ಮುಖೇಶ್‌ ಅಂಬಾನಿಯ ರೈಟ್‌ ಹ್ಯಾಂಡ್ ಈ ಮೋದಿ!

By Suvarna NewsFirst Published Jun 13, 2020, 4:10 PM IST
Highlights

ಅತ್ಯಲ್ಪ ಅವಧಿಯಲ್ಲಿ ಮುಖೇಶ್‌ ಅಂಬಾನಿಯ ಸಂಪತ್ತು ಮೂರು ಪಟ್ಟು ನಾಲ್ಕು ಪಟ್ಟು ಹೆಚ್ಚಲು ಕಾರಣವಾದ ಈ ಮೋದಿಯ ಬಗ್ಗೆ ನಿಮಗೆ ಗೊತ್ತಾ?

ನಿಮಗೆ ನರೇಂದ್ರ ಮೋದಿ ಗೊತ್ತು. ಲಲಿತ್‌ ಮೋದಿ, ನೀರವ್‌ ಮೋಡಿ ಕೂಡ ಗೊತ್ತಿರಬಹುದು. ಆದರೆ ಮನೋಜ್‌ ಮೋದಿ ಗೊತ್ತಾ? ಗೊತ್ತಿಲ್ಲದಿದ್ದರೆ ಗೊತ್ತು ಮಾಡಿಕೊಳ್ಳೋಕೆ ಇದು ಸುಸಮಯ.

ಇವರು ಬೇರ್ಯಾರೂ ಅಲ್ಲ, ರಿಲಯನ್ಸ್‌ ಜಿಯೋ ಕಂಪನಿಯ ಒಡೆಯ, ಎಣಿಕೆಯೇ ಸಿಗದಷ್ಟು ಕೋಟ್ಯಂತರ ರೂಪಾಯಿಗಳ ಮಾಲಿಕ ಮುಖೇಶ್‌ ಅಂಬಾನಿ ಅವರ ಬಲಗೈ. ಇವರಿಲ್ಲದೆ ಮುಖೇಶ್‌ ಸಾಮ್ರಾಜ್ಯವೇ ಇಲ್ಲ. ಇವರಿಲ್ಲದೆ ಮುಖೇಶ್‌ ಯಾವ ಪ್ರಮುಖ ತೀರ್ಮಾನವನ್ನೂ ತೆಗೆದುಕೊಳ್ಳುವುದಿಲ್ಲ. 



ನೀವು ಮನೋಜ್‌ ಮೋದಿ ಮತ್ತು ಮುಖೇಶ್‌ ಅಂಬಾನಿ ಎಂದು ಗೂಗಲ್‌ನಲ್ಲಿ ಇಮೇಜ್‌ ಸರ್ಚ್‌ ಕೊಟ್ಟು ನೋಡಿ. ಅಲ್ಲಿ ಕಾಣಿಸುವ ಚಿತ್ರಗಳು ಅಚ್ಚರಿ ಹುಟ್ಟಿಸುವಂತೆ ಇರ್ತವೆ. ಇವರಿಬ್ಬರೂ ಒಂದು ಅತಿ ಸಾಮಾನ್ಯ ಕ್ಯಾಬಿನ್‌ನಲ್ಲಿ ಅತಿಸಾಮಾನ್ಯ ಕುರ್ಚಿಗಳಲ್ಲಿ ಅಕ್ಕಪಕ್ಕ ಕುಳಿತುಕೊಂಡು ಮಾತಾಡುತ್ತಿರುವ ಚಿತ್ರಗಳನ್ನು ನೋಡಬಹುದು. ಭಾರತದ ಅತಿ ದೊಡ್ಡ ಉದ್ಯಮ ಸಾಮ್ರಾಜ್ಯದ ಒಡೆಯ ಇಷ್ಟೊಂದು ಸರಳವೇ ಎಂದು ನಿಮಗೆ ಅಚ್ಚರಿಯಾಗಬಹುದು. ಮುಖೇಶ್‌ ಅಷ್ಟೊಂದು ಹಂಬಲ್‌ ಆಗಿರುವಂತೆ ಮಾಡುವುದರಲ್ಲಿ ಮನೋಜ್‌ ಪ್ರತಿಭೆಯೂ ಮಹತ್ವದ್ದು.

ಅಂಬಾನಿ ಮನೆ ಸೇರಿದ ಫೆರಾರಿ ಹಾಗೂ ಮೆಕ್ಲೆರೆನ್ ಸೂಪರ್ ಕಾರು! 

ಮುಖೇಶ್‌ ಅಂಬಾನಿ ಮತ್ತು ಮನೋಜ್‌ ಮೋದಿ ಇಬ್ಬರೂ ಒಂದೇ ಸ್ಕೂಲ್‌ನಲ್ಲಿ, ಒಂದೇ ಕ್ಲಾಸ್‌ನಲ್ಲಿ ಓದಿದವರು. ಇಬ್ಬರೂ ಮುಂಬಯಿಯ ಹಿಲ್‌ ಗ್ರೇಂಜ್ ಸ್ಕೂಲ್‌ನ ಸಹಪಾಠಿಗಳು. ಹೈಸ್ಕೂಲ್‌ನಲ್ಲಿ ಭೇಟಿಯಾದ ಇವರಿಬ್ಬರೂ ಮುಂದೆ ಆಪ್ತಮಿತ್ರರಾಗಿ ಉಳಿದರು. ೧೯೮೦ರಿಂದಲೂ ಮನೋಜ್‌ ರಿಲಯನ್ಸ್ ಕಂಪನಿಯಲ್ಲಿ ಇದ್ದಾರೆ. ೨೦೦೭ರಲ್ಲಿ ಮನೋಜ್‌ ಅವರನ್ನು ರಿಲಯನ್ಸ್‌ ರಿಟೇಲ್‌ನ ಸಿಇಒ ಆಗಿ ನೇಮಿಸಿದರು ಮುಖೇಶ್‌. ಅಂಬಾನಿ ಮನೆತನದ ಮೂರು ತಲೆಮಾರುಗಳೊಂದಿಗೆ ದುಡಿದವರು, ಸಂಪರ್ಕದಲ್ಲಿರುವವರು ಮನೋಜ್‌. ಇವರ ತಂದೆ ಹರಿಜೀವನ್‌ದಾಸ್‌ ಅವರು ಮುಖೇಶ್‌ ತಂದೆ ಧೀರುಭಾಯ್‌ ಜೊತೆ ದುಡಿದವರು. ಈಗ ಮನೋಜ್‌ ಮುಖೇಶ್‌ರೊಂದಿಗೆ ಹಾಗೂ ಅವರ ಮಕ್ಕಳಾದ ಇಶಾ ಮತ್ತು ಆಕಾಶ್‌ರೊಂದಿಗೆ ದುಡಿಯುತ್ತಿದ್ದಾರೆ.



ಇತ್ತೀಚೆಗೆ ಫೇಸ್‌ಬುಕ್‌ ಜೊತೆಗೆ 570 ಕೋಟಿ ಡಾಲರ್‌ ಮೊತ್ತದ ರಿಲಯನ್ಸ್‌ನ ದೊಡ್ಡ ಡೀಲನ್ನು ಕುದುರಿಸಿದವರು ಇದೇ ಮನೋಜ್ ಎನ್ನಲಾಗುತ್ತದೆ. ಫೇಸ್‌ಬುಕ್‌, ಜನರಲ್‌ ಅಟ್ಲಾಂಟಿಕ್‌, ವಿಸ್ತಾ ಮುಂತಾದ ದೊಡ್ಡ ದೊಡ್ಡ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು, ಸುಮಾರು 97 ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯವನ್ನು ಜಿಯೋಗೆ ತಂದವರು ಈ ಮನೋಜ್‌. ಮನಸ್ಸು ಮಾಡಿದ್ದರೆ ಮನೋಜ್‌ ಮೋದಿ ತಮ್ಮದೇ ಆದ ಕಂಪನಿ ಕಟ್ಟಿ, ದೊಡ್ಡದಾಗಿ ಬೆಳೆದು ರಿಲಯನ್ಸ್‌ಗೆ ಸವಾಲು ಒಡ್ಡುವ ಸಾಮರ್ಥ್ಯ ಹೊಂದಿದ್ದವರು. ಆದರೆ ಹಾಗೆ ಮಾಡದೆ, ಅಂಬಾನಿ ಕುಟುಂಬಕ್ಕೆ ನಿಷ್ಠರಾಗಿಯೇ ಉಳಿದರು. ಆದ್ದರಿಂದಲೇ ಮುಖೇಶ್‌ಗೆ ಮನೋಜ್ ಎಂದರೆ ತುಂಬ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸ. 

ನೀತಾ ಮುಖೇಶ್ ಲವ್ ಸ್ಟೋರಿ

ಮನೋಜ್‌ ಸದ್ದಿಲ್ಲದೆ ದುಡಿಯುವ ವ್ಯಕ್ತಿಯಂತೆ. ಮುಖೇಶ್‌ರಂತೆ ಇವರು ಹೊರಗೆಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಬ್ಯುಸಿನೆಸ್‌ ಡೀಲ್‌ಗಳ ವಿಷಯ ಬಂದಾಗ ಇವರು ಕಟ್‌ಥ್ರೋಟ್‌ ವ್ಯಕ್ತಿತ್ವ. ಇತರ ಕಂಪನಿಗಳ ಜೊತೆ ವ್ಯವಹರಿಸುವಾಗ ನಯವಾಗಿ ರಿಲಯನ್ಸ್‌ಗೆ ಗರಿಷ್ಠ ಲಾಭ ಆಗುವಂತೆ ವ್ಯವಹಾರ ಕುದುರಿಸಬಲ್ಲವರು. 

ಕೋಟ್ಯಾನುಗಟ್ಟಲೇ ಹಣ ಸಂಪಾದಿಸ್ತಾರೆ ಅಂಬಾನಿ ಕುಟುಂಬದ ಸೊಸೆಯರು! 

ಆದರೆ ತನ್ನನ್ನು ತಾನು ಲೋ ಪ್ರೊಫೈಲ್‌ನಲ್ಲಿ ಇಟ್ಟು ನೋಡಿಕೊಳ್ಳುವುದೇ ಮನೋಜ್‌ ಮೋದಿಗೆ ಇಷ್ಟೆ. ನನಗೆ ವ್ಯೂಹ ರಚಿಸುವುದು ಗೊತ್ತಿಲ್ಲ. ನಾನು ಅಷ್ಟೆಲ್ಲಾ ತಿಳಿದವನಲ್ಲ ಎಂಬ ಮಾತನ್ನು ಹೇಳುತ್ತಿರುತ್ತಾರೆ. ಆದರೆ ಬ್ಯುಸಿನೆಸ್‌ ವಿಷಯಕ್ಕೆ ಬಂದಾಗ- ಎಲ್ಲರಿಗೂ ಲಾಭ ಆಗದೆ ಹೋದರೆ ಅಂಥ ಡೀಲ್‌ಗಳು ಉಳಿಯುವುದಿಲ್ಲ ಎಂಬ ಒಳನೋಟವನ್ನೂ ಕೊಡುತ್ತಾರೆ. ಧೀರುಭಾಯ್‌ ಕಾಲದಲ್ಲಿ ಇದ್ದ ಪೆಟ್ರೋಕೆಮಿಕಲ್ಸ್‌ ವ್ಯವಹಾರವನ್ನು ಇಂದು ವಿಸ್ತರಿಸಿ ಟೆಲಿಕಾಂನಲ್ಲಿ ಟ್ರೆಂಡ್‌ ಸೆಟ್‌ ಮಾಡಿ, ಈಗ ಇಂಟರ್‌ನೆಟ್‌, ಪೇಮೆಂಟ್‌ ಇತ್ಯಾದಿಗಳಿಗೂ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಮನೋಜ್‌ ಅವರ ಒಳನೋಟ, ಅನುಭವ, ಹೋರಾಟದ ಮನೋಭಾವಗಳು ತುಂಬಾ ಮುಖ್ಯವಾಗಿವೆ ಅನ್ನುತ್ತಾರೆ ರಿಲಯನ್ಸ್‌ನಲ್ಲಿ ಕೆಲಸ ಮಾಡುವ ಮಂದಿ.

ಜಿಯೋ ಜತೆ ಜನರಲ್‌ ಅಟ್ಲಾಂಟಿಕ್‌ 6,600 ಕೋಟಿ ರು. ಹೂಡಿಕೆ!

click me!