ಭಾರತದಲ್ಲಿ ಮಕ್ಕಳ ಜವಾಬ್ದಾರಿ ಬಹುತೇಕ ತಾಯಿ ಮೇಲಿರುತ್ತದೆ. ಕೆಲ ಪುರುಷರಿಗೆ ತಮ್ಮ ಮಕ್ಕಳು ಎಷ್ಟೇ ಕ್ಲಾಸ್ ಅನ್ನೋದೇ ಗೊತ್ತಿರೋದಿಲ್ಲ. ಹಾಗಂತ ಮಕ್ಕಳನ್ನು ನೋಡಿಕೊಳ್ಳುವ ಪಾಲಕರಿಲ್ಲ ಎಂದಲ್ಲ. ಈಗ ಮುಂಬೈ ಶಾಲೆಯ ಮೀಟಿಂಗ್ ಫೋಟೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಭಾರತದ ಪಾಲಕರ ಮನಸ್ಥಿತಿ ಅರ್ಥವಾಗ್ತಿದೆ.
ಮನೆಯಲ್ಲಿ ಸ್ಕೂಲಿಗೆ ಹೋಗುವ ಮಕ್ಕಳಿದ್ರೆ ಪಾಲಕರು ಬ್ಯುಸಿ. ಆಗಾಗ ಶಾಲೆ ಆಡಳಿತ ಮಂಡಳಿ ಮೀಟಿಂಗ್ ಕರೆಯುತ್ತಿರುತ್ತದೆ. ಶಾಲೆ ಆರಂಭವಾದ ಸಂದರ್ಭದಲ್ಲಿ ನಂತರ ಪರೀಕ್ಷೆಗಳು ಮುಗಿದ ಮೇಲೆ ಹೀಗೆ ವರ್ಷದಲ್ಲಿ ನಾಲ್ಕೈದು ಮೀಟಿಂಗ್‌ಗೆ ನೀವು ಹೋಗ್ಬೇಕಾಗುತ್ತದೆ. ಮಕ್ಕಳ ಪರ್ಫಾರ್ಮೆನ್ಸ್ ನೋಡಲು ಪಾಲಕರಿಗೆ ಆಸಕ್ತಿ ಇರುತ್ತದೆ. ಮಕ್ಕಳ ಬಗ್ಗೆ ಶಾಲೆ ಶಿಕ್ಷಕರ ಅಭಿಪ್ರಾಯ ಹೇಗಿದೆ, ಸ್ಕೂಲಿನಲ್ಲಿ ಯಾವೆಲ್ಲ ರೂಲ್ಸ್ ಜಾರಿಯಲ್ಲಿದೆ ಹಾಗೆ ಮಕ್ಕಳು ಎಷ್ಟು ಅಂಕ ತೆಗೆದುಕೊಂಡಿದ್ದಾರೆ ಎಂಬುದರ ಮಾಹಿತಿ ಪಡೆಯುವ ಪಾಲಕರು, ತಮ್ಮ ದೂರುಗಳಿದ್ದರೆ ಪೇರೆಂಟ್ ಟೀಚರ್ ಮೀಟಿಂಗಿನಲ್ಲಿ ಹೇಳ್ತಾರೆ.
ಈಗಿನ ದಿನಗಳಲ್ಲಿ ಪಾಲಕರೆಲ್ಲ ಬ್ಯುಸಿ ಇರ್ತಾರೆ. ಮಕ್ಕಳಿಗೆ ಸಮಯ ಕೊಡೋದು ಕೂಡ ಕಷ್ಟ. ಪೇರೆಂಟ್ (Parent) ಟೀಚರ್ ಮೀಟಿಂಗ್ (Meeting) ಗೆ ಪಾಲಕರಿಬ್ಬರೂ ಬರುವಂತೆ ಶಾಲೆಯಲ್ಲಿ ಹೇಳಲಾಗುತ್ತೆ. ಆದ್ರೆ ಈ ಮೀಟಿಂಗ್‌ಗೆ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರು ಬರೋದೇ ಹೆಚ್ಚು. ಒಂದು ಹತ್ತು ಜನ ಪಾಲಕರ ಪೈಕಿ ನಾಲ್ಕೈದು ಪುರುಷರನ್ನಾದ್ರೂ ನಾವು ಕಾಣ್ಬಹುದು. ಆದ್ರೆ ಮುಂಬೈ (Mumbai) ಶಾಲೆಯೊಂದರಲ್ಲಿ ಮಹಿಳೆಯೇ ಮೇಲುಗೈ ಸಾಧಿಸಿದ್ದಾರೆ. ಸಭೆಗೆ ಬಂದ ವ್ಯಕ್ತಿಯೊಬ್ಬರು ಅಲ್ಲಿನ ಪರಿಸ್ಥಿತಿ ನೋಡಿ ದಂಗಾಗಿದ್ದಾರೆ.
undefined
SATYAPREM KI KATHA: ಕಿಯಾರಾ-ಕಾರ್ತಿಕ್ ರೊಮ್ಯಾನ್ಸ್ ನೋಡಿ ಪತಿ ಸಿದ್ಧಾರ್ಥ್ ಹೇಳಿದ್ದೇನು?
ಮುಂಬೈ ಮೂಲದ ಸಂಶೋಧಕ ವರುಣ್ ಅಗರ್ವಾಲ್ ಅವರು ತಮ್ಮ ಮಗಳ ಶಾಲೆಯಲ್ಲಿ ನಡೆದ ಪೇರೆಂಟ್ – ಟೀಚರ್ ಅಸೋಸಿಯೇಷನ್ ಮೀಟಿಂಗ್‌ಗೆ ಹೋಗಿದ್ದರು. ಅಲ್ಲಿನ ಸ್ಥಿತಿ ನೋಡಿ ಅವರು ದಿಗ್ಭ್ರಮೆಗೊಂಡಿದ್ದರು. ಯಾಕೆಂದ್ರೆ ಈ ಮೀಟಿಂಗ್‌ಗೆ ಬಂದ ಪಾಲಕರ ಪೈಕಿ ಇಬ್ಬರೇ ಪುರುಷರು. 27 ತಾಯಂದಿರು ಸಭೆಯಲ್ಲಿ ಪಾಲ್ಗೊಂಡಿದ್ದರು. ವರುಣ್ ಅಗರ್ವಾಲ್ ಅವರು ಪೊದರ್ ಇಂಟರ್‌ನ್ಯಾಶನಲ್ ಸ್ಕೂಲಿನ ತರಗತಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳ ಜವಾಬ್ದಾರಿಯನ್ನು ಮಹಿಳೆಯರ ಜೊತೆ ಸಮಾನವಾಗಿ ಹಂಚಿಕೊಳ್ಳೋದ್ರಲ್ಲಿ ಪುರುಷರು ವಿಫಲರಾಗಿದ್ದಾರೆ ಎಂಬುದನ್ನು ಅವರು ಬರೆದಿದ್ದಾರೆ.
ನನಗೆ ಮಕ್ಕಳ ಪಾಲನೆ, ಪೋಷಣೆ ವಿಷ್ಯದಲ್ಲಿ ಭಾರತೀಯರ ಶೈಲಿ ಇಷ್ಟವಾಗೋದಿಲ್ಲ. ಮಕ್ಕಳನ್ನು ಬೆಳೆಸುವ ಕರ್ತವ್ಯದಿಂದ ಬಹುತೇಕ ಪುರುಷರು ದೂರವಿರುತ್ತಾರೆ ಎಂದು ವರುಣ್ ತಮ್ಮ ಅಭಿಪ್ರಾಯವನ್ನು ಟ್ವಿಟರ್ ಮಾಡಿದ್ದಾರೆ.
ನನ್ನ ಮಗಳ ಪಿಟಿಎ ಸಭೆ ಮತ್ತು ಶಾಲೆಯ ಸಭೆಯಲ್ಲಿ ನನ್ನನ್ನು ಸೇರಿಸಿ ಇಬ್ಬರು ಪುರುಷರಿದ್ದರು. ಉಳಿದಂತೆ 27 ತಾಯಂದಿರು ಪಾಲ್ಗೊಂಡಿದ್ದು ನನಗೆ ವಿಚಿತ್ರವೆನ್ನಿಸಿದೆ ಎಂದು ವರುಣ್ ಟ್ವೀಟ್ ಮಾಡಿದ್ದಾರೆ. ಎನ್‌ಆರ್‌ಐ ಭಾರತೀಯ ಮಹಿಳೆಯರು ದೇಸಿ ಹುಡುಗರನ್ನು ಮದುವೆಯಾಗದಿರಲು ಇದೂ ಕಾರಣ ಎಂದು ಅವರು ಬರೆದಿದ್ದಾರೆ.
ಗಂಡ-ಹೆಂಡತಿ ಜಗಳ ಆಡೋದಾದ್ರೆ ಆಡಿ, ಮಕ್ಕಳ ಮುಂದೆ ಮಾತ್ರ ಅವೆಲ್ಲ ಇಡ್ಕೋಬೇಡಿ!
ಸಭೆಯಲ್ಲಿ ಶಾಲಾ ಪಠ್ಯಕ್ರಮ ಮತ್ತು ನಿಧಿ ಸಂಗ್ರಹದ ಕುರಿತು ಚರ್ಚಿಸಲಾಗಿತ್ತು. ಮಕ್ಕಳ ಸಾಧನೆಯ ಬಗ್ಗೆ ಚರ್ಚೆಯಾಗಿರಲಿಲ್ಲ. ಆದ್ರೂ ತಂದೆಯಂದಿರುವ ಪಾಲ್ಗೊಂಡಿಲ್ಲ ಎನ್ನುತ್ತಾರೆ ವರುಣ್. ಅಲ್ಲದೆ ಅಲ್ಲಿದ್ದ ತಾಯಂದಿರ ಬಗ್ಗೆಯೂ ಅವರು ಬರೆದಿದ್ದಾರೆ. ಸಭೆಗೆ ಬಂದಿದ್ದ ಬಹುತೇಕ ತಾಯಂದಿರು ಮೇಲ್ವರ್ಗ, ಮಧ್ಯಮ ವರ್ಗ ಸೇರಿದಂತೆ ಎಲ್ಲ ವರ್ಗದವರಿದ್ದರು. ಕೆಲವರು ಎಂಬಿಎ ಹೊಂದಿದ್ದು, ಡೆಲಾಯ್ಟ್ ಅಥವಾ ಐಸಿಐಸಿಐನಂತಹ ಸ್ಥಳದಲ್ಲಿ ಕೆಲಸ ಮಾಡುವವರಾಗಿದ್ದಾರೆ. ಅಲ್ಲಿದ್ದ ಕೆಲವೇ ಕೆಲವು ಮಹಿಳೆಯರು ಎರಡು ಮಕ್ಕಳನ್ನು ಹೊಂದಿದ್ದರು.
ಟ್ವಿಟರ್ ನಲ್ಲಿ ವರುಣ್ ಹೇಳಿಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲ ಪಾಲಕರು, ಮಕ್ಕಳ ಪಿಟಿಎಂಗೆ ತಂದೆ ಬರೋದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದರೆ ಮತ್ತೆ ಕೆಲವರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ದೇಸಿ ಪುರುಷರು ಹಾಗೂ ಎನ್ ಆರ್ ಐ ಮಹಿಳೆಯರು ಎಂದು ಟೀಕಿಸುವ ಅಗತ್ಯವಿಲ್ಲ. ನಮ್ಮಲ್ಲಿ ಮಾತ್ರವಲ್ಲ ಅನೇಕ ದೇಶಗಳಲ್ಲಿ ವಿಶೇಷವಾಗಿ ಯುರೋಪ್ ದೇಶಗಳಲ್ಲೂ ಇದೇ ಸ್ಥಿತಿ ಇದೆ ಎಂದವರು ಹೇಳಿದ್ದಾರೆ. ಬರೀ ಒಂದು ಫೋಟೋ ನೋಡಿ ಕಮೆಂಟ್ ಮಾಡೋದು ಸರಿಯಲ್ಲ. ತಂದೆಯಂದಿರಿಗೆ ಅಗತ್ಯ ಕೆಲವಿರಬಹುದು. ವೀಕೆಂಡ್ ಸಮಯದಲ್ಲಿ ಪಿಟಿಎಂ ಮೀಟಿಂಗ್‌ನಲ್ಲಿ ಎಲ್ಲ ಪಾಲಕರು ಪಾಲ್ಗೊಳ್ಳುತ್ತಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.