ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಾಗಿದೆ. ಹೊಂದಾಣಿಕೆ ಕಡಿಮೆಯಾಗ್ತಿರೋದೆ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸಣ್ಣ ವಿಷ್ಯಕ್ಕೆ ತಾಳ್ಮೆ ಕಳೆದುಕೊಳ್ಳುವ ಜನರು ಸಂಬಂಧ ಹಾಳು ಮಾಡಿಕೊಳ್ತಿದ್ದಾರೆ.
ದಾಂಪತ್ಯ ಅತ್ಯಂತ ಸುಂದರವಾದ ಸಂಬಂಧ ಎಂಬುದರಲ್ಲಿ ಎರಡು ಮಾತಿಲ್ಲ. ಅರೇಂಜ್ಡ್ ಮ್ಯಾರೇಜ್ ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ ಸಂಬಂಧ ಸುಮಧುರವಾಗಿರುತ್ತದೆ. ಮದುವೆಯಾದ್ಮೇಲೆ ದಂಪತಿ ಪ್ರೀತಿಯಿಂದ ಜಗಳವಾಡೋದು, ಕಿರುಚಾಡೋದು ಮಾಮೂಲಿ. ಸಣ್ಣಪುಟ್ಟ ಜಗಳಗಳು ಸಂಬಂಧವನ್ನು ಗಟ್ಟಿ ಮಾಡುತ್ವೆ ಎಂದು ಹಿರಿಯರು ಹೇಳ್ತಾರೆ. ಇಬ್ಬರು ಎಷ್ಟೇ ಅರ್ಥ ಮಾಡಿಕೊಂಡಿದ್ದಾರೆ ಎಂದ್ರೂ, ಸಂಸಾರ ಶುರುವಾಗಿ 30 ವರ್ಷ ದಾಟಿದ್ರೂ, ಲಕ್ಷಾಂತರ ಪ್ರಯತ್ನಗಳ ನಂತರವೂ, ದಂಪತಿ ನಡುವೆ ದೈನಂದಿನ ಜೀವನದಲ್ಲಿ ವಿವಾದಗಳು ಉದ್ಭವಿಸುತ್ತವೆ. ಆಗಾಗ ನಡೆಯುವ ಗಲಾಟೆ ಹಿತವೆನಿಸಬಹುದು. ಆದ್ರೆ ಪ್ರತಿ ದಿನ, ಪ್ರತಿ ಕೆಲಸಕ್ಕೂ ಇಬ್ಬರ ಮಧ್ಯೆ ಜಗಳ ಶುರುವಾದ್ರೆ, ಸಣ್ಣ ವಿಷ್ಯಗಳು ದೊಡ್ಡದಾದ್ರೆ ಆಗ ಸಂಬಂಧ ಹಾಳಾಗುತ್ತದೆ. ದಾಂಪತ್ಯದಲ್ಲಿ ಬಿರುಕು ಶುರುವಾಗುತ್ತದೆ. ದಂಪತಿ, ಸಂಸಾರದಲ್ಲಿ ಸಾರ ಕಳೆದುಕೊಳ್ತಾರೆ. ಅನೇಕ ಬಾರಿ ಸಂಗಾತಿ ಮಧ್ಯೆ ಶುರುವಾಗುವ ಜಗಳ ತುಂಬಾ ಸಣ್ಣ ಕಾರಣಕ್ಕಾಗಿರುತ್ತದೆ. ಆದ್ರೆ ಬರ್ತಾ ಬರ್ತಾ ಅದು ದೊಡ್ಡದಾಗುತ್ತದೆ. ವಿಚ್ಛೇದಿತರು ತಮ್ಮ ದಾಂಪತ್ಯ ಮುರಿದು ಬೀಳಲು ಕಾರಣವೇನು ಎಂಬ ಸಂಗತಿಯನ್ನು ಹೇಳಿದ್ದಾರೆ. ಅದನ್ನು ನಾವಿಂದು ನಿಮ್ಮ ಮುಂದೆ ಇಡ್ತೇವೆ.
ವಿಚ್ಛೇದನ (Divorce) ಕ್ಕೆ ಕಾರಣವಾಯ್ತು ಈ ಸಣ್ಣ ಸಂಗತಿ :
ಅಡುಗೆ (Cooking )ತಯಾರಿಸೋರು ಯಾರು? : ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಗಾತಿ ಮಧ್ಯೆ ಗಲಾಟೆ ಹೆಚ್ಚಾಗಿದೆ ಎಂಬುದನ್ನು ಅನೇಕರು ಒಪ್ಪಿಕೊಳ್ತಾರೆ. ವರ್ಕ್ ಫ್ರಂ ಹೋಮ್ (Work From Home ) ನಿಂದಾಗಿ ಮನೆಯಲ್ಲಿಯೇ ಅನೇಕ ಸಮಯ ಕಳೆಯುತ್ತಿದ್ದ ಸಂಗಾತಿ ಮಧ್ಯೆ ಸಣ್ಣ ವಿಷ್ಯಗಳು ದೊಡ್ಡದಾಗ್ತಿದ್ದವು. ವ್ಯಕ್ತಿಯೊಬ್ಬ ತಮ್ಮ ಮನೆಯಲ್ಲಿ ಆಗ್ತಿದ್ದ ಗಲಾಟೆ ಬಗ್ಗೆ ಹೇಳಿದ್ದಾನೆ. ಆತ ಹಾಗೂ ಆತನ ಪತ್ನಿ ಇಬ್ಬರೂ ಕೆಲಸ ಮಾಡ್ತಿದ್ದಾರೆ. ವರ್ಕ್ ಫ್ರಂ ಹೋಮ್ ಸಂದರ್ಭದಲ್ಲಿ ಮಧ್ಯಾಹ್ನದ ಊಟ ಯಾರು ಸಿದ್ಧಪಡಿಸ್ತಾರೆ ಎಂಬ ಪ್ರಶ್ನೆ ಶುರುವಾಗಿತ್ತಂತೆ. ಇದೇ ವಿಷ್ಯಕ್ಕೆ ಇಬ್ಬರು ಜಗಳವಾಡ್ತಿದ್ದರಂತೆ. ಕೆಲಸದ ಟೈಂ ಹಾಗೂ ಯಾರು ಅಡುಗೆ ಮಾಡ್ಬೇಕು ಎಂಬ ಗಲಾಟೆ ಜೋರಾಗಿ ಪತ್ನಿ ಮನೆ ಬಿಟ್ಟು ಹೋದ್ಲು. ನಂತ್ರ ವಿಚ್ಛೇದನವಾಯ್ತು ಎಂದಿದ್ದಾನೆ ಆತ.
ಖಾತೆಯಲ್ಲಿರೋ ಹಣವೆಷ್ಟು? : ಹಣ ಕೂಡ ದಾಂಪತ್ಯ ಹಳಸಲು ಕಾರಣವಾಗುತ್ತದೆ. ಮಹಿಳೆಯೊಬ್ಬಳು ತನ್ನ ಕಥೆ ಹೇಳಿದ್ದಾಳೆ. ಪತ್ನಿಯಾಗಿ ಜವಾಬ್ದಾರಿ ನಿಭಾಯಿಸೋದು ಎಷ್ಟು ಕಷ್ಟ. ಪತಿ ಆಗಾಗ ನನ್ನ ಬ್ಯಾಂಕ್ ಬ್ಯಾಲೆನ್ಸ್ ಕೇಳ್ತಿದ್ದ. ಸೇವಿಂಗ್ಸ್ ಎಲ್ಲಿ ? ಎಷ್ಟಿದೆ ಎಂದು ಪ್ರಶ್ನೆ ಮಾಡ್ತಿದ್ದ. ಒಂದು ದಿನ ಫೋನ್ ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಮತ್ತೊಂದು ದಿನ ಕಪಾಟಿನಲ್ಲಿದ್ದ ಪಾಸ್ಬುಕ್ ಚೆಕ್ ಮಾಡಲು ಮುಂದಾಗಿದ್ದಾನೆ. ಅದೇ ರಾತ್ರಿ ನಾನು ಅವನ ಜೊತೆ ಕೊನೆಯದಾಗಿ ಕಳೆದೆ ಎನ್ನುತ್ತಾಳೆ ಮಹಿಳೆ.
ಗಂಡನಿಗೆ ಬಾಲ್ಯದ ಗೆಳತಿ ಕಳುಹಿದ ಮೆಸೇಜ್ ನೋಡಿ ಪತ್ನಿ ಶಾಕ್..!
ವಿಚ್ಛೇದನಕ್ಕೆ ಕಾರಣವಾಯ್ತು ಸೋಪ್ : ನಿಮಗೆ ವಿಚಿತ್ರವೆನ್ನಿಸಬಹುದು. ಆದ್ರೆ ವ್ಯಕ್ತಿಯೊಬ್ಬನ ಸಂಸಾರ ಮುರಿದು ಬೀಳಲು ಸೋಪ್ ಕಾರಣವಾಗಿದೆ. ಆತ ಬಾಲ್ಯದಿಂದಲೂ ಒಂದೇ ಕಂಪನಿ ಸೋಪ್ ಬಳಸ್ತಿದ್ದನಂತೆ. ಆತನ ಪತ್ನಿ ಸ್ಕಿನ್ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಿದ್ದಳಂತೆ. ಪ್ರತಿ ದಿನ ಹೊಸ ಹೊಸ ಸೋಪ್ ಬಳಸಲು ಹೇಳ್ತಿದ್ದಳಂತೆ. ಪತಿ ಇನ್ನೂ ಬಾಲ್ಯದಲ್ಲಿಯೇ ಇದ್ದಾನೆ. ತಂದೆ – ತಾಯಿ ಮಾತು ಕೇಳ್ತಾನೆ ಎನ್ನುತ್ತಿದ್ದ ಪತ್ನಿ ಇದೇ ವಿಷ್ಯಕ್ಕೆ ಗಲಾಟೆ ಮಾಡಿದ್ದಾಳಂತೆ. ಒಂದು ದಿನ ಗಲಾಟೆ ವಿಪರೀತವಾಗಿ ದೂರವಾದ್ವಿ ಎನ್ನುತ್ತಾನೆ ವ್ಯಕ್ತಿ.
ಪತಿಯ ಜಿಪುಣತನ : ನಾನು ಹಾಗೂ ಪತ್ನಿ ಇಬ್ಬರೂ ಶ್ರಮಜೀವಿಗಳು. ಆದ್ರೆ ಆಕೆ ನನಗೆ ಜಿಪುಣ ಎಂದಿದ್ದೇ ನಮ್ಮ ಬಾಳಲ್ಲಿ ಬಿರುಗಾಳಿ ಎಬ್ಬಿಸಿತು ಎನ್ನುತ್ತಾನೆ ವ್ಯಕ್ತಿ. ನಾನು ಸೇವಿಂಗ್ ನಲ್ಲಿ ಆಸಕ್ತಿ ಹೊಂದಿದ್ದೆ. ಆದ್ರೆ ಆಕೆ ಹೆಚ್ಚು ಖರ್ಚು ಮಾಡ್ತಿದ್ದಳು. ಖರ್ಚಿನಲ್ಲಿ ಇಬ್ಬರೂ ಅರ್ಧ ಮಾಡ್ತಿದ್ದರಿಂದ ನನಗೆ ಅವಳ ಖರೀದಿ ಹೆಚ್ಚು ಹೊರೆಯಾಗಿರಲಿಲ್ಲ. ಆದರೆ ಒಂದು ದಿನ ನಾನು ಆಕೆ ಬಯಸಿದ ವಸ್ತು ಖರೀದಿಗೆ ಹಣ ನೀಡಲಿಲ್ಲ. ಇದ್ರಿಂದ ಕೋಪಗೊಂಡ ಆಕೆ ಜಿಪುಣ ಎಂದಳು. ಇದ್ರಿಂದ ನನ್ನ ಅಹಂಗೆ ನೋವಾಯ್ತು. ಹಾಗಾಗಿ ಆಕೆ ಮೇಲೆ ಕಿರುಚಾಡಿದೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆರೆತು ಒಂದು ಗಂಟೆಯಲ್ಲಿ ಇಬ್ಬರೂ ಬೇರೆಯಾದ್ವಿ ಎನ್ನುತ್ತಾನೆ ವ್ಯಕ್ತಿ.
ಅಬ್ಬಬ್ಬಾ ಎಂತೆಥಾ ಕೆಲಸ ಇರುತ್ತೆ ನೋಡಿ: ತಬ್ಬಿ ಮುದ್ದಾಡಿ ಗಂಟೆಗೆ ಏಳು ಸಾವಿರ ಸಂಪಾದಿಸೋ ಭೂಪ
ವಿದೇಶದ ಮೋಹ : ಅವಿಭಕ್ತ ಕುಟುಂಬದಲ್ಲಿ ನೆಲೆಸಿದ್ದ ವ್ಯಕ್ತಿ ವಿಭಕ್ತ ಕುಟುಂಬದ ಹುಡುಗಿ ಮದುವೆಯಾಗಿದ್ದನಂತೆ. ಆಕೆಗೆ ವಿದೇಶಕ್ಕೆ ಹೋಗುವ ಆಸೆಯಿತ್ತಂತೆ. ಕೆಲಸದ ಆಫರ್ ಬಂದಾಗ ವಿದೇಶಕ್ಕೆ ಹೋಗುವಂತೆ ಒತ್ತಡ ಹೇರಿದ್ದಾಳೆ. ಆದ್ರೆ ತಂದೆ – ತಾಯಿ ಬಿಟ್ಟು ಬರಲು ಪತಿ ಒಪ್ಪದ ಕಾರಣ ಆತನಿಗೆ ವಿಚ್ಛೇದನ ನೀಡಿದ್ದಾಳಂತೆ.