Breakup ಒಂದೇ ಅಸ್ತ್ರವಲ್ಲ! ನಿಮ್ಮನ್ನೊಮ್ಮೆ ಪ್ರಶ್ನಿಸಿಕೊಳ್ಳಿ!

ಸೊಸೈಟಿಯಲ್ಲಿ(society) ಈಗ ಬ್ರೇಕಪ್(breakup) ಎಂಬ ಪದ ಕಾಮನ್ ಆಗಿದೆ. ಅದು ಸೆಲೆಬ್ರೆಟಿಗಳಿರಲಿ(celebrity), ಸಾಮನ್ಯ ಜನರಿರಲಿ ಬ್ರೇಕಪ್ ಸಹ ಟ್ರೆಂಡ್(trend) ಆಗಿದೆ. ಇದಕ್ಕೆ ಕಾರಣ ಹುಡುಕಿದರೆ ನಮ್ಮೊಳಗೆ ಅನೇಕ ತಪ್ಪುಗಳು ಸಿಗುತ್ತವೆ. 

Think thrice before break up with relationship in life

ಯಾವುದೋ ಕಾರಣಕ್ಕೆ ಪ್ರೀತಿಸಿದವರಿಂದ, ಮನಸ್ಸಿಗೆ ಹತ್ತಿರವಾದವರಿಂದ ದೂರಾಗಬೇಕಾಗುತ್ತೆ. ಅದಕ್ಕೆ ಕಾರಣ ಏನೇ ಇರಬಹುದು. ಆದರೆ ಕೆಲವೊಮ್ಮೆ ಒಲ್ಲದ ಮನಸ್ಸಿನಿಂದ ದೂರಾಗಲೇಬೇಕಾಗುತ್ತೆ. ಪ್ರೀತಿ(love) ವಿಷಯವೇ ತೆಗೆದುಕೊಂಡರು ಹೀಗೆ ಮಾಡಿದರೆ ಹೊರಗಿನ ಪ್ರಪಂಚಕ್ಕೆ ಫ್ಲರ್ಟ್(fleurt), ಟೈಂ ಪಾಸ್(time pass) ಎನ್ನಿಸುವುದು ಸಹಜ.  ಫ್ಲರ್ಟಿಂಗ್, ಟೈಂ ಪಾಸ್ ಉದ್ದೇಶ ನಮ್ಮಲ್ಲಿಲ್ಲದಿದ್ದರೂ ಇನ್ನೊಬ್ಬರ ಬಾಯಿಗೆ ಆಹಾರವಾದಮೇಲೆ ತಲೆಗೆ ತುಂಬುತ್ತೆ. ನಿಧಾನಕ್ಕೆ ಯೋಚಿಸಿದರೆ ನಮ್ಮ ತಪ್ಪು ತಿಳಿಯುತ್ತೆ. ಅಷ್ಟಕ್ಕೂ ಈ ಕೆಲಸ ಮೊದಲೇ ಮಾಡಬೇಕಿತ್ತು. ನಂತರ ದಿನಗಳಲ್ಲಿ ಯೋಚಿಸಿದರೆ ಹೀಗೆ ಮಾಡಿದೆನಲ್ಲ ಎಂಬ ಗಿಲ್ಟ್(guilt) ಕಾಡುತ್ತೆ. 
ವ್ಯಕ್ತಿಯಿಂದ ದೂರಾಗುವ ನಿರ್ಧಾರಕ್ಕೂ ಮುನ್ನ ಕೆಲವೊಮ್ಮೆ ಸ್ವತಃ ಪ್ರಶ್ನಿಸಿಕೊಳ್ಳುವುದು ಮುಖ್ಯ. ಏಕೆ ಈ ನಿರ್ಧಾರ ಮಾಡಬೇಕು? ನನ್ನಿಂದಾದ ತಪ್ಪೇನು, ನಾನೇನು ಮಾಡಿದೆ? ನಮ್ಮದೇ ತಪ್ಪಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಕೈ ಮೀರಿದೆ ಇನ್ನು ಆಗುವುದಿಲ್ಲ ಎಂಬ ಸಂದರ್ಭದಲ್ಲಿ ಕೊನೆಯ ಆಪ್ಷನ್(option) ಬ್ರೇಕಪ್ ಆಗಿರಲಿ.

ದೂರದಲ್ಲಿರೋ ಸಂಗಾತಿ ಸಿಟ್ಟು ಶಮನಗೊಳಿಸೋದು ಕಷ್ಟವಲ್ಲ ಬಿಡಿ!

ಬ್ರೇಕಪ್ ಬೇಕೆ ಬೇಡವೇ ನಿಮ್ಮೊಳಗೊಂದು ಪ್ರಶ್ನೆ ಮೂಡಲಿ
ಗ್ರಾಸ್ ಇನ್ ಗ್ರೀನ್ ಸಿಂಡ್ರೋಮ್ (the grass is greener syndrome)
ಸಂಗಾತಿಯೊಡನೆ ಬಹು ಕಾಲದಿಂದ ಕನೆಕ್ಟ್ ಆಗಿದ್ದು, ನಂತರದ ದಿನಗಳಲ್ಲಿ ಅವರ ಮೇಲೆ ಇನ್ಟçಸ್ಟ್(intrust) ಕಳೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಇನ್ನೊಬ್ರ‍್ಯಾರೋ ಪರಿಚಯವಾಗಿ ಅವರ ಜೊತೆ ಕಂಫರ್ಟ್(comfort) ಫೀಲ್ ಆಗಬಹುದು. ಹಳೆಯ ಸಂಗಾತಿಯಲ್ಲಿ ನಿಮಗೆ ಬೇಕಾದ ಕೆಲ ಗುಣಗಳು ಇಲ್ಲದಿದ್ದು, ಆ ಗುಣಗಳನ್ನ ಇನ್ನೊಬ್ಬರಲ್ಲಿ ಕಾಣಿಸಬಹುದು. ಆಗ ಬೆಟರ್ ದೆನ್ ದಟ್(better then that) ಎಂಬುದು ನಿಮಗೆ ತಿಳಿಯದೆ ಮೂಡುತ್ತೆ. ಆಕೆ ಬೇಡ ಈಕೆ ಓಕೆ ಅನ್ನಿಸಬಹುದು. ನಿಮಗೆ ತಿಳಿಯದೆ ಹಳೆಯ ಸಂಗಾತಿಯನ್ನು ನೆಗ್ಲೆಕ್ಟ್(neglect) ಮಾಡಬಹುದು. ಹೀಗಾಗುವುದಕ್ಕೆ 'ಗ್ರಾಸ್ ಈಸ್ ಗ್ರೀನ್ ಸಿಂಡ್ರೋಮ್' ( ಎನ್ನುತ್ತಾರೆ. ಜನಕ್ಕೆ ಇದು ಮೋಸ ಮಾಡುವುದು, ಫ್ಲರ್ಟ್ (Fliurt), ಕ್ರಶ್ (Crush) ಎಂದು ಕಾಣುತ್ತದೆ. ಹೀಗಾದ ತಕ್ಷಣ ಮೊದಲು ಪ್ರಶ್ನಿಸಿಕೊಳ್ಳಬೇಕು. ಮೊದಲನೇ ಸಂಗಾತಿಯಿಂದ ಏನು ತೊಂದರೆ? ನೀಮಗೆ ಯಾವ ವಿಷಯ ಆಕೆಯಿಂದ ಇಷ್ಟವಾಗಲಿಲ್ಲ ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದರೆ ದೂರಾಗುವುದು ತಪ್ಪಿಸಬಹುದು.

ಪರಸ್ಪರ ಒಪ್ಪಿಗೆ 
ಪಾರ್ಟ್ನರ್(partner) ಅನ್ನು ಆರಿಸಿಕೊಳ್ಳುವ ಮೊದಲು ಅವರಲ್ಲಿನ ಯಾವುದೋ ಒಂದಷ್ಟು ಗುಣಗಳು ನಿಮ್ಮನ್ನು ಸೆಳೆದಿರುತ್ತೆ(attract). ಮೊದಲಿದ್ದಂತೆ ಈಗಿಲ್ಲ ಎಂಬ ಭಾವನೆ ಬರುವುದಕ್ಕೂ ಮೊದಲು ಕಾಲ ಕಳೆದಂತೆ ವ್ಯಕ್ತಿಯಲ್ಲೂ ಬದಲಾವಣೆಗಳಾಗುತ್ತೆ ಎಂಬ ವಿಷಯ ಅರಿತಿರಬೇಕು. ಪ್ರಾರಂಭದಲ್ಲಿ ರಿಲೇಶನ್‌ಶಿಪ್‌ನಲ್ಲಿ(relationship) ಇರುವುದಕ್ಕೆ ಇಬ್ಬರ ಒಪ್ಪಿಗೆ ಇದ್ದಲ್ಲಿ ಮಾತ್ರ ಮುಂದುವರೆಯಲು ಸಾಧ್ಯ. ಹಾಗಿದ್ದ ಮೇಲೆ ಇಬ್ಬರಲ್ಲಿರುವ ಟೇಸ್ಟ್(taste) ಒಂದೇ ಆಗಿದ್ದರೆ ಬ್ರೇಕಪ್‌ಗೇಕೆ ಅವಕಾಶ ಮಾಡಿಕೊಡಬೇಕು.

Relationship Tips : ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ರೂ ಮಾಜಿ ಮರೆಯೋಕಾಗ್ತಿಲ್ಲ

ಪ್ರಿಯಾರಿಟಿ (Priority)
ಇಬ್ಬರೂ ಸಾಗುವ ಹಾದಿ ಒಂದೇ ಎಂಬ ಭಾವನೆ ತಪ್ಪು. ಕಾಲಕ್ಕನುಗುಣವಾಗಿ ವ್ಯಕ್ತಿಯಲ್ಲಿನ ಆದ್ಯತೆ(priority) ಬದಲಾಗುತ್ತೆ. ನನ್ನಂತೆಯೇ ಅವರೂ ಇರಬೇಕು ಎನ್ನುವುದು ತಪ್ಪು. ಅದು ಟ್ರಾವೆಲ್(travel), ಕೆಲಸ(work), ಮಕ್ಕಳ ವಿಷಯದಲ್ಲಿರಲಿ. ಒಬ್ಬೊಬ್ಬರ ಆದ್ಯತೆಯ ವಿಷಯಗಳು ಬೇರೆಯೇ ಆಗಿರುತ್ತೆ. ಅದನ್ನು ಬಲವಂತದಿAದ ಬದಲಾಯಿಸಲು ಸಾಧ್ಯವಿಲ್ಲ. ಹಾಗಾದಲ್ಲಿ ಒಬ್ಬರ ಕಂಟ್ರೋಲ್‌ನಲ್ಲಿ(control) ಇದ್ದೀರಿ ಎಂದರ್ಥ, ನಿಮ್ಮ ಮಹತ್ವ(importance) ಅಲ್ಲಿಲ್ಲ ಎಂದರ್ಥ. ಹಾಗಂತ ಬ್ರೇಕಪ್ ಒಂದೆಯೇ ಸರಿ ಎಂಬುದಾದರೆ ಕೊನೆಯ ನಿರ್ಧಾರ ನಿಮ್ಮದು. 

ಮೂರನೇ ವ್ಯಕ್ತಿಯ ಪ್ರವೇಶ
ರಿಲೇಶನ್‌ಶಿಪ್‌ನಲ್ಲಿರುವ ಇಬ್ಬರು ವ್ಯಕ್ತಿಗಳು ದೂರಾಗಲು ಇಷ್ಟಪಡುತ್ತಿದ್ದಾರೆಂದರೆ ಅಲ್ಲಿ ಮೂರನೇ ವ್ಯಕ್ತಿಯ(councillor) ಪ್ರವೇಶವಾಗುವುದು ಸಹಜ. ಸಮಸ್ಯೆ ಬಗೆ ಹರಿಸಲು ಹೋಗಿ ಮೋಸ ಮಾಡುವ ಸಾಧ್ಯತೆಗಳಿವೆ. ಸಮಸ್ಯೆಯನ್ನೇ ಅಡ್ವಾಂಟೇಜ್(advantage) ತೆಗೆದುಕೊಂಡು ಉಪ್ಪು, ಹುಳಿ, ಖಾರ ಹಾಕಿ ಮತ್ತಷ್ಟು ದೊಡ್ಡದಾಗಿ ಮಾಡುವವರೂ ಇದ್ದಾರೆ. ಇದಕ್ಕೆ ಅವಕಾಶ ನೀಡದೇ ಇಬ್ಬರೇ ಕುಳಿತು ನಿಧಾನವಾಗಿ ಸಮಾಧಾನದಿಂದ ತಮ್ಮ ಸಮಸ್ಯೆ ಹಂಚಿಕೊAಡರೆ ಬ್ರೇಕಪ್ ಮಾತೆಲ್ಲಿ. 

Relationship Tips: ಮೊದಲ ಭೇಟಿಯ ನಾಚಿಕೆ ಬದಿಗಿಡಿ-ಮಾತುಕತೆಗೆ ಸಿದ್ಧತೆ ಮಾಡಿಕೊಳ್ಳಿ

ಪ್ರೀತಿಯ ಭಾವನೆ ಉಳಿದಿದೆಯೇ?
ಸಮಸ್ಯೆ ಬಗ್ಗೆ ಪರಸ್ಪರ ಕುಳಿತು ಮಾತನಾಡುವುದು, ಕೌನ್ಸಲರ್ (councillor) ಬಳಿ ಹೋಗುವುದು. ಹೀಗೆ ಎಲ್ಲಾ ಪ್ರಯತ್ನ ಮಾಡಿಯೂ ನಿಮ್ಮ ಪ್ರೀತಿ ಮರಳಿ ಪ್ರಡೆಯುವ ನಂಬಿಕೆ ನಿಮಗಿದೆಯೇ. ಸಂಗಾತಿ ಮರಳಿದರೆ ಸಂತೋಷ, ಆದರೆ ನಿಮ್ಮ ಯಾವುದೇ ಮಾತಿಗೂ ಸಂಗಾತಿ ಕರಗದಿದ್ದಾಗ ಕೊನೆಗೆ ನೀವೇನು ಮಾಡುವಿರಿ ಎಂಬುದು ನಿಮಗೆ ಬಿಟ್ಟದ್ದರು.

ಕಿವಿ ಮಾತು
ರಿಲೇಷನ್‌ಶಿಪ್‌ನಲ್ಲಿ ಬೇಸರ, ಜಗಳ ಕಾಮನ್. ಹಾಗೆಂದ ಮಾತ್ರಕ್ಕೆ ಸಣ್ಣ ಮನಸ್ತಾಪಕ್ಕೂ ಬ್ರೇಕಪ್ ಅಸ್ತçವಲ್ಲ. ದೊಡ್ಡದಾಗಲು ಬಿಡದೆ ಅದನ್ನು ಬಗೆಹರಿಸುವ ಪ್ರಯತ್ನ ನಮ್ಮದಾಗಬೇಕು. ನಮ್ಮೊಳಗೂ ಪ್ರಶ್ನೆಗಳು ಹುಟ್ಟಿದರೆ ಉತ್ತರ ತನ್ನಿಂತಾನೆ ಸಿಗುತ್ತದೆ. 

Latest Videos
Follow Us:
Download App:
  • android
  • ios