ನೀವೂ ಅಂದ್ರೆ ಇಷ್ಟಾನಾ? ಇಷ್ಟ ಪಟ್ಟವರ ಕಷ್ಟ ಅರಿತು ಕೊಳ್ಳುವುದು ಹೇಗೆ?

By Suvarna News  |  First Published Jun 9, 2022, 9:32 AM IST

ನೀವು ಇಷ್ಟಪಡುವವರು ನಿಮ್ಮನ್ನು ಲೈಕ್‌ ಮಾಡುತ್ತಾರೆಯೇ ಇಲ್ಲವೇ ಎನ್ನುವ ಗೊಂದಲದಲ್ಲಿದ್ದೀರಾ? ಅದಕ್ಕೆ ಚಿಂತೆ ಬೇಡ. ಕೆಲವು ಆಂಗಿಕ ವರ್ತನೆಗಳ ಮೂಲಕ ಅವರು ನಿಮ್ಮತ್ತ ಆಕರ್ಷಿತರಾಗಿದ್ದಾರೆಯೇ ಇಲ್ಲವೇ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. 


ಯಾರನ್ನಾದರೂ ಇಷ್ಟಪಡುವ ಸಮಯದಲ್ಲಿ ಜಗತ್ತೇ ಸುಂದರವಾಗುತ್ತದೆ. ಅದೊಂದು ಅದ್ಭುತ ಅನುಭೂತಿ. ಪ್ರೀತಿ-ಪ್ರೇಮದ (Love) ಭಾವದಲ್ಲಿ ಮೀಯುವ ಮನಸ್ಸಿಗೆ ಜಗತ್ತಿನ (World) ಆಗುಹೋಗುಗಳು ಯಾವುವೂ ಬಾಧಿಸುವುದಿಲ್ಲ. ಆದರೆ, ಒಂದೇ ಒಂದು ವಿಚಾರ ಅತಿಯಾಗಿ ಕಾಡುತ್ತದೆ. ಅದೆಂದರೆ, ಅವರೂ ನಮ್ಮನ್ನು ಇಷ್ಟಪಡುತ್ತಾರಾ ಇಲ್ಲವಾ ಎನ್ನುವ ಆತಂಕ ಎಡೆಬಿಡದೆ ಕಾಡಿ ಹೈರಾಣಾಗುವಂತೆ ಆಗುತ್ತದೆ. 
ಅವರೂ ನಿಮ್ಮನ್ನು ಇಷ್ಟಪಡುತ್ತಾರಾ (Like) ಎನ್ನುವ ವಿಚಾರ ತಲೆಕೆಡಿಸುವಂತದ್ದೇ ಆದರೂ ಅದಕ್ಕಾಗಿ ಹೆಚ್ಚು ಶ್ರಮಪಡಬೇಕಿಲ್ಲ. ಅವರ ವರ್ತನೆಯಿಂದಲೇ ಇದನ್ನು ಅರ್ಥ ಮಾಡಿಕೊಳ್ಳಬಹುದು. ಅವರ ಆಂಗಿಕ (Body) ಹಾವಭಾವಗಳೇ (Language) ಅವರು ನಿಮ್ಮನ್ನು ಇಷ್ಟಪಡುತ್ತಾರಾ ಇಲ್ಲವಾ ಎನ್ನುವುದನ್ನು ಹೇಳುತ್ತವೆ. ಅವುಗಳ ಕುರಿತು ಚೂರು ಗಮನ ನೀಡಿದರೆ ನಿಮಗೆ ಅರ್ಥವಾಗಿಬಿಡುತ್ತದೆ. 

•    ಸ್ವಲ್ಪ ಹೆಚ್ಚೇ ಕಣ್ಣುಗಳು ಸಂಧಿಸುತ್ತವೆ (Extra Eye Contact)
ಅವರು ನಿಮ್ಮನ್ನು ಇಷ್ಟಪಡುತ್ತಾರೆ ಎಂದಾದರೆ ಮಾಮೂಲಿಗಿಂತ ಹೆಚ್ಚಾಗಿಯೇ ನಿಮ್ಮನ್ನು ದಿಟ್ಟಿಸುತ್ತಾರೆ. ನೀವೂ ಒಂದೊಮ್ಮೆ ಕಣ್ಣುಗಳನ್ನು ಕೂಡಿಸಿದರೆ ನಿಮ್ಮಿಬ್ಬರ ನೋಟ ಒಂದಾಗುವ ಸಂದರ್ಭಗಳು ಹೆಚ್ಚಾಗುತ್ತವೆ. ಪುರುಷರು ಹುಡುಗಿಯರ ಕಡೆಗೆ ಆಕರ್ಷಿತರಾದಾಗ ಸಾಮಾನ್ಯವಾಗಿ ಅವರೊಂದಿಗೆ ಕಣ್ಣುಗಳನ್ನು ಕೂಡಿಸಲು ಇಷ್ಟಪಡುತ್ತಾರೆ. ಕಣ್ಣುಗಳು ಸರಕ್ಕನೆ ಆಚೀಚೆ ಹೋಗುವುದಿಲ್ಲ. ಏನೋ ಬಯಸುವಂತೆ, ಆಳಕ್ಕಿಳಿಯುವಂತೆ ಸಂಧಿಸುತ್ತವೆ. ಇದು ಪುರುಷರು ಲೈಂಗಿಕವಾಗಿ (Sexually) ನಿಮ್ಮೆಡೆಗೆ ಆಕರ್ಷಿತರಾಗಿದ್ದಾರೆ (Attractive) ಎನ್ನುವುದರ ಸ್ಪಷ್ಟ ಸಂಕೇತ. 

Tap to resize

Latest Videos

•    ನಿಮ್ಮೊಂದಿಗೆ ಹೆಜ್ಜೆ ಹಾಕಲು ಬಯಸುತ್ತಾರೆ (Walk alongside you)
ನಿಮ್ಮ ಜತೆಗೆ ವಾಕ್‌ ಮಾಡಲು, ಹೆಜ್ಜೆ ಹಾಕಲು ಬಯಸುತ್ತಿದ್ದಾರೆ ಎಂದರೆ ಅವರು ನಿಮ್ಮ ಸಹವಾಸವನ್ನು ಇಷ್ಟಪಡುತ್ತಿದ್ದಾರೆ, ನೀವು ಜತೆಗಿರುವುದು ಅವರಿಗೆ ಇಷ್ಟವಾಗುತ್ತಿದೆ ಎಂದರ್ಥ. ನಿಮ್ಮ ಸಾಮೀಪ್ಯ ಅವರಿಗೆ ಇಷ್ಟವಾಗದಿದ್ದರೆ ಸಾಮಾನ್ಯವಾಗಿ ಯಾರೂ ಇನ್ನೊಬ್ಬರ ಜತೆಗೆ ವಾಕ್‌ ಮಾಡಲು ಬಯಸುವುದಿಲ್ಲ. ನಮಗಿಂತ ಎರಡಡಿ ಮುಂದಕ್ಕೆ ನಡೆಯುತ್ತ, ತಿರುತಿರುಗಿ ಮಾತನಾಡುತ್ತಿದ್ದರೆ ಅವರು ನಿಮ್ಮನ್ನು ಬಯಸುವ ಜತೆಗೆ ಗಾರ್ಡ್‌ ಮಾಡಲು ಬಯಸುತ್ತಿದ್ದಾರೆ ಎಂದು ಅರಿತುಕೊಳ್ಳಬಹುದು.

ತಂದೆಗೆ ಮಗಳಾಗುತ್ತಿದ್ದಾಳೆ ಅವನು ಪ್ರೀತಿಸಿದ ಹುಡುಗಿ

•    ಹುಬ್ಬುಗಳು ಮೇಲಿರುತ್ತವೆ (Eyebrows are raised)
ನಿಮ್ಮೊಂದಿಗೆ ಮಾತನಾಡುವಾಗ ಅವರ ಹುಬ್ಬುಗಳು ಮೇಲೆ ಏರಿರುತ್ತವೆ. ಇದು ಸಹ ಅವರು ನಿಮ್ಮತ್ತ ಆಕರ್ಷಿತರಾಗಿದ್ದಾರೆ ಎನ್ನುವ ಸೂಚನೆ. ಕಣ್ಣುಗಳು ಹೆಚ್ಚು ಅರಳಿರುತ್ತವೆ, ಹುಬ್ಬುಗಳು ಸ್ವಲ್ಪ ಮೇಲಿರುತ್ತವೆ. ನಿಮ್ಮ ಮಾತುಗಳನ್ನು ಕೇಳಲು ಅವರು ಉತ್ಸುಕರಾಗಿದ್ದರೆ ಈ ಲಕ್ಷಣ ಸಹಜ. ಒಂದೊಮ್ಮೆ ಅವರಿಗೆ ಸುಸ್ತಾಗಿದ್ದರೂ ಸಹ ನಿಮ್ಮನ್ನು ಕಂಡಾಗ ಅಥವಾ ನಿಮ್ಮೊಂದಿಗೆ ಮಾತನಾಡಿದಾಗ ಲವಲವಿಕೆ ಪಡೆದುಕೊಳ್ಳುತ್ತಾರೆ. 

•    ಹೇರ್‌ ಮೇಲೆ ಕೈ (Fixing Hair)
ಒಂದೊಮ್ಮೆ ಪುರುಷ ಪದೇ ಪದೆ ತನ್ನ ತಲೆಯ ಕೂದಲಿನ ಮೇಲೆ ಕೈ ಆಡಿಸುತ್ತಿದ್ದರೆ ಆತ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತಿದ್ದಾನೆ ಎಂದರ್ಥ. ನೀವು ನೋಡಲೆಂದೇ ತಲೆಯ ಮೇಲೆ ಕೈಯಾಡಿಸುವ ನಾಟಕವಾಡುವುದು ಒಂದು ಅತಿ ಸಾಮಾನ್ಯ ಲಕ್ಷಣ. ಈ ಆಂಗಿಕ ಲಕ್ಷಣ ಆತ ನಿಮ್ಮ ಕುರಿತಾಗಿ ಮೃದುವಾದ ಮಧುರವಾದ ಭಾವನೆ ಹೊಂದಿರುವ ಮುಖ್ಯ ಸಂಕೇತ.  

•    ಮಾಂಸಖಂಡಗಳನ್ನು ತೋರ್ಪಡಿಸುವ ಯತ್ನ (Show Muscles)
ಕೆಲವೊಮ್ಮೆ ಬೇಕೆಂದೇ ಹೀಗೆ ಮಾಡದಿದ್ದರೂ ಬಹಳಷ್ಟು ಪುರುಷರಿಗೆ ಈ ಗುಣವಿದೆ. ಅದೆಂದರೆ, ತಾವು ಇಷ್ಟಪಡುವವರಿಗೆ ತಮ್ಮ ಮಾಂಸಖಂಡಗಳನ್ನು ಅಯಾಚಿತವಾಗಿ ತೋರಿಸುತ್ತಾರೆ. ಕೈಗಳನ್ನು ಮೇಲೆತ್ತಿದಾಗ, ಎದೆಯ ಭಾಗವನ್ನು ತೋರ್ಪಡಿಸಲು ಇಷ್ಟಪಡುತ್ತಾರೆ.

•    ನಿಮ್ಮನ್ನು ನಗಿಸಲು ಯತ್ನಿಸುತ್ತಾರೆ (Making you laugh)
ತಮ್ಮನ್ನು ನಕ್ಕುನಲಿಸುವ ಪುರುಷರ ಕಡೆಗೆ ಮಹಿಳೆಯರು ಆಕರ್ಷಿತರಾಗುವುದು ಸಹಜ. ನಗುವನ್ನು ಹಂಚಿಕೊಳ್ಳುವುದು ಸಂಬಂಧವೊಂದು ಚಿಗುರಲು ಅನುವು ಮಾಡಿಕೊಡುವ ಅತ್ಯುತ್ತಮ ವಿಧಾನ. ಜೋಕ್‌ ಕಟ್‌ ಮಾಡುತ್ತ, ತಾವು ಇರುವುದಕ್ಕಿಂತ ತುಸು ಹೆಚ್ಚಾಗಿ ವಿನೋದದಿಂದ ಇರುವುದು ಅವರು ನಿಮ್ಮ ಕುರಿತು ಆಕರ್ಷಣೆ ಹೊಂದಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ನಗುವಾಗ ಡೊಪಮೈನ್‌ ಉತ್ಪಾದನೆಯಾಗಿ ನೀವು ಅವರತ್ತ ಇನ್ನಷ್ಟು ಒಲವು ಹೊಂದಬಹುದು. ಒಂದೊಮ್ಮೆ ಅವರು ನಿಮ್ಮ ಕುರಿತು ಒಲವು ಹೊಂದಿರದೆ ಇದ್ದರೆ ವರ್ತನೆಯೇ ಬೇರೆ ರೀತಿಯಲ್ಲಿರುತ್ತದೆ. ನಿಮ್ಮಿಂದ ದೂರವಾಗಲು ಹಲವಾರು ನೆಪಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಈ ಕುರಿತು ಗಮನವಿರಲಿ.

ಬ್ರೇಕ್ ಅಪ್ ಒಂದೇ ಅಸ್ತ್ರವಲ್ಲ, ಒಂದಾಗಲು ಇವನ್ನೊಮ್ಮೆ ಟ್ರೈ ಮಾಡಿ

 

 

click me!