ಕೋರ್ಟ್ ಮಧ್ಯೆ ಪ್ರವೇಶದಿಂದ ವೃದ್ಧಾಪ್ಯದಲ್ಲಿ ಆ ಜೋಡಿ ಒಂದಾಗಿದೆ. 52 ವರ್ಷದ ಬಳಿಕ ಒಂದಾದ ಅಪರೂಪದ ಆ ಜೋಡಿಯ ಕಥೆ ಇಲ್ಲಿದೆ ನೋಡಿ.
ಹುಬ್ಬಳ್ಳಿ, (ಜೂನ್.27): ಯೌವ್ವನದ ಪ್ರೀತಿಯಲ್ಲಿ ಉಂಟಾದ ಮುನಿಸು, ಅರ್ಧ ಶತಮಾನಗಳ ಕಾಲ ಆ ದಂಪತಿಗಳನ್ನು ದೂರು ದೂರ ಉಳಿಯುವಂತೆ ಮಾಡಿತ್ತು..ಆದ್ರೇ ಕೋರ್ಟ್ ಮಧ್ಯೆ ಪ್ರವೇಶದಿಂದ ವೃದ್ಧಾಪ್ಯದಲ್ಲಿ ಆ ಜೋಡಿ ಒಂದಾಗಿದೆ. 52 ವರ್ಷದ ಬಳಿಕ ಒಂದಾದ ಅಪರೂಪದ ಆ ಜೋಡಿಯ ಕಥೆ ಇಲ್ಲಿದೆ ನೋಡಿ.
ಹೌದು... ಈ ಜೋಡಿಯ ಪೋಟೋವನ್ನು ಒಮ್ಮೆ ನೋಡಿ ಬಿಡಿ, ಇವರು ಕಲಘಟಕಿ ತಾಲೂಕಿನ ಜಿನ್ನೂರ ಗ್ರಾಮದ ಬಸಪ್ಪ ಅಗಡಿ(85) ಹಾಗೂ ಕಲ್ಲವ್ವ ಅಗಡಿ(80). ದಂಪತಿಗಳು. ಯೌವ್ವನದಲ್ಲಿಉಂಟಾದ ವೈಮನಸ್ಯ ಕಾರಣಕ್ಕೆ 52 ವರ್ಷ ದೂರ ಇದ್ದ ದಂಪತಿಗಳನ್ನು ಇಂದು (ಸೋಮವಾರ)ಒಂದಾಗಿದ್ದಾರೆ .
ದಲಿತರೆಂದು ಮನೆಯೊಳಗೆ ಸೇರಿಸಲ್ಲ ಸರ್..ಹೇಗೆ ಕೆಲಸ ಮಾಡ್ಲಿ, ಆಶಾ ಕಾರ್ಯಕರ್ತೆ ಕಣ್ಣೀರು
ಕಲಘಟಕಿ ತಾಲೂಕಿನ ಜಿನ್ನೂರ ಗ್ರಾಮದ ಈ ದಂಪತಿಗಳು 52 ವರ್ಷದ ಹಿಂದೆ ಡೈವರ್ಸ್ ತೆಗೆದುಕೊಂಡಿದ್ದರು. ನ್ಯಾಯಾಲಯದ ಆದೇಶದಂತೆ ಪತಿ ಬಸಪ್ಪ ಅಗಡಿ ಪ್ರತಿ ತಿಂಗಳು ಕಲ್ಲವ್ವಳಿಗೆ ಜೀವನಾಂಶ ನೀಡುತ್ತಿದ್ದ. ಆದ್ರೆ ಕೆಲ ತಿಂಗಳಿನಿಂದ ಜೀವನಾಂಶ ಕೊಡುವಲ್ಲಿ ಬಸಪ್ಪ ವಿಫಲವಾಗಿದ್ದ. ಈ ಹಿನ್ನೆಲೆಯಲ್ಲಿ ಕಲ್ಲವ್ವ ನ್ಯಾಯಾಲಯದ ಮೊರೆ ಹೋಗಿದ್ದಳು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸ್ಥಳೀಯ ಹಿರಿಯ ದಿವಾನಿ ನ್ಯಾಯಲಯ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ತೀರ್ಮಾನಿಸಿತ್ತು. ಜೀವನಾಂಶ ಕೊಡುವಲ್ಲಿ ವಿಫಲವಾದ ಬಸಪ್ಪ ಅಗಡಿಯನ್ನೂ ನ್ಯಾಯಾಧೀಶರು ಕರೆಯಿಸಿದ್ದರು. ಹಣ್ಣು ಹಣ್ಣು ಮುದುಕರಾದ ಸ್ಥಿತಿಯಲ್ಲಿದ್ದ ದಂಪತಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿರೋದನ್ನು ನೋಡಿ ನ್ಯಾಯಾಧೀಶರಿಗೂ ಅಚ್ಚರಿಯಾಗಿದೆ. ರಾಜೀ ಪಂಚಾಯ್ತಿ ಮೂಲಕ ನ್ಯಾಯಾಧೀಶರು ವೃದ್ಧ ದಂಪತಿಗಳನ್ನು ಒಂದು ಮಾಡಿದ್ದಾರೆ.
ನ್ಯಾಯಧೀಶರಾದ ಜಿ ಆರ್ ಶೆಟ್ಟರ ಅವರಿಂದ ರಾಜೀ ಸಂಧಾನ ನಡೆಯಿತು. ಗಂಡ ಹೆಂಡತಿ ಇಬ್ಬರನ್ನೂ ಪರಸ್ಪರ ಒಂದುಗೂಡಿಸುವಲ್ಲಿ ಯಶಸ್ವಿಯಾಗಿದೆ. ವಕೀಲರಾದ ಜಿ ಆರ್ ಗಾಣಗೇರ್ ಈಬಪ್ರಕರಣದಲ್ಲಿ ವಕಾಲತ್ತು ವಹಿಸಿದ್ದರು.