ಸೊಸೆ ಮೇಲೆ ಅತ್ತೆಗಿತ್ತು ಸಿಕ್ಕಾಪಟ್ಟೆ ಡೌಟ್, ಹೀಗ್ಯಾಕೆ ಅಂತ ಡಿಎನ್‌ಎ ಟೆಸ್ಟ್ ಮಾಡಿಸಿದ ಸೊಸೆ ಶಾಕ್!

By Suvarna News  |  First Published Apr 9, 2024, 3:56 PM IST

ಸಂಬಂಧದಲ್ಲಿ ಅನೇಕರು ಮೋಸ ಮಾಡ್ತಾರೆ. ಕೆಲವರು ಮೋಸ ಮಾಡಿದ್ರೂ ಅದನ್ನು ಮುಚ್ಚಿಟ್ಟು ಇನ್ನೊಬ್ಬರ ಮೇಲೆ ಆರೋಪ ಮಾಡ್ತಾರೆ. ಈಗ ರೆಡ್ಡಿಟ್ ನಲ್ಲಿ ಅಂಥಹದ್ದೇ ಘಟನೆಯೊಂದು ಎಲ್ಲರನ್ನು ಅಚ್ಚರಿಗೊಳಿಸಿದೆ. 
 


ನೂರರಲ್ಲಿ ಇಪ್ಪತ್ತಕ್ಕಿಂತ ಕಡಿಮೆ ಅತ್ತೆ – ಸೊಸೆ, ಅಮ್ಮ – ಮಗಳಂತೆ ಜೀವನ ನಡೆಸುತ್ತಾರೆ. ಅತೀ ಪ್ರೀತಿಯಿಂದ ಇರ್ತಾರೆ. ಬಹುತೇಕ ಅತ್ತೆ ಮತ್ತು ಸೊಸೆ ಸಂಬಂಧ ಯಾವಾಗ್ಲೂ ಗಲಾಟೆ, ಜಗಳದಿಂದ ಕೂಡಿರುತ್ತದೆ. ಸಣ್ಣಪುಟ್ಟ ವಿಷ್ಯಕ್ಕೆ ಕಿರಿಕಿರಿ ಮಾಡಿಕೊಳ್ತಿರುತ್ತಾರೆ. ಆ ಸಮಯದಲ್ಲಿ ಒಬ್ಬರು ಹೊಂದಿಕೊಂಡು ಹೋಗುವ ಅನಿವಾರ್ಯತೆ ಬರುತ್ತದೆ. ಅತ್ತೆ ಅಥವಾ ಸೊಸೆ ಎಲ್ಲವನ್ನೂ ಸಹಿಸಿಕೊಂಡು ಜೀವನ ನಡೆಸುತ್ತಾರೆ. ಆದ್ರೆ ಇಲ್ಲೊಬ್ಬ ಅತ್ತೆ, ತನ್ನ ಸೊಸೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾಳೆ. ಸೊಸೆಗೆ ಜನಿಸಿದ ಮಗುವನ್ನು ನೋಡಿದ ಅತ್ತೆಗೆ ಸೊಸೆ ಮೇಲೆ ಅನುಮಾನ ಬಂದಿದೆ. ಸೊಸೆ ಮಗನಿಗೆ ಮೋಸ ಮಾಡಿದ್ದಾಳೆ, ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅತ್ತೆ ಭಾವಿಸಿದ್ದಾಳೆ. ಅಲ್ಲದೆ ಸೊಸೆಗೆ ಡಿಎನ್ ಎ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದಾಳೆ. ಅತ್ತೆಯ ಸಮಾಧಾನಕ್ಕೆ ಸೊಸೆ ಏನೋ ಡಿಎನ್ ಎ ಪರೀಕ್ಷೆ ಮಾಡಿಸಿದ್ದಾಳೆ. ಆದ್ರೆ ಆಗ ಬಂದ ವರದಿ ಸೊಸೆ ಆಕೆ ಪತಿಯನ್ನು ದಂಗಾಗಿಸಿದೆ. ಈಗ ಇವರಿಬ್ಬರ ಮಧ್ಯೆ ಹೊಸ ಸಮಸ್ಯೆಯೊಂದು ಹುಟ್ಟಿಕೊಂಡಿದೆ. ಮುಂದೇನು ಎನ್ನುವ ಪ್ರಶ್ನೆ ಕಾಡುತ್ತಿದೆ.

ರೆಡ್ಡಿಟ್ (Reddit) ನಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಸದಾ ಹಂಚಿಕೊಳ್ತಿರುತ್ತಾರೆ. ಈ ಮಹಿಳೆ ಕೂಡ ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಬರೆದಿದ್ದಾಳೆ. ಮಹಿಳೆ, ಹೆಣ್ಣು ಮಗವಿಗೆ ಜನ್ಮ ನೀಡಿದ್ದಾಳೆ. ಆ ಮಗುವಿನ ಕಣ್ಣಿನ ಬಣ್ಣ ಹಸಿರಾಗಿದೆ. ಆದ್ರೆ ಮಹಿಳೆ ಕುಟುಂಬ (Family) ದಲ್ಲಿ ಯಾರಿಗೂ ಇಂಥ ಕಣ್ಣಿನ ಬಣ್ಣವಿಲ್ಲ. ಮಹಿಳೆ ತಂದೆ – ತಾಯಿ, ಪತಿ, ಅತ್ತೆ – ಮಾವ ಯಾರ ಕಣ್ಣೂ ಹೀಗಿಲ್ಲ. ಇದೇ ಅತ್ತೆಯ ಅನುಮಾನಕ್ಕೆ ಕಾರಣವಾಗಿದೆ. ಮಹಿಳೆ ಪತಿಗೆ, ಪತ್ನಿ ಮೇಲೆ ಅಪಾರ ನಂಬಿಕೆ ಇದೆ. ಆತ ಸದಾ ಪತ್ನಿಗೆ ಬೆಂಬಲ ನೀಡಿದ್ದಾನೆ. ಆದ್ರೆ ಮಹಿಳೆಯ ಅತ್ತೆ ಮಾತ್ರ ಸದಾ ಸೊಸೆಗೆ ಬೈತಿರುತ್ತಾಳೆ. ಮಾತು ಮಾತಿಗೂ ಸೊಸೆ, ಮಗನಿಗೆ ಮೋಸ ಮಾಡಿದ್ದಾಳೆ ಎನ್ನುತ್ತಿದ್ದಾಳೆ. ಆಕೆ ಸಂಬಂಧಿಕರು ಕೂಡ ಸೊಸೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಸೊಸೆ ಎಲ್ಲ ಅನುಮಾನಕ್ಕೆ ತೆರೆ ಎಳೆಯಲು ಡಿಎನ್ ಎ ಪರೀಕ್ಷೆಗೆ ಮುಂದಾಗಿದ್ದಳು.

Tap to resize

Latest Videos

ಕಿಯಾರಾ ಅಡ್ವಾಣಿ ಈ ದೃಶ್ಯದಿಂದ ಸೆಕ್ಸ್‌ ಟಾಯ್ಸ್ ಮಾರಾಟ ಶೇ.50 ಹೆಚ್ಚಾಯ್ತು; ಸತ್ಯ ಬಿಚ್ಚಿಟ್ಟ ನಿರ್ಮಾಪಕ ಮಿಶ್ರಾ

ಡಿಎನ್ ಎ (DNA  ಪರೀಕ್ಷೆ ಏನೂ ನಡೆದಿದೆ. ವರದಿ ಸೊಸೆ ಅಕ್ರಮ ಸಂಬಂಧ ಹೊಂದಿಲ್ಲ ಎಂಬ ಸ್ಪಷ್ಟನೆ ನೀಡಿದೆ. ಮಹಿಳೆ ಮಗು ಮಹಿಳೆಯದ್ದೇ ಎಂಬುದು ಗೊತ್ತಾಗಿದೆ. ಆದ್ರೆ ಮಹಿಳೆ ಪತಿಯ ತಂದೆ ಸ್ವಂತ ತಂದೆಯಲ್ಲ ಎಂಬುದು ಗೊತ್ತಾಗಿದೆ.

ಈ ವರದಿ ನೋಡಿ ಮಹಿಳೆ ಪತಿ ದಂಗಾಗಿದ್ದಾನೆ. ಸೊಸೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಅತ್ತೆಯ ಬಣ್ಣ ಬಯಲಾಗಿದೆ. ಆಕೆ ತನ್ನ ಪತಿಗೆ ಮೋಸ ಮಾಡಿದ್ದಾಳೆ ಎಂಬುದು ಬಹಿರಂಗವಾಗಿದೆ. ತನ್ನ ತಂದೆಯ ಬಗ್ಗೆ ಮಾಹಿತಿ ಪಡೆಯುವ ಕುತೂಹಲದಲ್ಲಿ ಮಹಿಳೆ ಪತಿಯಿದ್ದಾನೆ. ಅಮ್ಮನಿಗೆ ಈ ಬಗ್ಗೆ ಪ್ರಶ್ನೆ ಕೇಳಲು ಮುಂದಾಗಿದ್ದಾನೆ. ಆದ್ರೆ ಮಹಿಳೆ, ಅತ್ತೆಯ ಬಳಿ ಈ ಬಗ್ಗೆ ಪ್ರಶ್ನೆ ಕೇಳದಂತೆ ಪತಿಗೆ ಮನವಿ ಮಾಡಿದ್ದಾಳೆ. ಮನೆಯ ಶಾಂತಿ ಇದ್ರಿಂದ ಹದಗೆಡುವ ಸಾಧ್ಯತೆ ಇದೆ ಎಂದು ಆಕೆ ಹೇಳಿದ್ದಾಳೆ.

ಈ 5 ತಪ್ಪುಗಳನ್ನು ತಪ್ಪಿಸಿದ್ರೆ ನೀವೇ ಬೆಸ್ಟ್ ಪೇರೆಂಟ್

ಸಾಮಾಜಿಕ ಜಾಲತಾಣದಲ್ಲಿ ಕೂಡ ಮಹಿಳೆಯ ಈ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಅತ್ತೆಯ ಬಳಿ ಈ ಪ್ರಶ್ನೆ ಕೇಳಬೇಡಿ ಎಂದಿದ್ದಾರೆ. ಕುಟುಂಬಸ್ಥರಿಗೆ ಅತ್ತೆ ಸ್ವಭಾವ ಗೊತ್ತಾದಲ್ಲಿ  ಶಾಂತಿಕದಡುತ್ತದೆ, ಕುಟುಂಬದ ನೆಮ್ಮದಿ ಹಾಳಾಗುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ. ಸೊಸೆಯನ್ನು ಅನುಮಾನಿಸುತ್ತಿದ್ದ ಅತ್ತೆಯೇ ಸರಿಯಿಲ್ಲ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. 

click me!