
ಬೀದಿಯಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದ ನಾಯಿಯ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ಈ ವೇಳೆ ಜೊತೆಗಿದ್ದ ಇತರ ಬೀದಿನಾಯಿಗಳು ಚಿರತೆಯ ಮೇಲೆ ಮುಗಿಬಿದ್ದು ಅದನ್ನು ದೂರ ಓಡಿಸಿ ತನ್ನ ಜೊತೆಗಾರನನ್ನು ಉಳಿಸಿಕೊಂಡಂತಹ ಅಚ್ಚರಿಯ ಘಟನೆ ಉತ್ತರಾಖಂಡ್‌ನಲ್ಲಿ ಘಟನೆ ನಡೆದಿದೆ. ಇದರ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಾಖಂಡ್‌ನ ಹರಿದ್ವಾರದಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಾಯಿಗಳ ಒಗ್ಗಟ್ಟಿನ ಪ್ರದರ್ಶನಕ್ಕೆ ವೀಡಿಯೋ ನೋಡಿದವರು ಭೇಷ್ ಎಂದಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ನಾಯಿಯೊಂದು ರಸ್ತೆ ಬದಿ ಮಲಗಿತ್ತು. ಈ ವೇಳೆ ಹಿಂದಿನಿಂದ ಬಂದ ಚಿರತೆಯೊಂದು ನಾಯಿಯ ಮೇಲೆ ಆಕ್ರಮಣಕಾರಿಯಾಗಿ ಮುಗಿಬಿದ್ದಿದೆ. ಈ ವೇಳೆ ಕೂಡಲೇ ಎಚ್ಚೆತ್ತುಕೊಂಡ ಇತರ ನಾಯಿಗಳು, ದಾಳಿಗೊಳಗಾದ ನಾಯಿಯ ಸಹಾಯಕ್ಕೆ ಬಂದಿವೆ. ಬೊಗಳುತ್ತಾ ಜೊತೆಗೆ ಭಯಗೊಳ್ಳುತ್ತಾ ಹತ್ತಿರ ಹತ್ತಿರ ಬಂದ ನಾಯಿಗಳು ಚಿರತೆಯನ್ನು ದೂರ ಓಡಿಸಿ ತಮ್ಮ ಜೊತೆಗಾರನನ್ನು ಪಾರು ಮಾಡುವ ಪ್ರಯತ್ನ ಮಾಡಿದ್ದಾರೆ. ಕೊನೆಗೂ ನಾಯಿಗಳು ತಮ್ಮ ಈ ಸಾಹಸದಲ್ಲಿ ಯಶಸ್ವಿಯಾಗಿದ್ದು, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತು ಮಾಡಿವೆ.
ಜರ್ನಲಿಸ್ಟ್ ಸಚಿನ್ ಗುಪ್ತಾ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ದಾಳಿಗೊಳಗಾದ ನಾಯಿಯೂ ಚಿರತೆಯ ಬಾಯಿಯಿಂದ ಬಿಡಿಸಿಕೊಳ್ಳಲು ಹರಸಾಹಸ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಇನ್ನೇನೂ ನಾಯಿ ಜೀವ ಹೋಯ್ತು ಅನ್ನುಷ್ಟರಲ್ಲಿ ನಾಯಿಗಳ ಹಿಂಡು ದೊಡ್ಡ ಸಾಹಸವನ್ನೇ ಮಾಡಿವೆ. ಚಿರತೆ ಮೇಲೆ ಧೈರ್ಯದಿಂದ ಹೋರಾಟ ಮಾಡಿ ತಮ್ಮ ಜೊತೆಗಾರನನ್ನು ರಕ್ಷಿಸಿಕೊಂಡಿವೆ. ಉತ್ತರಾಖಂಡ್ ಹರಿದ್ವಾರದಲ್ಲಿ, ರಸ್ತೆಯಲ್ಲಿ ಮಲಗಿದ್ದ ನಾಯಿಯ ಮೇಲೆ ಚಿರತೆಯೊಂದು ದಾಳಿ ಮಾಡಿತು. ಅದು ಅದರ ಕುತ್ತಿಗೆಯನ್ನು ಹಿಡಿದಿತ್ತು. ಅಷ್ಟರಲ್ಲಿ, ಇತರ ಹಲವಾರು ನಾಯಿಗಳು ಬಂದವು. ಅವು ಚಿರತೆಯ ಮೇಲೆ ದಾಳಿ ಮಾಡಿ ಅದನ್ನು ಓಡಿಸಿದವು ಎಂದು ವೀಡಿಯೋ ಶೇರ್ ಮಾಡಿದ ಸಚಿನ್ ಗುಪ್ತಾ ಬರೆದುಕೊಂಡಿದ್ದಾರೆ.
ವೀಡಿಯೋ ನೋಡಿದ ಅನೇಕರು ಅಚ್ಚರಿ ಪಟ್ಟಿದ್ದಾರೆ. ಅನೇಕರು ಚಿರತೆ ದಾಳಿಯಿಂದ ಗಾಯಗೊಂಡ ನಾಯಿಯ ಬಗ್ಗೆ ಚಿಂತೆಗೀಡಾಗಿದ್ದಾರೆ. ಗಾಯಗೊಂಡ ನಾಯಿಗೆ ಪಶುವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗಿದೆಯೇ ಎಂದು ಒಬ್ಬ ಬಳಕೆದಾರರು ಕೇಳಿದ್ದಾರೆ. ಶತ್ರು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಏಕತೆ ಒಗ್ಗಟ್ಟು ಯಾರನ್ನಾದರೂ ಮೀರಿಸಬಹುದು. ಮಾನವರು ಸಹ ಈ ಪ್ರಾಣಿಗಳಿಂದ ಕಲಿಯಬೇಕಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇವುಗಳಲ್ಲಿ ಕಪ್ಪು ನಾಯಿ... ಮೊದಲು ಸ್ನೇಹಿತ.... ನಾನು ನನ್ನ ಸ್ನೇಹಿತನಿಗಾಗಿ ಸಾಯುತ್ತೇನೆ ಎಂದು ಹೋರಾಡಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವು ನಾಯಿಗಳು ಒಗ್ಗೂಡಿದರೆ, ಅವು ಸಿಂಹವನ್ನೂ ಕೊಲ್ಲಬಹುದು ಎಂಬುದನ್ನು ಈ ವೀಡಿಯೋ ತೋರಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
p>
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.