
ಆಚಾರ್ಯ ಚಾಣಕ್ಯ ಭಾರತದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು. ಸಾಮಾನ್ಯ ಯುವಕನಾಗಿದ್ದ ಚಂದ್ರಗುಪ್ತನನ್ನು ಅಖಂಡ ಭಾರತದ ಸಾಮ್ರಾಟನನ್ನಾಗಿ ಮಾಡಿದ ಕೀರ್ತಿ ಅವರದ್ದು. ಅವರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನ, ಹಣ, ಸ್ನೇಹ ಮತ್ತು ಸಂಬಂಧಗಳ ಬಗ್ಗೆ ಅನೇಕ ಮಹತ್ವದ ವಿಚಾರಗಳನ್ನು ಹೇಳಿದ್ದಾರೆ. ಪ್ರೀತಿ-ಪ್ರೇಮದ ಸಂಬಂಧಗಳ ಬಗ್ಗೆಯೂ ಚಾಣಕ್ಯರು ಕೆಲವು ಲೈಫ್ ಮ್ಯಾನೇಜ್ಮೆಂಟ್ ಟಿಪ್ಸ್ ಕೊಟ್ಟಿದ್ದಾರೆ. ಅವರ ಪ್ರಕಾರ, ತಪ್ಪು ವ್ಯಕ್ತಿಯನ್ನು ಪ್ರೀತಿಸಿದರೆ, ಅದರ ಪರಿಣಾಮ ಇಡೀ ಜೀವನದ ಮೇಲೆ ಬೀಳಬಹುದು. ಹಾಗಾದ್ರೆ, ಚಾಣಕ್ಯ ನೀತಿಯ ಪ್ರಕಾರ ಯಾವೆಲ್ಲಾ ಜನರಿಂದ ಪ್ರೀತಿಯ ವಿಚಾರದಲ್ಲಿ ದೂರ ಇರಬೇಕು? ಇಲ್ಲಿದೆ ಮಾಹಿತಿ...
ಸ್ವಾರ್ಥಿಗಳಿಂದ ಅಂತರ ಕಾಯ್ದುಕೊಳ್ಳಿ
ಚಾಣಕ್ಯರ ಪ್ರಕಾರ, ಪ್ರತಿ ಸಂಬಂಧದಲ್ಲೂ ಬರೀ ತನ್ನ ಲಾಭ ನೋಡುವ ವ್ಯಕ್ತಿ ಎಂದಿಗೂ ನಿಜವಾದ ಸಂಗಾತಿಯಾಗಲು ಸಾಧ್ಯವಿಲ್ಲ. ಇಂಥವರು ತಮ್ಮ ಕೆಲಸ ಆದ ಮೇಲೆ, ನಿಮಗೆ ಕಷ್ಟ ಬಂದಾಗ ನಿಮ್ಮನ್ನು ಬಿಟ್ಟು ಹೋಗುತ್ತಾರೆ. ಇದರಿಂದ ಮಾನಸಿಕ ಮತ್ತು ಭಾವನಾತ್ಮಕ ನೋವು ಅನುಭವಿಸಬೇಕಾಗುತ್ತದೆ. ಹಾಗಾಗಿ ಇಂಥವರನ್ನು ಮರೆತೂ ಪ್ರೀತಿಸಬೇಡಿ.
ಸುಳ್ಳು ಹೇಳುವವರಿಂದ ದೂರವಿರಿ
ಯಾವುದೇ ಸಂಬಂಧದ ಅಡಿಪಾಯವೇ ನಂಬಿಕೆ ಮತ್ತು ಸತ್ಯ. ಸಣ್ಣ ಸಣ್ಣ ವಿಷಯಗಳಿಗೂ ಸುಳ್ಳು ಹೇಳುವ ವ್ಯಕ್ತಿಯನ್ನು ನಂಬುವುದು ತುಂಬಾ ಕಷ್ಟ. ಚಾಣಕ್ಯರ ಪ್ರಕಾರ, ಇಂಥವರ ಜೊತೆಗಿನ ಪ್ರೀತಿಯ ಸಂಬಂಧ ಭವಿಷ್ಯದಲ್ಲಿ ದೊಡ್ಡ ತೊಂದರೆಗೆ ಕಾರಣವಾಗಬಹುದು. ಇವರು ಮೋಸ ಮಾಡುವುದರಲ್ಲೂ ನಿಸ್ಸೀಮರು.
ಕೋಪಿಷ್ಟರ ಸಹವಾಸ ಬೇಡ
ಚಾಣಕ್ಯರು ಹೇಳುವಂತೆ, ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುವ ಜನರು ಯೋಚನೆ ಮಾಡದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ನಡವಳಿಕೆಯಿಂದ ಸಂಬಂಧಗಳಲ್ಲಿ ಒತ್ತಡ ಮತ್ತು ಜಗಳಗಳು ಹೆಚ್ಚಾಗುತ್ತವೆ. ಇಂಥವರು ಪದೇ ಪದೇ ಇತರರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಾರೆ. ಅದಕ್ಕೇ ಇಂಥವರಿಂದ ದೂರ ಇರುವುದೇ ಒಳ್ಳೆಯದು.
ಚಾರಿತ್ರ್ಯ ಇಲ್ಲದವರಿಂದ ಅಂತರವಿರಲಿ
ಒಳ್ಳೆಯ ನಡತೆ ಅಥವಾ ಚಾರಿತ್ರ್ಯವೇ ಜೀವನದ ಅತಿದೊಡ್ಡ ಆಸ್ತಿ. ಯಾರಾದರೂ ತಮ್ಮ ಸಂಬಂಧಗಳಿಗೆ ಪ್ರಾಮಾಣಿಕವಾಗಿಲ್ಲದಿದ್ದರೆ, ಅವರೊಂದಿಗಿನ ಪ್ರೀತಿಯ ಸಂಬಂಧ ಹೆಚ್ಚು ಕಾಲ ಸುಖವಾಗಿರಲು ಸಾಧ್ಯವಿಲ್ಲ. ಇಂಥವರು ಜೀವನದ ಯಾವುದೇ ಹಂತದಲ್ಲಿ ನಿಮಗೆ ಮೋಸ ಮಾಡಬಹುದು. ಇವರಿಂದ ದೂರ ಇರುವುದೇ ಲೇಸು.
ನಕಾರಾತ್ಮಕ ಯೋಚನೆಯವರಿಂದ ದೂರ ಇರಿ
ನೆಗೆಟಿವ್ ಆಗಿ ಯೋಚಿಸುವ ಜನರು ಸದಾ ದೂರುತ್ತಲೇ ಇರುತ್ತಾರೆ. ಕೆಟ್ಟದ್ದನ್ನೇ ಯೋಚಿಸಿ ತಾವೂ ಕಷ್ಟಪಟ್ಟು, ಬೇರೆಯವರಿಗೂ ಕಷ್ಟ ಕೊಡುತ್ತಾರೆ. ಇಂಥವರ ಜೊತೆ ಇರುವುದರಿಂದ ಜೀವನದಲ್ಲಿ ಒತ್ತಡ ಮತ್ತು ನಿರಾಸೆ ಹೆಚ್ಚಾಗುತ್ತದೆ. ಕೆಲವೊಮ್ಮೆ ಈ ಪರಿಸ್ಥಿತಿ ಮಾನಸಿಕ ಕಾಯಿಲೆಗೂ ಕಾರಣವಾಗಬಹುದು. ಹೀಗಾಗಿ ಇಂಥವರ ಜೊತೆ ಸಂಬಂಧ ಬೆಳೆಸಬೇಡಿ.
ಈ ಲೇಖನದಲ್ಲಿರುವ ಮಾಹಿತಿಯನ್ನು ಧರ್ಮಗ್ರಂಥಗಳು, ವಿದ್ವಾಂಸರು ಮತ್ತು ಜ್ಯೋತಿಷಿಗಳಿಂದ ಪಡೆಯಲಾಗಿದೆ. ಈ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವ ಮಾಧ್ಯಮವಷ್ಟೇ ನಾವು. ಓದುಗರು ಇದನ್ನು ಕೇವಲ ಮಾಹಿತಿಯೆಂದು ತಿಳಿಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.