ಚಡ್ಡಿದೋಸ್ತ್‌ ಜತೆ ಜಗಳವಾದ್ರೆ ಸಾರಿ ಕೇಳದಿದ್ರೂ ಪರ್ವಾಗಿಲ್ಲ, ಸ್ನೇಹ ಮುರಿದುಕೊಳ್ಳಬೇಡಿ!

By Suvarna News  |  First Published Oct 13, 2022, 5:51 PM IST

ಪ್ರೀತಿಪಾತ್ರರೊಂದಿಗೆ ಕೆಲವೊಮ್ಮೆ ಚರ್ಚೆ ನಡೆದು, ಆ ಚರ್ಚೆ ತೀವ್ರತೆ ಪಡೆದು ಕೆಟ್ಟ ಮಾತು, ತಪ್ಪು ವರ್ತನೆಗಳಿಗೆ ಅವಕಾಶವಾಗಿಬಿಡುತ್ತದೆ. ಸ್ನೇಹಿತರೊಂದಿಗೆ ಅಂತಹ ಜಗಳ ಅಥವಾ ಸನ್ನಿವೇಶಗಳು ಏರ್ಪಟ್ಟರೆ ನಂತರ ಬೇಸರವಾಗುತ್ತದೆ. ಆಗ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಸನ್ನಿವೇಶವನ್ನು ತಿಳಿಯಾಗಿಸಬಹುದು. ಮತ್ತೆ ಸ್ನೇಹವನ್ನು ಚಿಗುರಿಸುವ ಯತ್ನ ಮಾಡಬಹುದು.


ಪ್ರೀತಿ-ಪ್ರೇಮ ಇದ್ದಲ್ಲಿಯೇ ಮುನಿಸೂ ಹೆಚ್ಚು. ಹಾಗೆಯೇ ಸ್ನೇಹದಲ್ಲೂ ಸಹ ಕೆಲವೊಮ್ಮೆ ಜಗಳವಾಗಬಹುದು. ಸ್ನೇಹಿತರ ನಡುವೆ ಕೋಪ, ಸಿಟ್ಟು, ತಪ್ಪು ತಿಳಿವಳಿಕೆ ಸಾಮಾನ್ಯ. ಹಾಗೆಂದು ಅದು ಅಗತ್ಯವೇನೂ ಅಲ್ಲ. ಅದು ಅವರವರ ವ್ಯಕ್ತಿತ್ವದ ಮೇಲೆ ಅವಲಂಬಿತವಾಗಿರುತ್ತದೆ. ಸ್ನೇಹಿತರು ಎಷ್ಟೇ ಪರಸ್ಪರ ಅರಿತುಕೊಂಡಿದ್ದರೂ, ದೀರ್ಘ ಕಾಲದ ಸ್ನೇಹವಾಗಿದ್ದರೂ ಯಾವಾಗಲಾದರೊಮ್ಮೆ ಮಾತಿಗೆ ಮಾತು ಬೆಳೆಯುತ್ತದೆ. “ನಮ್ಮ ಬಗ್ಗೆ ಇಷ್ಟು ತಿಳಿದಿದ್ದರೂ ಹೀಗೆ ಮಾತನಾಡುತ್ತಾರಲ್ಲʼ ಎನ್ನುವ ಭಾವನೆ ಮೂಡಿ ಅಸಮಾಧಾನ ಉಕ್ಕಬಹುದು. ವಾದ-ವಾಗ್ವಾದಗಳಲ್ಲಿ ಕಿರಿಕಿರಿ ಉಂಟಾಗಿ ಪರಸ್ಪರರ ಸನಿಹವೇ ಬೇಡ ಎನ್ನುವ ಸನ್ನಿವೇಶ ನಿರ್ಮಾಣವಾಗಬಹುದು. ಕೆಲವೊಮ್ಮೆ ಈ ಜಗಳ ವಿಕೋಪಕ್ಕೆ ಹೋಗುವುದೂ ಇದೆ. ಆದರೆ, ಕೆಲ ದಿನಗಳ ಬಳಿಕ ಅಥವಾ ಗಂಟೆಗಳ ಬಳಿಕ ಈ ಕುರಿತು ಪಶ್ಚಾತ್ತಾಪವಾಗಬಹುದು. ಮರಳಿ ಸ್ನೇಹವನ್ನು ಪಡೆದುಕೊಳ್ಳುವ ಬಯಕೆ ಚಿಗುರಬಹುದು. ಕಳೆದುಹೋದ ಸ್ನೇಹದ ಬಗ್ಗೆ ಪರಿತಾಪ ಆರಂಭವಾಗಬಹುದು. ಆಗ ಏನು ಮಾಡುತ್ತೀರಿ ಎನ್ನುವುದು ಮುಖ್ಯ. ನಿಮಗೆ ನಿಜವಾಗಿಯೂ ಸ್ನೇಹಿತರನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂದಾದರೆ ಕೆಲವು ಕ್ರಮಗಳ ಮೂಲಕ ಸ್ನೇಹವನ್ನು ಸರಿಪಡಿಸಿಕೊಳ್ಳಲು ಯತ್ನಿಸುವುದು ಉತ್ತಮ.

•    ಕ್ಷಮೆ (Sorry) ಕೇಳಲು ಇಷ್ಟವಿಲ್ಲವೇ?
ಸ್ನೇಹದಲ್ಲಿ (Friendship) ತಪ್ಪು ಮಾತುಗಳು (Bad Words) ವಿನಿಮಯವಾದಾಗ (Exchange) ಮೊದಲಿಗೆ ಕ್ಷಮೆ ಕೇಳುವುದು ಬಹಳ ಉತ್ತಮ ಮಾರ್ಗ. ನಿಮ್ಮ ತಪ್ಪಿರಲಿ, ಇಲ್ಲದಿರಲಿ. ನಿಮ್ಮ ಸ್ನೇಹಿತರ ಬಳಿ ಕ್ಷಮೆ ಕೇಳಲು ನಿಮಗೆ ಈಗೋ (Ego) ಅಡ್ಡ ಬರಬಾರದು. ಆದರೆ, ಒಂದೊಮ್ಮೆ ಆಗಿಹೋದ ಜಗಳದ ಬಗ್ಗೆ ಬೇಸರವಾಗಿ, ಸ್ನೇಹಿತರನ್ನು ಮರಳಿ ಪಡೆಯುವ ಹಂಬಲವಿದ್ದರೂ ಕ್ಷಮೆ ಕೇಳಲು ನಿಮಗೆ ಮನಸ್ಸಿನಲ್ಲದಿದ್ದರೆ ಅವರನ್ನು ನೀವಾಗಿಯೇ ಮತ್ತೆ ಸಂಪರ್ಕ ಮಾಡಿ. ಯಾವುದೇ ಬಂಧವಾದರೂ ಮೊದಲು ಒಂದು ಹೆಜ್ಜೆ ಮುಂದಿಡದೆ ಮತ್ತೆ ಕೂಡಿಕೊಳ್ಳುವುದಿಲ್ಲ. ಹೀಗಾಗಿ ಆ ಹೆಜ್ಜೆಯನ್ನು (Step) ನೀವೇ ಇಟ್ಟುಬಿಡಿ. ಹಳೆಯ ವಿಷಯ ಇತ್ಯರ್ಥವಾಗದಿದ್ದಾಗ ಅದು ಮಗದೊಮ್ಮೆ ಚರ್ಚೆಗೆ ಬರಬಹುದು, ಈ ಕುರಿತು ಸಿದ್ಧವಾಗಿರಿ. ಆ ಸಂದರ್ಭದಲ್ಲಿ ಕೋಪೋದ್ರಿಕ್ತರಾಗದೆ (Anger), ಕೆಟ್ಟ ಮಾತುಗಳಿಲ್ಲದೆ ನಿಮ್ಮ ನಿಲುವನ್ನು ಮಂಡಿಸಬಹುದು. ಮತ್ತೆ ಹಳೆಯ ವಿಷಯ ಕೆದಕಲು ಮನಸ್ಸಿಲ್ಲವಾದರೆ ಬಿಟ್ಟುಬಿಡಬಹುದು.

Tap to resize

Latest Videos

ಸ್ನೇಹಿತನನ್ನೇ ಲವ್ ಮಾಡ್ತಿದೀರಾ? ಹಾಗಿದ್ರೆ ಈ ರೀತಿ ಪ್ರಪೋಸ್ ಮಾಡಿ

•    ಅವರಿಗೆ ಸಾರಿ ಕೇಳಲು ಮನಸ್ಸಿಲ್ಲವಾದರೆ ಚಕಾರ ಬೇಡ
ಅವರಿಗೆ ಒಂದೊಮ್ಮೆ ನಿಮ್ಮಲ್ಲಿ ಸಾರಿ ಕೇಳಲು ಮನಸ್ಸಿಲ್ಲವಾದರೆ ಅವರು ಕೇಳುವುದಿಲ್ಲ. “ಸಾರಿ ಕೇಳುʼ ಎನ್ನುವ ಮಾತುಗಳು ನಿಮ್ಮಿಂದ ಬರಬಾರದು. ಅದರ ಬಗ್ಗೆ ಚಕಾರವನ್ನೂ ಎತ್ತದೆ ಸುಮ್ಮನಿರಬೇಕು. ಕ್ಷಮೆ ಕೇಳುವಂತೆ ಒತ್ತಾಯಿಸುವುದು (Force) ಸಂಬಂಧವನ್ನು (Relationship) ಇನ್ನಷ್ಟು ಹಾಳು ಮಾಡುತ್ತದೆ.

•    ಬರೆದು (Writing) ನಿಮ್ಮ ಅಭಿಪ್ರಾಯ ತಿಳಿಸಿ
ನಿಮಗೆ ಮತ್ತೊಮ್ಮೆ ಆ ವಿಚಾರ ಮಾತನಾಡಲು ಮನಸ್ಸಿಲ್ಲವಾದರೆ ನಿಮ್ಮ ನಿಲುವನ್ನು, ಅಭಿಪ್ರಾಯವನ್ನು (Opinion) ಬರೆಯುವ ಮೂಲಕ ತಿಳಿಸಬಹುದು. ನಿಮ್ಮ ಬಗ್ಗೆ ಸಮರ್ಥಿಸಿಕೊಳ್ಳುವ (Justification) ಅವಕಾಶ ನಿಮಗೆ ಇದ್ದೇ ಇದೆ. ಸರಿಯಾದುದನ್ನು ತಿಳಿಸುತ್ತ, ತಪ್ಪಾದ ವರ್ತನೆಯ (Behaviour) ಬಗ್ಗೆ ಹೇಳುವ ಮೂಲಕ ಬರೆದು ತೋರಿಸಿಕೊಳ್ಳಬಹುದು. ಉದ್ವೇಗದಲ್ಲಿ ತಪ್ಪು ಮಾತುಗಳನ್ನಾಡುವುದಕ್ಕಿಂತ ಇದು ಉತ್ತಮ.

ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಲಿ ಅನ್ನೋ ಗೊಂದಲಕ್ಕೆ ಮುಕ್ತಿ ಹಾಡಿ

•    ಅವರ ದೃಷ್ಟಿಕೋನದಿಂದ (Viewpoint) ಪರಿಸ್ಥಿತಿ ಅವಲೋಕನ
ಸಂಬಂಧದಲ್ಲಿ ಮಾತ್ರವಲ್ಲ, ಯಾವುದೇ ಸಮಸ್ಯೆಯನ್ನಾದರೂ, ವಿಚಾರವನ್ನಾದರೂ ಮತ್ತೊಬ್ಬರ ದೃಷ್ಟಿಕೋನದಿಂದ ಅರಿಯಲು ಯತ್ನಿಸಬಹುದು. ಆಗ ಆ ಸಮಸ್ಯೆ ಬೇರೊಂದು ರೀತಿಯಲ್ಲಿ ಗೋಚರಿಸುತ್ತದೆ. ನಮಗೆ ಕಾಣುವುದು ಬೇರೆ, ಅವರಿಗೆ ಕಾಣುವುದು ಬೇರೆ ಎನ್ನುವ ಸತ್ಯ ತಿಳಿಯುತ್ತದೆ. ಹೀಗೆ ಮಾಡಿದಾಗ ಯಾವುದೇ ವಿಚಾರವನ್ನು ಇನ್ನಷ್ಟು ವಿಸ್ತಾರವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಆಗುತ್ತದೆ. ಆಗಿ ಹೋದ ತಪ್ಪನ್ನು ಸರಿಪಡಿಸಲು ಸಾಧ್ಯವಾಗದಿದ್ದರೂ ಮತ್ತೊಮ್ಮೆ ಅಂತಹ ತಪ್ಪು ನಡೆಯದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ತಪ್ಪು ತಿಳಿವಳಿಕೆ (Misunderstanding) ಹೋಗಿಸಿಕೊಳ್ಳಲು ನೆರವಾಗುತ್ತದೆ. 
 

click me!