ನಾನೂ ಮತ್ತು ಬಾಯ್‌ಫ್ರೆಂಡ್ ರೆಗ್ಯುಲರ್ ಆಗಿ ಸೆಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದೇವೆ. ನನ್ನ ದಪ್ಪ ಹೆಚ್ಚಾಗಿ ಅನಾಕರ್ಷಕ ಆಗಿಬಿಡ್ತೀನಾ ಎಂಬುದು ಒಬ್ಬ ಅವಿವಾಹಿತೆ ಉದ್ಯೋಗಿ ಮಹಿಳೆಯ ಆತಂಕ.
ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೆರಡು. ಮದುವೆಯಾಗಿಲ್ಲ. ನನ್ನ ಮೈಕಟ್ಟಿನ (fitness) ಬಗ್ಗೆ ಹೆಚ್ಚು ಎಚ್ಚರ ವಹಿಸಿದ್ದೇನೆ. ನನ್ನದೇ ಆಫೀಸ್‌ನಲ್ಲಿ ಇರುವ ಸಹೋದ್ಯೋಗಿ ಬಾಯ್‌ಫ್ರೆಂಡ್ (boyfriend) ಆಗಿದ್ದಾನೆ. ಇತ್ತೀಚೆಗೆ ವಾರಕ್ಕೆರಡೋ ಮೂರೋ ಬಾರಿ ಅವನ ಅಪಾರ್ಟ್‌ಮೆಂಟ್‌ನಲ್ಲಿ ನಮ್ಮ ದೈಹಿಕ ಮಿಲನ (sex) ನಡೆಯುತ್ತದೆ. ನಮಗಿಬ್ಬರಿಗೂ ಇದರಿಂದ ಸಂತೋಷವಿದೆ. ಆದರೆ ಮದುವೆಯಾಗುವ ಬಗ್ಗೆ ಸದ್ಯ ಯಾವುದೇ ಯೋಚನೆ ಇಲ್ಲ. ನನ್ನ ಚಿಂತೆ ಏನೆಂದರೆ, ನಿಯಮಿತ ಸೆಕ್ಸ್‌ನಿಂದ ನನ್ನ ಮೈ ದಪ್ಪ ಆಗಬಹುದ? ಹೆಣ್ಣುಮಕ್ಕಳು ನಿಯಮಿತವಾಗಿ ಸೆಕ್ಸ್ ಜೀವನದಲ್ಲಿ (sex life) ತೊಡಗಿಕೊಳ್ಳಲು ಶುರು ಮಾಡಿದಾಗ ಅವರ ತೂಕ ಹೆಚ್ಚಾಗುತ್ತದೆ. ಮುಖ್ಯವಾಗಿ ಎದೆ ಮತ್ತು ಹಿಂಭಾಗದಲ್ಲಿ ಕೊಬ್ಬು ಹೆಚ್ಚುತ್ತೆ. ಅಲ್ಲಿಯವರೆಗೆ ಬಿಗಿಯಾಗಿದ್ದ ಮೈಕಟ್ಟು ಬಿಗು ಕಳೆದುಕೊಂಡು ಸಡಿಲವಾಗುತ್ತೆ... ಅಂತಲ್ಲ ಹೇಳುವುದು ಕೇಳಿದ್ದೇನೆ. ಮದುವೆಗೂ ಮುಂಚೆ ಒಣಕಲು ಕಡ್ಡಿಯ ಹಾಗಿದ್ದ ಹುಡುಗಿ ಮದುವೆಯಾಗಿ ತಿಂಗಳಾಗುತ್ತಲೇ ದಪ್ಪಗಾಗಿದ್ದನ್ನು ನೋಡಿದ್ದೇನೆ. ಅವಳ ತೂಕ ಏರುತ್ತ ಹೋಗುತ್ತದೆ. ಅವಳು ಸೌಂದರ್ಯ, ಆಕರ್ಷಣೆಗಳೆರಡನ್ನೂ ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆ ಬಂದವರ ಥರ ಆಡುತ್ತಿರುತ್ತಾಳೆ. ಯಾಕೋ ಈ ಯೋಚನೆ ತಲೆಯೊಳಗೆ ಕೂತು ಬಿಟ್ಟಿದೆ, ಈ ಥರ ಅನಾಕರ್ಷಕ ಆಗಲು ನನಗಿಷ್ಟವಿಲ್ಲ. ಸೆಕ್ಸ್ ನಡೆಸುತ್ತಿದ್ದರೂ ತೂಕ ಹೆಚ್ಚಾಗದ ಹಾಗೆ ತಡೆಯೋಕೆ ಸಾಧ್ಯ ಇಲ್ಲವಾ?
ಉತ್ತರ: ಇದು ಬಹಳ ಜನಪ್ರಿಯವಾದ ನಂಬಿಕೆ. ಯಾವಾಗ ಹೆಣ್ಣೊಬ್ಬಳ ಸೆಕ್ಸ್ ಲೈಫ್ ಶುರುವಾಗುತ್ತೋ ಆಗ ಅವಳ ತೂಕ ಹೆಚ್ಚಾಗುತ್ತೆ. ಎದೆ ಮತ್ತು ಹಿಪ್ ದೊಡ್ಡದಾಗುತ್ತೆ ಅಂತೆಲ್ಲ ಹೇಳ್ತಾರೆ. ಆದರೆ ಇದಕ್ಕೆ ಯಾವ ಪುರಾವೆಯೂ ಇಲ್ಲ. ಮದುವೆ ಆದ ಮೇಲೆ ಅಥವಾ ಅವಳ ಸೆಕ್ಸ್ ಲೈಫ್ ಶುರುವಾದ ಮೇಲೆ ಎದೆ ಮತ್ತು ಹಿಂಭಾಗ ದಪ್ಪಗಾಗುತ್ತೆ ಅಥವಾ ಶೇಪ್ ಕಳ್ಕೊಳುತ್ತೆ ಅನ್ನುವುದಕ್ಕೆ ವೈಜ್ಞಾನಿಕವಾಗಿ ಯಾವ ಪುರಾವೆಯೂ ಇಲ್ಲ. ವೀರ್ಯ ಹೆಣ್ಣಿನ ದೇಹ ಸೇರಿಸಿದರೂ ಅದು ಅವಳ ರಕ್ತನಾಳಗಳಲ್ಲೇನು ಸೇರಿಕೊಳ್ಳಲ್ಲ. ಅಥವಾ ನೇರವಾಗಿ ಜೀರ್ಣಕ್ರಿಯೆಗೆ ಒಳಪಡಲ್ಲ. ಹೀಗಾಗಿ ಕ್ಯಾಲೊರಿ ಹೆಚ್ಚಾಗೋದು ಹೇಗೆ? ಓರಲ್ ಸೆಕ್ಸ್ ಮೂಲಕ ಅವಳ ದೇಹ ಸೇರಿತು ಅಂತಾದರೂ ದೇಹ ಸೇರುವುದು ಕೇವಲ ಮೂರು ಎಂಎಲ್‌ನಷ್ಟು ವೀರ್ಯ ಮಾತ್ರ. ಅದರಲ್ಲಿರುವುದು ಕೇವಲ 15 ಕ್ಯಾಲೊರಿ ಅಷ್ಟೇ. ಅದರಿಂದ ದೇಹದ ತೂಕ ಖಂಡಿತವಾಗಿ ಹೆಚ್ಚಾಗಲ್ಲ.
ಯಾವತ್ತೂ ತೋರದ ಪ್ರೀತಿ ಗಂಡ ತೋರಿದರೆ ಹೆಂಡ್ತಿಗೇಕೆ ಡೌಟ್
ಹೀಗೆ ವೈದ್ಯಕೀಯ ಅಥವಾ ವೈಜ್ಞಾನಿಕ ಕಾರಣಗಳಿಲ್ಲದಿದ್ದರೂ ಕೆಲವೊಂದು ಅಧ್ಯಯನಗಳ ಪ್ರಕಾರ ಮದುವೆಯಾದ ಮೇಲೆ ತೂಕ ಹೆಚ್ಚಾಗೋದು ಹೌದು, ಆದರೆ ಕೇವಲ ಹೆಣ್ಣಿನ ತೂಕ ಮಾತ್ರವಲ್ಲ, ಗಂಡಿನ ತೂಕವೂ ಹೆಚ್ಚಾಗುತ್ತದೆ. ಗಂಡು ಹೆಣ್ಣುಗಳಿಬ್ಬರ ದೇಹದ ಬಿಗುವೂ ಕಡಿಮೆಯಾಗಿ ದೇಹದ ತುಸು ಶೇಪ್ ಕಳೆದುಕೊಳ್ಳೋದು ಹೌದು ಅನ್ನುತ್ತವೆ ಈ ಸ್ಟಡಿಗಳು. ಮದುವೆಯಾದ ಮೇಲೆ ದೇಹದ ಬಗ್ಗೆ ಒಂದು ಸುರಕ್ಷಿತ ಭಾವ ಹುಟ್ಟಿ ಹೀಗಾಗಬಹುದು ಎನ್ನಲಾಗುತ್ತದೆ.
ಇನ್ನು ಕೆಲವೊಮ್ಮೆ ಮಕ್ಕಳಾಗದಂತೆ ತೆಗೆದುಕೊಳ್ಳುವ ಗರ್ಭ ನಿರೋಧಕಗಳು ನಿಮ್ಮ ತೂಕ ಹೆಚ್ಚಿಸಬಹುದು. ನಿಯಮಿತ ಗರ್ಭ ನಿರೋಧಕಗಳ ಬಳಕೆಯೆ ಬಗ್ಗೆ ಸ್ವಲ್ಪ ಎಚ್ಚರವಿರಲಿ.
ಇಲ್ಲಿ, ತಂದೆಯನ್ನೇ ಮಗಳು ಮದುವೆಯಾಗೋ ಸಂಪ್ರದಾಯವಿದೆ
ಪ್ರಚಲಿತ ನಂಬಿಕೆಗೆ ವಿರುದ್ಧವಾಗಿ ಹೇಳುವ ಇನ್ನೊಂದು ಸ್ಟಡಿಯೂ ಇದೆ. ಆ ಪ್ರಕಾರ ನಿತ್ಯ ಸೆಕ್ಸ್ ಮಾಡೋದರಿಂದ ಸುಲಭವಾಗಿ ಕ್ಯಾಲೋರಿ ಇಳಿಸಬಹುದು. ನೀವು ಬಹಳಷ್ಟು ಹೊತ್ತು ವ್ಯಾಯಾಮ ಮಾಡಿದ್ದಕ್ಕಿಂತ ಹೆಚ್ಚಿನ ಕ್ಯಾಲೋರಿ ಒಂದು ಸಲದ ಸೆಕ್ಸ್‌ನಲ್ಲಿ ಇಳಿಯುತ್ತದೆ ಅಂತಾರೆ. ವ್ಯಾಯಾಮ ಮಾಡೋದರಿಂದ ನಿಮ್ಮ ದೇಹ ತುಸು ಹಗುರಾಗಬಹುದು. ಆದರೆ ಸೆಕ್ಸ್‌ನಿಂದ ದೇಹ ಹಗುರಾಗುವ ಜೊತೆಗೆ ಟೆನ್ಶನ್, ಸ್ಟ್ರೆಸ್ ಕಡಿಮೆಯಾಗಿ ಮನಸ್ಸೂ ಹಗುರಾಗುತ್ತದೆಯಂತೆ.
ನಿಮಗೊಂದು ಕಿವಿಮಾತು. ಆರೋಗ್ಯಪೂರ್ಣ ಸಮತೋಲನದ ಆಹಾರ ಸೇವನೆ ಮಾಡುತ್ತಿದ್ದರೆ, ನಿತ್ಯ ವ್ಯಾಯಾಮ ಮಾಡುತ್ತಿದ್ದರೆ, ಯೋಗ ಪ್ರಾಣಾಯಾಮ ಇತ್ಯಾದಿಗಳನ್ನು ನಿಯಮಿತವಾಗಿ ಮಾಡುತ್ತಿದ್ದರೆ ಖಂಡಿತಾ ಶರೀರ ದಪ್ಪಗಾಗಲ್ಲ. ಫಿಟ್ ನೆಸ್ ಕಡಿಮೆಯಾಗಲ್ಲ. ವ್ಯಾಯಾಮ, ಆಹಾರದತ್ತ ನಿರ್ಲಕ್ಷ್ಯ ಮಾಡಿದರೆ ಫಿಟ್‌ನೆಸ್ ಕಳೆದುಕೊಳ್ಳುತ್ತಾರೆ. ನಿಮ್ಮ ಡಯೆಟ್, ವರ್ಕೌಟ್ ಕರೆಕ್ಟಾಗಿರುವ ಹಾಗೆ ನೋಡಿಕೊಳ್ಳಿ. ಬ್ಯೂಟಿ, ಸ್ಕಿನ್‌ಕೇರ್ ಹಾಗೂ ಅಲಂಕಾರದಲ್ಲಿ ಆಸಕ್ತಿ ಇರಲಿ.
ಬಾಂಧವ್ಯ ಮಧುರವಾಗಿರಲು ಇಲ್ಲಿವೆ ಕೆಲಪು ಸಿಂಪಲ್ ಟೆಕ್ನಿಕ್ಸ್!