ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪ್ರತಿ ದೇಶವೂ ಭಿನ್ನ ಕಾನೂನನ್ನು ಹೊಂದಿದೆ. ಕೆಲವೆಡೆ ದಂಪತಿ ಬೇರೆಯಾಗೋದು ಸುಲಭವಾದ್ರೆ ಮತ್ತೆ ಕೆಲವೆಡೆ ನಾನಾ ಪರೀಕ್ಷೆ ಎದುರಿಸಬೇಕು. ಇನ್ನು ಕೆಲವೆಡೆ ವಿಚಿತ್ರ ನಿಯಮಗಳನ್ನು ಪಾಲನೆ ಮಾಡ್ಬೇಕಾಗುತ್ತದೆ.
ಮದುವೆ ಎಂಬ ಬಂಧನದಲ್ಲಿ ಬಂಧಿಯಾದ್ಮೇಲೆ ಆ ಸಂಬಂಧದಿಂದ ಸುಲಭವಾಗಿ ಹೊರಗೆ ಬರಲು ಸಾಧ್ಯವಿಲ್ಲ. ಬೇರ್ಪಡಬೇಕೆಂದ್ರೆ ಕಾನೂನು ನಿಯಮಗಳನ್ನು ಪಾಲಿಸಬೇಕು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ಅದ್ರ ವಿಚಾರಣೆ ನಡೆದು, ಕೋರ್ಟ್ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ ಮೇಲೆ ದಂಪತಿ ಬೇರ್ಪಡಬಹುದು. ಇದಕ್ಕೂ ಮುನ್ನ ದಂಪತಿ ಹೊಂದಾಣಿಕೆಗೆ ಪ್ರಯತ್ನ ನಡೆಸ್ತಾರೆ. ಕೊನೆ ಹಂತದವರೆಗೂ ಅದು ಸಾಧ್ಯವಿಲ್ಲ ಎನ್ನಿಸಿದಾಗ ವಿಚ್ಛೇದನದ ನಿರ್ಧಾರ ತೆಗೆದುಕೊಳ್ತಾರೆ.
ಹಿಂದೆ ಭಾರತ (India) ದಲ್ಲಿ ವಿಚ್ಛೇದನ (Divorce) ಪಡೆಯೋದು ಅಪರೂಪವಾಗಿತ್ತು. ವಿಚ್ಛೇದಿತರನ್ನು ಸಮಾಜ ನೋಡ್ತಿದ್ದ ದೃಷ್ಟಿಯೇ ಭಿನ್ನವಾಗಿತ್ತು. ಆದ್ರೀಗ ಅದ್ರ ಪ್ರಕ್ರಿಯೆ ಮೊದಲಿಗಿಂತ ಸರಳವಾಗಿದೆ. ಹಾಗೆಯೇ ಭಾರತೀಯರು ಬದಲಾಗಿದ್ದಾರೆ. ಸಣ್ಣಪುಟ್ಟ ವಿಷ್ಯಕ್ಕೂ ವಿಚ್ಛೇದನ ಪಡೆಯುವ ಭಾರತೀಯರ ಸಂಖ್ಯೆ ಕೂಡ ಹೆಚ್ಚಾಗಿದೆ. ಬರೀ ಭಾರತ ಮಾತ್ರವಲ್ಲ ವಿಶ್ವದ ಎಲ್ಲ ದೇಶಗಳೂ ವಿಚ್ಛೇದನಕ್ಕೆ ಸಂಬಂಧಿಸಿದಂತೆ ತನ್ನದೇ ಕಾನೂನು (Law) ಗಳನ್ನು ಹೊಂದಿವೆ. ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ವಿಚ್ಛೇದನ ಅರ್ಜಿಗಳು ಸಲ್ಲಿಕೆಯಾಗುತ್ತವೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಕೆಲ ದೇಶಗಳ ಕಾನೂನು ವಿಚಿತ್ರವಾಗಿದೆ. ನಾವಿಂದು ಆಸಕ್ತಿಕರವಾಗಿರುವ ವಿಚ್ಛೇದನ ಕಾನೂನಿನ ಬಗ್ಗೆ ನಿಮಗೆ ತಿಳಿಸ್ತೇವೆ.
ಸ್ಮಾರ್ಟ್ ಬಾಯ್‌ಫ್ರೆಂಡ್: ವೀಡಿಯೋ ನೋಡಿ ನಮಗೂ ಇಂತ ಗೆಳೆಯ ಬೇಕೆಂದ ಹುಡುಗೀರು
ಆಸಕ್ತಿಕರವಾಗಿದೆ ಇಲ್ಲಿನ ವಿಚ್ಛೇದನ ಕಾನೂನು :
ಐರ್ಲೆಂಡ್ : ಐರ್ಲೆಂಡ್ ನಲ್ಲಿ 1995ರವರೆಗೂ ವಿಚ್ಛೇದನದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಈಗ ಐರ್ಲೆಂಡ್ ನಲ್ಲಿ ನೋ ಫಾಲ್ಟ್ ಡಿವೋರ್ಸ್ ಸಿಸ್ಟಂ ಜಾರಿಯಲ್ಲಿದೆ. ವಿವಾಹಿತ ದಂಪತಿ ವಿಚ್ಛೇದನ ಪಡೆಯಬೇಕೆಂದ್ರೆ ಪರಸ್ಪರ ಯಾರೊಬ್ಬರ ತಪ್ಪನ್ನು ಕೂಡ ಕಾನೂನಿನ ಮುಂದೆ ಹೇಳಬೇಕಾಗಿಲ್ಲ. ಭಾರತದಲ್ಲಿ ದಂಪತಿ ವಿಚ್ಛೇದನಕ್ಕೆ ಕಾರಣ ಹೇಳ್ಬೇಕು. ಒಬ್ಬರ ತಪ್ಪು ವಿಚ್ಛೇದನದವರೆಗೆ ಬಂದಿದೆ ಎಂದು ಕೋರ್ಟ್ ಗೆ ತಿಳಿಸಬೇಕು. ಆದ್ರೆ ಐರ್ಲೆಂಡ್ ನಲ್ಲಿ ತಪ್ಪನ್ನು ಹೇಳ್ಬೇಕಾಗಿಲ್ಲ. ಆದ್ರೆ ವಿಚ್ಛೇದನ ಸಿಗುವ ಮುನ್ನ ದಂಪತಿ ಎರಡರಿಂದ ಮೂರು ವರ್ಷ ಬೇರೆಯಾಗಿ ವಾಸ ಮಾಡ್ಬೇಕು. ಹಾಗೆಯೇ ಇಬ್ಬರು ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಬಾರದು. ಅವಲಂಬಿಸಿರುವವರನ್ನು ನೋಡಿಕೊಳ್ಳುವ ಅವಕಾಶ ಇಬ್ಬರಿಗೂ ಸಮಾನವಾಗಿರಬೇಕು.
BRAHMAPUTRA RIVER: ಭಾರತದಲ್ಲಿರೋ ಒಂದೇ ಒಂದು ಪುರುಷ ನದಿ ಇದು!
ಚಿಲಿ : ಚಿಲಿಯಲ್ಲಿ 2004ರಿಂದ ವಿಚ್ಛೇದನ ಕಾನೂನು ಮಾನ್ಯವಾಗಿದೆ. ವಿಚ್ಛೇದನ ಪಡೆಯುವ ದಂಪತಿ ಒಂದು ವರ್ಷ ಪ್ರತ್ಯೇಕವಾಗಿ ವಾಸಮಾಡಬೇಕಾಗುತ್ತದೆ. ವಿಚ್ಛೇದನಕ್ಕೆ ಇಬ್ಬರ ಒಪ್ಪಿಗೆಯೂ ಮುಖ್ಯವಾಗುತ್ತದೆ. ಒಂದ್ವೇಳೆ ಇಬ್ಬರಲ್ಲಿ ಒಬ್ಬರು ಇದಕ್ಕೆ ಒಪ್ಪಿಗೆ ನೀಡಿಲ್ಲವೆಂದ್ರೆ ಈ ಪ್ರಕರಣದ ಇತ್ಯರ್ಥಕ್ಕೆ ಮೂರು ವರ್ಷ ಹಿಡಿಯುವ ಸಾಧ್ಯತೆಯಿರುತ್ತದೆ. ಒಂದ್ವೇಳೆ, ಒಬ್ಬರು ಇನ್ನೊಬ್ಬರ ದಾಂಪತ್ಯ ದ್ರೋಹ, ಸಲಿಂಗಕಾಮ, ವೇಶ್ಯಾವಾಟಿಕೆ, ಮಾದಕ ವ್ಯಸನ ಅಥವಾ ಅಪರಾಧ ಚಟುವಟಿಕೆಯನ್ನು ಸಾಬೀತುಪಡಿಸಿದರೆ ಬೇಗ ವಿಚ್ಛೇದನ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.
ಜಪಾನ್ : ಜಪಾನ್ ನಲ್ಲಿ ದಂಪತಿ ವಿಚ್ಛೇದನ ಪಡೆಯುವುದು ಸುಲಭ. ದಂಪತಿ ಒಂದು ಸಹಿಯೊಂದಿಗೆ ಫಾರ್ಮ್ ಭರ್ತಿ ಮಾಡಿದ್ರೆ ಸಾಕು. ಆದ್ರೆ ದಂಪತಿ ಮಕ್ಕಳನ್ನು ಹೊಂದಿದ್ದರೆ ಮಾತ್ರ ಇದ್ರ ಪ್ರಕ್ರಿಯೆ ಸ್ವಲ್ಪ ಕಠಿಣವಾಗಿರುತ್ತದೆ. ಸುಲಭವಾಗಿ ವಿಚ್ಛೇದನ ಸಿಗುವುದಿಲ್ಲ.
ಸಮಾವೊ : ಸಮಾವೊದಲ್ಲಿ ವಿಚ್ಛೇದನ ನೀಡಲು ಮಹಿಳೆಯರಿಗೆ ವಿಶೇಷ ಅಧಿಕಾರವಿದೆ. ಪತಿ, ಪತ್ನಿಯ ಹುಟ್ಟುಹಬ್ಬವನ್ನು ಮರೆತಿದ್ದರೆ ಆಕೆ, ಪತಿಗೆ ವಿಚ್ಛೇದನ ನೀಡಬಹುದು. ಪತಿ ಯಾವುದೇ ತಪ್ಪು ಮಾಡಿದ್ದು, ವಿಚ್ಛೇದನ ನೀಡ್ಬೇಕೆಂದ್ರೆ ಪತ್ನಿ ವಿಚ್ಛೇದನ ನೀಡುವ ಅಧಿಕಾರ ಹೊಂದಿರಬೇಕು.
ನ್ಯೂಯಾರ್ಕ್ : ನ್ಯೂಯಾರ್ಕ್‌ನಲ್ಲಿ ಸಂಗಾತಿ ಮಾನಸಿಕ ಅಸ್ವಸ್ಥ, ಹುಚ್ಚರು ಎಂದು ಸಾಬೀತುಪಡಿಸಿದರೆ ಈ ಆಧಾರದ ಮೇಲೆ ವಿಚ್ಛೇದನವನ್ನು ಪಡೆಯಬಹುದು. ಆದರೆ ಇದಕ್ಕೆ ಷರತ್ತುಗಳಿವೆ. ಮದುವೆಯಾದ ಐದು ವರ್ಷಗಳಿಂದಲೂ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದು ಸಾಭೀತುಪಡಿಸಬೇಕು. ಅಷ್ಟೇ ಅಲ್ಲ ವಿಚ್ಛೇದನದ ನಂತ್ರವೂ ಸಂಗಾತಿ ಆರೋಗ್ಯ ನೋಡಿಕೊಳ್ಳಬೇಕು.