.