ವಿಚ್ಛೇದನದ ಸಮಯದಲ್ಲಿ ಕೋರ್ಟ್ ಮುಂದೆ ದಂಪತಿ ಒಂದಿಷ್ಟು ಬೇಡಿಕೆ ಇಡ್ತಾರೆ. ಹಣ, ಮಕ್ಕಳ ಜವಾಬ್ದಾರಿ ಸೇರಿದಂತೆ ಕೆಲವೊಂದು ಮಹತ್ವದ ವಿಷ್ಯವನ್ನು ನಿರ್ಣಯಿಸಲಾಗುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಅಚ್ಚರಿ ಹುಟ್ಟಿಸುವ ಬೇಡಿಕೆ ಇಟ್ಟಿದ್ದ.
ದಾಂಪತ್ಯ ಜೀವನ ದೀರ್ಘಕಾಲ ಬಾಳಿಕೆ ಬರ್ತಿಲ್ಲ. ಕೊನೆ ಉಸಿರಿರುವವರೆಗೂ ಒಂದಾಗಿ ಬಾಳ್ತೆವೆ ಎನ್ನುವವರ ಸಂಖ್ಯೆ ಈಗ ಬಹಳ ಕಡಿಮೆ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನವಾಗ್ತಿರುವ ಅನೇಕ ಪ್ರಕರಣವಿದೆ. ಅತೀ ಸಣ್ಣ ವಿಷ್ಯಕ್ಕೆ ಈಗಿನ ದಿನಗಳಲ್ಲಿ ದಂಪತಿ ಬೇರೆ ಆಗ್ತಿದ್ದಾರೆ. ವಿಚ್ಛೇದನದ ನಂತ್ರ ಪರಿಹಾರಕ್ಕೆ ಬೇಡಿಕೆ ಸಲ್ಲಿಸಬಹುದು. ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಹಣಕ್ಕೆ ಬೇಡಿಕೆ ಇಡೋದನ್ನು ನಾವೆಲ್ಲ ನೋಡಿದ್ದೇವೆ. ದುಡಿಮೆ ಹೆಚ್ಚಿರುವ ಸಂಗಾತಿ, ದುಡಿಮೆ ಇಲ್ಲದ ಅಥವಾ ಸಾಕಾಗದ ಇನ್ನೊಬ್ಬ ಸಂಗಾತಿಗೆ ಆರ್ಥಿಕ ಸಹಾಯ ನೀಡಬೇಕಾಗುತ್ತದೆ. ಕೋರ್ಟ್ ಆದೇಶದಂತೆ ಪ್ರತಿ ತಿಂಗಳು ಹಣ ನೀಡಬೇಕಾಗುತ್ತದೆ. ಆದ್ರೆ ಇಲ್ಲೊಂದು ವಿಚ್ಛೇದನ ಪ್ರಕರಣ ಸ್ವಲ್ಪ ಭಿನ್ನವಾಗಿದೆ. ಪತ್ನಿಯಿಂದ ಪತಿ ಹಣದ ಬದಲು ಒಂದು ಅತ್ಯಮೂಲ್ಯ ವಸ್ತುವನ್ನು ಕೇಳಿದ್ದಾನೆ. ಆದ್ರೆ ಅವನದೇ ವಸ್ತು ಕೊನೆಯವರೆಗೂ ಅವನಿಗೆ ಸಿಗಲಿಲ್ಲ. ಪತ್ನಿ ಜೊತೆ ಹೊಂದಿಕೊಂಡು ಹೋಗ್ತಿದ್ದವನಿಗೆ ಮೋಸವಾಯ್ತು. ಒಂದ್ಕಡೆ ಪತ್ನಿ ಕೈಕೊಟ್ಟರೆ ಮತ್ತೊಂದು ಕಡೆ ಪತ್ನಿಗೆ ಕೊಟ್ಟಿದ್ದ ಅಂಗ ವಾಪಸ್ ಸಿಗಲಿಲ್ಲ.
ಕಿಡ್ನಿ (Kidney) ವಾಪಸ್ ಕೇಳಿದ ಪತಿ : ಆತನ ಹೆಸರು ಡಾ. ರಿಚರ್ಡ್ ಬಟಿಸ್ಟಾ. ವಿಚ್ಛೇದನ (Divorce) ದ ವೇಳೆ ಈತ ತನ್ನ ಪತ್ನಿಯಿಂದ ಕಿಡ್ನಿಯನ್ನು ವಾಪಸ್ ಕೇಳಿದ್ದಾನೆ. ಕಿಡ್ನಿ ವಾಪಸ್ ನೀಡಿಲ್ಲವೆಂದ್ರೆ 1.2 ಮಿಲಿಯನ್ ಪೌಂಡ್ ನೀಡುವಂತೆ ಬೇಡಿಕೆ ಇಟ್ಟಿದ್ದ. 1990 ರಲ್ಲಿ ಡೊನ್ನೆಲ್ ಮತ್ತು ರಿಚರ್ಡ್ ಬಟಿಸ್ಟಾಗೆ ಮದುವೆ ಆಗಿತ್ತು. ಇಬ್ಬರಿಗೆ ಮೂರು ಮಕ್ಕಳಿದ್ದಾರೆ. ಡೊನ್ನೆಲ್ ಗೆ ಆರೋಗ್ಯ (Health) ಸಮಸ್ಯೆ ಇರುವ ಕಾರಣ ಸಂಬಂಧದಲ್ಲಿ ಬಿರುಕು ಬರಲು ಶುರುವಾಗಿತ್ತು.
ವಧುವಿನ ಕಾಲಿಗೆ ಬೀಳುತ್ತಿರುವ ವರ; ಹೆಚ್ಚುತ್ತಿದೆ ಟ್ರೆಂಡ್
2001 ರಲ್ಲಿ ಡೊನ್ನೆಲ್ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಆಕೆಯ ಎರಡೂ ಕಿಡ್ನಿ ಫೇಲ್ ಆಗಿತ್ತು. ಈ ಸಂದರ್ಭದಲ್ಲಿ ಪತ್ನಿ ಜೀವ ಹಾಗೂ ವೈವಾಹಿಕ ಸಂಬಂಧ ಮುಖ್ಯ ಎಂಬ ಕಾರಣಕ್ಕೆ ಬಟಿಸ್ಟಾ ತನ್ನ ಹೆಂಡತಿಗೆ ಮೂತ್ರಪಿಂಡವನ್ನು ದಾನ ಮಾಡಿದ್ದ. ಆದ್ರೆ ರಿಚರ್ಡ್ ಬಟಿಸ್ಟಾ ಪ್ರೀತಿ, ತ್ಯಾಗಕ್ಕೆ ಮೋಸವಾಗಿತ್ತು. ಆತ ನಂಬಿದ್ದ ಪತ್ನಿ ಆತನಿಗೆ ಮೋಸ ಮಾಡಿದ್ದಳು. ಡೊನ್ನೆಲ್, ಪತಿ ರಿಚರ್ಡ್ ನಿಂದ ದೂರವಾಗುವ ನಿರ್ಧಾರ ಕೈಗೊಂಡಿದ್ದಳು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಇದರಿಂದ ರಿಚರ್ಡ್ ಗೆ ನಿರಾಶೆಯಾಗಿತ್ತು. ಪತ್ನಿ ಡೊನ್ನೆಲ್ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ರಿಚರ್ಡ್ ಆರೋಪ ಮಾಡಿದ್ದ. ಅಲ್ಲದೆ ವಿಚ್ಛೇದನದ ಸಂದರ್ಭದಲ್ಲಿ ಕಿಡ್ನಿ ವಾಪಸ್ ನೀಡುವಂತೆ ಕೇಳಿದ್ದ. ಒಂದ್ವೇಳೆ ಪತ್ನಿ ಡೊನ್ನೆಲ್ ಕಿಡ್ನಿ ವಾಪಸ್ ನೀಡಿಲ್ಲವೆಂದಾದ್ರೆ ಹಣ ನೀಡಬೇಕೆಂದು ತಾಕೀತು ಮಾಡಿದ್ದ.
ಲವ್ ಮಾಡಿದ್ದೀರಿ. ಪೋಷಕರು ಒಪ್ತಾ ಇಲ್ಲವೆಂದರೆ ಹೀಗ್ ಟ್ರೈ ಮಾಡಿ
ಆದ್ರೆ ಇದ್ರಲ್ಲೂ ರಿಚರ್ಡ್ ಗೆ ನ್ಯಾಯ ಸಿಗಲಿಲ್ಲ. ಕಿಡ್ನಿಯನ್ನು ವಾಪಸ್ ನೀಡಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದರು. ಡೊನ್ನಲ್ ಗೆ, ರಿಚರ್ಡ್ ಕಿಡ್ನಿಯನ್ನು ಹಾಕಲಾಗಿದೆ. ಅದನ್ನು ಮತ್ತೆ ತೆಗೆಯೋದು ಸುಲಭವಲ್ಲ. ಒಂದ್ವೇಳೆ ಕಿಡ್ನಿ ತೆಗೆದಲ್ಲಿ ಡೊನ್ನಲ್ ಸಾವನ್ನಪ್ಪುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದರು. ಕಿಡ್ನಿ ರಿಚರ್ಡ್ ನದ್ದಾಗಿದ್ದರೂ ಈಗ ಅದು ಡೊನ್ನಲ್ ದೇಹದಲ್ಲಿದೆ. ಅಂದ್ಮೇಲೆ ಡೊನ್ನಲ್ ಕಿಡ್ನಿ ಮಾಲೀಕಳಾಗುತ್ತಾಳೆ ಎಂದು ತಜ್ಞರು ಹೇಳಿದ್ದರು.
ಕೊನೆಗೂ ರಿಚರ್ಡ್ ನ ಯಾವುದೇ ಬೇಡಿಕೆ ಈಡೇರಲಿಲ್ಲ. ನಸ್ಸೌ ಕೌಂಟಿ ಸುಪ್ರೀಂ ಕೋರ್ಟ್ ರಿಚರ್ಡ್ ಮನವಿಯನ್ನು ತಿರಸ್ಕರಿಸಿತು. ನ್ಯಾಯಾಲಯ ಹತ್ತು ಪುಟಗಳ ತೀರ್ಪು ನೀಡಿತು. ರಿಚರ್ಡ್ ಪರಿಹಾರ ಮತ್ತು ಮೂತ್ರಪಿಂಡದ ಬೇಡಿಕೆಯು ಕಾನೂನು ನಿರ್ಣಯಕ್ಕೆ ವಿರುದ್ಧವಾಗಿರುವುದಲ್ಲದೆ, ರಿಚರ್ಡ್ ನನ್ನು ಕ್ರಿಮಿನಲ್ ಮೊಕದ್ದಮೆಗೆ ಸಮರ್ಥವಾಗಿ ಒಡ್ಡಬಹುದು ಎಂದು ಮ್ಯಾಟ್ರಿಮೋನಿಯಲ್ ರೆಫರಿ ಜೆಫ್ರಿ ಗ್ರೋಬ್ ವಾದಿಸಿದ್ದರು.