ಬಾಯ್‌ಫ್ರೆಂಡ್ (Boyfriend), ಗರ್ಲ್‌ಫ್ರೆಂಡ್ ಇಲ್ಲದಿದ್ದಾಗ ಒಂಟಿ (Alone) ಅಂತನಿಸೋದು ಸಾಮಾನ್ಯ. ಆದ್ರೆ ಮದುವೆ (Marriage)ಯಾದ್ಮೇಲೂ ಒಂಟಿ ಅಂತ ಅನಿಸಿದ್ರೆ. ವಿಚಿತ್ರ ಅನಿಸುತ್ತೆ ಅಲ್ವಾ. ಆದರೆ ಹಲವರಿಗೆ ಈ ರೀತಿಯ ಅನುಭವವಾಗುತ್ತೆ. ಅದಕ್ಕೇನು ಕಾರಣ ?
ಮದುವೆ (Marriage)ಯೆಂಬುದು ಒಂದು ಸುಂದರವಾದ ಅನುಬಂಧ. ಹೆಣ್ಣು ತನ್ನವರನ್ನೆಲ್ಲಾ ತೊರೆದು ಗಂಡನ ಮನೆಗೆ ಬರುತ್ತಾಳೆ. ಸಂಪೂರ್ಣವಾಗಿ ಅಪರಿಚಿತದಾವರು ಕುಟುಂಬ ಸದಸ್ಯರಾಗುತ್ತಾರೆ. ಆಪ್ತರಾಗುತ್ತಾರೆ. ಗಂಡನೇ ಸರ್ವಸ್ವವಾಗುತ್ತಾನೆ. ಆದರೆ ಕೆಲವೊಮ್ಮೆ ಕೆಲವರ ವಿಷಯದಲ್ಲಿ ಹೀಗಾಗುವುದಿಲ್ಲ. ಗಂಡ-ಹೆಂಡತಿಯ (Husband-Wife) ಮಧ್ಯೆ ಲೈಂಗಿಕ ಸಂಬಂಧ ಬೆಳೆದರೂ ಆಪ್ತತೆಯೇ ಬೆಳೆಯುವುದಿಲ್ಲ. ಮದುವೆಯಾಗಿ ಅದೆಷ್ಟು ವರ್ಷಗಳಾದರೂ ಒಂಟಿ (Alone)ಯೆಂಬ ಭಾವನೆ ದೂರವಾಗುವುದಿಲ್ಲ.
ಮದುವೆ ಎಂಬುದು ತುಂಬಾ ಸವಾಲಿನ ವಿಷಯ ಎಂಬುದನ್ನು ಅಲ್ಲಗಳೆಯುವಂತಿಲ್ಲ. ದಾಂಪತ್ಯವನ್ನು ಚೆನ್ನಾಗಿಡಲು ಪತಿ ಮತ್ತು ಪತ್ನಿ ಇಬ್ಬರೂ ಸಮಾನವಾಗಿ ಪ್ರಯತ್ನಿಸಬೇಕು. ಕೆಲವು ದಂಪತಿಗಳು ಪರಸ್ಪರ ಸಮಯ ಕಳೆಯುವಾಗ ತಮ್ಮ ಸಂಬಂಧ (Relationship)ದಲ್ಲಿನ ಎಲ್ಲಾ ತೊಂದರೆಗಳನ್ನು ನಿವಾರಿಸಿದರೆ, ಹಲವರ ನಡುವಿನ ಈ ಬಾಂಧವ್ಯವು ಇನ್ನಷ್ಟು ಕಗ್ಗಂಟಾಗುತ್ತದೆ. ಗಂಡ-ಹೆಂಡತಿ ಮಧ್ಯೆ ಲೈಂಗಿಕ ಸಂಪರ್ಕವಿದ್ದರೂ, ಜೊತೆಯಾಗಿ ಹಲವೆಡೆ ತೆರಳಿದರೂ ಮನಸ್ಸಿನೊಳಗೆ ಒಂಟಿಯೆಂಬ ಭಾವನೆ ಮರೆಯಾಗಿರುವುದಿಲ್ಲ. ಮದುವೆಯಾದರೂ, ಸಂಗಾತಿಯೊಂದಿಗೆ ಇದ್ದರೂ ಕೆಲವೊಬ್ಬರು ಒಂಟಿತನ ಅನುಭವಿಸುತ್ತಾರೆ. ಅದಕ್ಕೆ ಕಾರಣವಾಗೋದೇನು ತಿಳ್ಕೊಳ್ಳೋಣ.
Viral News: ಮದುವೆಗೆ ಮುನ್ನ ಬಯಲಾಯ್ತು ಸೀಕ್ರೆಟ್..! ವೇಸ್ಟ್ ಆಯ್ತು 30 ಲಕ್ಷ
ಪತಿ-ಪತ್ನಿ ಪರಸ್ಪರ ಭಾವನಾತ್ಮಕ ಸಂಪರ್ಕವನ್ನು ಅನುಭವಿಸಲು ಸಾಧ್ಯವಾಗದಿದ್ದಾಗ ಇದು ಹೆಚ್ಚು ಸಂಭವಿಸುತ್ತದೆ. ಈ ಸಮಯದಲ್ಲಿ, ಅವರ ನಡುವಿನ ಹೊಂದಾಣಿಕೆಯು ಮಸುಕಾಗುವುದು ಮಾತ್ರವಲ್ಲದೆ, ಅವರು ಜವಾಬ್ದಾರಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ತಮಗಾಗಿ ಪರಸ್ಪರ ಸಮಯವನ್ನು ಮೀಸಲಿಡುವುದಿಲ್ಲ. ಇದರಿಂದಾಗಿ ಅವರ ಭಾವನಾತ್ಮಕ ಬಂಧವು ದೂರವಾಗಲು ಆರಂಭವಾಗುತ್ತದೆ.
ಗಂಡ-ಹೆಂಡತಿ ಮಧ್ಯೆ ಅಂತರಕ್ಕೆ ಕಾರಣವಾಗುವ ವಿಚಾರಗಳಿವು
ಮೊಬೈಲ್‌ನ ಅತಿಯಾದ ಬಳಕೆ
ಸಾಮಾಜಿಕ ಜಾಲತಾಣಗಳ (Social Media) ಪ್ರಭಾವ ಹೆಚ್ಚಾದ ನಂತರ ಎಲ್ಲರೂ ಹೆಚ್ಚು ಹೊತ್ತನ್ನು ಮೊಬೈಲ್‌ನಲ್ಲಿ ಕಳೆಯುತ್ತಾರೆ. ವಾಟ್ಸಾಪ್ ಚಾಟಿಂಗ್, ಎಫ್‌ಬಿ ಸ್ಟೋರಿ ಚೆಕ್ಕಿಂಗ್, ಇನ್‌ಸ್ಟಾಗ್ರಾಂ ರೀಲ್ಸ್ ನೋಡುವುದೆಂದು ದಿನದ ಹೆಚ್ಚಿನ ಸಮಯ ಅದರಲ್ಲೇ ಕಳೆದುಹೋಗುತ್ತದೆ.
ಮದುವೆಯ ನಂತರವೂ ಗಂಡ-ಹೆಂಡತಿ ಮೊದಲ ಕೆಲವು ತಿಂಗಳು ಆತ್ಮೀಯವಾಗಿರುವುದು ಬಿಟ್ಟರೆ, ನಂತರ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯಲು ಆರಂಭಿಸುತ್ತಾರೆ. ವಿವಾಹಿತ ಬಂಧದಲ್ಲಿದ್ದ ನಂತರವೂ, ಒಂಟಿತನದ ಭಾವನೆ ಬರಲು ಮುಖ್ಯ ಕಾರಣವೆಂದರೆ ಪತಿ- ಪತ್ನಿ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯ ಕಳೆಯುವುದು. ಏಕೆಂದರೆ ದಂಪತಿಗಳು ಒಂದೇ ಸೂರಿನಡಿ ಒಟ್ಟಿಗೆ ವಾಸಿಸುತ್ತಿದ್ದರೂ ಪರಸ್ಪರ ಮಾತನಾಡದೆ ಮೊಬೈಲ್‌ನಲ್ಲಿ ಸಮಯ ಕಳೆಯುತ್ತಾರೆ. ಇದರಿಂದಾಗಿ ಅವರ ಸಂಬಂಧದಲ್ಲಿ ಭಾವನಾತ್ಮಕ ಅಂತರವು ಹಾಗೆಯೇ ಉಳಿಯುತ್ತದೆ.
ಪರಸ್ಪರ ಮಾತನಾಡದಿರುವುದು
ಗಂಡ ಬೆಳಗ್ಗೆ ಮನೆ ಬಿಟ್ಟರೆ ಬರುವುದು ಸಂಜೆ, ಕೆಲವು ಮನೆಯಲ್ಲಿ ಹೆಂಡತಿಯ ದಿನಚರಿಯೂ ಹಾಗೆಯೇ ಇರುತ್ತದೆ. ಹೋಮ್‌ಮೇಕರ್ ಆಗಿರುವ ಮಹಿಳೆಯ ಹೆಚ್ಚಿನ ಸಮಯ ಅಡುಗೆ ಕೋಣೆಯಲ್ಲೇ ಕಳೆದುಹೋಗಿರುತ್ತದೆ. ಒಟ್ಟಿನಲ್ಲಿ ಪರಸ್ಪರ ಹೆಚ್ಚು ಮಾತನಾಡುವುದೇ ಇಲ್ಲ. ಅದರಲ್ಲೂ ಪರಸ್ಪರ ಎದುರು ಕುಳಿತು ಮಾತನಾಡುವುದಂತೂ ದೂರದ ಮಾತು. ಹೆಚ್ಚಿನ ಸಂಭಾಷಣೆ ಮೊಬೈಲ್‌ನಲ್ಲಿಯೇ ನಡೆಯುತ್ತದೆ.
ಗಂಡ ಮತ್ತು ಹೆಂಡತಿಯ ನಡುವೆ ಆರೋಗ್ಯಕರ ಸಂವಹನ ಬಹಳ ಮುಖ್ಯ. ಅದು ಇಲ್ಲದೆ ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ನೀವು ಉತ್ತಮ ಸಂಭಾಷಣೆಯನ್ನು ಹೊಂದಿಲ್ಲದಿದ್ದರೆ, ಮದುವೆಯಾದ ಕೆಲವು ವರ್ಷಗಳ ನಂತರ ನಿಮ್ಮ ಸಂಬಂಧವು ನೀರಸವಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸಿ.
Relationship Tips : ಭಾವನೆಗಳಿಲ್ಲದ ಪತಿ…ಮೈದುನನಿಗೆ ಮುತ್ತಿಟ್ಟ ಅತ್ತಿಗೆ
ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳದಿರುವುದು
ಖುಷಿಯ ವಿಚಾರವಾಗಿರಲಿ, ದುಃಖದ ವಿಚಾರವಾಗಿರಲಿ ಗಂಡ-ಹೆಂಡತಿ ಎಲ್ಲಾ ವಿಚಾರವನ್ನು ಪರಸ್ಪರ ಶೇರ್ ಮಾಡಿಕೊಳ್ಳಬೇಕು. ಹಾಗೆ ಮಾಡಿದಾಗ ಹೆಚ್ಚು ಆಪ್ತತೆ ಬೆಳೆಯುತ್ತದೆ. ಇಲ್ಲದಿದ್ದರೆ ಮದುವೆಯಾಗಿ ಎಷ್ಟು ವರ್ಷವಾದರೂ ಒಂಟಿತನದ ಭಾವನೆ ದೂರವಾಗುವುದಿಲ್ಲ.
ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸದಿರುವುದು
ಪತಿ-ಪತ್ನಿಯರು ತಮ್ಮ ವಿಷಯಗಳನ್ನು ಪರಸ್ಪರ ಚರ್ಚಿಸದಿದ್ದರೂ ವಿವಾಹಿತ ಸಂಬಂಧದಲ್ಲಿ ಒಂಟಿತನದ ಭಾವನೆ ಇರುತ್ತದೆ. ಈ ಕಾರಣದಿಂದಾಗಿ, ಅವರ ನಡುವೆ ಸಮಸ್ಯೆಗಳು ಬೆಳೆಯಲು ಪ್ರಾರಂಭಿಸುತ್ತವೆ, ಆದರೆ ಈ ಭಿನ್ನಾಭಿಪ್ರಾಯಗಳಿಂದಾಗಿ, ಅವರ ಸಂಬಂಧವೂ ಹದಗೆಡಲು ಆರಂಭವಾಗುತ್ತದೆ. ಪತಿ ಮತ್ತು ಪತ್ನಿಯ ಅಭಿಪ್ರಾಯವು ಹಲವು ವಿಷಯಗಳ ಬಗ್ಗೆ ಭಿನ್ನವಾಗಿರಬಹುದು. ಹಾಗೆಂದ ಮಾತ್ರಕ್ಕೆ ಈ ಅಭಿಪ್ರಾಯವು ನಿಮ್ಮ ಸಂಬಂಧವನ್ನು ಪ್ರಾಬಲ್ಯಗೊಳಿಸಲು ಬಿಡುವುದು ತುಂಬಾ ತಪ್ಪು. ನೀವು ಮಾತನಾಡುವ ಮೂಲಕ ಪರಸ್ಪರರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು.