ಲಕ್ನೋ ಬೀದಿಯ ಹುಡುಗ ಸೆಲೆಬ್ರಿಟಿ ಶೆಫ್‌ ಆದದ್ದು ಹೀಗೆ: ಇದು ರಣವೀರ್ ಬ್ರಾರ್ ಯಶಸ್ಸಿನ ಕಥೆ

ಲಕ್ನೋದ ಬೀದಿಗಳಲ್ಲಿ ಅಡುಗೆ ಮಾಡುತ್ತಿದ್ದ ಬಾಲಕನಿಂದ ಭಾರತದ ಪ್ರಸಿದ್ಧ ಬಾಣಸಿಗ, ಟಿವಿ ತಾರೆ ಮತ್ತು ಉದ್ಯಮಿಯಾಗಿ ರಣವೀರ್ ಬ್ರಾರ್ ಬೆಳೆದು ನಿಂತದ್ದೇ ಒಂದು ರೋಚಕ ಕತೆ.

how Ranveer Brar become celebrity chef after series of failures bi

ಇಂದು ರಣವೀರ್‌ ಬ್ರಾರ್‌ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ಟಿವಿಯಲ್ಲಿ ಅಡುಗೆ ಕಾರ್ಯಕ್ರಮ ನೋಡುವವರಿಗೆಲ್ಲಾ ಗೊತ್ತಿದೆ. ಈತ ಭಾರತದ ಸೆಲೆಬ್ರಿಟಿ ಶೆಫ್.‌ ಇವನ ಅಡುಗೆಗೆ ಬೇರೆಯದೇ ಕೈರುಚಿ.  ಲಕ್ನೋದ ಬೀದಿಗಳಲ್ಲಿ ಅಡುಗೆ ಮಾಡುತ್ತಿದ್ದ ಬಾಲಕ ಭಾರತದ ಅತ್ಯಂತ ಪ್ರಸಿದ್ಧ ಬಾಣಸಿಗರಲ್ಲಿ ಒಬ್ಬನಾಗುವವರೆಗಿನ ಕತೆ ಅದು ಹೋರಾಟದ ಕತೆ. ಇವನ ಬದುಕಿನ ಕತೆ ಖಂಡಾಲಾ ಘಾಟ್‌ನ ತಿರುವುಗಳಂತೆ, ಇವನ ಯಶಸ್ಸಿನ ಕತೆಯ ಹಿಂದೆ ಹಿಮಾಲಯದಂತೆ ಸಾವಿರ ಏರಿಳಿತಗಳಿವೆ. ಇವನ ಅಸಾಧಾರಣ ಜೀವನ ಪ್ರಯಾಣದ ಕತೆ ತಿಳಿದರೆ ನಮಗೂ ತುಸು ಸ್ಫೂರ್ತಿಯಾಗಬಹುದು. 

ಲಕ್ನೋದಲ್ಲಿ ಹುಟ್ಟಿ ಬೆಳೆದವನು ರಣವೀರ್ ಬ್ರಾರ್.‌ ಇವನ ಕುಕಿಂಗ್‌ ಅಥವಾ ಆಹಾರದ ಮೇಲಿನ ಪ್ರೀತಿ ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಯಿತು. ಆತ ಸಾಂಪ್ರದಾಯಿಕ ಪಾಕವಿಧಾನಗಳನ್ನು ಕಲಿತದ್ದು ಅಜ್ಜಿಯಿಂದ. ಕಬಾಬ್‌ಗಳನ್ನು ಮಾಡುವ ಕಲೆಯಲ್ಲಿ ಪರಿಣತನಾದದ್ದು ಸ್ಥಳೀಯ ಉಸ್ತಾದ್‌ಗಳಿಂದ. 13ನೇ ವಯಸ್ಸಿನಲ್ಲೇ ಒಂದು ಗುರುದ್ವಾರದಲ್ಲಿ ಸಿಹಿ ಅನ್ನ ಪ್ರಸಾದ ಮಾಡುವ ಅಡುಗೆಮನೆಯಲ್ಲಿ ಸೇರಿಕೊಂಡು ಪಳಗಿದ. ಆದರೆ ಇದಕ್ಕೆಲ್ಲಾ ಫ್ಯಾಮಿಲಿಯ ಸಪೋರ್ಟ್‌ ಇರಲಿಲ್ಲ. ಯಾಕೆಂದರೆ ಅಡುಗೆ ಕೆಲಸಕ್ಕೇನೂ ಅಂಥ ಗೌರವ ಆಗ ಇರಲಿಲ್ಲ. 

Latest Videos

25ನೇ ವಯಸ್ಸಿನಲ್ಲಿ ಆತ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಮುಖ್ಯ ಬಾಣಸಿಗನ ಕೆಲಸ ಪಡೆದುಕೊಂಡ. ಹೀಗೆ ಭಾರತದ ಅತ್ಯಂತ ಕಿರಿಯ ನುರಿತ ಬಾಣಸಿಗನೆನಿಸಿದ. ಪಾಕ ಜಗತ್ತಿನಲ್ಲಿ ಒಂದು ಛಾಪು ಮೂಡಿಸಿದ. ಇದರಿಂದ ಸ್ಫೂರ್ತಿಗೊಂಡ ರಣವೀರ್‌ ಅಮೆರಿಕಕ್ಕೆ ಹೋದ. ಬೋಸ್ಟನ್‌ನಲ್ಲಿ ತನ್ನ ಮೊದಲ ರೆಸ್ಟೋರೆಂಟ್ ತೆರೆದ. ಜೀವನ ತೀವ್ರ ತಿರುವು ಪಡೆದುಕೊಂಡಿತು. ಆರಂಭದಲ್ಲಿ ತುಸು ಯಶಸ್ಸೇನೋ ಸಿಕ್ಕಿತು. ಆದರೆ ಮುಂದೆ ಈ ಉದ್ಯಮ ವಿಫಲವಾಯಿತು. ರಣವೀರ್ ದಿವಾಳಿಯಾದ, ನಿರಾಶ್ರಿತನಾದ.  ವಿದೇಶದಲ್ಲಿ ಬದುಕಲು ಹೆಣಗಾಡಿದ. ಪಾರ್ಕಿನ ಬೆಂಚುಗಳಲ್ಲಿ ಮಲಗಿದ. ಬೇಡಿ ತಿಂದ. ಆದರೆ ಸೋಲು ಒಪ್ಪಿಕೊಳ್ಳಲಿಲ್ಲ. ಹೋರಾಟ ಬಿಟ್ಟುಕೊಡಲು ನಿರಾಕರಿಸಿದ. ಅವನ ದೃಢಸಂಕಲ್ಪವೇ ಅವನನ್ನು ಕಾಪಾಡಿತು. ಯುಎಸ್‌ನಲ್ಲಿ ಮತ್ತೆ ಹೊಸ ಹೋಟೆಲ್‌ ತೆರೆದ. ಅದು ಸಕ್ಸಸ್‌ ಆಯ್ತು. ಮತ್ತೊಂದು ತೆರೆದ. ಹೀಗೆ ಒಂದರಿಂದ ಒಂದನ್ನು ಗೆಲ್ಲುತ್ತ ಹೋಗಿ ಕೆನಡಾಗೂ ಹೊಸ ರೆಸ್ಟೋರೆಂಟ್‌ಗಳನ್ನು ವಿಸ್ತರಿಸಿದ. 

2012ರಲ್ಲಿ ಅವನ ಜೀವನದ ಬದಲಾವಣೆಯ ಮತ್ತೊಂದು ಕ್ಷಣ ಬಂದಿತು. ಅವನ ತಂದೆಗೆ ಗಂಭೀರ ಕ್ಯಾನ್ಸರ್ ಎಂದು ತಿಳಿದುಬಂತು. ಇದು ರಣವೀರ್‌ನನ್ನು ಭಾರತಕ್ಕೆ ಮರಳಿ ಕರೆತಂದಿತು. ಈ ಮರಳುವಿಕೆ ಹೊಸ ಬಾಗಿಲುಗಳನ್ನು ತೆರೆಯಿತು.  ಆತ ಟಿವಿಯಲ್ಲಿ ತನ್ನ ಪಾಕಕಲೆಯ ಶೋ ನೀಡಲು ಕುಳಿತ. ಅದು ʼಮಾಸ್ಟರ್‌ಚೆಫ್ ಇಂಡಿಯಾʼ ಎಂದು ಜನಪ್ರಿಯ ಆಯಿತು. ಇತರ ಜನಪ್ರಿಯ ಆಹಾರ ಕಾರ್ಯಕ್ರಮಗಳೂ ಸಾಲಿನಲ್ಲಿ ಬಂದವು. ಅವನ ಕಥೆ ಹೇಳುವ ಶೈಲಿ, ಭಾರತೀಯ ಪಾಕಪದ್ಧತಿಯ ಮೇಲಿನ ಆಳವಾದ ಪ್ರೀತಿ ಮತ್ತು ವರ್ಚಸ್ಸು ಅವನನ್ನು ಭಾರತದ ಅತ್ಯಂತ ಪ್ರೀತಿಯ ಸೆಲೆಬ್ರಿಟಿ ಬಾಣಸಿಗರಲ್ಲಿ ಒಬ್ಬನನ್ನಾಗಿ ಮಾಡಿತು.

ಮೊಟ್ಟ ಮೊದಲ ಬಾರಿಗೆ ಚಹಾ ತಯಾರಾಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

ಇಂದು ರಣವೀರ್ ಬ್ರಾರ್ ಅನೇಕ ಯಶಸ್ವಿ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾನೆ. ವಿವಿಧ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ನಟನೆಯತ್ತ ಸಹ ಹೆಜ್ಜೆ ಹಾಕಿದ್ದಾನೆ. ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್‌ ಫಿಲಂನಲ್ಲಿ ಕರೀನಾ ಕಪೂರ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ಇವನ ಸಾಮ್ರಾಜ್ಯದ ಮೌಲ್ಯ ಸುಮಾರು ₹41 ಕೋಟಿ. ತಿಂಗಳ ಆದಾಯ ಬರೋಬ್ಬರಿ 45 ಲಕ್ಷ ಎಂದು ಅಂದಾಜಿಸಲಾಗಿದೆ. ಪುಸ್ತಕ, ಟಿವಿಕಾರ್ಯಕ್ರಮ ಹೊರತುಪಡಿಸಿ, ರಣವೀರ್ ಬ್ರಾರ್ ವೆಬ್ಸೈಟ್ ಕೂಡ ನಡೆಸುತ್ತಾರೆ. ಅದ್ರಲ್ಲಿ ನೀವು ಸಾಕಷ್ಟು ವೆರೈಟಿ ಆಹಾರಗಳನ್ನ ನೋಡ್ಬಹುದು. ಯುಟ್ಯೂಬ್ ಚಾನಲ್ ಕೂಡ ನಡೆಸ್ತಿರುವ ರಣವೀರ್ ಬ್ರಾರ್, ಅದ್ರಿಂದಲೂ ಲಕ್ಷಾಂತರ ರೂಪಾಯಿ ಗಳಿಸ್ತಾನೆ. ಈತ ಉದಯೋನ್ಮುಖ ಬಾಣಸಿಗರಿಗೆ ಸ್ಫೂರ್ತಿಯಾಗಿದ್ದಾನೆ. ಭಾರತದಲ್ಲೂ ಇವನ ರೆಸ್ಟುರಾಗಳಿವೆ. ಅವುಗಳಲ್ಲಿ ಗೋವಾದ ಸುಂದರವಾದ ಕಡಲತೀರಗಳ ನಡುವೆ ನೆಲೆಸಿರುವ ಮೊರಿಸ್ಕೊ ಪ್ರಸಿದ್ಧಿ ಪಡೆದಿದೆ. ತಾಜಾ ಮೀನಿನ ಆಹಾರವನ್ನು ನೀವು ಅಲ್ಲಿಸವಿಯಬಹುದು. ಗೋವಾದಲ್ಲಿರುವ ಇಲ್ ಕ್ಯಾಮಿನೊ ಕೂಡ ರಣವೀರ್ ಬ್ರಾರ್ ನಿರ್ವಹಣೆಯಲ್ಲಿದೆ. ಪಿಶ್ ಟೈಲ್ ಹೊಟೇಲ್ ಗೋವಾ, ಮುಂಬೈನಲ್ಲಿರುವ ಇಂಗ್ಲಿಷ್ – ವಿಂಗ್ಲೀಷ್ ಹೊಟೇಲ್ ಕೂಡ ರಣವೀರ್ ಬ್ರಾರ್ ಮಾಲಿಕತ್ವದ್ದಾಗಿದೆ.  

ಜೇನೊಣ ತುಂಬಿರುವ ಈ ಸ್ವೀಟ್‌ನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
 


 

 
 
 
 
 
 
 
 
 
 
 
 
 
 
 

A post shared by Karostartup (@karo_startup_)

vuukle one pixel image
click me!