
ಮದುವೆ (Wedding) ಜೀವನದಲ್ಲಾಗುವ ದೊಡ್ಡ ಬದಲಾವಣೆ. ಮದುವೆ ನಂತ್ರದ ಜೀವನ (Life) ಬಹಳ ಮುಖ್ಯವಾಗಿರುತ್ತದೆ. ಸಾಯುವವರೆಗೂ ಇಬ್ಬರು ಹೊಂದಿಕೊಂಡು ಜೀವನ ನಡೆಸಬೇಕಾಗುತ್ತದೆ. ಕೊನೆಯವರೆಗೂ ಜೊತೆಗಿರುವ ವ್ಯಕ್ತಿಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವ ಅಗತ್ಯವಿದೆ. ಮದುವೆಯಾಗಿ 20 ವರ್ಷ ಕಳೆದ್ರೂ ಮನುಷ್ಯನ ಕೆಲ ಸ್ವಭಾವಗಳನ್ನು ಅರಿಯಲು ಸಾಧ್ಯವಿಲ್ಲ ನಿಜ. ಆದರೆ ಕೆಲ ಮೂಲಭೂತ ವಿಷ್ಯಗಳನ್ನು ಸಂಗಾತಿ ಕೈ ಹಿಡಿಯುವ ಮೊದಲೇ ತಿಳಿದಿರಬೇಕು. ಆಗ ಸುಖ ಸಂಸಾರ ಮಾಡುವುದು ಸುಲಭವಾಗುತ್ತದೆ. ದಾಂಪತ್ಯ (Marriage) ದಲ್ಲಿ ಗೌರವ, ಸಹಾಯ, ಪ್ರೀತಿ, ಸ್ನೇಹ, ಸ್ವಾತಂತ್ರ್ಯ ಎಲ್ಲವೂ ಮುಖ್ಯವಾಗುತ್ತದೆ. ನೀವು ಸಹ ಮದುವೆಯಾಗಲು ಹೊರಟಿದ್ದರೆ ನಿಮ್ಮ ಸಂಗಾತಿಯಲ್ಲಿ ಇರಲೇಬೇಕಾದ ಕೆಲ ಸ್ವಭಾವಗಳ ಬಗ್ಗೆ ತಿಳಿದುಕೊಳ್ಳಿ. ಪೂರ್ವಾಪರ ಆಲೋಚನೆ ಮಾಡದೆ ಯಾವುದೇ ಸಂಬಂಧಕ್ಕೂ ಒಪ್ಪಿಗೆ ನೀಡಬೇಡಿ. ಇಂದು ನಾವು ಮದುವೆಗೆ ಮುನ್ನ ವರ – ವಧುವಿನಲ್ಲಿ ಏನು ನೋಡ್ಬೇಕು ಎಂಬುದನ್ನು ಹೇಳ್ತೇವೆ.
ಮದುವೆಗೂ ಮುನ್ನ ಸಂಗಾತಿಯಲ್ಲಿ ನೋಡಿ ಈ ಸ್ವಭಾವ
ಸಮಯ ನೀಡ್ತಾರಾ ಇಲ್ವಾ? : ಒಬ್ಬ ಅತ್ಯುತ್ತಮ ಸಂಗಾತಿ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ತನ್ನ ಸಂಗಾತಿಗೆ ಸಮಯವನ್ನು ನೀಡಬೇಕು. ಏಕೆಂದರೆ ನಿಮ್ಮ ಸಂಗಾತಿಗಾಗಿ ಸಮಯ ಹೊಂದಿಸಿಕೊಳ್ಳುವುದು ನಿಮ್ಮ ಕೆಲಸ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಮತ್ತು ಅವರೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸುವುದು ಸಂಬಂಧಕ್ಕೆ ಬಹಳ ಮುಖ್ಯ. ಹಾಗಾಗಿ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ನಿಮಗಾಗಿ ಅವರು ಸಮಯವನ್ನು ಮೀಸಲಿಡ್ತಾರಾ ಎಂಬುದನ್ನು ನೋಡಿ. ನಿಮಗೊಂದಿಷ್ಟು ಸಮಯ ತೆಗೆದಿಡ್ತಾರೆ ಅಂದ್ರೆ ಅವರು ಉತ್ತಮ ಸಂಗಾತಿಯಾಗಬಲ್ಲರು ಎಂದರ್ಥ.
ಮದುವೆಯಾಗಲು ಹುಡುಗಿ ಸಿಗ್ತಿಲ್ಲವೆಂದು ಊರಿಡೀ ಪೋಸ್ಟರ್ ಹಾಕಿದ ಯುವಕ !
ಪ್ರತಿಕ್ರಿಯೆ : ಪ್ರತಿ ಸಂಬಂಧದಲ್ಲಿ ಪ್ರೀತಿ,ಗೌರವವನ್ನು ಹೊಂದಿರುವುದು ಬಹಳ ಮುಖ್ಯ. ನಿಮ್ಮ ಸಂಗಾತಿಯು ನಿಮಗೆ ಗೌರವವನ್ನು ನೀಡುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ನೋಡಬೇಕು. ಬರೀ ಮಾತಿನ ಗೌರವವಲ್ಲ, ಮನಸ್ಸಿನಲ್ಲಿಯೂ ಗೌರವ ಭಾವವಿದೆಯೇ ಎಂಬುದನ್ನು ನೋಡಬೇಕು. ಕೆಲವೊಮ್ಮೆ ನಿಮ್ಮ ಸಂಗಾತಿಯ ಅವಮಾನದ ಮಾತನ್ನು ನೀವು ನಿರ್ಲಕ್ಷಿಸುತ್ತೀರಿ. ಆದರೆ ಅದೇ ಸ್ವಭಾವ ಪುನರಾವರ್ತನೆಯಾದ್ರೆ ಭವಿಷ್ಯದಲ್ಲಿ ಸಂಬಂಧ ಹಾಳಾಗುತ್ತದೆ. ಸಂಬಂಧದಲ್ಲಿ ಇಬ್ಬರೂ ಗೌರವಕ್ಕೆ ಅರ್ಹರು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಗೌರವ ನೀಡುವ ಸಂಗಾತಿಯನ್ನೇ ನೀವು ಆಯ್ಕೆ ಮಾಡಿಕೊಳ್ಳಬೇಕು.
ಸಮಸ್ಯೆ ಪರಿಹಾರ : ನೀವು ಯಾವುದೇ ಸಮಸ್ಯೆಯಲ್ಲಿರಲಿ ಇಲ್ಲವೆ ಯಾವುದೇ ತೊಂದರೆಯಲ್ಲಿರಲಿ ಅದನ್ನು ಎದುರಿಸಲು ಸಂಗಾತಿಯ ಧೈರ್ಯ ಅಗತ್ಯ. ನಿಮ್ಮ ಸಮಸ್ಯೆ ಬಗೆಹರಿಸಲು ಸಂಗಾತಿ ನೆರವಾಗ್ತಿದ್ದಾರೆ ಅಂದ್ರೆ ನಿಮ್ಮ ಸಂಬಂಧವು ಸ್ಥಿರವಾಗಿರುತ್ತದೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಯೋಚಿಸುವ ಪಾಲುದಾರನನ್ನು ಆಯ್ಕೆ ಮಾಡಿ. ಕಷ್ಟದ ಸಂದರ್ಭದಲ್ಲಿ ಈ ಸಂಗಾತಿ ಸದಾ ನಿಮ್ಮ ನೆರವಿಗೆ ಬರ್ತಾರೆ.
ಲೈಂಗಿಕ ಕ್ರಿಯೆ ವೇಳೆ ಇಂಥಾ ತಪ್ಪು ಮಾಡ್ಲೇಬೇಡಿ
ನಿಮ್ಮ ಕೆಲಸದಲ್ಲಿ ಹಸ್ತಕ್ಷೇಪ : ನೀವು ಮದುವೆಯಾಗಲು ಯೋಚಿಸುತ್ತಿದ್ದರೆ, ನಿಮ್ಮ ಪತಿ ಅಥವಾ ಹೆಂಡತಿ ನಿಮ್ಮ ಕೆಲಸವನ್ನು ನಿಲ್ಲಿಸುವುದಿಲ್ಲ ಅಥವಾ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವೈಯಕ್ತಿಕ ಸ್ಪೇಸ್ ಹೊಂದಿದ್ದಾನೆ. ಅದು ನಿಮ್ಮದಾಗಿರಲಿ ಅಥವಾ ನಿಮ್ಮ ಹೆಂಡತಿಯದ್ದಾಗಿರಲಿ. ಒಳ್ಳೆಯ ಸಂಗಾತಿ ಯಾವಾಗಲೂ ನಿಮ್ಮ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ ಮತ್ತು ನಿಮ್ಮಲ್ಲಿ ನಂಬಿಕೆ ಹೊಂದಿರುತ್ತಾರೆ. ಅವರು ನಿಮ್ಮ ಫೋನ್ ಅನ್ನು ಪದೇ ಪದೇ ಪರಿಶೀಲಿಸುತ್ತಿದ್ದರೆ ಅಥವಾ ಕೆಲಸದ ಬಗ್ಗೆ ಹತ್ತು ಪ್ರಶ್ನೆಗಳನ್ನು ಕೇಳಿದರೆ ಸ್ವಲ್ಪ ಎಚ್ಚರವಹಿಸಿ. ಇಂಥ ಸಂಗಾತಿ ಮುಂದೆ ನಿಮ್ಮ ಕೆಲಸಕ್ಕೆ ಅಥವಾ ನಿಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದು. ಅವರನ್ನು ಮದುವೆಯಾಗಿ ಮುಂದೆ ಪಶ್ಚಾತಾಪಪಡುವ ಬದಲು ಮೊದಲೇ ಅವರಿಂದ ದೂರ ಸರಿಯುವುದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.