
ಸಂಗಾತಿ (Partner) ನಡುವೆ ಪ್ರೀತಿ (Love), ವಿಶ್ವಾಸ ಮತ್ತು ತಿಳುವಳಿಕೆ ಇದ್ದಾಗ ಜೀವನ (Married Life) ನಡೆಸುವುದು ತುಂಬಾ ಸುಲಭವಾಗುತ್ತದೆ. ದಂಪತಿ ನಡುವೆ ಸಾಮರಸ್ಯವಿದ್ದಲ್ಲಿ ಆರೋಗ್ಯಕರ ಸಂಬಂಧ (relationship) ಮುಂದುವರೆಯುತ್ತದೆ. ಆದ್ರೆ ಪ್ರೀತಿ, ವಿಶ್ವಾಸ, ಗೌರವ, ತಿಳುವಳಿಕೆ ಇದ್ರಲ್ಲಿ ಕೊರತೆ ಕಾಣಿಸಿಕೊಂಡಾಗ ಸಂಬಂಧವನ್ನು ನಿಭಾಯಿಸಲು ನೀವು ನಿರಂತರ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆಗ ಪದೇ ಪದೇ ಕ್ಷಮೆ ಕೇಳಬೇಕಾಗುತ್ತದೆ. ಸಂಗಾತಿ ಮುಂದೆ ತಲೆ ಬಾಗಬೇಕಾಗುತ್ತದೆ. ಸಂಗಾತಿ ಮುಂದೆ ಕ್ಷಮೆ ಕೇಳುವುದು ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ಮತ್ತೆ ಮತ್ತೆ ಕ್ಷಮೆ ಕೇಳಿದ್ರೆ ಇದೇ ಸಮಸ್ಯೆಯೂ ಆಗಬಹುದು. ನಿಮ್ಮ ಸಂಗಾತಿ ಪ್ರತಿ ಬಾರಿ ನಿಮ್ಮನ್ನು ಕ್ಷಮಿಸಬಹುದು. ಆದ್ರೆ ಕ್ಷಮಿಸುವ ಮೂಲಕ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿರಬಹುದು. ಯಾವುದೇ ಸಂಬಂಧದಲ್ಲೂ ಪ್ರತಿ ಬಾರಿಯೂ ಕ್ಷಮಿಸಿ ಎಂದು ಹೇಳುವುದು ಅನಿವಾರ್ಯವಲ್ಲ. ಆದರೆ ನೀವು ಇದನ್ನು ಮಾಡುತ್ತಿದ್ದರೆ, ನೀವು ಕೆಲವು ಪ್ರಮುಖ ವಿಷಯಗಳಿಗೆ ಗಮನ ಕೊಡಬೇಕು.
ಕ್ಷಮೆ ಕೇಳುವ ಮೊದಲು ನೆನಪಿರಲಿ ಈ ಸಂಗತಿ :
ಬಲವಂತಕ್ಕೆ ಕ್ಷಮೆ ಕೇಳ್ತಿದ್ದೀರಾ? : ದಂಪತಿ ಮಧ್ಯೆ ಜಗಳವಾಗಿದೆ ಎಂದಿಟ್ಟುಕೊಳ್ಳೋಣ. ಪ್ರತಿ ಬಾರಿ ನೀವೇ ಸಂಗಾತಿ ಮುಂದೆ ಕ್ಷಮೆ ಕೇಳುತ್ತಿದ್ದೀರಿ ಎಂದಾದ್ರೆ ಸ್ವಲ್ಪ ಎಚ್ಚರವಹಿಸಿ. ನಿಮ್ಮ ಸಂಗಾತಿ ಕಡೆಯಿಂದ ಒಂದು ಬಾರಿಯೂ ಸಾರಿ ಶಬ್ಧ ಕೇಳಿಲ್ಲವೆಂದಾದ್ರೆ ಅಥವಾ ಜಗಳವನ್ನು ಸರಿಪಡಿಸುವ ಪ್ರಯತ್ನ ನಡೆದಿಲ್ಲವೆಂದಾದ್ರೆ ಅವರು ನಿಮಗೆ ಹೆಚ್ಚು ಮಹತ್ವ ನೀಡ್ತಿಲ್ಲವೆಂದೇ ಅರ್ಥ. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅವರು ನಿಧಾನವಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮುನ್ಸೂಚನೆ ಇದಾಗಿದೆ.
ತಾಯಿ ಸ್ನಾನ ಮಾಡುವಾಗ ಕದ್ದು ನೋಡುತ್ತೇನೆ, ತಪ್ಪೆಂದು ತಿಳಿದರೂ ಗೀಳಿನಿಂದ ಹೊರಬರಲಾಗುತ್ತಿಲ್ಲ !
ನೀವೇ ನಿಮ್ಮ ಮೌಲ್ಯ ಕಳೆದುಕೊಳ್ತಿದ್ದೀರಿ ಎಂದರ್ಥ : ಜಗಳದ ನಂತರ ನೀವು ಕ್ಷಮಿಸಿ ಎಂದು ಹೇಳಿದಾಗಲೆಲ್ಲ, ನಿಮ್ಮ ಪಾಲುದಾರರಿಗೆ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ನೀವೇ ಆಹ್ವಾನಿಸುತ್ತೀರಿ ಎಂದರ್ಥ. ತಪ್ಪು ನಿಮ್ಮದೇ ಆಗಿರುವಾಗ, ಕ್ಷಮಿಸಿ ಎಂದು ಹೇಳಿ ವಿಷಯವನ್ನು ಕೊನೆಗೊಳಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸಂಗಾತಿಯ ತಪ್ಪಿನ ನಂತರವೂ ನೀವು ಮತ್ತೆ ಮತ್ತೆ ಎಲ್ಲವನ್ನೂ ಸಾಮಾನ್ಯಗೊಳಿಸಲು ಪ್ರಯತ್ನಿಸಿದರೆ, ಸ್ವಲ್ಪ ಸಮಯದ ನಂತರ ಸಂಗಾತಿಯು ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳಲು ಪ್ರಾರಂಭಿಸುತ್ತಾನೆ. ಆಗ ನಿಮ್ಮ ಗೌರವಕ್ಕೆ ನೀವೇ ಧಕ್ಕೆ ತಂದುಕೊಳ್ಳುತ್ತೀರಿ.
ಹೆಚ್ಚಾಗುತ್ತೆ ಸಂಗಾತಿಯ ಅಹಂ : ಯಾವುದೇ ವಿವಾದವನ್ನು ಪರಿಹರಿಸುವುದು ಎರಡೂ ಪಾಲುದಾರರ ಕೆಲಸ. ಆದರೆ ಇದಕ್ಕಾಗಿ ನಿಮ್ಮಿಂದ ಮಾತ್ರ ಮತ್ತೆ ಮತ್ತೆ ಪ್ರಯತ್ನ ನಡೆದಾಗ ಮುಂದಿನ ದಿನಗಳಲ್ಲಿ ಕ್ಷಮೆ ಕೇಳುವುದು ನಿಮಗೆ ಸೀಮಿತವಾಗುತ್ತದೆ. ನೀವು ಪ್ರತಿ ಬಾರಿ ಕ್ಷಮೆ ಕೇಳಿದಾಗಲೂ ಸಂಗಾತಿ ತಾನು ಸರಿ ಎಂದು ನಂಬಲು ಪ್ರಾರಂಭಿಸುತ್ತಾನೆ ಮತ್ತು ಅಹಂಕಾರ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಅವನು ನಿಮ್ಮ ನಿರ್ಧಾರಗಳಿಗೆ ಗಮನ ಕೊಡುವುದನ್ನು ನಿಲ್ಲಿಸಲು ಪ್ರಾರಂಭಿಸುತ್ತಾನೆ. ನಿಮ್ಮ ಅಭಿಪ್ರಾಯ ಕೂಡ ಅವನಿಗೆ ಮುಖ್ಯವಾಗುವುದಿಲ್ಲ. ಅವನು ತನ್ನ ನಿರ್ಧಾರಗಳು ಸರಿ ಎಂದು ಯೋಚಿಸಲು ಪ್ರಾರಂಭಿಸುತ್ತಾನೆ. ಅಂಥ ಸಂಗಾತಿ ಜೊತೆ ಜೀವನ ಕೆಲ ದಿನಗಳಲ್ಲಿಯೇ ಉಸಿರುಗಟ್ಟಿಸಲು ಶುರುವಾಗುತ್ತದೆ. ಸಂಬಂಧ ದುರ್ಬಲವಾಗಲು ಶುರುವಾಗುತ್ತದೆ.
Viral News: ಮದುವೆಗೆ ಮುನ್ನ ಬಯಲಾಯ್ತು ಸೀಕ್ರೆಟ್..! ವೇಸ್ಟ್ ಆಯ್ತು 30 ಲಕ್ಷ
ಹೀಗೆ ನಿಭಾಯಿಸಿ : ದಂಪತಿ ನಡುವೆ ಜಗಳಗಳು ಸಾಮಾನ್ಯ. ಪ್ರತಿ ಬಾರಿ ಒಬ್ಬ ವ್ಯಕ್ತಿ ಮಾತ್ರ ತಲೆಬಾಗಬೇಕಾದಾಗ ಅದು ಸಂಬಂಧ ಹಾಳು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಪ್ರತಿ ಬಾರಿಯೂ ಕ್ಷಮಿಸಿ ಎಂದು ಹೇಳುವ ಬದಲು, ಸ್ವಲ್ಪ ಕಟ್ಟುನಿಟ್ಟಾಗಿರಿ. ಅವರು ಬಂದು ಕ್ಷಮೆ ಕೇಳುವವರೆಗೆ ಸುಮ್ಮನಿರಿ. ಆಗ,ಅನಿಯಂತ್ರಿತ ನಡವಳಿಕೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಸಂಗಾತಿಗೆ ಅರ್ಥಮಾಡಿಕೊಳ್ಳಬಹುದು. ನಿಮ್ಮ ಒಳ್ಳೆಯತನ ನಿಮ್ಮ ದೌರ್ಬಲ್ಯವಾಗಲು ಬಿಡಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.