ನನಗೆ ಆಗೀಗ ಪೋರ್ನ್ ಫಿಲಂ ಅಥವಾ ವಿಡಿಯೋ ನೋಡುವ ಹವ್ಯಾಸ ಇದೆ. ಮೊನ್ನೆ ನನ್ನ ಮಗ ಆಕಸ್ಮಿಕವಾಗಿ ನನ್ನ ಮೊಬೈಲ್ ನೋಡಿದ್ದಾನೆ. ಅದರಲ್ಲಿ ಹಿಸ್ಟರಿ ಸರ್ಚ್ ಮಾಡಿದವನಿಗೆ ನನ್ನ ಚಟುವಟಿಕೆ ತಿಳಿಯಿತು. 'ಈ ವಯಸ್ಸಲ್ಲಿ ಇದೆಲ್ಲ ನಿಮಗ್ಯಾಕೆ ಅಪ್ಪಾ?' ಎಂದು ಕೇಳಿದ.
ಪ್ರಶ್ನೆ: ನನ್ನ ವಯಸ್ಸು ಅರುವತ್ತು. ವಿವಾಹಿತೆ. ಆದರೆ ಗಂಡ ತೀರಿಕೊಂಡು ಹತ್ತು ವರ್ಷಗಳಾಗಿವೆ, ದೇಹ ಆಗಾಗ ಗಂಡನ ಜೊತೆಗಿನ ಲೈಂಗಿಕ ಸುಖವನ್ನು ನೆನಪಿಸಿಕೊಳ್ಳುತ್ತದೆ. ಅಂಥ ಸಂದರ್ಭದಲ್ಲಿ ಆಗೀಗ ಹಸ್ತಮೈಥುನ ಕೂಡ ಮಾಡಿಕೊಳ್ಳುತ್ತೇನೆ. ಇದರಿಂದ ನನ್ನ ಸ್ಟ್ರೆಸ್ ಕಡಿಮೆಯಾಗುತ್ತದೆ. ನನಗೆ ಒಬ್ಬಳು ಮಗಳಿದ್ದಾಳೆ. ಅವಳಿಗೆ ನಾನೆಂದರೆ ತುಂಬ ಇಷ್ಟ. ಹಾಗಾಗಿಯೇ ಬಲವಂತ ಮಾಡಿ ನನ್ನನ್ನು ಅವರ ಫ್ಯಾಮಿಲಿಯ ಜೊತೆಗೆ ಇಟ್ಟುಕೊಂಡಿದ್ದಾಳೆ. ಆದರೆ ನನಗೆ ಮೊದಲಿನಿಂಧ ಏಕಾಂತ ಇಷ್ಟ. ಜೊತೆಗೆ, ನನ್ನ ಹಸ್ತಮೈಥುನದ ಅಭ್ಯಾಸಕ್ಕೆ ಇದರಿಂದಾಗಿ ಈಗ ತಡೆ ಬಿದ್ದಿದೆ. ನನಗೆ ನನ್ನದೇ ಟೈಮು, ಪ್ರೈವೆಸಿ ಬೇಕು. ಅದು ಸಿಗುತ್ತಿಲ್ಲ. ಮಗಳಿಗೆ ಸೂಚ್ಯವಾಗಿ ಹೇಳಿದ್ದೇನೆ. ಆದರೆ ಆಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಏನು ಮಾಡಲಿ?
ಉತ್ತರ: ಇದು ಯೋಚಿಸಬೇಕಾದ್ದೇ. ಈ ಕುರಿತು ನಿಮ್ಮ ಮಗಳಿಗೂ ಅರಿವು ಮೂಡಿಸಬೇಕಿದೆ. ಸೂಚ್ಯವಾಗಿ ಹೇಳಿದರೂ ಅರ್ಥವಾಗದು ಎಂದು ಇದ್ದವರಿಗೆ ನೇರವಾಗಿಯೇ ಹೇಳಬೇಕಾಗುತ್ತದೆ. ನಿಮ್ಮ ಆರೋಗ್ಯ ಸರಿ ಇದ್ದರೆ, ನೀವು ಪ್ರತ್ಯೇಕವಾಗಿಯೇ ಇರುವ ಏರ್ಪಾಡು ಮಾಡಿಕೊಳ್ಳುವುದು ಒಳ್ಳೆಯದು. ವಾರಕ್ಕೊಮ್ಮೆ ನಿಮ್ಮ ಮಗಳು ಬಂದು ನೋಡಿಕೊಂಡು ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಿ. ನಿಮ್ಮ ವಯಸ್ಸಿನಲ್ಲಿ ನೀವು ಈ ಆಸಕ್ತಿ ಹಾಗೂ ಆರೋಗ್ಯ ಉಳಿಸಿಕೊಂಡಿರುವುದು ಗ್ರೇಟ್. ಇದನ್ನು ಹೀಗೇ ಕಾಪಾಡಿಕೊಳ್ಳಿ. ಹಾಗೇ ನಿಮ್ಮ ಮಗಳಿಗೆ ತಿಳಿಸಿ ಹೇಳಲು ನಿಮಗೆ ಮುಜುಗರವಾಗುತ್ತದೆ ಎಂದಾದರೆ, ನಿಮ್ಮ ಗೆಳತಿಯರು ಅಥವಾ ಆಪ್ತರ ಮೂಲಕ ನಿಮ್ಮ ಸಮಸ್ಯೆಯನ್ನು ಅವರಿಗೆ ದಾಟಿಸಿ, ಅರ್ಥ ಮಾಡಿಕೊಳ್ಳುವಂತೆ ಮಾಡಿ.
#Feelfree: ಆಂಟಿ ಬಾ ಅಂತಾಳೆ, ಓದಿನ ಮೇಲೆ ಮನಸು ನಿಲ್ತಿಲ್ಲ!
ಪ್ರಶ್ನೆ: ನನ್ನ ವಯಸ್ಸು ಅರುವತ್ತ ಐದು. ವಿವಾಹಿತ. ಆದರೆ ಈಗ ನನ್ನ ಪತ್ನಿ ಇಲ್ಲ. ನಾನು ನನ್ನ ಮಗನ ಮನೆಯಲ್ಲಿ ಇದ್ದೇನೆ. ಮಗನಿಗೆ ಇಬ್ಬರು ಮಕ್ಕಳಿದ್ದಾರೆ. ನನಗೊಂದು ಪ್ರತ್ಯೇಕ ಕೋಣೆಯಿದೆ. ಮೊಬೈಲೂ ಇದೆ. ನನಗೆ ಆಗೀಗ ಪೋರ್ನ್ ಫಿಲಂ ಅಥವಾ ವಿಡಿಯೋ ನೋಡುವ ಹವ್ಯಾಸ ಇದೆ. ಇದೇನೂ ಚಟವಾಗಿಲ್ಲ. ಅದನ್ನು ನೋಡಿಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಮೊನ್ನೆ ನನ್ನ ಮಗ ಆಕಸ್ಮಿಕವಾಗಿ ನನ್ನ ಮೊಬೈಲ್ ನೋಡಿದ್ದಾನೆ. ಅದರಲ್ಲಿ ಹಿಸ್ಟರಿ ಸರ್ಚ್ ಮಾಡಿದವನಿಗೆ ನನ್ನ ಚಟುವಟಿಕೆ ತಿಳಿಯಿತು. 'ಈ ವಯಸ್ಸಲ್ಲಿ ಇದೆಲ್ಲ ನಿಮಗ್ಯಾಕೆ ಅಪ್ಪಾ?' ಎಂದು ಕೇಳಿದ. ನಾನು ಏನೂ ಹೇಳಲಿಲ್ಲ. ಅಂದಿನಿಂದ ಆತನ ಮುಖಕ್ಕೆ ಮುಖ ಕೊಟ್ಟು ಮಾತನಾಡಲು ನನಗೆ ಹಿಂಜರಿಕೆ. ಅವನೂ ಮತ್ತೆ ನನ್ನೊಡನೆ ಮಾತನಾಡಿಲ್ಲ. ನನಗೆ ಒಳಗಿಂದೊಳಗೇ ಪಾಪಪ್ರಜ್ಞೆ ಕಾಡುತ್ತಿದೆ. ಏನು ಮಾಡಲಿ?
#Feelfree: ಮಗುವಾದ ಮೇಲೆ ಸೆಕ್ಸ್‌ನಲ್ಲಿ ಆಸಕ್ತಿ ಸೋರಿ ಹೋಗುತ್ತಾ?
ಉತ್ತರ: ನಿಮ್ಮ ವಯಸ್ಸಿನಲ್ಲಿ ಬಹಳ ಮಂದಿಗೆ ಈ ಸಮಸ್ಯೆ ಕಾಡುತ್ತಿರಬಹುದು, ಆದರೆ ಹೀಗೆ ಹೇಳಿಕೊಳ್ಳುವವರು ಕಡಿಮೆ ಅಷ್ಟೇ. ನಿಮ್ಮ ವಯಸ್ಸಿನಲ್ಲೂ ಲೈಂಗಿಕ ಕಾಮನೆಗಳು ಸಹಜ. ಅದನ್ನು ಈಡೇರಿಸಿಕೊಳ್ಳಲು ಮನುಷ್ಯ ಬಯಸುವುದೂ ಸಹಜ. ಸಂಗಾತಿ ಪಕ್ಕದಲ್ಲೇ ಇದ್ದರೆ ಇದೇನೂ ದೊಡ್ಡ ವಿಷಯ ಆಗುವುದಿಲ್ಲ. ಇಬ್ಬರೂ ಸಹಕರಿಸಿದರೆ ಅಲ್ಲಿಗೆ ಮುಗಿಯುತ್ತದೆ. ಆದರೆ ವಿಧವೆ, ವಿಧುರ ಅಥವಾ ವಿಚ್ಛೇದಿತರು ತಮ್ಮ ಕಾಮನೆಗಳಿಗೆ ಹೊರದಾರಿ ಕಂಡುಕೊಳ್ಳಲಾಗದೆ ಬಳಲುತ್ತಾರೆ. ಕೆಲವರು ಹಸ್ತಮೈಥುನ ಮಾಡಿಕೊಳ್ಳಬಹುದು. ಆದರೆ ಅದಕ್ಕೆ ಅವರಿರುವ ಪರಿಸರ ಅಡ್ಡಿಯಾಗಬಹುದು; ಏಕಾಂತ ಸಿಗದಿರಬಹುದು. ಅಥವಾ ನಿಮ್ಮಲ್ಲಿ ಆದಂತೆ, ಮಕ್ಕಳು ಇದನ್ನು ಆಕ್ಷೇಪಿಸಿ ನಿಮ್ಮಲ್ಲಿ ಪಾಪಪ್ರಜ್ಞೆ ಮೂಡಿಸಬಹುದು.
ಆದರೆ ಪಾಪಪ್ರಜ್ಞೆ ಬೇಡ. ಮನುಷ್ಯ ಎಂದ ಮೇಲೆ ಸಾಯುವವರೆಗೂ ಲೈಂಗಿಕ ಆಸಕ್ತಿ ಸಹಜ. ಅದನ್ನು ಸಾತ್ವಿಕ ಮಾರ್ಗದಲ್ಲಿ ಈಡೇರಿಸಿಕೊಳ್ಳುವ ಹಕ್ಕು, ಅಧಿಕಾರ ನಿಮಗಿದೆ. ಸಮಾಜಕ್ಕೆ, ಕುಟುಂಬಕ್ಕೆ ಸಮಸ್ಯೆ ಆಗದ ನಿಮ್ಮ ಯಾವುದೇ ಲೈಂಗಿಕ ಚಟುವಟಿಕೆಯನ್ನೂ ಆಕ್ಷೇಪಿಸುವ ಅಧಿಕಾರ ನಿಮ್ಮ ಮಗನಿಗಿಲ್ಲ. ಇದನ್ನು ಆತನಿಗೆ ತಿಳಿಸಿಕೊಡಿ. ನಿಮ್ಮ ಪಾಪಪ್ರಜ್ಞೆಯಿಂದ ಮುಕ್ತರಾಗಿ.
ಸೆಕ್ಸಲ್ಲಿ ಆಡಗಿರೋ ಆರೋಗ್ಯ ಗುಟ್ಟುಗಳ ಬಗ್ಗೆ ಗೊತ್ತಾ ನಿಮ್ಗೆ?