ಮದ್ವೆ ಮಂಟಪದಲ್ಲೇ ನವಜೋಡಿಯ ಕಿತ್ತಾಟ, ಅತಿಥಿಗಳತ್ತ ಸ್ವೀಟ್ಸ್, ಗ್ಲಾಸ್‌ ಎಸೆದ ವಧು!

Published : Jun 29, 2023, 03:20 PM ISTUpdated : Jun 29, 2023, 03:23 PM IST
ಮದ್ವೆ ಮಂಟಪದಲ್ಲೇ ನವಜೋಡಿಯ ಕಿತ್ತಾಟ, ಅತಿಥಿಗಳತ್ತ ಸ್ವೀಟ್ಸ್, ಗ್ಲಾಸ್‌ ಎಸೆದ ವಧು!

ಸಾರಾಂಶ

ಕಾಲ ಅದೆಷ್ಟೇ ಬದಲಾದರೂ ಮದುವೆ ವಿಚಾರದಲ್ಲಿ ಭಾರತೀಯ ಪೋಷಕರ ಮನಸ್ಥಿತಿಯಂತೂ ಬದಲಾಗಿಲ್ಲ. ಹುಡುಗಿಯ ಒಪ್ಪಿಗೆ ಕೇಳದೆ ಮದ್ವೆ ಫಿಕ್ಸ್ ಮಾಡಿಬಿಡುತ್ತಾರೆ. ಕೊನೆ ಕ್ಷಣದಲ್ಲಿ ಹುಡುಗಿ ಓಡಿಹೋಗುವುದೋ, ಮದುವೆಯಾಗಲ್ಲ ಅಂತ ಗಲಾಟೆ ಮಾಡುವುದೋ ನಡೆಯುತ್ತದೆ. ಆದ್ರೆ ಇಲ್ಲೊಂದು ಮದ್ವೆ ಮನೆಯಲ್ಲಿ ಮದ್ವೆ ಬೇಡಾಂತ ವಧು ಏನ್ ಮಾಡಿದ್ದಾಳೆ ನೋಡಿ. 

ಭಾರತೀಯ ಮದುವೆಗಳು ಬಹುತೇಕ ಸಾಂಪ್ರದಾಯಿಕವಾಗಿವೆ. ಹೆತ್ತವರು ನೋಡಿದ ಹುಡುಗ-ಹುಡುಗಿಯ ಜೊತೆ ಮದುವೆ ನಡೆಯುತ್ತದೆ. ಹುಡುಗನ, ಹುಡುಗಿಯ ಮನೆಯ ವಿವರ, ವಿದ್ಯಾಭ್ಯಾಸದ ಬಗ್ಗೆ ಪೋಷಕರೇ ಕೇಳುತ್ತಾರೆ. ಸ್ವತಃ ಹುಡುಗ-ಹುಡುಗಿ ಮಾತನಾಡಲು ಅವಕಾಶವೇ ಇಲ್ಲ. ಅವರ ಇಷ್ಟಕಷ್ಟದ ಬಗ್ಗೆಯೂ ಕೇಳುವುದಿಲ್ಲ. ಸುಮ್ಮನೆ ಮದುವೆ ಫಿಕ್ಸ್ ಮಾಡಿ ಬಿಡುತ್ತಾರೆ ಅಷ್ಟೆ. ಹಿಂದೆಯೆಲ್ಲಾ ಹುಡುಗ-ಹುಡುಗಿ ಪರಸ್ಪರ ಮುಖ ನೋಡದೆಯೇ ಮದುವೆ ಫಿಕ್ಸ್ ಮಾಡಿ ಮಂಟಪದಲ್ಲಿ ಮೊದಲ ಬಾರಿ ಮುಖ ನೋಡುವ ಪರಿಸ್ಥಿತಿಯೂ ಇತ್ತು. ನಂತರದ ದಿನಗಳಲ್ಲಿ ಪೋಟೋ ಎಕ್ಸ್‌ಚೇಂಜ್ ಮಾಡುವ ಪದ್ಧತಿ ಬಂತು. ಈಗ ಮದುವೆಯ ಮೊದಲೇ ಪರಸ್ಪರ ತಿಳಿದುಕೊಳ್ಳಲು ಡೇಟ್‌ಗೆ ಹೋಗುತ್ತಾರೆ. ಪರಸ್ಪರ ತಿಳಿದುಕೊಳ್ಳುತ್ತಾರೆ. ಆದರೂ ಇವತ್ತಿಗೂ ಹೆಣ್ಣುಮಕ್ಕಳ ಒತ್ತಾಯದ ಮದುವೆ ಅದೆಷ್ಟೋ ಕಡೆ ನಡೆಯುತ್ತದೆ. 

ಕಾಲ ಅದೆಷ್ಟೇ ಬದಲಾದರೂ ಮದುವೆ ವಿಚಾರದಲ್ಲಿ ಭಾರತೀಯ ಪೋಷಕರ ಮನಸ್ಥಿತಿಯಂತೂ ಬದಲಾಗಿಲ್ಲ. ಹುಡುಗಿಯ ಒಪ್ಪಿಗೆ ಕೇಳದೆ ಮದ್ವೆ ಫಿಕ್ಸ್ ಮಾಡಿಬಿಡುತ್ತಾರೆ. ಹುಡುಗಿ ನಾನಿನ್ನೂ ಕಲೀಬೇಕು, ಜಾಬ್‌ಗೆ ಹೋಗಬೇಕು ಎಂದೆಲ್ಲಾ ಹೇಳಿದರೂ ಆಕೆಯ ಆಸೆಗಳನ್ನೆಲ್ಲಾ ಕಡೆಗಣಿಸಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಒಲ್ಲದ ಮದುವೆಯಿಂದ ಪಾರಾಗಲು ಹುಡುಗಿ ಕೊನೆ ಕ್ಷಣದಲ್ಲಿ ಓಡಿಹೋಗುವುದೋ, ಮದುವೆಯಾಗಲ್ಲ ಅಂತ ಗಲಾಟೆ ಮಾಡುವುದೋ ನಡೆಯುತ್ತದೆ. ಇನ್ನು ಕೆಲವೊಬ್ಬರು ಆತ್ಮಹತ್ಯೆ ಸಹ ಮಾಡುತ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆಯಲ್ಲಿ ಮದ್ವೆ ಬೇಡಾಂತ ಸಿಟ್ಟಿಗೆದ್ದ ವಧು ಏನ್ ಮಾಡಿದ್ದಾಳೆ ನೋಡಿ. 

ಮದ್ವೆ ಹಿಂದಿನ ದಿನ ಅಪಘಾತ; ಆಂಬುಲೆನ್ಸ್‌ನಲ್ಲಿ ಬಂದಿಳಿದು, ಸ್ಟ್ರೆಚರ್‌ನಲ್ಲೇ ಕುಳಿತೇ ಸಪ್ತಪದಿ ತುಳಿದ ವರ!

ವರನ ಕೈಯಿಂದ ಸ್ವೀಟ್ ತಿನ್ನದೆ ಅತಿಥಿಗಳತ್ತ ಎಸೆದ ವಧು
ಮದುವೆ ಮಂಟಪದಲ್ಲಿ ವಧು (Bride) ಸುಂದರವಾದ ಕೆಂಪು ಲೆಹೆಂಗಾವನ್ನು ಧರಿಸಿದ್ದಾಳೆ. ವರನು ಸೂಟ್‌ನಲ್ಲಿ ಮಿಂಚುತ್ತಿದ್ದಾನೆ. ಇಬ್ಬರೂ ತಮ್ಮ ವರಮಾಲಾ ಸಮಾರಂಭದ ನಂತರ ಸ್ನೇಹಿತರು (Friends) ಮತ್ತು ಸಂಬಂಧಿಕರು (Relatives) ಸೇರಿರೋ ವೇದಿಕೆಯಲ್ಲಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಶಾಸ್ತ್ರದ ಭಾಗವಾಗಿ ವರನು (Groom), ವಧುವಿಗೆ ಸಿಹಿ ತಿನ್ನಿಸಲು ಪ್ರಯತ್ನಿಸುತ್ತಾನೆ. ಆದರೆ ವಧು ಅದನ್ನು ತಿನ್ನುವುದಿಲ್ಲ ಮತ್ತು ವರನ ಕೈಯಿಂದ ಸಿಹಿತಿಂಡಿಯನ್ನು (Sweets) ತೆಗೆದುಕೊಂಡು ಮದುವೆಯ ವೇದಿಕೆಯ ಮುಂದೆ ನಿಂತಿದ್ದ ಅತಿಥಿಗಳತ್ತ ಎಸೆಯುತ್ತಾಳೆ.

ವಧುವಿನ ವರ್ತನೆಯಿಂದ ವರನು ಸಿಟ್ಟುಗೊಳ್ಳುತ್ತಾನೆ. ನಂತರ ಆಕೆ ಶಾಸ್ತ್ರದ ಭಾಗವಾಗಿ ವರನಿಗೆ ನೀರು ಕೊಡಲು ಬಂದಾಗ ವರ ಅದನ್ನು ತಿರಸ್ಕರಿಸುತ್ತಾನೆ. ಅವಳ ಕೈಯಿಂದ ಲೋಟವನ್ನು ತೆಗೆದುಕೊಳ್ಳುವುದಿಲ್ಲ. ಇದರಿಂದ ಸಿಟ್ಟಿಗೆದ್ದ ವಧು ನೀರಿನ ಲೋಟವನ್ನು ಮದುವೆ ಬಂದಿದ್ದ ಅತಿಥಿಗಳತ್ತ ಎಸೆಯುತ್ತಾಳೆ.

ಮದುವೆ ಮನೆಯಲ್ಲಿ ಸೂತಕ, ಪುತ್ರಿಯರ ವಿವಾಹಕ್ಕೆ ಓಡಾಡಿ ತಯಾರಿ ಮಾಡಿದ್ದ ಅಪ್ಪನೇ ಅಪಘಾತದಲ್ಲಿ ಸಾವು!

ಇದು ಟ್ರೇಲರ್ ಅಷ್ಟೆ, ಪಿಕ್ಚರ್ ಇನ್ನೂ ಬಾಕಿಯಿದೆ ಎಂದ ನೆಟ್ಟಿಗರು
ಹಸ್ನಾ ಜರೂರಿ ಹೈ ಎಂಬ ಹೆಸರಿನ ಟ್ವಿಟ್ಟರ್ ಪೇಜ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಆದರೆ ಇದು ನಾರ್ತ್‌ ಇಂಡಿಯಾ ಮದುವೆ (Marriage)ಯೆಂಬುದು ಸ್ಪಷ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ವೀಡಿಯೊ ಈಗಾಗಲೇ 45.1K ವೀಕ್ಷಣೆಗಳನ್ನು (Views) ಗಳಿಸಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ನೆಟಿಜನ್‌ಗಳ ಒಂದು ವಿಭಾಗವು ವೀಡಿಯೊವನ್ನು ಫನ್ನಿಯೆಂದು ಕಂಡುಕೊಂಡರೆ, ಇತರರು ಬಲವಂತವಾಗಿ ಮದುವೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಒಬ್ಬ ಬಳಕೆದಾರರು 'ಎರಡು ನಿಮಿಷ ಜೊತೆಗೆ ಇರಲು ಸಾಧ್ಯವಿಲ್ಲದವರು ಜೀವನಪೂರ್ತಿ ಒಟ್ಟಿಗೆ ಹೇಗೆ ಇರುತ್ತಾರೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು 'ವಧು-ವರರು ಮಂಟಪದಿಂದ ನೇರವಾಗಿ ಫ್ಯಾಮಿಟಿ ಕೋರ್ಟ್‌ಗೆ ಹೋಗಬಹುದು' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು 'ವಧುವಿಗೆ ಇಷ್ಟು ಅಟಿಟ್ಯೂಡ್ ಯಾಕೆ' ಎಂದು ಪ್ರಶ್ನಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!