ಸುಂದರವಾಗಿದ್ದ ಕುಟುಂಬದ ಹೆಂಡತಿಯನ್ನು ಬುಟ್ಟಿಗೆ ಬೀಳಿಸಿಕೊಂಡು ಅನೈತಿಕ ಸಂಬಂಧ ಇಟ್ಟುಕೊಂಡವನ್ನು ಕೊಲೆ ಮಾಡಿಸಿ ಬೀದಿ ಹೆಣವನ್ನಾಗಿ ಮಾಡಿದ ಗಂಡ.
ಬೆಂಗಳೂರು (ಫೆ.20): ಬೆಂಗಳೂರಿನಲ್ಲಿ ತಾವಾಯ್ತು, ತಮ್ಮ ದುಡಿಮೆಯಾಯ್ತು ಎಂದು ನೆಮ್ಮದಿಯಿಂದ ಜೀವನ ಮಾಡುತ್ತಿದ್ದ ಕುಟುಂಬದ ಮೇಲೆ ಕಾಮುಕನೊಬ್ಬನ ಕಣ್ಣು ಬಿದ್ದಿತ್ತು. ನೆಮ್ಮದಿಯಾಗಿದ್ದ ಕುಟುಂಬದಲ್ಲಿ ಹೆಂಡತಿಯನ್ನು ಬಲೆಗೆ ಬೀಳಿಸಿಕೊಂಡು ಅನೈತಿಕ ಸಂಬಂಧ ಹೊಂದಿದ್ದಾನೆ. ಇದನ್ನು ತಿಳಿದ ಗಂಡ ತನ್ನ ಪತ್ನಿಯೊಂದೊಗೆ ಅನೈತಿಕ ಸಂಬಂಧ ಹೊಂದಿದವನನ್ನು ಕೊಲೆ ಮಾಡಿಸಿ ಬೀದಿ ಹೆಣವನ್ನಾಗಿ ಬೀಸಾಡಿದ ಘಟನೆ ನಡೆದದೆ.
ಬೆಂಗಳೂರಿನಲ್ಲಿ ಅನೈತಿಕ ಸಂಬಂಧಕ್ಕೆ ವ್ಯಕ್ತಿ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಸುಪಾರಿ ಕೊಟ್ಟು ವ್ಯಕ್ತಿಯನ್ನ ಕೊಲೆ ಮಾಡಿಸಿರೋ ಆರೋಪ ಕೇಳಿಬಂದಿದೆ. ಮೊಹಮ್ಮದ್ ಅಖ್ತರ್ ಅಲಿ (49) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಹಮದ್ ಅಕ್ತರ್ ಅಲಿಯನ್ನ ಕಿಡ್ನ್ಯಾಪ್ ಮಾಡಲಾಗಿತ್ತು. ನಿನ್ನೆ ಅಖ್ತರ್ ಅಲಿ ಪತ್ನಿ ತನ್ನ ಗಂಡನ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಶಹನವಾಜ್ ಎಂಬಾತನಿಂದ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಡ್ರೈವರ್ ರಹಿತ ರೈಲು: ಹೆಬ್ಬಗೋಡಿಯಲ್ಲಿ ಅನ್‌ಲೋಡಿಂಗ್!
ಶಹನವಾಜ್ ಪತ್ನಿ ಜೊತೆಗೆ ಕೊಲೆಯಾದ ಅಖ್ತರ್ ಅಲಿ ಅನೈತಿಕ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ. ಇದರಿಂದ ಕೋಪಗೊಂಡು ಶಹನವಾಜ್, ಅಖ್ತರ್ ಅಲಿಯನ್ನು ಕೊಲೆ ಮಾಡುವುದಕ್ಕೆ ಸುಪಾರಿ ಕೊಟ್ಟಿದ್ದಾನೆ. ಹಣ ಪಡೆದ ಸುಪಾರಿ ಕಿಲ್ಲರ್ಸ್ ಕರೆದೊಯ್ದು ಕುತ್ತಿಗೆಯನ್ನ ಬಿಗಿದು ಹತ್ಯೆ ಮಾಡಿಸಿದ್ದಾರೆ. ಆ ಬಳಿಕ ಸುಪಾರಿ ಕಿಲ್ಲರ್‌ಗಳಿ ಅಖ್ತರ್ ಅಲಿಯನ್ನು ಕಿಡ್ನ್ಯಾಪ್ ಮಾಡಿ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ, ಮೃತ ದೇಹವನ್ನು ಹೊಸಕೋಟೆ ಬಳಿ ಬೀಸಾಡಿದ್ದಾರೆ.
ಬಾರ್‌ನಲ್ಲಿದ್ದ ನಾಯಿ ಕದ್ದಿದ್ದಕ್ಕೆ ಕುಡುಕನನ್ನ ನಾಯಿಯಂತೆ ನಡೆಸಿಕೊಂಡ ಸಿಬ್ಬಂದಿ!
ಇನ್ನು ಒಟ್ಟು ಐವರು ಸುಪಾರಿ ಕಿಲ್ಲರ್‌ಗಳು ಸೇರಿಕೊಂಡು ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ. ನಂತರ, ಕೊಲೆ ಪ್ರಕರಣದ ದಿಕ್ಕನ್ನು ತಪ್ಪಿಸಲಿಕ್ಕಾಗಿ ಕೊಲೆಯಾದವನ ಕಾರನ್ನು ತಂದು ಪೊಲೀಸ್ ಠಾಣೆಯ ಹಿಂಭಾಗವೇ ಬಿಟ್ಟು ಹೋಗಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹಲಸೂರ್ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಈ ಬಗ್ಗೆ ಪೊಲೀಸರು ಕೊಲೆಗೆ ಸುಪಾರಿ ಕೊಟ್ಟವನನ್ನು ವಶಕ್ಕೆ ಪಡೆದಿದ್ದು, ವಿವಿಧ ಆಯಾಮಗಳಲ್ಲಿ ವಿಚಾರಣೆ ಮಾಡುತ್ತಿದ್ದಾರೆ.