Chanakya Niti: ಈ 7 ಮಂದಿಯ ಮನೆಯಲ್ಲಿ ಊಟ ಮಾಡಬೇಡಿ ಅಂತಾರೆ ಚಾಣಕ್ಯ! 

ಚಾಣಕ್ಯ ನೀತಿಯ ಪ್ರಕಾರ, ಕೆಲವು ಜನರ ಮನೆಯಲ್ಲಿ ಊಟ ಮಾಡಬಾರದು. ತಿಳಿದೂ ಹಾಗೆ ಮಾಡಿದರೆ ಕೀಳರಿಮೆ, ಅಪರಾಧಿ ಭಾವನೆ, ನೋವು, ಕಣ್ಣೀರು, ವ್ಯಗ್ರತೆ, ಕೃತಗ್ಣತೆ, ಜಿಗುಪ್ಸೆ ಮುಂತಾದ ಭಾವನೆಗಳು ಮೂಡಬಹುದು. ಹಾಗಿದ್ದರೆ ಯಾರು ಆ 7 ಮಂದಿ? 

dont eat in this 7 types of people says chanakya niti bni

ಆತ್ಮೀಯರ ಮನೆಯಲ್ಲಿ ನಾವು ಊಟ ಮಾಡುವುದು ಸಹಜ. ಕಡಿಮೆ ಆತ್ಮೀಯರಲ್ಲಿ ಊಟ ಮಾಡುವುದಿಲ್ಲ, ಅವರು ಕರೆದರೂ ಇನ್ನೊಮ್ಮೆ ಬರುತ್ತೇವೆ ಎಂದು ಹೇಳಿ ನಡೆದುಬಿಡುತ್ತೇವೆ. ಇನ್ನು ಕೆಲವರು ನಮ್ಮೊಡನೆ ಆತ್ಮೀಯತೆ ನಟಿಸುವವರು, ಇಂಥವರು ಕರೆದರೂ ಅವರಲ್ಲಿ ಊಟ ಮಾಡಲು ಮನಸ್ಸಾಗುವುದಿಲ್ಲ. ಹಾಗೆಯೇ ಕೆಲವರಿದ್ದಾರೆ, ಅಂಥವರ ಮನೆಯಲ್ಲಿ ಊಟ ಮಾಡಬೇಡಿ ಎನ್ನುತ್ತಾರೆ ಚಾಣಕ್ಯ. ಅದಕ್ಕೆ ಕಾರಣಗಳೂ ಇವೆ. ಅಂತವರು ಯಾರು, ಯಾಕೆ ನೋಡೋಣ. 

ಸಾಲ ಪಡೆದವರು

Latest Videos

ನಿಮ್ಮಿಂದ ಸಾಲ ಪಡೆದವರ ಮನೆಯಲ್ಲಿ ಅವರು ಸಾಲವನ್ನು ತೀರಿಸುವವರೆಗೂ ಊಟ ಮಾಡಬಾರದಂತೆ. ಯಾಕೆಂದರೆ ಸಾಲಿಗ- ಸಾಲಗಾರರ ಸಂಬಂಧ ಆತ್ಮೀಯತೆಯದ್ದಲ್ಲ, ಬಂಧುಗಳ ಹಾಗಿರುವುದಲ್ಲ. ಕೆಲವರು ಸಾಲದ ಬಾಧೆಯಿಂದ ಪಾರಾಗಲು ಸಾಲ ನೀಡಿದವನನ್ನೇ ಇಲ್ಲವಾಗಿಸಲೂ ಹೇಸುವವರಲ್ಲ! ಎಲ್ಲರೂ ಅಂಥವರಲ್ಲ, ನಿಜ. ಆದರೆ ನಿಮ್ಮ ಜಾಗ್ರತೆ ನಿಮಗಿರಲಿ.

ಸಾಲ ನೀಡಿದವರು

ನಿಮಗೆ ಸಾಲ ನೀಡಿದವರೊಂದಿಗೆ ಒಂದು ಅಂತರ ನಿಮಗಿರಲಿ. ಅವರು ಸಹಜವಾಗಿಯೇ ನಿಮಗಿಂತಲೂ ಶ್ರೀಮಂತರಾಗಿರುವುದರಿಂದ, ಒಂದು ಅಂತರ ಇದ್ದೇ ಇರುತ್ತದೆ. ಹಾಗೆಯೇ, ಇವನಿಗೆ ಊಟ ನೀಡುತ್ತಿರುವುದು ನಮ್ಮ ಕೃಪೆ ಎಂಬ ದೊಡ್ಡಸ್ತಿಕೆಯ ಭಾವನೆ ಅವರಲ್ಲಿ ಇರಬಹುದು. ಇದು ನಿಮ್ಮಲ್ಲಿ ಕೀಳರಿಮೆ ಉಂಟುಮಾಡಬಹುದು. 

ವಂಚಕರು

ಯಾರು ತಮ್ಮ ಕುತಂತ್ರವನ್ನು ಮರೆಮಾಚಿಕೊಂಡು ಸಜ್ಜನರಂತೆ ವರ್ತಿಸುತ್ತಾರೋ ಅವರನ್ನು ವಂಚಕರು ಎಂದು ಕರೆಯಬಹುದು. ಇವರು ಯಾವಾಗ ಬೇಕಾದರೂ ನಮ್ಮ ಬೆನ್ನಿಗೆ ಚೂರಿ ಹಾಕಬಹುದು. ವಂಚಕರನ್ನು ನೀವು ಮನೆಗೆ ಕರೆಯುವುದೂ ಸಲ್ಲದು. ಅವರ ಮನೆಯಲ್ಲಿ ಊಟ ಮಾಡುವುದೂ ಸಲ್ಲದು. ಇವರು ನಿಮ್ಮನ್ನು ತಮ್ಮ ಊಟದ ಋಣದಲ್ಲಿ ಸಿಕ್ಕಿಸಬಹುದು.

ಅಪರಾಧ ಪ್ರವೃತ್ತಿಯವರು 

ಕೆಟ್ಟ ಕೆಲಸಗಳನ್ನು ಮಾಡುವವರನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಬೇಡಿ, ಅವರ ಮನೆಗೂ ಹೋಗಬೇಡಿ, ಅವರ ಮನೆಯಲ್ಲಿ ಊಟವಂತೂ ನಿಷಿದ್ಧ. ಯಾವ ವ್ಯಕ್ತಿ ಕಳ್ಳತನ ಮಾಡುವ ಗುಣವನ್ನು ಹೊಂದಿರುತ್ತಾನೋ, ಯಾವ ವ್ಯಕ್ತಿ ದರೋಡೆ ಮಾಡುವ ಸ್ವಭಾವವನ್ನು ಹೊಂದಿರುತ್ತಾನೋ, ಲೂಟಿ ಮಾಡುವಂತಹ ಕೆಟ್ಟ ಕೆಲಸಗಳನ್ನು ಮಾಡುತ್ತಿರುತ್ತಾನೋ ಅಂತವರ ಸಂಗ ಬೇಡ. ಇದರಿಂದ ನಿಮ್ಮ ಜೀವನ ಹಾಳಾಗಬಹುದು. 

ಲೋಭಿಗಳು 

ಲೋಭಿಗಳು ಅಥವಾ ಇತರರ ಹಣದ ಮೇಲೆ ಆಸಕ್ತಿಯನ್ನು ಹೊಂದಿರುವವರ ಜೊತೆ ಅಂತರವನ್ನು ಕಾಯ್ದುಕೊಳ್ಳುವುದು ತುಂಬಾನೇ ಮುಖ್ಯ. ಇಂತವರನ್ನು ಮನೆಗೆ ಕರೆಯುವುದೂ ಸರಿಯಲ್ಲ. ಅವರಿಗೆ ಆತಿಥ್ಯವನ್ನು ನೀಡುವುದು ಕೂಡ ಸರಿಯಲ್ಲ. ಇಂತಹ ಸ್ವಭಾವವುಳ್ಳ ಜನರು ಒಂದಲ್ಲ ಒಂದು ದಿನ ನಿಮ್ಮ ಮನೆಯ ಹಣದ ಮೇಲೂ ವ್ಯಾಮೋಹ ಬೆಳೆಸಿಕೊಳ್ಳಬಹುದು ಅಥವಾ ಅವರು ದೋಚಿದ ಹಣದಿಂದ ನೀವು ಸಮಸ್ಯೆಯನ್ನು ಎದುರಿಸುವಂತಾಗಬಹುದು. 

ಚಾಣಕ್ಯನೀತಿ: ತಾಯಿ ಗರ್ಭದಿಂದ ಮಹಿಳೆ ಪಡೆಯುವ 5 ಕೆಟ್ಟ ಹವ್ಯಾಸಗಳು

ನೋಯಿಸುವವರು

ಮಾತಿನಿಂದ ನಿಮ್ಮನ್ನು ನೋಯಿಸುವ ವ್ಯಕ್ತಿಯ ಮನೆಯಲ್ಲಿ ಉಣಿಸು ಬೇಡ. ಯಾಕೆಂದರೆ ಅವರು ಯಾವಾಗಲೂ ಇತರರ ಮನಸ್ಸಿಗೆ ನೋವನ್ನು ನೀಡುವ ಕೆಲಸವನ್ನೇ ಮಾಡುತ್ತಾರೆ. ಇಂತವರು ಪರರ ಹಿತವನ್ನು ಎಂದಿಗೂ ಬಯಸುವುದಿಲ್ಲ. ಇತರರಿಗೆ ನೋವನ್ನುಂಟು ಮಾಡುವುದರಲ್ಲೇ ಅವರು ಸಂತೋಷವನ್ನು ಕಾಣುತ್ತಾರೆ. ಅವರ ಊಟದ ಜೊತೆಗೆ ನೀವು ಕಣ್ಣೀರನ್ನೂ ನುಂಗುವಂತಾದೀತು.

ನಾಸ್ತಿಕರು

ದೇವರನ್ನು ನಂಬದ, ಅಂದರೆ ದೇವರ ಮೇಲೆ ನಂಬಿಕೆಯನ್ನಿಟ್ಟುಕೊಳ್ಳದಂತಹ ವ್ಯಕ್ತಿಯಿಂದ ಯಾವಾಗಲೂ ನೀವು ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವರ ಮಾತುಗಳು ಶ್ರದ್ಧಾವಂತರಾದ ನಿಮ್ಮ ಅಥವಾ ನಿಮ್ಮ ಮನೆಯ ಸದಸ್ಯರ ಮನಸ್ಸನ್ನು ನೋಯಿಸಬಹುದು. ಯಾಕೆಂದರೆ ನಾಸ್ತಿಕರು ಕಟುವಾಗಿ ಮಾತನಾಡುವ ಗುಣವನ್ನು ಹೊಂದಿರುತ್ತಾರೆ. ಅವರು ಯಾರ ಭಾವನೆಗೂ ಬೆಲೆಯನ್ನು ನೀಡುವುದಿಲ್ಲ. 

ಚಾಣಕ್ಯನ ಪ್ರಕಾರ ಗಂಡನ ಜೀವನ ನರಕ ಮಾಡುವ ಹೆಂಡತಿ ಇವಳು
 

vuukle one pixel image
click me!