ವಧು ವರನ ಕಾಲಿಗೆಬಿದ್ದು ನಮಸ್ಕರಿಸುವ ಸಂಪ್ರದಾಯ ಭಾರತೀಯ ವಿವಾಹಗಳಲ್ಲಿದೆ. ಆದರೆ, ಇದೀಗ ಲಿಂಗ ಸಮಾನತೆ ಹೆಸರಿನಲ್ಲಿ, ಅಥವಾ ಸಂಪ್ರದಾಯಗಳನ್ನು ಮುರಿಯಲು ಅಥವಾ ಸುಮ್ಮನೆ ವೈರಲ್ ಆಗಲೆಂದೋ ವರನೇ ವಧುವಿನ ಕಾಲಿಗೆ ಬೀಳುವ ಟ್ರೆಂಡ್ ಹೆಚ್ಚುತ್ತಿದೆ.
ಭಾರತೀಯ ವಿವಾಹಗಳು ತಲೆಮಾರುಗಳಿಂದ ನಡೆದುಕೊಂಡು ಬಂದ ಆಚರಣೆಗಳಿಂದ ತುಂಬಿವೆ. ಆದಾಗ್ಯೂ, ನಿಧಾನವಾಗಿ ಆದರೆ ಸ್ಥಿರವಾಗಿ ಅನೇಕರು ಸ್ಟೀರಿಯೊಟೈಪ್‌ಗಳನ್ನು ಮುರಿದು ಸಾಂಪ್ರದಾಯಿಕ ಅಭ್ಯಾಸಗಳೊಂದಿಗೆ ಹೊಸ ಅಭ್ಯಾಸಗಳನ್ನು ರಚಿಸುತ್ತಿದ್ದಾರೆ.
ಸಾಂಪ್ರದಾಯಿಕವಾಗಿ ವಿವಾಹಗಳಲ್ಲಿ ವಧುವು ವರನ ಕಾಲಿಗೆ ಬಿದ್ದು ಆಶೀರ್ವಾದ ಪಡೆವ ಆಚರಣೆ ಇದೆ. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಮೊದಲೆಲ್ಲ ಪತಿಯು ಪತ್ನಿಗಿಂತ 10ಕ್ಕಿಂತ ಹೆಚ್ಚು ವರ್ಷ ದೊಡ್ಡವನಾಗಿರುತ್ತಿದ್ದನು. ಅಲ್ಲದೆ, ಪತ್ನಿಯ ಸಂಪೂರ್ಣ ಜವಾಬ್ದಾರಿ ಹೊರುತ್ತಿದ್ದನು. ಆರ್ಥಿಕವಾಗಿ ಆಕೆ ಸಂಪೂರ್ಣವಾಗಿ ಪತಿಯ ಮೇಲೆ ಅವಲಂಬಿತಳಾಗಿರುತ್ತಿದ್ದಳು. ಸಾಮಾನ್ಯವಾಗಿ ಗಂಡು ಹೆಚ್ಚು ಓದಿರುತ್ತಿದ್ದನು. ಅಂದರೆ, ಅವನ ತಿಳಿವಳಿಕೆ ಮಟ್ಟ ಹೆಚ್ಚಿರುತ್ತಿತ್ತು. ಈ ಎಲ್ಲ ಕಾರಣದಿಂದಾಗಿ ಗುರುವೂ ಹೌದು, ಹಿರಿಯನೂ ಹೌದು, ಸಲಹುವವನೂ ಹೌದು ಎಂಬ ಕಾರಣಕ್ಕಾಗಿ ಗಂಡಿನ ಕಾಲಿಗೆ ಹೆಣ್ಣು ನಮಸ್ಕರಿಸಿ ಆಶೀರ್ವಾದ ಬೇಡುತ್ತಿದ್ದಳು.
ಹೊಟ್ಟೆ ಕೆಟ್ಟಿದ್ಯಾ? ಮೊಳಕೆಕಾಳಿನ ಕಿಚಡಿ ತಿನ್ನಿ; ಇಲ್ಲಿದೆ ನಟಿ ಭಾಗ್ಯಶ್ರೀಯ ಸಿಂಪಲ್ ರೆಸಿಪಿ
ಆದರೆ ಕಾಲ ಬದಲಾಗಿದೆ. ಈಗ ಲಿಂಗ ಸಮಾನತೆ ಸೃಷ್ಟಿಯಾಗಿದೆ. ವಿವಾಹವಾಗುವ ಜೋಡಿಯಲ್ಲಿ ಹೆಣ್ಣಿನ ವಯಸ್ಸೇ ಹೆಚ್ಚಿದ್ದರೂ ಅದು ಅಚ್ಚರಿಯ ವಿಷಯವಾಗಿಲ್ಲ. ಸಾಮಾನ್ಯವಾಗಿ ಈಗಿನ ತಲೆಮಾರಿನವರು ಸಮಾನ ವಯಸ್ಕರನ್ನು ಮದುವೆಯಾಗಲು ಬಯಸುತ್ತಾರೆ. ಯೋಚನೆಗಳೂ ಸಮಾನವಾಗಿರುತ್ತವೆ ಎಂಬ ಕಾರಣಕ್ಕೆ. ಇನ್ನು ಶಿಕ್ಷಣದಲ್ಲಿ ಹೆಣ್ಣುಮಕ್ಕಳೂ ಹಿಂದೆ ಬಿದ್ದಿಲ್ಲ. ಪತಿಯಾಗುವವನಷ್ಟೇ ಓದಿರುತ್ತಾಳೆ. ಒಳ್ಳೆಯ ವೃತ್ತಿಯಲ್ಲಿದ್ದು ಒಳ್ಳೆಯ ಸಂಬಳವನ್ನೂ ಪಡೆಯುತ್ತಿರುತ್ತಾಳೆ. ಈ ಎಲ್ಲ ಕಾರಣದಿಂದ ಟ್ರೆಂಡ್ ಕೂಡಾ ಬದಲಾಗುತ್ತಿದೆ. ಈಗೀಗ ವಿವಾಹಗಳಲ್ಲಿ ವಧುವಿನ ಕಾಲಿಗೆರಗುವ ವರರ ಸಂಖ್ಯೆ ಹೆಚ್ಚುತ್ತಿದೆ.
ಬದಲಾದ ಟ್ರೆಂಡ್
ಇದಕ್ಕೆ ಗೌರವವೇ ಕಾರಣವೆಂದೇನಲ್ಲ. ಬಹಳಷ್ಟು ಮಂದಿ ಸುದ್ದಿಯಾಗೋದಕ್ಕೇ ಹೀಗೆ ಸಂಪ್ರದಾಯ ಮುರಿವ ಧೈರ್ಯ ತೋರುತ್ತಾರೆ. ಇನ್ನು ಕೆಲವರು ತಮ್ಮ ಸೋಷ್ಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳಲು ಹೀಗೆ ಮಾಡಬಹುದು. ಅಪರೂಪಕ್ಕೆ ಕೆಲವರು ಉತ್ತಮ ಸಂದೇಶ ಕೊಡಲು ಹೀಗೆ ಮಾಡುತ್ತಿದ್ದಾರೆ. ಪತ್ನಿ ಕೂಡಾ ತನಗೆ ಸಾಕಷ್ಟನ್ನು ಕಲಿಸುತ್ತಾಳೆ, ಹೆಣ್ಣನ್ನು ಗೌರವಿಸಬೇಕು ಎಂಬೆಲ್ಲ ಕಾರಣಕ್ಕಾಗಿ ಕೆಲವರು ವಧುವಿನ ಕಾಲಿಗೆ ಎರಗುತ್ತಾರೆ. ಆದರೆ, ಈ ನಡುವಳಿಕೆ ಬಹಳಷ್ಟು ಹೆಣ್ಣುಮಕ್ಕಳಿಗೇ ಇಷ್ಟವಾಗುವುದಿಲ್ಲ.
ಸುಧಾ ಮೂರ್ತಿ ಬಾಬ್ ಕಟ್ ಮಾಡಿಕೊಂಡಿದ್ದಕ್ಕೂ ಅವರಕ್ಕನ ಮದುವೆಗೂ ಏನು ಸಂಬಂಧ?
ಈಗ ಇಬ್ಬರೂ ಸಮಾನರೆಂದ ಮೇಲೆ ಕಾಲಿಗೆರಗುವ ಸಂಪ್ರದಾಯವೇ ಬೇಡ ಎನ್ನುವುದು ಹೆಚ್ಚಿನ ಇಂದಿನ ತಲೆಮಾರಿನವರ ಅಭಿಪ್ರಾಯ. ಈಗ ಅವರು ಪರಸ್ಪರ ಆಪ್ತ ಸ್ನೇಹಿತರಾಗಲು ಬಯಸುತ್ತಾರೆ. ಗೆಳೆಯರ ಮಧ್ಯೆ ಕಾಲಿಗೆರಗುವ ಅಭ್ಯಾಸವೇಕೆ ಎಂದು ಪ್ರಶ್ನಿಸುತ್ತಾರೆ ಹಲವರು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
Grooms are touching feet of their brides in weddings now-a-days!
What is this fcuked up feminism trend!
I want my man to be superior than me, bigger than me, stronger than me, best version and just love and respect me!
I never want a superior man to touch my feet! pic.twitter.com/DjXi7Om5aZ