
ಪೋಷಕರು ಮತ್ತು ಮಕ್ಕಳ (Children) ನಡುವಿನ ಸಂಬಂಧವು ತುಂಬಾ ಸೂಕ್ಷ್ಮವಾಗಿದೆ. ಸಣ್ಣದೊಂದು ವಿಷಯ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಮಗುವಿನ ಜನನದ ಜೊತೆಗೆ ತಾಯಿ (Mother ) ಮತ್ತು ತಂದೆ (Father) ಯ ಜನನವಾಗುತ್ತದೆ. ಮಗುವನ್ನು ಬೆಳೆಸುವಾಗ ಪಾಲಕರು ಕೂಡ ಅನೇಕ ಹೊಸ ವಿಷಯಗಳನ್ನು ಕಲಿಯುತ್ತಾರೆ. ನೀವು ಮಗುವಿನ ಪೋಷಕರಾಗಿದ್ದರೆ ತುಂಬಾ ಜಾಗರೂಕರಾಗಿರಬೇಕು. ಪೋಷಕರ ಸಣ್ಣ ತಪ್ಪು ಕೂಡ ಮಗುವಿನ ಮಾನಸಿಕ (Psychological) ಮತ್ತು ದೈಹಿಕ ಆರೋಗ್ಯ (Health) ದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಅನೇಕ ಬಾರಿ ಮಗು ಮಾಡಿದ ಸಣ್ಣ ತಪ್ಪಿಗೂ ಪೋಷಕರು ಬೈಯಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಮಗುವಿಗೆ ಕೋಪ ಬರುತ್ತದೆ. ಅನೇಕ ಬಾರಿ ಪೋಷಕರ ನಕಾರಾತ್ಮಕ ಕಾಮೆಂಟ್ ಮಕ್ಕಳನ್ನು ಖಿನ್ನತೆಗೆ ನೂಕುತ್ತದೆ. ಹಾಗಾಗಿ ಪಾಲಕರಾದವರು ಕೆಲ ವಿಷ್ಯದಲ್ಲಿ ತಮ್ಮನ್ನು ತಾವು ತಿದ್ದಿಕೊಳ್ಳಬೇಕು.
ಮಕ್ಕಳಿಗೆ ಹೇಳುವ ಮೊದಲು ಆಲೋಚಿಸಿ : ಮಗು ತಪ್ಪು ಮಾಡಿದ ತಕ್ಷಣ ಬಾಯಿಗೆ ಬಂದಂತೆ ಬೈಬೇಡಿ. ಮೊದಲು ನೀವು ಮಗುವಿನ ಸ್ಥಾನದಲ್ಲಿದ್ದು ನೋಡಿ. ನಿಮಗೂ ಯಾರಾದ್ರೂ ಕೆಟ್ಟದಾಗಿ ಬೈದ್ರೆ ಹೇಗೆನ್ನಿಸುತ್ತದೆ ಎಂಬುದನ್ನು ನೀವು ಯೋಚಿಸಿ. ಮಕ್ಕಳು ಬೈದಾಗ ಮಾಡುವುದಕ್ಕಿಂತ ಪ್ರೀತಿಯಿಂದ ಹಾಗೂ ಬುದ್ಧಿವಂತಿಕೆಯಿಂದ ಹೇಳಿದ್ರೆ ಬೇಗ ಅರ್ಥ ಮಾಡಿಕೊಳ್ತಾರೆ.
ಸುಖಿ ದಾಂಪತ್ಯಕ್ಕೆ ಈ ವಿಷ್ಯ ಶೇರ್ ಮಾಡಿಕೊಳ್ಳದಿದ್ದರೆ ಸೇಫ್!
ಪ್ರತಿ ಬಾರಿಯೂ ಪರೀಕ್ಷೆಯಲ್ಲಿ ಅಗ್ರಸ್ಥಾನ ಅನಿವಾರ್ಯವಲ್ಲ : ಪ್ರತಿಯೊಬ್ಬ ಪೋಷಕರು ಅಂಕಗಳ ಹಿಂದೆ ಹೋಗ್ತಾರೆ. ತಮ್ಮ ಮಕ್ಕಳು ಸದಾ ಮುಂದಿರಬೇಕೆಂದು ಬಯಸ್ತಾರೆ. ಪ್ರತಿ ಬಾರಿಯೂ ಮಕ್ಕಳು ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯಬೇಕೆಂದು ಅವರು ಬಯಸುತ್ತಾರೆ. ಆದರೆ ನಿಮ್ಮ ಮಗು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಯಾವುದೇ ನಕಾರಾತ್ಮಕ ಕಾಮೆಂಟ್ ಮಾಡಬೇಡಿ. ಎಲ್ಲರೂ ಬುದ್ಧಿವಂತರಾಗಿರಲು ಸಾಧ್ಯವಿಲ್ಲ. ನಿಮ್ಮ ಮಗು ಬೇರೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರಬಹುದು. ಹಾಗಾಗಿ ಕಡಿಮೆ ಅಂಕ ಪಡೆದ ತಕ್ಷಣ ಯಾವಾಗಲೂ ವಿಫಲರಾಗುತ್ತೀರಿ ಎಂದು ಹೇಳಬೇಡಿ. ಇದು ಮಕ್ಕಳ ಉತ್ಸಾಹ, ಆತ್ಮವಿಶ್ವಾಸದ ಮೇಲೆ ಹೊಡೆತ ನೀಡುತ್ತದೆ.
ಮಗುವಿಗೆ ವಿವರಿಸಿ : ಮಗುವಿಗೆ ಗದರುವುದು, ಹೊಡೆಯುವುದು ಮಾಡಬಾರದು. ಇದ್ರಿಂದ ನೀವು ಏನು ಹೇಳ್ತಿದ್ದೀರಿ ಎಂಬುದು ಮಗುವಿಗೆ ತಿಳಿಯುವುದಿಲ್ಲ. ಅಲ್ಲದೆ ಮಕ್ಕಳು ಅಸುರಕ್ಷಿತ ಭಾವ ಅನುಭವಿಸುತ್ತಾರೆ. ಮಗುವಿಗೆ ನಕಾರಾತ್ಮಕ ಕಾಮೆಂಟ್ ಗಳನ್ನು ಮಾಡುವ ಬದಲು, ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರ ನಿಲುವು ಮತ್ತು ಉಡುಪುಗಳು ನಿಮಗೆ ಇಷ್ಟವಾಗದಿದ್ದರೆ ಅವರನ್ನು ಕರೆದು, ನಿಧಾನವಾಗಿ ಅವರಿಗೆ ವಿವರಿಸಿ ಹೇಳಿ.
ಹುಟ್ಟಿದ ಮಗುವಿನಲ್ಲಿ ಇದು ಕಾಮನ್, ಗಾಬರಿಯಾಗೋದೇನೂ ಬೇಡ
ಮಗುವನ್ನು ಸ್ವಲ್ಪ ಸಮಯದವರೆಗೆ ಅಳಲು ಬಿಡಿ : ಅನೇಕ ಬಾರಿ ಪೋಷಕರು ತಮ್ಮ ಮಕ್ಕಳನ್ನು ಗದರಿಸುವುದರಿಂದ ಮಕ್ಕಳು ಅಳಲು ಪ್ರಾರಂಭಿಸುತ್ತಾರೆ. ಮಗು ಅಳುತ್ತಿರುವುದನ್ನು ನೋಡಿದ ಪೋಷಕರು ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಮತ್ತು ಅಳ್ಬೇಡ ಎನ್ನಲು ಶುರು ಮಾಡ್ತಾರೆ. ನೋವಿನಲ್ಲಿರುವ ಮಗುವಿನ ಅಳು ನಿಲ್ಲಿಸುವುದು ತಪ್ಪು. ಕೆಲವೊಮ್ಮೆ ಮಕ್ಕಳನ್ನು ಅಳಲು ಬಿಡುವುದು ಅವಶ್ಯಕ. ಹಾಗೆಯೇ ಅಳುತ್ತಿದೆ ಎನ್ನುವ ಕಾರಣಕ್ಕೆ ಅವರ ತಪ್ಪನ್ನು ಸರಿ ಎನ್ನಲು ಹೋಗ್ಬೇಡಿ.
ಹೆಚ್ಚು ನಿಯಮಗಳನ್ನು ಮಾಡಬೇಡಿ : ಅನೇಕ ಪೋಷಕರು ತಮ್ಮ ಮಕ್ಕಳಿಗೆ ನಿಯಮಗಳನ್ನು ಮಾಡಿರ್ತಾರೆ. ಮಕ್ಕಳು ಅದನ್ನು ಚಾಚುತಪ್ಪದೆ ಪಾಲನೆ ಮಾಡ್ಬೇಕಾಗುತ್ತದೆ. ಇಂದು ಮಕ್ಕಳಿಗೆ ಕಿರಿಕಿರಿ ಎನ್ನಿಸುತ್ತದೆ. ಇದು ಮಗುವಿನ ಕೋಪಕ್ಕೂ ಕಾರಣವಾಗಬಹುದು. ಮಕ್ಕಳು ಶಿಸ್ತಿನ ಬಗ್ಗೆ ತಿಳಿದುಕೊಳ್ಳಬೇಕು. ಆದರೆ ಹೆಚ್ಚಿನ ನಿಯಮಗಳನ್ನು ಮಾಡುವ ಮೂಲಕ ಮಗುವಿಗೆ ಒತ್ತಡ ನೀಡಬಾರದು ಎಂಬ ಸಂಗತಿ ಪಾಲಕರಿಗೆ ತಿಳಿದಿರಬೇಕು. ಮಗು ಒತ್ತಡಕ್ಕೆ ಒಳಗಾಗದ್ರೆ ಅನೇಕ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಎದುರಾಗುತ್ತದೆ. ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವುದು ಹಾಗೂ ಅವರನ್ನು ಸ್ವಚ್ಛಂದವಾಗಿ ಹಾರಲು ಬಿಡುವುದು ಮುಖ್ಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.